NPS:ನಿವೃತ್ತಿಗೆ ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಸಹಕಾರಿಯೇ? ಸಂಪೂರ್ಣ ಮಾಹಿತಿ ಲೇಖನ-01

NPS:ನಿವೃತ್ತಿಗೆ ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಸಹಕಾರಿಯೇ? ಸಂಪೂರ್ಣ ಮಾಹಿತಿ ಲೇಖನ-01

NPS:ನಿವೃತ್ತಿಗೆ ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಸಹಕಾರಿಯೇ? ಸಂಪೂರ್ಣ ಮಾಹಿತಿ ಲೇಖನ-01: ನಿವೃತ್ತಿಗೆ ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಸಹಕಾರಿಯೇ? ಲಾಭ, ತೆರಿಗೆ ಸೌಲಭ್ಯ, ಪಿಂಚಣಿ ವಿವರಗಳನ್ನು ಸರಳವಾಗಿ ತಿಳಿಯಿರಿ.

ನಾನು ಮತ್ತು ನನ್ನ ಹೆಂಡತಿ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತೇವೆ. ನನ್ನ ತಂದೆ ಬ್ಯಾಂಕ್ ಸೇವೆಯಿಂದ ಹಾಗೂ ತಾಯಿ ಸರಕಾರಿ ಸೇವೆಯಿಂದ ನಿವೃತ್ತರಾಗಿ ಪಿಂಚಣಿ ಪಡೆಯುತ್ತಿದ್ದಾರೆ. ನಾವಿಬ್ಬರೂ ಜೀವನದ ಗುರಿಗಳನ್ನು, ಅವುಗಳಿಗೆ ಬೇಕಾದ ಹೂಡಿಕೆಗಳನ್ನೂ ಮಾಡುತ್ತಿದ್ದೇವೆ. ಆದರೆ ನಮ್ಮ ನಿವೃತ್ತಿ ಜೀವನದ ಗುರಿಗೆ ಮಾಡುವ ಹೂಡಿಕೆಗಳ ಬಗ್ಗೆ ಸ್ವಲ್ಪ ಗೊಂದಲವಿದೆ. ನಮ್ಮ ಪೋಷಕರಿಗೆ ದೊರಕಿದ ಪಿಂಚಣಿ ಸೌಲಭ್ಯವು ನಮಗಿಲ್ಲ. ಹೀಗಾಗಿ, ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯು (ಎನ್‌ ಪಿಎಸ್) ನಮಗೆ ಯಾವ ರೀತಿ ಸಹಾಯವಾಗಬಲ್ಲದು? ಬೇಗ ನಿವೃತ್ತಿಯಾಗುವ ಯೋಚನೆ ಇದ್ದರೆ ಹೆಚ್ಚುಹೆಚ್ಚು ಹಣವನ್ನು ಈ ಯೋಜನೆಯಲ್ಲಿ ತೊಡಗಿಸಿದರೆ ಅನುಕೂಲವೇ? ನಮ್ಮ ಉದ್ಯೋಗದಾತರಿಂದ ಹೇಗೆ ಸಹಾಯ ಸಿಗಬಲ್ಲದು? ಮಾರ್ಗದರ್ಶನ ಮಾಡಿ.

-ಗಣಪತಿ ಶೇಟ್ ಅಂಕೋಲಾ

 

ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯು ನಿವೃತ್ತಿ ನಂತರ ಸುರಕ್ಷಿತ ಮತ್ತು ನಿಯಮಿತ ಆದಾಯವನ್ನು ನೀಡುವ ಪಿಂಚಣಿ ಯೋಜನೆಯಾಗಿದೆ. ಇದು ಮಾರುಕಟ್ಟೆ ಆಧಾರಿತ ಹೂಡಿಕೆಯ ಮೂಲಕ ದೀರ್ಘಕಾಲದ ಉಳಿತಾಯಕ್ಕೆ ಸಹಾಯ ಮಾಡುತ್ತದೆ. ಇದು ನಿಯಮಾಧಾರಿತ ಯೋಜನೆಯಾಗಿದ್ದು (Defined Contribution Scheme), ಇದರಲ್ಲಿ ನೀವು ಕೆಲಸ ಮಾಡುವಾಗ ನಿಯಮಿತವಾಗಿ ನಿಮ್ಮ ಪಿಂಚಣಿ ಖಾತೆಗೆ ಕಂತುಗಳಲ್ಲಿ ವಂತಿಗೆ ನೀಡಿ, ನಿವೃತ್ತಿ ನಂತರ ಪಿಂಚಣಿ ಪಡೆಯುತ್ತೀರಿ. ಸರಕಾರಿ ನೌಕರರಿಗೆ ಇದು ಕಡ್ಡಾಯವಾಗಿದೆ. ಬೇರೆಯವರಿಗೆ ಇದು ಸ್ವಯಂಪ್ರೇರಿತವಾಗಿದೆ.

ಎನ್‌ಪಿಎಸ್ ಒಂದು ಸ್ವಯಂಪ್ರೇರಿತ, ಮಾರುಕಟ್ಟೆ ಆಧಾರಿತ ದೀರ್ಘಾವಧಿ ಹೂಡಿಕೆ ಯೋಜನೆ. ಇದನ್ನು ಪಿಎಫ್‌ಆರ್‌ಡಿಎ. (ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ) ನಿಯಂತ್ರಿಸುತ್ತದೆ. ಕೇಂದ್ರ ಮತ್ತು ರಾಜ್ಯ ಸರಕಾರಿ ನೌಕರರು, ಖಾಸಗಿ ವಲಯದ ನೌಕರರು ಮತ್ತು ಸ್ವಯಂ ಉದ್ಯೋಗಿಗಳೂ ಸೇರಿ ಎಲ್ಲ ಭಾರತೀಯ ನಾಗರಿಕರಿಗೆ ಲಭ್ಯವಿದೆ.

ಇದರಲ್ಲಿ ಎರಡು ರೀತಿಯ ಖಾತೆಗಳು ಲಭ್ಯವಿವೆ.

ಶ್ರೇಣಿ 1 (Tier I): ಕಡ್ಡಾಯ ಪಿಂಚಣಿ ಖಾತೆ. ಆದಾಯ ತೆರಿಗೆ ಪ್ರಯೋಜನಗಳಿವೆ.

ಶ್ರೇಣಿ 2 (Tier II): ಐಚ್ಛಿಕ ಹೂಡಿಕೆ ಖಾತೆ. ಯಾವುದೇ ತೆರಿಗೆ ಪ್ರಯೋಜನಗಳಿಲ್ಲ.

ನಿಮ್ಮ ಹಣವನ್ನು ವಿವಿಧ ಪಿಂಚಣಿ ನಿಧಿಗಳಲ್ಲಿ (Pension Funds-PFs) ಹೂಡಿಕೆ ಮಾಡಬಹುದು. ಸಾಧಾರಣವಾಗಿ ಈಕ್ವಿಟಿ ಮತ್ತು ಸಾಲ ಪತ್ರಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಆನ್‌ ಲೈನ್ (eNPS) ಮೂಲಕ ಅಥವಾ ಬ್ಯಾಂಕುಗಳು ಮತ್ತು ಇತರ ನೋಂದಾಯಿತ ಕಚೇರಿಗಳ ಮೂಲಕ ಖಾತೆ ತೆರೆಯಬಹುದು.

ನಿವೃತ್ತರಾದಾಗ ಸಂಚಯಿತ ಮೊತ್ತದ (Corpus) ಒಂದು ಭಾಗವನ್ನು ಹಿಂಪಡೆಯಬಹುದು. ಉಳಿದ ಭಾಗಕ್ಕೆ ವಾರ್ಷಿಕ ಹಿಂಪಡೆತದ ಯೋಜನೆಯನ್ನು (Annuity) ಖರೀದಿಸಬೇಕು. ಇದು ಮಾಸಿಕ ಪಿಂಚಣಿ ನೀಡುತ್ತದೆ. ಕಳೆದ ವರ್ಷ ಜಾರಿಗೊಳಿಸಿದ ಸುಧಾರಣೆಗಳ ಮೂಲಕ ಈ ಸಂಯೋಜನೆಗಳಲ್ಲಿ ಹಲವು ಬದಲಾವಣೆಗಳು ಜಾರಿಗೆ ಬಂದಿವೆ.

ನಿವೃತ್ತಿಗೆ ಎನ್‌ಪಿಎಸ್ ಯೋಜನೆಯು ಒಂದು ಪರಿಣಾಮಕಾರಿ ವಿಧಾನವಾಗಿದೆ.ಸಮಯೋಚಿತ ಹೂಡಿಕೆಯೊಂದಿಗೆ ಭವಿಷ್ಯದ ಆರ್ಥಿಕ ಭದ್ರತೆಯನ್ನು ಖಚಿತಪಡಿಸುತ್ತದೆ. ಖಾಸಗಿ ಉದ್ಯೋಗಿಗಳಿಗೆ ಪಿಂಚಣಿ ಸೌಲಭ್ಯ ದೊರಕದ ಕಾರಣ ಎನ್‌ಪಿಎಸ್ ನಿವೃತ್ತಿ ಜೀವನಕ್ಕೆ ಭದ್ರತೆ ನೀಡುವ ಪ್ರಮುಖ ಮಾರ್ಗವಾಗಿದೆ. ನೀವು ಬೇಗ ನಿವೃತ್ತಿ ಹೊಂದುವ ಬಗ್ಗೆ ಯೋಚಿಸುತ್ತಿದ್ದರೆ, ಹೆಚ್ಚುಹೆಚ್ಚು ಹೂಡಿಕೆ ಮಾಡುವುದು ಉತ್ತಮ.

ನಿವೃತ್ತಿ ವಯಸ್ಸಿನವರೆಗೂ ಹೂಡಿಕೆ ಮಾಡಿದರೆ ದೊಡ್ಡ ಮೊತ್ತ ಸಂಗ್ರಹವಾಗುತ್ತದೆ. ಪರಿಣತ ಫಂಡ್ ಮ್ಯಾನೇಜರ್‌ಗಳು ಹೂಡಿಕೆಯನ್ನು ನಿರ್ವಹಿಸುವುದರಿಂದ ಸುರಕ್ಷಿತ ಹಾಗೂ ಸಮತೋಲಿತ ಬೆಳವಣಿಗೆ ಸಾಧ್ಯ. ನೀವು ಹೆಚ್ಚುಹೆಚ್ಚು ಹೂಡಿಕೆ ಮಾಡಿದರೆ ಕಾರ್ಪಸ್ ದೊಡ್ಡದಾಗುತ್ತದೆ.

ಹೂಡಿಕೆಯು ಚಕ್ರಬಡ್ಡಿ ಪರಿಣಾಮದಿಂದಾಗಿ ದೊಡ್ಡ ಮೊತ್ತವಾಗುತ್ತದೆ. ಹೆಚ್ಚು ವರ್ಷ ಹೂಡಿಕೆ ಮಾಡಿದಾಗ ಸಂಚಯಿತ ಮೊತ್ತ ದೊಡ್ಡದಾಗು ತ್ತದೆ. ಹಾಗಾಗಿ, ಬೇಗನೆ ಹೂಡಿಕೆ ಆರಂಭಿಸುವುದು ಮುಖ್ಯ. ಈ ಯೋಜನೆಯಲ್ಲಿ ವಿಶೇಷ ಸಂದರ್ಭಗಳಲ್ಲಿ ಭಾಗಶಃ ಹಿಂಪಡೆತಕ್ಕೆ (ಶಿಕ್ಷಣ, ಮನೆ, ಆರೋಗ್ಯ) ಅವಕಾಶವಿದೆ. ಆದರೆ, ಪೂರ್ತಿ ಹಣವನ್ನು ಹಿಂಪಡೆಯಲು ಕಟ್ಟುನಿಟ್ಟಿನ ನಿಯಮಗಳಿವೆ.

ಅನೇಕ ಖಾಸಗಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಖಾತೆ ತೆರೆಯಲು ಸಹಾಯ ಮಾಡುತ್ತವೆ. ಕೆಲ ಕಂಪನಿಗಳು ಉದ್ಯೋಗಿ ಯ ಕೊಡುಗೆಗೆ ಸಮನಾದ ಮೊತ್ತವನ್ನು ತಮ್ಮ ಕೊಡುಗೆಯಾಗಿ ನೀಡುತ್ತವೆ. ಇದು ಹೂಡಿಕೆ ಮೊತ್ತವನ್ನು ಸಾಕಷ್ಟು ಹೆಚ್ಚಿಸುತ್ತದೆ. ಇದರಿಂದ ನಿಮ್ಮ ನಿವೃತ್ತಿ ನಿಧಿ ಇನ್ನಷ್ಟು ಬಲವಾಗುತ್ತದೆ. ಇದರ ಬಗ್ಗೆ ನಿಮ್ಮ ಕಂಪನಿಯ ಸಿಬ್ಬಂದಿ ವಿಭಾಗವು ಮಾಹಿತಿ ಕೊಡಬಲ್ಲದು.

ನಿಮ್ಮ ವೇತನದಿಂದ ನೇರವಾಗಿ ಎನ್‌ಪಿಎಸ್‌ಗೆ ಹಣ ಕಡಿತ ಆಗುವ ವ್ಯವಸ್ಥೆ ಮಾಡಬಹುದು. ನಿಮ್ಮ ಹೂಡಿಕೆ ಕೆಲವು ರಿಯಾಯಿತಿಗಳನ್ನು ಹೊರತುಪಡಿಸಿ ನಿವೃತ್ತಿಯವರೆಗೆ ಲಾಕ್-ಇನ್ ಆಗಿರುತ್ತದೆ. ನಿಮ್ಮ ನಿವೃತ್ತಿ ಗುರಿಯನ್ನು ಸಾಧಿಸಲು ಈ ಯೋಜನೆ ಒಂದು ಭದ್ರವಾದ ಆಧಾರ. ಇದರ ಜತೆಗೆ ಮ್ಯೂಚುವಲ್ ಫಂಡ್ಸ್ ಮತ್ತು ಪಿಪಿಎಫ್ ಸೇರಿ ಹಲವು ಹೂಡಿಕೆಗಳನ್ನು ಕೂಡ ಪರಿಗಣಿಸುವುದು ಸೂಕ್ತ.

Nps

 

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!