PM Vishwakarma Scheme – ಮಹಿಳೆಯರಿಗೆ ಉಚಿತ ₹15,000 ಕಿಟ್, ₹3 ಲಕ್ಷ ಸಾಲ

PM Vishwakarma Scheme – ಮಹಿಳೆಯರಿಗೆ ಉಚಿತ ₹15,000 ಕಿಟ್, ₹3 ಲಕ್ಷ ಸಾಲ

PM Vishwakarma Scheme – ಮಹಿಳೆಯರಿಗೆ ಉಚಿತ ₹15,000 ಕಿಟ್, ₹3 ಲಕ್ಷ ಸಾಲ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ಪಿಎಂ ವಿಶ್ವಕರ್ಮ ಯೋಜನೆ’ಯಡಿ ರಾಜ್ಯದ ಲಕ್ಷಾಂತರ ಕುಶಲಕರ್ಮಿಗಳು, ವಿಶೇಷವಾಗಿ ಹೊಲಿಗೆ ಮಾಡುವ ಮಹಿಳೆಯರು ಪ್ರಯೋಜನ ಪಡೆಯುತ್ತಿದ್ದಾರೆ. ಈ ಯೋಜನೆಯಡಿ ₹15,000 ಮೌಲ್ಯದ ಉಪಕರಣ ಕಿಟ್ ಉಚಿತವಾಗಿ ನೀಡಲಾಗುತ್ತಿದ್ದು, ವ್ಯಾಪಾರ ವೃದ್ಧಿಗೆ ₹3 ಲಕ್ಷದವರೆಗೆ ಕಡಿಮೆ ಬಡ್ಡಿಯಲ್ಲಿ ಸಾಲವೂ ಲಭ್ಯವಿದೆ. ಈ ಯೋಜನೆಯು ಕುಶಲಕರ್ಮಿಗಳ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಸಹಕಾರಿಯಾಗಿದೆ.

 

ಉಚಿತ ಹೊಲಿಗೆ ಯಂತ್ರ:

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪಿಎಂ ವಿಶ್ವಕರ್ಮ ಯೋಜನೆ ಅಡಿಯಲ್ಲಿ ‘ಟೈಲರ್’ (Tai-lor/Darzi) ವಿಭಾಗದಡಿ ಅರ್ಜಿ ಸಲ್ಲಿಸಿ ಆಯ್ಕೆಯಾಗುವವರಿಗೆ ₹15,000 ಮೌಲ್ಯದ ಇ-ವೌಚ‌ರ್ ನೀಡಲಿದೆ. ಈ ವೌಚರ್ ಬಳಸಿ ಹೊಲಿಗೆ ಯಂತ್ರವನ್ನು ಉಚಿತವಾಗಿ ಖರೀದಿಸಬಹುದು. ಹಣವನ್ನು ನೇರವಾಗಿ ನೀಡದೆ, ವೌಚರ್ ರೂಪದಲ್ಲಿ ನೀಡಲಾಗುತ್ತದೆ.

ಉಚಿತ ತರಬೇತಿ, ₹500 ಭತ್ಯೆ, 5% ಬಡ್ಡಿಗೆ ಸಾಲ:

ಪಿಎಂ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಕಿಟ್ ಜೊತೆಗೆ, 5 ರಿಂದ 7 ದಿನಗಳ ಉಚಿತ ತರಬೇತಿ ನೀಡಲಾಗುತ್ತದೆ. ತರಬೇತಿ ಸಮಯದಲ್ಲಿ ಊಟದ ವ್ಯವಸ್ಥೆ ಮತ್ತು ದಿನಕ್ಕೆ ₹500 ಭತ್ಯೆ ದೊರೆಯುತ್ತದೆ. ತರಬೇತಿ ನಂತರ, ಮೊದಲ ಹಂತದಲ್ಲಿ ₹1 ಲಕ್ಷ (18 ತಿಂಗಳು) ಮತ್ತು ಎರಡನೇ ಹಂತದಲ್ಲಿ ₹2 ಲಕ್ಷ (30 ತಿಂಗಳು) ಸಾಲ 5% ಬಡ್ಡಿಗೆ ಲಭ್ಯವಿದೆ.

ಇವರು ಅರ್ಜಿ ಸಲ್ಲಿಸಬಹುದು:

ಟೈಲರ್, ಬಡಗಿ, ಕಮ್ಮಾರ, ಅಕ್ಕಸಾಲಿಗ, ಕುಂಬಾರ, ಮೇಸ್ತ್ರಿ, ಚಮ್ಮಾರ, ಕ್ಷೌರಿಕ, ಮಡಿವಾಳ, ಹೂಮಾಲೆಗಾರ, ಮೀನು ಬಲೆ ನೇಯುವವರು, ಬುಟ್ಟಿ /ಚಾಪೆ ನೇಯುವವರು, ಗೊಂಬೆ ತಯಾರಕರು, ಸುತ್ತಿಗೆ ತಯಾರಕರು ಮತ್ತು ಶಿಲ್ಪಿಗಳು ಸೇರಿದ್ದಾರೆ. ಈ ಪಟ್ಟಿಯು ವಿವಿಧ ಕೈಗಾರಿಕೆಗಳು ಮತ್ತು ಕಲಾ ಪ್ರಕಾರಗಳಲ್ಲಿ ತೊಡಗಿರುವ ಕುಶಲಕರ್ಮಿಗಳನ್ನು ಒಳಗೊಂಡಿದೆ.

PM Vishwakarma Scheme

CSC ಸೆಂಟರ್‌ಗೆ ಭೇಟಿ ಕಡ್ಡಾಯ:

ಮನೆಯಿ೦ದಲೇ ಮೊಬೈಲ್ ಮೂಲಕ ವಿಶ್ವಕರ್ಮ ಐಡಿ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಕಡ್ಡಾಯವಾಗಿ ಗ್ರಾಹಕ ಸೇವಾ ಕೇಂದ್ರ (CSC) ಅಥವಾ ಗ್ರಾಮ ಒನ್/ಕರ್ನಾಟಕ ಒನ್ ಕೇಂದ್ರಕ್ಕೆ ಭೇಟಿ ನೀಡಬೇಕು. ಅರ್ಜಿ ಸಲ್ಲಿಸಲು ಆಧಾ‌ರ್ ಕಾರ್ಡ್, ರೇಷನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಮತ್ತು ಆಧಾರ್‌ಗೆ ಲಿಂಕ್ ಆದ ಮೊಬೈಲ್ ನಂಬ‌ರ್ ಅಗತ್ಯವಿದೆ. ಅರ್ಜಿ ಸಲ್ಲಿಸಿದ ನಂತರ, ಗ್ರಾಮ ಪಂಚಾಯಿತಿ ಮತ್ತು ಜಿಲ್ಲಾ ಮಟ್ಟದಲ್ಲಿ ಪರಿಶೀಲನೆ ನಡೆಯಲಿದ್ದು, ನಂತರ ವಿಶ್ವಕರ್ಮ ಐಡಿ ಕಾರ್ಡ್ ನೀಡಲಾಗುತ್ತದೆ.

CLICK HERE MORE INFORMATION 

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!