PM-SETU Yojana: ಕೇಂದ್ರದಿಂದ ಪಿಎಂ ಸೇತು ಉಪಕ್ರಮ ಜಾರಿ-2025

PM-SETU Yojana: ಕೇಂದ್ರದಿಂದ ಪಿಎಂ ಸೇತು ಉಪಕ್ರಮ ಜಾರಿ-2025

PM-SETU Yojana: ಪ್ರಧಾನಿ ನರೇಂದ್ರ ಮೋದಿ ಅವರು ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ ನಡೆದ ಕೌಶಲ ಘಟಿಕೋತ್ಸವದಲ್ಲಿ ಪಿಎಂ ನೇತು (ಪ್ರಧಾನಮಂತ್ರಿಗಳ ಕೌಶಲ ವರ್ಧನೆ ಮತ್ತು ತಾಂತ್ರಿಕ ಉನ್ನತೀಕರಣ) ಯೋಜನೆಗೆ ಚಾಲನೆ ನೀಡಿದರು.

ಪಿಎಂ ಸೇತು [PM-SETU Yojana] ಭಾರತದಾದ್ಯಂತ 1,000 ಸರಕಾರಿ ಐಟಿಐಗಳನ್ನು ಆಧುನಿಕ, ಕೈಗಾರಿಕಾ-ಸಂಯೋಜಿತ ತರಬೇತಿ ಸಂಸ್ಥೆಗಳಾಗಿ ಪರಿವರ್ತಿಸಲು 60,000 ಕೋಟಿ ರೂ. ಮೊತ್ತದ ಕೇಂದ್ರ ಪ್ರಾಯೋಜಿತ ಯೋಜನೆಯಾಗಿದೆ.

ಈ ಯೋಜನೆಯು ಕೌಶಲ ಅಂತರವನ್ನು ಕಡಿಮೆ ಮಾಡುವ ಮೂಲಕ ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತದೆ. ಅಲ್ಲದೆ, ಕೇಂದ್ರ ಸರಕಾರದ ವಿಕಸಿತ ಭಾರತ ಯೋಜನೆಗೆ ಪೂರಕವಾಗಿದೆ. ಈ ಉಪಕ್ರಮದ ಅಡಿಯಲ್ಲಿ 200 ಹಬ್ ಐಟಿಐಗಳು, 800 ಸ್ಪೋಕ್ ಐಟಿಐಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತದೆ.

  PM-SETU Yojana ಉದ್ದೇಶ:

ಪ್ರತಿಯೊಂದು ಕಾಲೇಜು ಹಬ್ ಸುಧಾರಿತ ಮೂಲಸೌಕರ್ಯ, ನಾವೀನ್ಯತೆ ಮತ್ತು ಇನ್ನು ಬೇಕನ್ ಕೇಂದ್ರಗಳು ಉತ್ಪಾದನಾ ಘಟಕಗಳು, ತರಬೇತುದಾರರ ಸೌಲಭ್ಯಗಳ ತರಬೇತಿ ಸೌಕರ್ಯಗಳನ್ನು ಒದಗಿಸುವುದು.

ಉದ್ಯಮದ ಸಹಯೋಗದೊಂದಿಗೆ ಹೊಸ, ಬೇಡಿಕೆ ಆದಂತ ಕೋರ್ಸ್ ಗಳನ್ನು ಪರಿಚಯಿಸುವುದು ಮತ್ತು ಅಸ್ತಿತ್ವದಲ್ಲಿರುವ ಕೋರ್ಸ್‌ಗಳನ್ನು ನವೀಕರಿಸುವುದು, ಐಟಿಐ ತರಬೇತಿಯ ಗುಣಮಟ್ಟವನ್ನು ಸುಧಾರಿಸುವುದು, ಉದ್ಯಮ ಪಾಲುದಾರಿಕೆಗಳನ್ನು ಬಲಪಡಿಸು ವುದು ಯೋಜನೆಯ ಉದ್ದೇಶವಾಗಿದೆ. ಪಿಎಂ-ಸೇತುವಿನ ಮೊದಲ ಹಂತದಲ್ಲಿ ದೇಶದಾದ್ಯಂತ 15 ಹಬ್ ಮತ್ತು ಸ್ಪೋಕ್ ಐಟಿಐ ಕ್ಲಸ್ಟರ್‌ಗಳನ್ನು ಗುರುತಿಸಲಾಗಿದೆ.

ಈ ಯೋಜನೆಯ ಮೂಲಕ ಐಟಿಐಗಳಲ್ಲಿ ಎಐ, ಆಟೊಮೇಷನ್, ಗ್ರೀನ್ ಎನರ್ಜಿ, ರೋಬೊಟಿಕ್ಸ್ ಆ್ಯಂಡ್ ಮ್ಯಾನುಫ್ಯಾಕ್ಟರಿಂಗ್ ಶ್ರೀ ಅಳವಡಿಕೆ ಹೆಚ್ಚಾಗಲಿದ್ದು, ಸೆಂಟರ್ ಆಫ್ ಎಕ್ಸಲೆನ್ಸ್ ಆಗಿ ಮಾರ್ಪಡಲಿವೆ.

ನ್ಯಾಷನಲ್ ಸೆಂಟ‌ರ್ ಆಫ್ ಎಕ್ಸಲೆನ್ಸ್:

ಪಿಎಂ ಸೇತು ಯೋಜನೆ (PM-SETU Yojana) ಅಡಿಯಲ್ಲಿ ಸುಧಾರಿತ ತರಬೇತಿ ಮತ್ತು ಉದ್ಯಮ ಸಂಬಂಧಿತ ಕೌಶಲವರ್ಧನೆಯನ್ನು ಒದಗಿಸಲು ಐದು ನ್ಯಾಷನಲ್ ಸೆಂಟರ್ ಆಫ್ ಎಕ್ಸಲೆನ್ಸ್ ಅನ್ನು ಸ್ಥಾಪಿಸಲಾಗಿದೆ. ಅವುಗಳೆಂದರೆ:

* ಪಂಜಾಬ್‌ನ ಲೂಧಿಯಾನ -ಉತ್ಪಾದನೆ ಮತ್ತು ಜವಳಿ ಎಂಜಿನಿಯರಿಂಗ್, ಉತ್ತರಪ್ರದೇಶದ ಕಾನ್ಪುರ- ಚರ್ಮದ ಉತ್ಪನ್ನಗಳ ವಿನ್ಯಾಸ, ಒಡಿಶಾದ ಭುವನೇಶ್ವರ-ಇಂಡಸ್ಟ್ರಿಯಲ್ ಆಟೊಮೇಷನ್ ಆ್ಯಂಡ್ ರೋಬೊಟಿಕ್ಸ್, ತೆಲಂಗಾಣದ ಹೈದರಾಬಾದ್-ಇನ್ಸಾರ್ಮೆಷನ್ ಟೆಕ್ನಾಲಜಿ ಆ್ಯಂಡ್ ಎಐ, ತಮಿಳುನಾಡಿನ ಚೆನ್ನೈ-ಎಲೆಕ್ಟಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್‌ ಎಂಜಿನಿಯರಿಂಗ್.

ಭಾರತೀಯ ವಿದ್ಯಾರ್ಥಿಗಳು ಮತ್ತು ತರಬೇತುದಾರರು ವಿಶ್ವದರ್ಜೆಯ ಪಠ್ಯಕ್ರಮ ರೂಪಿಸಲು ಜಾಗತಿಕ ಸಂಸ್ಥೆಗಳು ಮತ್ತು ಕೈಗಾರಿಕೆಗಳೊಂದಿಗೆ ಪಾಲುದಾರಿಕೆ ಹೊಂದಿರಲಿವೆ. ಅಭಿವೃದ್ಧಿಪಡಿಸಲು ಮೊದಲ ಹಂತದಲ್ಲಿ ಆಯ್ಕೆ ಮಾಡಲಾದ 15 ಐಟಿಐ ಕ್ಲಸ್ಟರ್‌ಗಳು ಇಂತಿವೆ. ಅವುಗಳೆಂದರೆ: ಸೋನಿಪತ್, ವಿಶಾಖಪಟ್ಟಣಂ, ಬಿಳ್ಳೂರ್ ಮತ್ತು ಮೀರತ್, ಹರಿದ್ವಾರ, ಉಜ್ಜಯಿನಿ, ಬೆಂಗಳೂರು, ಭರತ್ ಪುರ, ದರ್ಭಾಂಗಾ ಮತ್ತು ಪಟನಾ, ಹೋಶಿಯಾರ್‌ಪುರ, ಹೈದರಾಬಾದ್-ಸಂಬಲ್ಪುರ, ಚೆನ್ನೈ, ಗುವಾಹಟಿ,

▪️ಯೋಜನೆಯ ಒಟ್ಟು ವೆಚ್ಚ: 60,000 ಕೋಟಿ ರೂ.

▪️ಅನುಷ್ಠಾನದ ಅವಧಿ: 5 ವರ್ಷ

▪️ವ್ಯಾಪ್ತಿ: 1000 ITI ಸಂಸ್ಥೆಗಳು,  200 ಹಬ್‌ಗಳು,ಮತ್ತು 800 ಸ್ಪೋಕ್

▪️ಉಪಕ್ರಮದ ಗುರಿ: 20 ಲಕ್ಷ ಯುವಜನರಿಗೆ ಕೌಶಲ ಕಲಿಕೆ

ಹೆಚ್ಚಿನ ಮಾಹಿತಿ: CLICK HERE

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment