Organization of National Space Day: ದಿನಾಂಕ:23.08.2025 ರಂದು ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆಯನ್ನು ಆಯೋಜಿಸುವ ಕುರಿತು

Organization of National Space Day: ದಿನಾಂಕ:23.08.2025 ರಂದು ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆಯನ್ನು ಆಯೋಜಿಸುವ ಕುರಿತು

Organization of National Space Day: ದಿನಾಂಕ:23.08.2025 ರಂದು ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆಯನ್ನು ಆಯೋಜಿಸುವ ಕುರಿತು ಸುತ್ತೋಲೆ ಹೊರಡಿಸಲಾಗಿದೆ.

ಉಲ್ಲೇಖಿತ ವಿಷಯಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರದ ಗೌರವಾನ್ವಿತ ಪ್ರಧಾನ ಮಂತ್ರಿಗಳು ಘೋಷಿಸಿದಂತೆ ಭಾರತ ಸರ್ಕಾರವು “ರಾಷ್ಟ್ರೀಯ ಬಾಹ್ಯಕಾಶ ದಿನ’ವನ್ನು ಪ್ರತಿ ವರ್ಷ ಆಗಸ್ಟ್ 23 ರಂದು ಚಂದ್ರಯಾನ- ಮಿಷನ್ ಸಾಧನೆಯ ಹಿನ್ನೆಲೆಯಲ್ಲಿ ಆಚರಿಸಲು ತೀರ್ಮಾನಿಸಿದೆ.

 

ಅದರಂತೆ, ದಿನಾಂಕ:23.08.2025 ರಂದು ‘ರಾಷ್ಟ್ರೀಯ ಬಾಹ್ಯಾಕಾಶ ದಿನ’ ವನ್ನು ಆಚರಿಸುವ ಮೂಲಕ ರಾಜ್ಯದ ಯುವಕರನ್ನು ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಅದರ ಅನ್ವಯಗಳ ಕಡೆಗೆ ತೊಡಗಿಸಿಕೊಳ್ಳಲು ಮತ್ತು ಪ್ರೇರೇಪಿಸುವ ಉದ್ದೇಶದಿಂದ ರಾಜ್ಯದ ಎಲ್ಲಾ ಶಾಲೆಗಳಲ್ಲಿ ವಿಶೇಷ ಶಾಲಾ ಸಭೆಗಳು, ಪ್ರದರ್ಶನಗಳು, ಕಾರ್ಯಾಗಾರಗಳು, ಸಂವಾದಾತ್ಮಕ ಅವಧಿಗಳು ಮತ್ತು ಸ್ಥಳೀಯ ಬಾಹ್ಯಾಕಾಶ ತಂತ್ರಜ್ಞಾನ ವಿಜ್ಞಾನಿಗಳು/ತಜ್ಞರುಗಳಿಂದ ಆಫ್‌ಲೈನ್ ಅಥವಾ VC ಗಳಲ್ಲಿ ಸಂವಾದಗಳನ್ನು ಆಯೋಜಿಸುವ ಮೂಲಕ ಬಾಹ್ಯಾಕಾಶ ಶಕ್ತಿಯನ್ನು ಬೆಳೆಸುವುದು ಹಾಗೂ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಶಾಲೆಗಳಲ್ಲಿನ ಯುವ ಮನಸ್ಸುಗಳನ್ನು ಪ್ರೇರೇಪಿಸುವುದು, ರಾಷ್ಟ್ರೀಯ ಹೆಮ್ಮೆಯ ಪ್ರಜ್ಞೆಯನ್ನು ಬೆಳೆಸುವುದು ಮತ್ತು ವಿಜ್ಞಾನ, ತಂತ್ರಜ್ಞಾನ ಎಂಜಿನಿಯರಿಂಗ್ ಹಾಗೂ ಗಣಿತ (STEM) ದಲ್ಲಿ ವೃತ್ತಿಜೀವನವನ್ನು ಅನ್ವೇಷಿಸಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು. ಇದು ವಿದ್ಯಾರ್ಥಿಗಳ ಜ್ಞಾನವನ್ನು ಹೆಚ್ಚಿಸುವುದಲ್ಲದೆ, ಭವಿಷ್ಯದಲ್ಲಿ ಭಾರತವು ಬಾಹ್ಯಾಕಾಶ ತಂತ್ರಜ್ಞಾನಕ್ಕೆ ಕೊಡುಗೆಯಾಗುವುದು.

 

ಬಾಹ್ಯಾಕಾಶ ಸಂಶೋಧನೆ ಮತ್ತು ತಂತ್ರಜ್ಞಾನದಲ್ಲಿ ಭಾರತದ ಸಾಧನೆಗಳನ್ನು ಪ್ರದರ್ಶಿಸುವ ಸಂಪನ್ಮೂಲಗಳನ್ನು DIKSHA NISHTHA, NCERT ವೆಬ್ಸೈಟ್ ಮತ್ತು e Pustakalya (National National Digital Library) ನಂತಹ ವೇದಿಕೆಗಳಲ್ಲಿ ಇಲಾಖೆಯ ‘ಭಾರತ್ ಆನ್ ದಿ ಮೂನ್’ (Bharat on the Moon) ಪೋರ್ಟಲ್ ಅನ್ನು ನಿಯಮಿತವಾಗಿ ವಿಶೇಷ ಮತ್ತು ಸಮಕಾಲೀನ ಚಟುವಟಿಕೆಗಳೊಂದಿಗೆ ನವೀಕರಿಸಲಾಗುತ್ತದೆ. ಮಾಹಿತಿಯನ್ನು ಪಡೆಯಲು ಕೆಳಗಿನ link ಗಳನ್ನು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಬಳಸಿಕೊಳ್ಳುವುದು.

https//pharatonthermoonncert.gov.in

ಮತ್ತು

https//ncert.nic.in/chandrayaan.php

ಮುಂದಿನ ಪೀಳಿಗೆಯು ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಉತ್ಸಾಹ, ಕುತೂಹಲ ಮತ್ತು ನಾವೀನ್ಯತೆಯ

ಪ್ರಜ್ಞೆಯನ್ನು ತುಂಬಲು NCERT ಹೊಸ ಯುಗಕ್ಕೆ ಸೂಕ್ತವಾದ ಮತ್ತು ನಿರ್ದಿಷ್ಟ ಮಾಡ್ಯೂಲ್: “A Rising Space Power” ಅನ್ನು ಅಭಿವೃದ್ಧಿಪಡಿಸುತ್ತಿದೆ ಮತ್ತು ಇದನ್ನು ದಿನಾಂಕ:23/08/2025 ರಂದು ಲೋಕಾರ್ಪಣೆ ಮಾಡಲಾಗುತ್ತದೆ. NCERT ವೆಬ್‌ಸೈಟ್ ಮತ್ತು NDL ನಲ್ಲಿ ನೋಡುವಂತೆ ತಿಳಿಸಿದೆ.

ಭಾರತವು ಬಾಹ್ಯಾಕಾಶ ಸಂಶೋಧನೆಯಲ್ಲಿ ನಿರಂತರ ಪ್ರಗತಿಹೊಂದಿ, ಹೆಮ್ಮೆ ಪಡುವಂತೆ ಕೊಡುಗೆ ನೀಡಲು ಯುವ ಪೀಳಿಗೆಯು ಬಾಹ್ಯಾಕಾಶ ತಂತ್ರಜ್ಞಾನಕ್ಕಾಗಿ ಶ್ರಮಿಸಲು ಸೂಕ್ತವಾದ ಸಮಯವಾಗಿದೆ. ರಾಜ್ಯದ ಎಲ್ಲಾ ಶಾಲೆಗಳಲ್ಲಿ ಶಿಕ್ಷಕರು ಚಂದ್ರಯಾನ ಹಾಗೂ ಬಾಹ್ಯಾಕಾಶ ವಿಷಯಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗೆ ಮಾದರಿಗಳ ರಚನೆ, ರಸಪ್ರಶ್ನೆ ಚಿತ್ರಕಲೆ ಹಾಗೂ ಇತರೆ ಸ್ಪರ್ಧೆಗಳನ್ನು ನಡೆಸುವ ಮೂಲಕ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸುವುದು.

ಜಿಲ್ಲಾ ಹಂತದಲ್ಲಿ ಉಪನಿರ್ದೇಶಕರು (ಆಡಳಿತ) ರವರು ತಮ್ಮ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಲ್ಲಿ “ರಾಷ್ಟ್ರೀಯ ಬಾಹ್ಯಾಕಾಶ ದಿನ”ವನ್ನು ಆಚರಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯಗಳಲ್ಲಿ ಆಸಕ್ತಿಯನ್ನು ಬೆಳೆಸಲು ಕ್ರಮಕೈಗೊಳ್ಳುವುದು ಹಾಗೂ ಉಲ್ಲೇಖಿತ ಪತ್ರವನ್ನು ಲಗತ್ತಿಸಿದ್ದು, ಅದರಂತೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಕುರಿತು ಫೋಟೋ ಸಹಿತ ವರದಿಯನ್ನು ರಾಜ್ಯ ಕಚೇರಿಯ ಇ-ಮೇಲ್ ವಿಳಾಸ innovativessk2022@gmail.com ಗೆ ದಿನಾಂಕ:25.08.2025 ರೊಳಗಾಗಿ ಕಡ್ಡಾಯವಾಗಿ ಸಲ್ಲಿಸಲು ಸೂಚಿಸಿದೆ.

 

CLICK HERE TO DOWNLOAD CIRCULAR

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!