Police constable recuritment: ಶೀಘ್ರದಲ್ಲೇ 2000ಕ್ಕೂ ಹೆಚ್ಚು ಪೊಲೀಸ್ ಕಾನ್ ಸ್ಟೇಬಲ್‌ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ.

Police Recuritment: ಶೀಘ್ರದಲ್ಲೇ 2000ಕ್ಕೂ ಹೆಚ್ಚು ಪೊಲೀಸ್ ಕಾನ್ ಸ್ಟೇಬಲ್‌ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ.

Police Recuritment: ಶೀಘ್ರದಲ್ಲೇ 2000ಕ್ಕೂ ಹೆಚ್ಚು ಪೊಲೀಸ್ ಕಾನ್ ಸ್ಟೇಬಲ್‌ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲು ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಸರ್ಕಾರದ ಉಲ್ಲೇಖ-1ರ ಪತ್ರದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಕೆಎಸ್‌ಆರ್‌ಪಿ ಘಟಕದ 1500 ಸ್ರೋ ಆರ್‌ಪಿಸಿ ಹುದ್ದೆಗಳನ್ನು ಹಾಗೂ ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (ಸಿಎಆರ್/ಡಿಎಆರ್) -2000 ಹುದ್ದೆಗಳನ್ನು ನೇರ ನೇಮಕಾತಿಯ ಮೂಲಕ ಭರ್ತಿಮಾಡಲು ಅನುಮತಿ ನೀಡಿದ್ದು, ಅದರಂತೆ ಇಲಾಖೆಯ ರಿಕ್ತವಿದ್ದ ಎಪಿಸಿ ಮತ್ತು ಸ್ಟೆ.ಆರ್‌ಪಿಸಿ ಹುದ್ದೆಗಳನ್ನು ಭರ್ತಿಮಾಡಲು ಕ್ರಮ ಕೈಗೊಳ್ಳುವಂತೆ ಉಲ್ಲೇಖ-3 ಮತ್ತು 4ರ ಪತ್ರಗಳಲ್ಲಿ ಕೋರಿ ಜಿಲ್ಲಾ/ಘಟಕವಾರು ಹುದ್ದೆಗಳ ಸಂಖ್ಯಾವಾರು ವಿವರಗಳನ್ನು ಪ್ರಸ್ತಾಪಿಸಲಾಗಿತ್ತು. ಈ ಮಧ್ಯೆ ಪರಿಶಿಷ್ಟ ಜಾತಿಯ ಒಳ ಮೀಸಲಾತಿಯ ಸಂಬಂಧ ಸರ್ಕಾರವು ನೀಡಿದ ನಿರ್ಬಂಧದಿಂದಾಗಿ ಈವರೆಗೂ ನೇಮಕಾತಿ ಅಧಿಸೂಚನೆ ಹೊರಡಿಸಿರುವುದಿಲ್ಲ.

ಪ್ರಸ್ತುತ ಸರ್ಕಾರವು ಉಲ್ಲೇಖ-2ರಲ್ಲಿ ಪರಿಶಿಷ್ಟ ಜಾತಿಯ ಒಳಮೀಸಲಾತಿಗಳನ್ನು ಗುರುತಿಸಿ ಪರಿಷ್ಕೃತ ರೋಸ್ಟರ್ ಬಿಂದುಗಳನ್ನು ಗುರುತಿಸಿ ಆದೇಶಿಸಿರುತ್ತದೆ. ಈ ಮಧ್ಯೆ ಕೆಲವು ಘಟಕಗಳಲ್ಲಿ ಈ ಹಿಂದೆ ಪ್ರಸ್ತಾಪಿಸಿರುವ ಸಂಖ್ಯಾಬಲಗಳಲ್ಲಿ ಬದಲಾವಣೆಯಾಗಿರುತ್ತದೆ. ಆದ್ದರಿಂದ ಸರ್ಕಾರವು ಹೊರಡಿಸಿರುವ ಪರಿಷ್ಕೃತ ರೋಸ್ಟರ್ ಬಿಂದುಗಳಡಿಯಲ್ಲಿ ಕ್ರೀಡಾ ಮೀಸಲಾತಿ ಸೇರಿದಂತೆ ಸಂಬಂಧಪಟ್ಟ ಘಟಕಗಳಿಂದ ವರ್ಗಿಕರಣವನ್ನು ಪಡೆದು ಈ ಕೆಳಗಿನ ವೃಂದದ ಹುದ್ದೆಗಳನ್ನು (ಈ ಹಿಂದಿನ ಬ್ಯಾಕ್‌ಲಾಗ್ ಹುದ್ದೆಗಳು ಸೇರಿದಂತೆ) ನೇರ ನೇಮಕಾತಿಯ ಮೂಲಕ ಭರ್ತಿಮಾಡಲು ಮುಂದಿನ ಕ್ರಮಕ್ಕಾಗಿ ಮರು ಹಂಚಿಕೆಮಾಡಲಾಗಿರುತ್ತದೆ ಹಾಗೂ ಸಿವಿಲ್ ಮತ್ತು ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್‌ಗಳ ಘಟಕವಾರು ಹುದ್ದೆಗಳ ಹಂಚಿಕೆಯ ವಿವರವನ್ನು ಅನುಬಂಧ-ಅ & ಆ ಗಳಲ್ಲಿ ಲಗತ್ತಿಸಿರುತ್ತದೆ.

01. ಡಿಡೆಕ್ಟಿವ್ ಸಬ್ ಇನ್ಸ್‌ಪೆಕ್ಟರ್ (ಡಿಎಸ್‌ಐ)- ಕಲ್ಯಾಣ ಕರ್ನಾಟಕ-05, ಕಲ್ಯಾಣ ಕರ್ನಾಟಕೇತರ-15 ಒಟ್ಟು- 20

02. ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (ಎಪಿಸಿ): ಕಲ್ಯಾಣ ಕರ್ನಾಟಕ-275, ಕಲ್ಯಾಣ ಕರ್ನಾಟಕೇತರ-1375 ಒಟ್ಟು- 1650

3. ನಾಗರಿಕ ಪೊಲೀಸ್ ಕಾನ್ಸ್‌ಟೇಬಲ್ (ಸಿವಿಲ್): ಕಲ್ಯಾಣ ಕರ್ನಾಟಕ-614, ಕಲ್ಯಾಣ ಕರ್ನಾಟಕೇತರ-00 ಒಟ್ಟು- 614

4. ಸ್ಪೆ. ರಿಸರ್ವ್ ಪೊಲೀಸ್ ಕಾನ್ಸ್‌ಟೇಬಲ್(ಕೆಎಸ್‌ಆರ್‌ಪಿ): ಕಲ್ಯಾಣ ಕರ್ನಾಟಕ-532, ಕಲ್ಯಾಣ ಕರ್ನಾಟಕೇತರ-1500
ಒಟ್ಟು- 2032

5. ಪೊಲೀಸ್ ಕಾನ್ಸ್‌ಟೇಬಲ್‌(ಕೆಎಸ್‌ಐಎಸ್‌ಎಫ್): ಕಲ್ಯಾಣ ಕರ್ನಾಟಕ-340, ಕಲ್ಯಾಣ ಕರ್ನಾಟಕೇತರ-00 ಒಟ್ಟು- 340

 

ಹೆಚ್ಚಿನ ಮಾಹಿತಿಗಾಗಿ – CLICK HERE

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

2 thoughts on “Police constable recuritment: ಶೀಘ್ರದಲ್ಲೇ 2000ಕ್ಕೂ ಹೆಚ್ಚು ಪೊಲೀಸ್ ಕಾನ್ ಸ್ಟೇಬಲ್‌ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ.”

Leave a Comment

You cannot copy content of this page

error: Content is protected !!