PSI 402 Posts: FINAL SELECT LIST FOR THE POST OF SUB-INSPECTOR OF POLICE (CIVIL)

PSI 402 Posts: FINAL SELECT LIST FOR THE POST OF SUB-INSPECTOR OF POLICE (CIVIL)

PSI 402 Posts: FINAL SELECT LIST FOR THE POST OF SUB-INSPECTOR OF POLICE (CIVIL) ಅಂತಿಮ ಆಯ್ಕೆ ಪಟ್ಟಿ

1. ಪೊಲೀಸ್ ಸಬ್-ಇನ್ಸ್‌ಪೆಕ್ಟರ್ (ಸಿವಿಲ್) (ಪುರುಷ & ಮಹಿಳಾ) ಹಾಗೂ ಸೇವಾನಿರತ ಮಿಕ್ಕುಳಿದ ವೃಂದದ ಮತ್ತು ಕಲ್ಯಾಣ ಕರ್ನಾಟಕ ಹುದ್ದೆಗಳ ನೇಮಕಾತಿಯನ್ನು ಉಲ್ಲೇಖ(1)ರ ಅಧಿಸೂಚನೆಯನ್ವಯ ಕೈಗೊಳ್ಳಲಾಗಿರುತ್ತದೆ. ಸದರಿ ಹುದ್ದೆಗಳ ನೇಮಕಾತಿ ಸಲುವಾಗಿ ಅರ್ಜಿ ಸಲ್ಲಿಸಿರುವ ಅರ್ಹ ಅಭ್ಯರ್ಥಿಗಳಿಗೆ ಸಹಿಷ್ಣುತೆ ಮತ್ತು ದೇಹದಾರ್ಡ್ಯತೆ ಪರೀಕ್ಷೆಗಳನ್ನು ನಡೆಸಿದ ನಂತರ ಸದರಿ ಪರೀಕ್ಷೆಗಳಲ್ಲಿ ಅರ್ಹರಾದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಯನ್ನು ನಡೆಸಬೇಕಾಗಿದ್ದು, ಈ ಸಂಬಂಧ ಉಲ್ಲೇಖ(2)ರ ಸರ್ಕಾರದ ಆದೇಶದನ್ವಯ ಸದರಿ ಲಿಖಿತ ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಉಲ್ಲೇಖ(3)ರಂತೆ ದಿನಾಂಕ: 03.10.2024ರಂದು ನಡೆಸಿ, ಉಲ್ಲೇಖ(4)ರನ್ವಯ ಅಭ್ಯರ್ಥಿಗಳ ಅಂತಿಮ ಅಂಕಪಟ್ಟಿಯನ್ನು ಪ್ರಕಟಿಸಿ, ಅದರ ಮಾಹಿತಿಯನ್ನು ನೇಮಕಾತಿ ಕಛೇರಿಗೆ ನೀಡಿರುತ್ತಾರೆ.

2. ವೃಂದ ಮತ್ತು ನೇಮಕಾತಿ (ತಿದ್ದುಪಡಿ) ನಿಯಮಗಳು, 2009, 2016 ಮತ್ತು 2020 ರಲ್ಲಿನ ನಿಯಮಗಳನ್ವಯ ಮೇಲ್ಕಂಡ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ನೇಮಕಾತಿ ಅಧಿಸೂಚನೆಯಲ್ಲಿ ಪ್ರಕಟಿಸಲಾಗಿರುವ ಹುದ್ದೆಗಳಂತೆ ಮೆರಿಟ್ ಹಾಗೂ ಮೀಸಲಾತಿಯನುಸಾರ ಅರ್ಹ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ತಯಾರಿಸಿ, ಪ್ರಕಟಿಸಬೇಕಾಗಿರುತ್ತದೆ. ಅದರಂತೆ ಸದರಿ ಹುದ್ದೆಯ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸುವ ಬಗ್ಗೆ ಉಲ್ಲೇಖ(5)ರಲ್ಲಿ ಸರ್ಕಾರದಿಂದ ನಿರ್ದೇಶನ ಹಾಗೂ ಸ್ಪಷ್ಟಿಕರಣವನ್ನು ಕೋರಲಾಗಿದ್ದು, ಈ ನಿಟ್ಟಿನಲ್ಲಿ ಉಲ್ಲೇಖ(6)ರನ್ವಯ ಸರ್ಕಾರವು ಈ ಕೆಳಕಂಡಂತೆ ನಿರ್ದೇಶನವನ್ನು ನೀಡಿರುತ್ತದೆ.

3. ಸರ್ಕಾರದ ಪತ್ರ ಸಂಖ್ಯೆ: ಹೆಚ್ಡಿ/215/ಪಿಇಐ/2024-ಪಿಎಸ್-ಎ ದಿನಾಂಕ: 21.12.2024ರಲ್ಲಿ “402 ಪಿ.ಎಸ್.ಐ. (ಸಿವಿಲ್) ಹುದ್ದೆಗಳ ನೇರ ನೇಮಕಾತಿ ಕುರಿತಂತೆ ಆಯ್ಕೆ ಪಟ್ಟಿಯನ್ನು ದಿನಾಂಕ: 01.02.2023ರ ಸುತ್ತೋಲೆಯನ್ವಯ ತಯಾರಿಸಿ ಈ ಕೆಳಕಂಡಂತೆ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಲಾಗಿರುತ್ತದೆ.

1. ದಿನಾಂಕ: 06.06.2020ರ ಸುತ್ತೋಲೆಯನ್ವಯ ಆಯ್ಕೆ ಪಟ್ಟಿಯಿಂದ ಹೊರಗುಳಿಯುವ ಕಲ್ಯಾಣ ಕರ್ನಾಟಕ ವೃಂದದ ಅಭ್ಯರ್ಥಿಗಳಿಗನುಗುಣವಾಗಿ ಹುದ್ದೆಗಳನ್ನು ಕಲ್ಯಾಣ ಕರ್ನಾಟಕ ವೃಂದದಲ್ಲಿ ಕಾಯ್ದಿರಿಸಿ ಆಯ್ಕೆ ಪಟ್ಟಿಯನ್ನು ಪ್ರಕಟಿಸುವುದು.

2. ಆಯ್ಕೆ ಪಟ್ಟಿಯನ್ನು ಪ್ರಕಟಿಸುವ ಸಂದರ್ಭದಲ್ಲಿ ಈ ಆಯ್ಕೆ ಪಟ್ಟಿಯು ಮಾನ್ಯ ಉಚ್ಚ ನ್ಯಾಯಾಲಯವು ರಿಟ್ ಪಿಟಿಷನ್ ಸಂ:16343/2024ರಲ್ಲಿ ನೀಡುವ ಅಂತಿಮ ತೀರ್ಪಿಗೊಳಪಟ್ಟಿರುತ್ತದೆಂದು ಹಾಗೂ ಈ ಆಯ್ಕೆ ಪಟ್ಟಿಯಲ್ಲಿ ವೃಂದ ಬದಲಾವಣೆ, ಮೀಸಲಾತಿ ಪ್ರವರ್ಗ ಬದಲಾವಣೆ, ಅರ್ಹತಾ ಪಟ್ಟಿಯಲ್ಲಿನ ಸ್ಥಾನ ಮತ್ತು ಘಟಕಗಳ ಬದಲಾವಣೆ ಆಗುವ ಸಾಧ್ಯತೆಗೊಳಪಟ್ಟಿರುತ್ತದೆ ಎಂಬ ಷರತ್ತುಗಳನ್ನು ವಿಧಿಸುವುದು.”

4. ಉಲ್ಲೇಖ(6)ರ ಸರ್ಕಾರದ ಪತ್ರದಲ್ಲಿ ನಿರ್ದೇಶಿಸಿರುವಂತೆ 381 ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ತಯಾರಿಸಿ, ಉಲ್ಲೇಖ(7)ರನ್ವಯ ದಿನಾಂಕ: 26.12.2024 ರಂದು ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿರುತ್ತದೆ. ನಂತರ ಘಟಕವಾರು ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಉಲ್ಲೇಖ(8)ರನ್ವಯ ಪ್ರಕಟಿಸಿ, ಸದರಿ ಅಭ್ಯರ್ಥಿಗಳಿಗೆ ನಿಯಮಾನುಸಾರ ವೈದ್ಯಕೀಯ ಪರೀಕ್ಷೆ ಮತ್ತು ದಾಖಲಾತಿ ಪರಿಶೀಲನೆಯನ್ನು ನಡೆಸಿ ವರದಿಯನ್ನು ಈ ಕಛೇರಿಗೆ ಸಲ್ಲಿಸುವಂತೆ ಸಂಬಂಧಪಟ್ಟ ಘಟಕಗಳಿಗೆ ಸೂಚಿಸಲಾಗಿರುತ್ತದೆ.

5. ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾಗಿ ವೈದ್ಯಕೀಯ ಪರೀಕ್ಷೆ ಮತ್ತು ದಾಖಲಾತಿಗಳ ಪರಿಶೀಲನೆಗಳನ್ನು ಪೂರ್ಣಗೊಳಿಸಿ, ಅರ್ಹರಿರುವ ಅಭ್ಯರ್ಥಿಗಳಿಗೆ ಆಗಿಂದಾಗಲೇ ನೇಮಕಾತಿ ಆದೇಶಗಳನ್ನು ನೀಡುವ ಸಲುವಾಗಿ ಸರ್ಕಾರಕ್ಕೆ ಉಲ್ಲೇಖ(9)ರನ್ವಯ ಅನುಮತಿಯನ್ನು ನೀಡುವಂತೆ ಕೋರಲಾಗಿರುತ್ತದೆ. ಈ ಸಂಬಂಧ ಉಲ್ಲೇಖ(10)ರ ಸರ್ಕಾರದ ಪತ್ರದಲ್ಲಿ ಪಿ.ಎಸ್.ಐ. (ಸಿವಿಲ್) 402 ಹುದ್ದೆಯ ನೇಮಕಾತಿಗೆ ಸಂಬಂಧಿಸಿದಂತೆ 381 ಹುದ್ದೆಗಳಿಗೆ ಹೊರಡಿಸಲಾಗಿರುವ ತಾತ್ಕಾಲಿಕ ಆಯ್ಕೆ ಪಟ್ಟಿಯನುಸಾರ ಆಯ್ಕೆಯಾಗಿ ವೈದ್ಯಕೀಯ ಪರೀಕ್ಷೆ ಮತ್ತು ದಾಖಲಾತಿ ಪರಿಶೀಲನೆ ಪೂರ್ಣಗೊಂಡಿರುವ ಅರ್ಹ ಅಭ್ಯರ್ಥಿಗಳಿಗೆ ವೃತ್ತಿ ಬುನಾದಿ ತರಬೇತಿಯನ್ನು ಶೀಘ್ರವಾಗಿ ಆರಂಭಿಸಲು ಅನುಕೂಲವಾಗುವಂತೆ ನೇಮಕಾತಿ ಆದೇಶಗಳನ್ನು ಹೊರಡಿಸಲು ಅನುಮತಿಯನ್ನು ನೀಡಲಾಗಿರುತ್ತದೆ” ಎಂದು ತಿಳಿಸಿ ಈ ಕೆಳಕಂಡಂತೆ ನಿರ್ದೇಶಿಸಲಾಗಿರುತ್ತದೆ.

1) “ಕರ್ನಾಟಕ ಸರ್ಕಾರಿ ನೌಕರರ (ಜೇಷ್ಠತಾ) ನಿಯಮಗಳು 1957ರ ನಿಯಮ 5ರನ್ವಯ ಅಂತಿಮ ಆಯ್ಕೆ ಪಟ್ಟಿಯಲ್ಲಿರುವಂತೆ ಜೇಷ್ಟತಾ ಕ್ರಮಾಂಕವನ್ನು ನಿಗದಿಪಡಿಸುವುದು.

2) ನೇಮಕಾತಿ ಆದೇಶ ಹೊರಡಿಸಿದ ನಂತರವು ಅಂತಿಮ ಆಯ್ಕೆ ಪಟ್ಟಿಯಲ್ಲಿ ವೃಂದ ಬದಲಾವಣೆ, ಮೀಸಲಾತಿ ಪ್ರವರ್ಗ ಬದಲಾವಣೆ, ಅರ್ಹತಾ ಪಟ್ಟಿಯಲ್ಲಿನ ಸ್ಥಾನ ಮತ್ತು ಘಟಕಗಳ ಬದಲಾವಣೆ ಆಗುವ ಸಾಧ್ಯತೆಗೊಳಪಟ್ಟಿರುತ್ತದೆ.

3) ನೇಮಕಾತಿ ಆದೇಶಗಳು ಮಾನ್ಯ ಉಚ್ಚ ನ್ಯಾಯಾಲಯವು ರಿಟ್ ಪಿಟಿಷನ್ ಸಂ: 16343/2024ರಲ್ಲಿ ನೀಡುವ ಅಂತಿಮ ತೀರ್ಪಿಗೊಳಪಟ್ಟಿರುತ್ತದೆ. ಅಲ್ಲದೇ, ಸದರಿ ಅಧಿಸೂಚನೆಯ ಬಗ್ಗೆ ಇತರೆ ನ್ಯಾಯಾಲಯಗಳಾದ ಆಡಳಿತ ನ್ಯಾಯ ಮಂಡಳಿ, ರಾಜ್ಯ ಉಚ್ಚ ನ್ಯಾಯಾಲಯ ಮತ್ತು ಭಾರತದ ಸರ್ವೋಚ್ಚ ನ್ಯಾಯಾಲಯಗಳಲ್ಲಿ ದಾಖಲಾಗಬಹುದಾದ ಪ್ರಕರಣಗಳ ಅಂತಿಮ ತೀರ್ಪಿಗೂ ಸಹ ಸದರಿ ನೇಮಕಾತಿಯು ಒಳಪಟ್ಟಿರುತ್ತದೆ.

4) ಎಲ್ಲಾ ಅಭ್ಯರ್ಥಿಗಳ ವೈದ್ಯಕೀಯ ಪರೀಕ್ಷೆ ಮತ್ತು ದಾಖಲಾತಿ ಪರಿಶೀಲನೆಯು ಪೂರ್ಣಗೊಂಡ ನಂತರ ಕ್ರೋಢೀಕೃತ ಮತ್ತು ಘಟಕವಾರು ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸುವುದು” ಎಂದು ನಿರ್ದೇಶಿಸಲಾಗಿರುತ್ತದೆ.

6. ಉಲ್ಲೇಖ(9)ರ ಈ ಕಛೇರಿಯ ಪತ್ರದಲ್ಲಿ ಪಿ.ಎಸ್.ಐ. (ಸಿವಿಲ್) 402 ಹುದ್ದೆಗಳಿಗೆ ಸಂಬಂಧಿಸಿದಂತೆ ಅರ್ಹ ಅಭ್ಯರ್ಥಿಗಳಿಗೆ, ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸದೇ ಷರತ್ತುಬದ್ಧ ನೇಮಕಾತಿ ಆದೇಶಗಳನ್ನು ನೀಡಲು ಮಾನ್ಯ ಸರ್ಕಾರವು ಉಲ್ಲೇಖ(10)ರಲ್ಲಿ ನೀಡಿರುವ ಅನುಮತಿಯನ್ನು, ಮಾನ್ಯ ಉಚ್ಚ ನ್ಯಾಯಾಲಯದ ಮೇಲ್ಕಂಡ ಪ್ರಕರಣಗಳ ವಿಚಾರಣೆಯ ಸಂದರ್ಭದಲ್ಲಿ ಮಾಡಿರುವ ಅವಲೋಕನೆಗಳು ಮತ್ತು ದೈನಂದಿನ ಆದೇಶಗಳ ಹಿನ್ನೆಲೆಯಲ್ಲಿ ಮರುಪರಿಶೀಲಿಸಿ, ಕಾನೂನು ಸಲಹೆಯನ್ನು ಪಡೆದು ಮುಂದಿನ ನಿರ್ದೇಶನವನ್ನು ನೀಡಬೇಕೆಂದು ಉಲ್ಲೇಖ(11)ರಲ್ಲಿ ಕೋರಲಾಗಿರುತ್ತದೆ.

7. ಈ ಸಂಬಂಧ ಉಲ್ಲೇಖ(12)ರ ಸರ್ಕಾರದ ಪತ್ರದಲ್ಲಿ ಪಿ.ಎಸ್.ಐ. (ಸಿವಿಲ್) 402 ಹುದ್ದೆಗಳಿಗೆ ಸಂಬಂಧಿಸಿದಂತೆ ಕಂಡಿಕೆ 4ರಲ್ಲಿ ಈ ಕೆಳಕಂಡ ಅಂಶಗಳನ್ನಾಧರಿಸಿ ನೇಮಕಾತಿ ಆದೇಶಗಳನ್ನು ಹೊರಡಿಸಿ, ನೇಮಕಾತಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಕ್ರಮ ವಹಿಸುವಂತೆ ನಿರ್ದೇಶಿಸಲಾಗಿರುತ್ತದೆ.

*545 ಪಿ.ಎಸ್.ಐ. (ಸಿವಿಲ್) ಹುದ್ದೆಗಳ ನೇಮಕಾತಿ ಪೂರ್ಣಗೊಂಡ ನಂತರ 402 ಪಿ.ಎಸ್.ಐ. (ಸಿವಿಲ್) ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಒಟ್ಟು 402 ಪಿ.ಎಸ್.ಐ. (ಸಿವಿಲ್) ಹುದ್ದೆಗಳಿಗೆ ವೃಂದ ಮತ್ತು ನೇಮಕಾತಿ ನಿಯಮಗಳನ್ವಯ ದಿನಾಂಕ: 01.02.2023ರ ಸುತ್ತೋಲೆಯನ್ನಾಧರಿಸಿ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಿ, ವೈದ್ಯಕೀಯ ಪರೀಕ್ಷೆ ಕೈಗೊಂಡು 2ನೇ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಿ, ದಾಖಲಾತಿಗಳ ಪರಿಶೀಲನೆ ಪೂರ್ಣಗೊಳಿಸಿ ಅಂತಿಮ ಆಯ್ಕೆ ಪಟ್ಟಿಯನ್ನು 402 ಹುದ್ದೆಗಳಿಗೆ ಪ್ರಕಟಿಸಿ ನಂತರ ನೇಮಕಾತಿ ಆದೇಶವನ್ನು ರಿಟ್ ಪಿಟಿಷನ್ ಸಂಖ್ಯೆ: 16343/2024 ರ ಅಂತಿಮ ಆದೇಶದ ಷರತ್ತಿಗೊಳಪಟ್ಟು ಹೊರಡಿಸಲು ಅಂತಿಮ ಆಯ್ಕೆ ಪಟ್ಟಿಯನ್ನು ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ತಿಳಿಸಿರುವ ವಿಧಾನದನ್ವಯ ಪ್ರಕಟಿಸಿ ನಂತರ ನೇಮಕಾತಿ ಆದೇಶ ಹೊರಡಿಸುವುದು” ಎಂದು ನಿದೇಶಿಸಲಾಗಿರುತ್ತದೆ.

8. ಉಲ್ಲೇಖ(13) ರಲ್ಲಿ 545 (ಸಿವಿಲ್) ಪಿ.ಎಸ್.ಐ. ಹುದ್ದೆಗಳ ನೇಮಕಾತಿ ಪ್ರಕ್ರಿಯೆಯು ಪೂರ್ಣಗೊಂಡ ನಂತರ ಪಿ.ಎಸ್.ಐ. (ಸಿವಿಲ್) 402 ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಕೈಗೊಂಡಲ್ಲಿ, ವಿನಾಕಾರಣ ಸಮಯ ವಿಳಂಭವಾಗುವಂತಾಗುತ್ತದೆ. ಆದ್ದರಿಂದ ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ ಪಿ.ಎಸ್.ಐ. (ಸಿವಿಲ್) 402 ಹುದ್ದೆಗಳಿಗೆ ಸಂಬಂಧಿಸಿದಂತೆ ಕಾಯ್ದಿರಿಸಲಾಗಿರುವ 21 (ಕಲ್ಯಾಣ ಕರ್ನಾಟಕ) ಅಭ್ಯರ್ಥಿಗಳನ್ನು ಆಯ್ಕೆಗೆ ಪರಿಗಣಿಸಿ, ತಿದ್ದುಪಡಿ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಿ, ವೈದ್ಯಕೀಯ ಪರೀಕ್ಷೆ ಮತ್ತು ದಾಖಲಾತಿ ಪರಿಶೀಲನೆಯ
ಪ್ರಕ್ರಿಯೆಯನ್ನು ನಡೆಸಿ ಉಲ್ಲೇಖ(12)ರ ಸರ್ಕಾರದ ಪತ್ರದಲ್ಲಿ ನಿರ್ದೇಶಿಸಿರುವ ಷರತ್ತುಗಳಿಗೊಳಪಟ್ಟು ಕ್ರಮಕೈಗೊಳ್ಳುವ ಕುರಿತು, ಸರ್ಕಾರದಿಂದ ಮುಂದಿನ ನಿರ್ದೇಶನವನ್ನು ಹಾಗೂ ಅನುಮತಿಯನ್ನು ಕೋರಲಾಗಿರುತ್ತದೆ.

9. ಈ ಸಂಬಂಧ ಉಲ್ಲೇಖ(14)ರ ಸರ್ಕಾರದ ಪತ್ರದಲ್ಲಿ “ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ಸಿಆಸು ಇಲಾಖೆಯ ಸುತ್ತೋಲೆ ಸಂ: ಸಿಆಸುಇ 3 ಹೈಕಕೋ 2019; ದಿನಾಂಕ: 01.02.2023 ಹಾಗೂ ಇಲಾಖಾ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಒಳಪಟ್ಟು ನಿಮ್ಮ ಪತ್ರ ಸಂ: 08/ನೇಮಕಾತಿ-2/2021-22, ದಿನಾಂಕ: 31.07.2025ರ ಕೋರಿಕೆಯನ್ನು ಒಪ್ಪಿದೆ” ಎಂದು ನಿರ್ದೇಶಿಸಲಾಗಿರುತ್ತದೆ.

10. ಅದರಂತೆ ಉಲ್ಲೇಖ(15)ರನ್ವಯ ದಿನಾಂಕ: 02.08.2025 ರಂದು ತಿದ್ದುಪಡಿ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿ, ಉಲ್ಲೇಖ(16)ರನ್ವಯ ಘಟಕವಾರು ತಿದ್ದುಪಡಿ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ತಯಾರಿಸಿ ಸಂಬಂಧಪಟ್ಟ ಘಟಕಗಳಿಗೆ ಕಳುಹಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ನಿಯಮಾನುಸಾರ ವೈದ್ಯಕೀಯ ಪರೀಕ್ಷೆ ಮತ್ತು ದಾಖಲಾತಿಗಳ ಪರಿಶೀಲನೆಯನ್ನು ನಡೆಸಿ ವರದಿಯನ್ನು ಈ ಕಛೇರಿಗೆ ನೀಡಬೇಕೆಂದು ಸೂಚಿಸಲಾಗಿರುತ್ತದೆ.

11. ಆಯ್ಕೆಯಾಗಿದ್ದ ಅಭ್ಯರ್ಥಿಗಳ ವೈದ್ಯಕೀಯ ಪರೀಕ್ಷೆಯ ವರದಿಗಳನ್ನು ಸ್ವೀಕರಿಸಿದ ನಂತರ ಸದರಿ ವರದಿಗಳನ್ವಯ ನಿಯಮಾನುಸಾರ ಉಲ್ಲೇಖ(17)ರಲ್ಲಿ ದ್ವಿತೀಯ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ತಯಾರಿಸಿ ಸಂಬಂಧಪಟ್ಟ ಘಟಕಗಳಿಗೆ ಕಳುಹಿಸಲಾಗಿರುತ್ತದೆ.

1. ನಂತರ ಉಲ್ಲೇಖ(18) ರಿಂದ (28) ರವರೆಗಿನ ಪತ್ರಗಳಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ದಾಖಲಾತಿ ಪರಿಶೀಲನೆಯಲ್ಲಿ ಅರ್ಹಗೊಂಡಿರುವುದಾಗಿ ತಿಳಿಸಿರುವ ಹಿನ್ನೆಲೆಯಲ್ಲಿ ನಿಯಮಾನುಸಾರ 402 ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿಯನ್ನು ತಯಾರಿಸಿ ಪ್ರಕಟಿಸಲಾಗಿರುತ್ತದೆ. ఈ అంతిమ ಆಯ್ಕೆ ಪಟ್ಟಿಯು ಮೇಲ್ಕಂಡ ಷರತ್ತಿಗೊಳಪಟ್ಟಿರುತ್ತದೆ. ಅಲ್ಲದೇ ಇದನ್ನು ಹೊರತುಪಡಿಸಿ, ಸದರಿ ಪಟ್ಟಿಯು ಈ ಕೆಳಕಂಡಂತೆ ತಿಳಿಸಿರುವ ಷರತ್ತಿಗಳಿಗೂ ಸಹ ಒಳಪಟ್ಟಿರುತ್ತದೆ.

ಎ) ಈ ಅಂತಿಮ ನೇಮಕಾತಿಯು ವಾರ್ಷಿಕ ಕಾರ್ಯದಕ್ಷತಾ ವರದಿ ಪರಿಶೀಲನೆಗೆ ಹಾಗೂ ಸೇವೆಯಲ್ಲಿರುವ ಅಭ್ಯರ್ಥಿಗಳು ಮತ್ತು ಹಿಂದಿನ ಸರ್ಕಾರಿ ಸೇವೆಯಿಂದ ಬಂದಿರುವ ಅಭ್ಯರ್ಥಿಗಳ ವಿರುದ್ಧ ಬಾಕಿ ಉಳಿದಿರುವ ಯಾವುದೇ ಇಲಾಖೆ ತನಿಖೆಗಳ ಪರಿಶೀಲನೆಗೆ ಒಳಪಟ್ಟಿರುತ್ತದೆ.

ಬಿ) ಈ ಅಂತಿಮ ಆಯ್ಕೆ ಪಟ್ಟಿಯು ಮುಂದಿನ ಯಾವುದೇ ಮಾನ್ಯ ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿ / ಮಾನ್ಯ ಉಚ್ಚ ನ್ಯಾಯಾಲಯ / ಮಾನ್ಯ ಭಾರತದ ಸರ್ವೋಚ್ಚ ನ್ಯಾಯಾಲಯದ ಅಂತಿಮ ತೀರ್ಮಾನಗಳಿಗೆ ಒಳಪಟ್ಟಿರುತ್ತದೆ ಎಂದು ತಿಳಿಸಲಾಗಿದೆ.


CLICK HERE TO DOWNLOAD FINAL LIST

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!