Personality development Article-01: ಮನಸ್ಸು ಚೆನ್ನಾಗಿರಲಿ…

Personality development:ಮನಸ್ಸು ಚೆನ್ನಾಗಿರಲಿ…

PERSONALITY DEVELOPMENT: ಮಾನಸಿಕವಾಗಿ ನಾವು ಶಕ್ತಿಯುತರಾಗಿದ್ದರೆ, ಅದೆಂಥದ್ದೇ ಪರಿಸ್ಥಿತಿಯನ್ನೂ ಸುಲಭವಾಗಿ ನಿಭಾಯಿಸಬಹುದು.

ಹಾಗಾಗಿ, ಉದ್ಯೋಗಿಗಳಾದ ನಾವು ನಮ್ಮ ಮನಸ್ಥಿತಿಯನ್ನು ಹೇಗಿಟ್ಟುಕೊಳ್ಳಬೇಕು, ಈ ಕುರಿತು ವರದಿಗಳು ಏನು ಹೇಳುತ್ತವೆ ಎಂಬಿತ್ಯಾದಿ ವಿವರಗಳು ಇಲ್ಲಿವೆ.

ಪ್ರತಿಯೊಬ್ಬರಿಗೂ ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋ ಲಗ್ಯವೂ ಮುಖ್ಯ. ಮಾನಸಿಕ ಆರೋಗ್ಯ ಹದಗೆಟ್ಟರೆ, ದೈಹಿಕ ಅನಾರೋಗ್ಯವೂ ಉಲ್ಬಣಗೊಳ್ಳುತ್ತದೆ. ಅದರಲ್ಲಿಯೂ ಉದ್ಯೋಗ ದಲ್ಲಿರುವವರು ದೈಹಿಕ ಆರೋಗ್ಯಕ್ಕೆ ಪ್ರಾಶಸ್ತ್ರ ನೀಡಿದಷ್ಟೇ, ಮಾನಸಿಕ ಆರೋಗ್ಯಕ್ಕೂ ನೀಡಬೇಕು. ಬಹುತೇಕ ಉದ್ಯೋಗಿಗಳು ಜ್ವರ, ಕೆಮ್ಮು, ನೆಗಡಿ ಅಥವಾ ಇನ್ನಿತರ ಯಾವುದೇ ಕಾರಣಗಳನ್ನು ನೀಡಿ ರಜೆ ತೆಗೆದುಕೊಳ್ಳುತ್ತಾರೆ. ಆದರೆ, ನನ್ನ ಮನಸ್ಸು ಸರಿಯಿಲ್ಲ, ಮಾನಸಿಕವಾಗಿ ನಾನು ಸೊರಗಿದ್ದೇನೆ, ನನ್ನ ಮಾನಸಿಕ ಅನಾ ರೋಗ್ಯದ ಕಾರಣದಿಂದ ನನಗೆ ರಜೆ ಬೇಕು ಎಂದು ಕೇಳುವವರೇ ಇಲ್ಲ ಎನ್ನುತ್ತದೆ ಇತ್ತೀಚಿನ ಅಧ್ಯಯನದ ವರದಿ. ಹಾಗಾದರೆ, ಮಾನಸಿಕ ಆರೋಗ್ಯವನ್ನು ಕಾಪಿಟ್ಟುಕೊಳ್ಳಲು ಮಾಡಬೇಕಾದು ದೇನು ಎಂಬ ಸಲಹೆಗಳು ಇಲ್ಲಿವೆ.

ಗಾಸಿಪ್‌ನಿಂದ ದೂರವಿರಿ:

ಪ್ರತಿಯೊಂದು ಸ್ಥಳದಲ್ಲಿಯೂ ಗಾಸಿಪ್ ಇದ್ದೇ ಇರುತ್ತದೆ. ಆ ಗಾಸಿಪ್ ಮನಸ್ಸಿನ ಮೇಲೆ ಗಾಢ ಪರಿಣಾಮವನ್ನುಂಟು ಮಾಡುತ್ತದೆ. ಅವರು ನನ್ನ ಬೆನ್ನ ಹಿಂದೆ ನನ್ನ ಬಗ್ಗೆ ಮಾತನಾಡುತ್ತಾರೆ. ನಾನು ಮಾತನಾಡಬೇಕೇ, ಸುಮ್ಮನಿರಬೇಕೆ ಅಥವಾ ಈ ಕಚೇರಿಯನ್ನು ತೊರೆಯಬೇಕೇ? ಎಂಬ ಆಲೋಚನೆಗಳು ತಲೆಯಲ್ಲಿ ಗಿರಕಿ ಹೊಡೆಯಲು ಶುರು ಮಾಡುತ್ತವೆ. ಮೊದಮೊದಲು ಗಾಸಿಪ್ ಒಂದು ಅದ್ಭುತ ಎನಿಸ ಬಹುದು. ಆದರೆ, ದೀರ್ಘಾವಧಿಯಲ್ಲಿ ಅದು ಗಾಸಿಪ್ ಮಾಡುವ ವರು ಮತ್ತು ಯಾರ ಬಗ್ಗೆ ಗಾಸಿಪ್ ಮಾಡಲಾಗುತ್ತದೆಯೋ ಅವರಿ ಬ್ಬರಿಗೂ ತೊಂದರೆಯೇ ಎನ್ನುತ್ತಾರೆ ಮನೋವೈದ್ಯ ಡಾ.ಆಸ್ತಿಕ್ ಜೋಶಿ, ಗಾಸಿಪ್ ಎಂಬುದು ಒಬ್ಬ ವ್ಯಕ್ತಿಯ ಮೇಲೆ ಪರಿಣಾಮ ಬೀರುವುದಿಲ್ಲ. ಬದಲಿಗೆ ಇಡೀ ಕಚೇರಿಯ ವಾತಾವರಣವನ್ನೇ ಹಾಳು ಮಾಡುತ್ತದೆ. ಒಂದು ವೇಳೆ ಗಾಸಿಪ್ ಅನ್ನು ನಿಯಂತ್ರಿಸದೆ ಇದ್ದರೆ ಅದರಿಂದ ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತದೆ.

ಗಾಸಿಪ್‌ನಿಂದ ದೂರವಿರುವುದು ಹೇಗೆ?

▪️ನಿಮ್ಮ ಬಳಿ ಯಾರಾದರೂ ಗಾಸಿಪ್ ಮಾಡಲು ಆರಂಭಿಸಿದರೆ, ನಗು ಮುಖದಿಂದಲೇ ವಿಷಯಾಂತರ ಮಾಡಿ. ನಾನು ಆ ಬಗ್ಗೆ ಏನೂ ಕೇಳಿಲ್ಲ ಎಂಬುವುದನ್ನು ಅವರಿಗೆ ಮನವರಿಕೆ ಮಾಡಿ.

▪️ಎದುರಿನ ವ್ಯಕ್ತಿ ಏನೇ ಹೇಳಿದರೂ ಮೌನವಾಗಿ ಕೇಳುತ್ತಾ ಕೂರಬೇಡಿ. ನಯವಾಗಿ, ಮಾತನ್ನು ಬದಲಿಸಿ.

▪️ವೃತ್ತಿಜೀವನದ ಬೆಳವಣಿಗೆಯತ್ತ ಗಮನಹರಿಸಿದರೆ ಗಾಸಿಪ್ ಎಂಬುದೇ ನಮ್ಮತ್ತ ಸುಳಿಯುವುದಿಲ್ಲ ಎನ್ನುವುದೂ ನಿಜ.

▪️ಗಾಸಿಪ್ ಅತಿಯಾದರೆ ಮೇಲಧಿಕಾರಿಗಳ ಗಮನಕ್ಕೆ ತನ್ನಿ.

▪️ವೃತ್ತಿಪರತೆಯನ್ನು ಕಾಪಾಡಿಕೊಳ್ಳಿ.

▪️ನೀವು ಮಾತನಾಡದ ವಿಷಯಗಳ ಕುರಿತು ಗಾಸಿಪ್ ಕೇಳಿಬಂದರೆ, ನೇರವಾಗಿ ಮಾತನಾಡಿ. ಇಲ್ಲವಾದರೆ, ಅದು ನಿಮ್ಮನ್ನು ಮಾನಸಿಕವಾಗಿ ಮತ್ತಷ್ಟು ಹಾಳು ಮಾಡುತ್ತದೆ.

ಮಾನಸಿಕ ಸ್ಥಿತಿ ಕಾಪಿಟ್ಟುಕೊಳ್ಳುವಲ್ಲಿ ಸಂಸ್ಥೆಗಳ ಪಾತ್ರ:

▪️ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಒತ್ತು ನೀಡಿ:

ಮಾನಸಿಕವಾಗಿ ಆರೋಗ್ಯಕರವಾದ ಸಂಸ್ಕೃತಿಯನ್ನು ರೂಪಿಸುವ ನಾಯಕತ್ವ ಕಚೇರಿಯಲ್ಲಿ ಇರಬೇಕು. ನಾಯಕರು ಉದ್ಯೋಗಿಗಳನ್ನು ಒಳಗೊಂಡು ಕೆಲಸ ಮಾಡಬೇಕು. ವ್ಯವಸ್ಥಾಪಕರು ಮತ್ತು ಮೇಲ್ವಿ ಚಾರಕರು ಉದ್ಯೋಗಿಸ್ನೇಹಿ ನೀತಿಗಳನ್ನು ಕಾರ್ಯಗತಗೊಳಿಸಬೇಕು. ಉದ್ಯೋಗಿಗಳ ಒತ್ತಡ, ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಗುರುತಿಸುವುದಕ್ಕಾಗಿ ತಂಡವನ್ನು ರಚಿಸಬೇಕು. ಅದಕ್ಕಾಗಿ ಉದ್ಯೋಗದಾತರು ತರಬೇತಿ ಪಡೆಯುವುದು ಒಳಿತು. ಸಮಾನತೆ, ವೈವಿಧ್ಯತೆ ಹಾಗೂ ಸೇರ್ಪಡೆ ತರಬೇತಿಗಳು ಉದ್ಯೋಗಿಯ ಮಾನಸಿಕ ಆರೋಗ್ಯವನ್ನು ಬೆಂಬಲಿಸುತ್ತದೆ ಎಂದು ಇತ್ತೀಚಿನ ಅಧ್ಯಯನ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಕಂಪನಿಗಳು ಕ್ರಮ ಕೈಗೊಳ್ಳಬೇಕು. ಉದ್ಯೋಗಿಗಳ ಆರೋಗ್ಯದ ಹಿತದೃಷ್ಟಿಯಿಂದ ಸಂಸ್ಥೆಗಳು, ವಿವಿಧ ಯೋಜನೆಗಳನ್ನು ಜಾರಿಗೊಳಿಸಬೇಕು.

ಆಯ್ಕೆಗಳನ್ನು ಹೆಚ್ಚಿಸಿ:

ಇಂದಿನ ಉದ್ಯೋಗಿಗಳಿಗೆ ತಾವು ಎಲ್ಲಿ, ಹೇಗೆ ಕೆಲಸ ಮಾಡುತ್ತೇವೆ ಎಂಬುದರ ಮೇಲೆ ಅವರ ಮಾನಸಿಕ ಸ್ಥಿತಿ ನಿರ್ಧರಿತವಾಗುತ್ತದೆ. ಅದು ವೈಯಕ್ತಿಕ, ದೂರಸ್ಥ, ಹೈಬ್ರಿಡ್, ವರ್ಕ್ ಫ್ರಂ ಹೋಂ ಯಾವುದೇ ಇರಲಿ. ಉದ್ಯೋಗಿ ಬಯಸುವ ಮಾದರಿಯ ಅವಕಾಶ ನೀಡಿದರೆ ಉತ್ಪಾದಕತೆಯೂ ಹೆಚ್ಚುತ್ತದೆ. ಅವರು ಹೆಚ್ಚು ತೃಪ್ತರಾಗಿರುತ್ತಾರೆ ಎಂದು ಇತ್ತೀಚಿನ ವರ್ಕ್ ಸಮೀಕ್ಷೆಯೊಂದು ತಿಳಿಸಿದೆ.

ಆರೋಗ್ಯ ವಿಮೆ ಮಾಡಿಸಿ:

ಯೋಗಕ್ಷೇಮವನ್ನು ಉತ್ತೇಜಿಸುವ ಪ್ರಯೋಜನಗಳು: ಬಹುತೇಕ ಉದ್ಯೋಗಿಗಳಿಗೆ ಹಿಂದೆಂದಿ ಗಿಂತಲೂ ಈಗ ಬಹಳ ಮುಖ್ಯವಾಗಿವೆ. ಇತ್ತೀಚಿನ ಸಮೀಕ್ಷೆಗಳ ಪ್ರಕಾರ, ಶೇ. 64ರಷ್ಟು ಉದ್ಯೋಗಿಗಳು ವೇತನಕ್ಕಿಂತ ಆರೋಗ್ಯ ಸೌಲಭ್ಯಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತಾರೆ. ಹಾಗಾಗಿ, ಸಂಸ್ಥೆಗಳು ಕೂಡ ಉದ್ಯೋಗಿಸ್ನೇಹಿ ಪ್ರಯೋಜನಗಳನ್ನು ಜಾರಿಗೆ ತರಬೇಕು. ಕಚೇರಿಯಲ್ಲಿ ಆರೋಗ್ಯಕರ ವಾತಾವರಣವನ್ನು ನಿರ್ಮಿಸಲು ಆರೋಗ್ಯ ಸಂಬಂಧಿ ಪ್ರಯೋಜನಗಳನ್ನು ಜಾರಿಗೊಳಿಸಬೇಕು.

ಉದ್ಯೋಗಿಗಳ ಮನದ ಮಾತಿಗೆ ಕಿವಿಗೊಡಿ:

ಉದ್ಯೋಗದಲ್ಲೇ ಆಗಲಿ, ವೈಯಕ್ತಿಕ ಜೀವನದಲ್ಲಿಯೇ ಆಗಲಿ.. ವ್ಯಕ್ತಿಯೊಬ್ಬನಿಗೆ ತನಗೆ ಏನಾದರೂ ಆದರೆ, ಒಬ್ಬರು ನನ್ನ ಜತೆಗಿದ್ದಾರೆ ಎಂಬ ಆತ್ಮವಿಶ್ವಾಸವಿರುವಂತೆ ಮಾಡಿ. ಕಂಪನಿಯು ಆ ಉದ್ಯೋಗಿಗೆ ನೆರವು ನೀಡಲು ಸಾಧ್ಯವಾಗದಿದ್ದರೂ ಪರವಾಗಿಲ್ಲ, ಉದ್ಯೋಗಿ ಹೇಳುವ ಮಾತುಗಳನ್ನು ಆಲಿಸಿ. ತೀವ್ರ ಮಾನಸಿಕ ಒತ್ತಡದಿಂದ ಬಳಲುತ್ತಿರುವವರು ಯಾರ ಬಳಿಯೂ ಮಾತನಾಡದ ವಿಷಯ ಗಳನ್ನು ಮೇಲಧಿಕಾರಿಗಳೊಂದಿಗೆ ಹಂಚಿಕೊಳ್ಳುವ ಸಾಧ್ಯತೆಯಿದೆ. ಸಾಧ್ಯವಾದರೆ, ಅವರು ಆ ಖಿನ್ನತೆಯಿಂದ ಹೊರಬರುವಂತೆ ಸಹಾಯ ಮಾಡಿ.

ವರದಿ ಏನು ಹೇಳುತ್ತದೆ?



ನಾಲ್ವರು ಉದ್ಯೋಗಿಗಳಲ್ಲಿ ಮೂವರು ಮಾನಸಿಕ ಆರೋಗ್ಯ ಸರಿಯಿಲ್ಲದ ಕಾರಣ ಹೇಳಿ ರಜೆ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಸುಮಾರು ಶೇ.45ರಷ್ಟು ಮಂದಿ ಸಾಮಾನ್ಯ ಅನಾರೋಗ್ಯದ ಕಾರಣ ನೀಡಿ ರಜೆ ತೆಗೆದುಕೊಳ್ಳುತ್ತಾರೆ. ಶೇ.28ರಷ್ಟು ಮಂದಿ ಸೂಕ್ತ ಕಾರಣ ಹೇಳಿ ರಜೆ ಪಡೆಯುವುದು. ಉತ್ತಮ ಎಂದು ಅಭಿಪ್ರಾಯಿಸಿರುವುದಾಗಿ ನೌಕ್ರಿ ಜಾಬ್ ಸ್ಪೀಕ್‌ನ ವರದಿ ಹೇಳಿದೆ.

ಶೇ.31ರಷ್ಟು ಉದ್ಯೋಗಿಗಳು ಮಾನಸಿಕ ಅನಾರೋಗ್ಯದ ಬಗ್ಗೆ ಉದ್ಯೋಗದಾತರಲ್ಲಿ ಹಂಚಿಕೊಳ್ಳಲು ಭಯ ಕಾರಣ ಎಂದು ಹೇಳುತ್ತಾರೆ. ಶೇ.27ರಷ್ಟು ಮಂದಿ ಸಹೋದ್ಯೋಗಿಗಳ ಅಭಿಪ್ರಾಯಗಳ ಬಗ್ಗೆ ಚಿಂತಿಸುತ್ತಿದ್ದರೆ, ಶೇ.21ರಷ್ಟು ಮಂದಿ ಮಾನಸಿಕ ಆರೋಗ್ಯದ ನೆಪವೊಡ್ಡಿ ಉದ್ಯೋಗದಲ್ಲಿ ನಮ್ಮನ್ನು ಕಡೆಗಣಿಸುತ್ತಾರೋ ಎಂಬ ಆತಂಕದಲ್ಲಿದ್ದಾರೆ. ಶೇ.21ರಷ್ಟು ಮಂದಿ ವೃತ್ತಿಜೀವನದ ಬೆಳವಣಿಗೆಯ ಮೇಲೆ ಈ ಮಾತು ಪರಿಣಾಮ ಬೀರಬಹುದು ಎಂದು ಹೇಳಿದ್ದಾರೆ.”

ಶೇ.39ರಷ್ಟು ಉದ್ಯೋಗಿಗಳು ವೃತ್ತಿಜೀವನ ಮತ್ತು ಕೌಟುಂಬಿಕ ಜೀವನವನ್ನು ಸಮತೋಲನದಲ್ಲಿಡಲು ಪರದಾಡುತ್ತಿದ್ದು, ಮಾನಸಿಕ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಮೇಲಧಿಕಾರಿಗಳ ಒತ್ತಡದಿಂದ ಶೇ.30ರಷ್ಟು, ತಾನು ಎಷ್ಟೇ ಕೆಲಸ ಮಾಡಿದರೂ ನನ್ನನ್ನು ಯಾರೂ ಗುರುತಿಸುತ್ತಿಲ್ಲ ಎಂಬ ಮನೋಧೋರಣೆಯಿಂದ ಶೇ.22ರಷ್ಟು ಮಂದಿ ಮಾನಸಿಕ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಆರಂಭಿಕ ವೃತ್ತಿಪರರು ಮಾನಸಿಕ ಆರೋಗ್ಯದ ವಿಷಯದಲ್ಲಿ ಹೆಚ್ಚು ಸುರಕ್ಷಿತವಾಗಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಇದನ್ನೂ ನೋಡಿ……

1. WhatsApp- Aadhaar Card: ವಾಟ್ಸಾಪ್ ಮೂಲಕ ಆಧಾರ್ ಡೌನ್‌ಲೋಡ್ ಮಾಡುವುದು ಹೇಗೆ ಇಲ್ಲಿದೆ ಮಾಹಿತಿ

2.ಫೋನ್‌ಪೇನಲ್ಲಿ ಪೇಮೆಂಟ್ ಮಾಡೋರಿಗೆ ಇದು ಗೊತ್ತಿರಲಿ!

3.ಅಂಚೆ ಇಲಾಖೆಯಿಂದ ಸಮೂಹ ವಿಮೆ । ಕಡಿಮೆ ಪ್ರೀಮಿಯಂನಲ್ಲಿ ಹೆಚ್ಚು ವಿಮೆ ಕವರೇಜ್.

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!