Oil India Recuritment-2025: ಆಯಿಲ್ ಇಂಡಿಯಾದಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
Oil India Recuritment-2025: ಆಯಿಲ್ ಇಂಡಿಯಾದಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಸಾರ್ವಜನಿಕ ಸಹಭಾಗಿತ್ವದ ಆಯಿಲ್ ಇಂಡಿಯಾ ಗ್ರೂಪ್ ಎ, ಬಿ ಮತ್ತು ಸಿ ವೃಂದದ ಹುದ್ದೆಗಳ ಭರ್ತಿಗೆ ಮುಂದಾಗಿದ್ದು, ಸೆ.29 ಅರ್ಜಿ ಸಲ್ಲಿಕೆಗೆ ಕೊನೆ ದಿನವಾಗಿರುತ್ತದೆ. ಸೂಪರಿಂಟೆಂಡೆಂಟ್ ಎಂಜಿನಿಯರ್, ಸೀನಿಯರ್ ಆಫೀಸರ್ಸ್ ಕಾನ್ಫಿಡೆನ್ಶಿಯಲ್ ಸೆಕ್ರೆಟರಿ ಮತ್ತು ಹಿಂದಿ ಆಫೀಸರ್ಸ್ ಸೇರಿದಂತೆ ಒಟ್ಟು 102 ಹುದ್ದೆಗಳು ಖಾಲಿ ಇವೆ.
ಒಟ್ಟು ಹುದ್ದೆಗಳು: 102
ಅರ್ಹತೆಗಳೇನು?:
▪️ಸೂಪರಿಂಟೆಂಡಿಂಗ್ ಎಂಜಿನಿಯರ್ ಹುದ್ದೆ ಗಳಿಗೆ ನಾಲ್ಕು ವರ್ಷಗಳ ಎಂಜಿನಿಯರಿಂಗ್ ಪದವಿಯನ್ನು ಕನಿಷ್ಠ ಶೇ.65 ಅಥವಾ ಅದಕ್ಕಿಂತ ಹೆಚ್ಚು ಅಂಕಗಳೊಂದಿಗೆ ತೇರ್ಗಡೆಯಾದ ವರಿಗೆ ಮೀಸಲಿಡಲಾಗಿದೆ. ಪೆಟ್ರೋಲಿಯಂ ಅಥವಾ ಟೆಕ್ನಾಲಜಿ ಎಂಜಿನಿಯರಿಂಗ್ ಪಡೆದಿದ್ದರೂ ಅರ್ಜಿ ಸಲ್ಲಿಸಬಹುದಾಗಿದೆ.
▪️ಕೆಮಿಸ್ಟ್ರಿ, ಸಿವಿಲ್, ಎಲೆಕ್ನಿಕಲ್, ಪೆಟ್ರೋಲಿಯಂ ಮೊದಲಾದ ವಿಷಯಗಳಲ್ಲಿ ಎಂಜಿನಿಯರಿಂಗ್ ಪದವಿ ಪಡೆದವರು ಸೀನಿಯರ್ ಆಫೀಸರ್ ಹುದ್ದೆಗಳಿಗೆ ಪ್ರಯತ್ನಿಸಬಹುದು. ಸೀನಿಯರ್ ಅಕೌಂಟ್ ಆಫೀಸರ್ ಹುದ್ದೆಗಳಿಗೆ ಐಸಿಎಐ/ಐಸಿಎಂಎಐ ಅರ್ಹತೆ ಹೊಂದಿರಬೇಕು. ಪದವಿ ಜೊತೆಗೆ ಸೆಕ್ರೆಟರಿಯಲ್ ಪ್ರಾಕ್ಟಿಸ್‌ನಲ್ಲಿ ಡಿಪ್ಲೊಮಾ ಪಡೆದವರು ಕಾನ್ನಿಡೆನ್ಸಿಯಲ್ ಸೆಕ್ರೆಟರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದು, ಹುದ್ದೆಗೆ ಸಂಬಂಧಿಸಿದಂತೆ ಕನಿಷ್ಠ ಮೂರು ವರ್ಷಗಳ ಸೇವಾನುಭವ ಉಳ್ಳವರನ್ನು ಹಿಂದಿ ಅಧಿಕಾರಿಗಳನ್ನಾಗಿ ನೇಮಕ ಮಾಡಿಕೊಳ್ಳಲಾಗುತ್ತದೆ.
ಗರಿಷ್ಠ ವಯೋಮಿತಿ:
ಸೂಪರಿಂಟೆಂಡೆಂಟ್ ಎಂಜಿನಿಯರ್ ಹುದ್ದೆಗಳಿಗೆ 34 ವರ್ಷ, ಸೀನಿಯರ್ ಆಫೀಸರ್ ಮತ್ತು ಹಿಂದಿ ಆಫೀಸರ್ಸ್ ಹುದ್ದೆಗಳಿಗೆ 29 ಹಾಗೂ ಕಾನ್ಸಿಡೆನ್ಸಿಯಲ್ ಸೆಕ್ರೆಟರಿ 37 ವರ್ಷ ಗರಿಷ್ಠ ವಯೋಮಿತಿ ಆಗಿದೆ. ಮೀಸಲಾತಿ ವ್ಯಾಪ್ತಿಗೆ ಒಳಪಡುವ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ. ಆಯಾ ಹುದ್ದೆಗನುಸಾರ 2-4 ವರ್ಷ ಸೇವಾನುಭವ ಕೂಡ ನಿರೀಕ್ಷಿಸಲಾಗಿದೆ.
ಇತ್ತ ಗಮನಿಸಿ:
▪️ ಅರ್ಜಿ ಸಲ್ಲಿಸುವ ಸಾಮಾನ್ಯ ಮತ್ತು ಒಬಿಸಿ ವರ್ಗದವರಿಗೆ 500 ರೂ. ಶುಲ್ಕ. ಉಳಿದೆಲ್ಲಾ ವರ್ಗಗಳಿಗೆ ಶುಲ್ಕದಿಂದ ವಿನಾಯ್ತಿ.
▪️ ಕಂಪ್ಯೂಟರ್ ಆಧರಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ
▪️ ಒಂದು ವರ್ಷ ಪ್ರೊಬೆಷನರಿ ಅವಧಿಯಾಗಿರುತ್ತದೆ. ನೇಮಕಗೊಂಡ ಮೇಲೆ ಮೂರು ವರ್ಷಗಳ ಸೇವೆ ಕಡ್ಡಾಯ.
▪️ ದೇಶದ ಯಾವುದೇ ಭಾಗದಲ್ಲಿ ಕಾರ್ಯನಿರ್ವಹಿಸಲು ಸಿದ್ಧರಿರಬೇಕು.
ಪ್ರಮುಖ ದಿನಾಂಕಗಳು:
▪️ಅರ್ಜಿ ಸಲ್ಲಿಕೆಗೆ ಕೊನೆಯ: ದಿನಾಂಕ:.29-09-2025
▪️ಸಿಬಿಟಿ ನಡೆಯುವ ದಿನಾಂಕ: 01-11-2025
▪️ಸಹಾಯವಾಣಿ: 022-61306284
▪️ಹೆಚ್ಚಿನ ಮಾಹಿತಿಗೆ: www.oil-india.com ವೆಬ್ಸೈಟ್ ಗೆ ಭೇಟಿ ನೀಡಿ