PhonePe Payment: ಫೋನ್‌ಪೇನಲ್ಲಿ ಪೇಮೆಂಟ್ ಮಾಡೋರಿಗೆ ಇದು ಗೊತ್ತಿರಲಿ!
PhonePe Payment: ಫೋನ್‌ಪೇನಲ್ಲಿ ಪೇಮೆಂಟ್ ಮಾಡೋರಿಗೆ ಇದು ಗೊತ್ತಿರಲಿ! ಇಲ್ಲಿದೆ ನೂತನ ಮಾಹಿತಿ.
1. ಫೋನ್‌ಪೇ ಪೇಮೆಂಟ್ ಆ್ಯಪ್‌ನಲ್ಲಿ ಇನ್ನೂ ಸುಲಭವಾಗಿ ಸುಲಭವಾಗಿ ಪೇಮೆಂಟ್ ಮಾಡುವ ಫೀಚರ್‌ಗಳನ್ನು ಹೊಸದಾಗಿ ಪರಿಚಯಿಸಲಾಗಿದೆ. ಕ್ಯೂಆರ್ ಕೋಡ್ ಮೂಲಕ ಸ್ಕ್ಯಾನ್ ನ್ ಮಾಡಿ, ಪೇಮೆಂಟ್ ಮಾಡಲು ಫೋನ್‌ಪೇ ಆ್ಯಪ್ ಓಪನ್ ಮಾಡುತ್ತೀರಿ. ಆದರೆ, ಮೊಬೈಲ್ ಸ್ಕ್ರೀನ್ ಮೇಲಿರುವ ಫೋನ್‌ಪೇ ಆ್ಯಪ್ ಮೇಲೆ ಟ್ಯಾಪ್ ಮಾಡಿ, ಹೋಲ್ಡ್ ಮಾಡಿದರೆ ನೇರವಾಗಿ ಸ್ಕ್ಯಾನ್ ಮಾಡುವ ಆಯ್ಕೆ ತೋರಿಸುತ್ತದೆ. ಆಗ ನೀವು ಸುಲಭವಾಗಿ ಪೇಮೆಂಟ್ ಮಾಡಬಹುದು.
2. ಯಾರಿಗಾದರೂ 1,000 ರೂ. ಅಥವಾ ಅದಕ್ಕಿಂತ ಕಡಿಮೆ ಮೊತ್ತ ಕಳಿಸಬೇಕಾದರೆ, ಯುಪಿಐ ಪಿನ್ ನಮೂದಿಸಲೇಬೇಕು ಅಂತ ಇಲ್ಲ. ಫೋನ್‌ಪೇನಲ್ಲಿನ ‘ಯುಪಿಐ ಲೈಟ್ ಫೀಚರ್’ ಮೂಲಕ ಸಾವಿರ ರೂ.ಗಿಂತ ಕಡಿಮೆ ಮೊತ್ತವನ್ನು ಯುಪಿಐ ಪಿನ್ ಇಲ್ಲದೆ ಕಳುಹಿಸಬಹುದಾಗಿದೆ.
3. ಫೋನ್‌ಪೇನಲ್ಲಿ ಸ್ಪ್ಲಿಟ್ ಎಕ್ಸ್‌ಪೆನ್ಸಸ್ ಆಯ್ಕೆಯೂ ಇದೆ. ನೀವು ಗೆಳೆಯರ ಜತೆ ಯಾವುದಾದರೂ ‘ಹೋಟೆಲ್‌ಗೆ ಹೋಗಿ ಊಟ ಮಾಡಿ, ಬಿಲ್ ಅನ್ನು ಸಮಾನವಾ ಸಮಾನವಾಗಿ ಹಂಚಲು ಇದನ್ನು ಬಳಸಬಹುದು. ಸ್ಪ್ಲಿಟ್ ಎಕ್ಸ್‌ಪೆನ್ಸಸ್ ಫೀಚರ್ ಆಯ್ಕೆ ಮಾಡಿಕೊಂಡು, ನೀವು ಪಾರ್ಟಿ ಮಾಡಲು ಹೋದವರ ಹೆಸರನ್ನು ಸೇರಿಸಿ. ಆಗ, ಪ್ರತಿಯೊಬ್ಬರೂ ಎಷ್ಟು ಹಣ ನೀಡಬೇಕು ಎಂಬುದು ತಿಳಿಯುವುದರ ಜತೆಗೆ, ಅವರಿಗೆ ನೋಟಿಫಿಕೇಶನ್ ಕೂಡ ಹೋಗುತ್ತದೆ. ಆಗ ಎಲ್ಲರೂ ಸುಲಭವಾಗಿ ಪೇಮೆಂಟ್ ಮಾಡಬಹುದು.
