Ration Card-25: ರೇಷನ್ ಕಾರ್ಡ್ ದಿಢೀರ್ ರದ್ದು: ಲಿಸ್ಟ್‌ನಲ್ಲಿ ನಿಮ್ಮ ಹೆಸರಿದ್ಯಾ ಪರಿಶೀಲಿಸಿ!
Ration Card-25:ಕರ್ನಾಟಕ ರಾಜ್ಯಾದ್ಯಂತ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಇದೀಗ ಆತಂಕ ಎದುರಿಸುತ್ತಿವೆ. ರಾಜ್ಯ ಸರ್ಕಾರವು ಅನರ್ಹ ಪಡಿತರ ಚೀಟಿದಾರರನ್ನು ಪತ್ತೆಹಚ್ಚಿ, ಅವರ ಕಾರ್ಡ್‌ಗಳನ್ನು ರದ್ದುಗೊಳಿಸುವ ಅಥವಾ ಎಪಿಎಲ್ (APL) ಗೆ ಬದಲಾಯಿಸುವ ಪ್ರಕ್ರಿಯೆಯನ್ನು ತೀವ್ರಗೊಳಿಸಿದೆ.
ಕಳೆದ ಕೆಲವು ದಿನಗಳಿಂದ ಲಕ್ಷಾಂತರ ಕಾರ್ಡ್‌ಗಳು ಪರಿಶೀಲನೆಗೆ ಒಳಪಟ್ಟಿದ್ದು, ಸಾವಿರಾರು ಕಾರ್ಡ್‌ಗಳನ್ನು ರದ್ದುಪಡಿಸಲಾಗಿದೆ. ಇದರಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸುವುದು ಹೇಗೆ? ಮಾಹಿತಿ ಇಲ್ಲಿದೆ.
2.43 ಲಕ್ಷ ಪಡಿತರ ಚೀಟಿ ರದ್ದು:
ಕೇಂದ್ರ ಸರ್ಕಾರವು ರಾಜ್ಯದಲ್ಲಿ ಅನರ್ಹರ ವಶದಲ್ಲಿದ್ದ ಸುಮಾರು 2.43 ಲಕ್ಷ ಪಡಿತರ ಚೀಟಿಗಳನ್ನು ಆಧಾರ್ ಲಿಂಕ್ ಮತ್ತು ತಂತ್ರಜ್ಞಾನ ಆಧಾರಿತ ಪರಿಶೀಲನೆಯ ಮೂಲಕ ರದ್ದುಗೊಳಿಸಿದೆ ಎಂದು ಅಧಿಕೃತವಾಗಿ ತಿಳಿಸಿದೆ. ಇದರಿಂದ ಅರ್ಹ ಫಲಾನುಭವಿಗಳಿಗೆ ನ್ಯಾಯ ಸಿಗುವ ವಿಶ್ವಾಸ ವ್ಯಕ್ತವಾಗಿದ್ದು, ಪಡಿತರ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹೆಚ್ಚಲಿದೆ. ನಿಮ್ಮ ರೇಷನ್ ಕಾರ್ಡ್ ಸ್ಥಿತಿಯನ್ನು ಪರಿಶೀಲಿಸಿಕೊಳ್ಳಲು ಸೂಚಿಸಲಾಗಿದೆ.
ಈ ಕಾರಣಕ್ಕೆ ಕಾರ್ಡ್ ರದ್ದು:
ನಿಗದಿತ ಸಮಯದಲ್ಲಿ ಇ-ಕೆವೈಸಿ ಮಾಡಿಸದ, ನಕಲಿ ದಾಖಲೆ ನೀಡಿ ಪಡೆದ, ಮರಣ ಹೊಂದಿದರೂ ಹೆಸರು ತೆಗೆಸದ, ಆದಾಯ ತೆರಿಗೆ ಪಾವತಿಸುವವರು ಹಾಗೂ ಸರ್ಕಾರಿ ನೌಕರರ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡಲಾಗಿದೆ. 100 ವರ್ಷ ಮೇಲ್ಪಟ್ಟವರ ಹೆಸರಿನಲ್ಲಿ ಅಕ್ಕಿ ಪಡೆಯುತ್ತಿದ್ದರೆ ಅಂತಹ ಕಾರ್ಡ್‌ಗಳನ್ನು ಕೂಡ ಬ್ಲಾಕ್ ಮಾಡಲಾಗಿದೆ. ತಪ್ಪು ಮಾಹಿತಿ ನೀಡಿ ಕಾರ್ಡ್ ಪಡೆದವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ನಿಮ್ಮ ಹೆಸರನ್ನು ಹೀಗೆ ಪರಿಶೀಲಿಸಿ:
ನಿಮ್ಮ ರೇಷನ್ ಕಾರ್ಡ್ ಚಾಲ್ತಿಯಲ್ಲಿದೆಯೇ ಅಥವಾ ರದ್ದಾಗಿದೆಯೇ ಎಂಬುದನ್ನು ತಿಳಿಯಲು ಮಾಹಿತಿಕಣಜ ವೆಬ್ಸೈಟ್ ಗೆ https://mahitikanaja.karnataka.gov.in/) ಭೇಟಿ ನೀಡಬಹುದು. ಸರ್ಚ್ ಬಾಕ್ಸ್ ನಲ್ಲಿ “Ration Card Status” ಎಂದು ಟೈಪ್ ಮಾಡಿ, ನಿಮ್ಮ ಪಡಿತರ ಚೀಟಿ ನಂಬರ್ ಹಾಕಿ ‘Submit’ ಕ್ಲಿಕ್ ಮಾಡಿದರೆ, ಕಾರ್ಡ್ ವಿವರ ಮತ್ತು ಸ್ಥಿತಿ ಪರದೆಯಲ್ಲಿ ಕಾಣಿಸುತ್ತದೆ. ಇದು ನಿಮ್ಮ ಕಾರ್ಡ್‌ನ ಪ್ರಸ್ತುತ ಸ್ಥಿತಿಯನ್ನು ಸುಲಭವಾಗಿ ತಿಳಿಯಲು ಸಹಾಯ ಮಾಡುತ್ತದೆ.
ತಪ್ಪಾಗಿ ರದ್ದಾಗಿದ್ದರೆ ಹೀಗೆ ಮಾಡಿ:
ಆಹಾರ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ‘ಇ-ಸೇವೆಗಳು’ ವಿಭಾಗಕ್ಕೆ ಭೇಟಿ ನೀಡಿ, ‘ಇ-ಪಡಿತರ ಚೀಟಿ’ ಆಯ್ಕೆ ಮಾಡಿ, ನಂತರ ‘ಪಡಿತರ ಚೀಟಿ ವಿವರ’ ಕ್ಲಿಕ್ ಮಾಡುವ ಮೂಲಕ ನಿಮ್ಮ ಪಡಿತರ ಚೀಟಿ ವಿವರಗಳನ್ನು ಪಡೆಯಬಹುದು. ಒಂದು ವೇಳೆ ನಿಮ್ಮ ಪಡಿತರ ಚೀಟಿ ತಪ್ಪಾಗಿ ರದ್ದಾಗಿದ್ದರೆ, ಕೂಡಲೇ ನಿಮ್ಮ ತಾಲೂಕು ಆಹಾರ ಇಲಾಖೆಯ ಕಚೇರಿಗೆ ಭೇಟಿ ನೀಡಿ, ಸೂಕ್ತ ದಾಖಲೆಗಳನ್ನು ಒದಗಿಸಿ ಅದನ್ನು ಸರಿಪಡಿಸಿಕೊಳ್ಳಬಹುದು.
