Ration Card update:ಜುಲೈ 31ರವರೆಗೆ ಮತ್ತೇ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ
Ration Card update:ಕರ್ನಾಟಕ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ರೇಷನ್ ಕಾರ್ಡ್ ಹೊಂದಿರುವವರಿಗೆ ಜುಲೈ 8 ರಿಂದ 31ರ ವರೆಗೆ ತಿದ್ದುಪಡಿ ಅವಕಾಶ ನೀಡಲಾಗಿದೆ.
ವಿಳಾಸ ಬದಲಾವಣೆ, ಹೆಸರು ಸೇರ್ಪಡೆ, ವಿವರ ತಿದ್ದುಪಡಿ ಸೇರಿದಂತೆ ವಿವಿಧ ಬದಲಾವಣೆಗಳಿಗೆ ಈ ಅವಧಿಯಲ್ಲಿ ಅರ್ಜಿ ಸಲ್ಲಿಸಬಹುದು.
ಗ್ರಾಮ ಒನ್, ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ಕೇಂದ್ರಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಸೇವೆ ಲಭ್ಯವಿದ್ದು, ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್ ಅಥವಾ ಆಹಾರ ಕಚೇರಿಯನ್ನು ಸಂಪರ್ಕಿಸಬಹುದು.
ಏನನ್ನು ತಿದ್ದುಪಡಿ ಮಾಡಬಹುದು?
▪️ಹೆಸರನ್ನು ಬದಲಾವಣೆ/ಸರಿಪಡಿಸುವುದು
▪️ಆಧಾರ್ ಸಂಖ್ಯೆ/ಹೆಸರಿಗೆ ಸೇರ್ಪಡೆ
▪️ಹೊಸ ಕುಟುಂಬ ಸದಸ್ಯರನ್ನು ಸೇರಿಸುವುದು
▪️ಮೃತರಾಗಿರುವ ಸದಸ್ಯರ ಹೆಸರನ್ನು ತೆಗೆದುಹಾಕುವುದು
▪️ವಿಳಾಸ ಬದಲಾವಣೆ
▪️ಜಿಲ್ಲೆ/ತಾಲೂಕು ಬದಲಾವಣೆ
ಅರ್ಜಿ ಸಲ್ಲಿಸುವ ವಿಧಾನ ಹೇಗೆ?
1. ಆನ್‌ಲೈನ್ ಮೂಲಕ:
▪️ಆಧಿಕೃತ ಪೋರ್ಟಲ್ “ahaara.kar.nic.in” (Food & Civil Supplies Dept., Karnataka)
▪️E‑services → Amendments to Existing Ration Card ಆಯ್ಕೆಮಾಡಿ
▪️ನಿಮ್ಮ ಕಾರ್ಡ್ ಸಂಖ್ಯೆಯನ್ನು ನಮೂದಿಸಿ
▪️ಬೇಕಾದ ದಾಖಲೆಗಳ ಜೊತೆ ಎಲ್ಲಾ ವಿವರಗಳನ್ನು ಭರ್ತಿ ಮಾಡಿ.
2. ಆಫ್‌ಲೈನ್ ಮೂಲಕ:
Karnataka One, CSC, Bengaluru One ಕೇಂದ್ರಗಳು, ಗ್ರಾಮ ಅಥವಾ ತಾಲೂಕು ಕಚೇರಿ, FPS ಇತ್ಯಾದಿಯಲ್ಲಿ ಅರ್ಜಿ ಸಲ್ಲಿಸಬಹುದು
▪️ಅವಶ್ಯಕ ದಾಖಲೆಗಳು:
▪️ಪಾಸ್‌ಪೋರ್ಟ್ ಸೈಸ್ ಫೋಟೋ
▪️ಆಧಾರ್ ಕಾರ್ಡ್
▪️ವಿಳಾಸ ಪುರಾವೆ (ವಿದ್ಯುತ್ ಬಿಲ್/ಬಾಡಿಗೆ ಒಪ್ಪಂದದ ನಕಲು)
▪️ಆದಾಯ ಪ್ರಮಾಣಪತ್ರ (BPL/AAY ಕೇಂದ್ರಕ್ಕೆ)
▪️ಜನನ ಪ್ರಮಾಣಪತ್ರ (ಮಕ್ಕಳ ಸೇರ್ಪಡೆಗೆ)
▪️ಪೂರಕ ದಾಖಲೆಗಳು: ಅಪ್ಲಿಕೇಶನ್ ಪ್ರಕಾರ ಅಗತ್ಯ.
ಹೆಚ್ಚಿನ ಮಾಹಿತಿಗಾಗಿ – CLICK HERE