RDPR Important Notification-2026:ಪಂಚಾಯತ್ ರಾಜ್ ಆಯೋಗದ ಮಹತ್ವದ ಪ್ರಕಟಣೆ| ಸದಸ್ಯರ ಸಂಖ್ಯೆ ನಿರ್ಧಾರ

RDPR Important Notification-2026:ಪಂಚಾಯತ್ ರಾಜ್ ಆಯೋಗದ ಮಹತ್ವದ ಪ್ರಕಟಣೆ| ಸದಸ್ಯರ ಸಂಖ್ಯೆ ನಿರ್ಧಾರ

RDPR Important Notification-2026:ಗ್ರಾಮ ಪಂಚಾಯಿತಿ ಸದಸ್ಯರ ಸಂಖ್ಯೆಗೆ ಸಂಬಂಧಿಸಿದ ಮಹತ್ವದ ಅಪ್ಡೇಟ್. ಪ್ರಕಟಣೆಯ ದಿನಾಂಕದಿಂದ 7 ದಿನಗಳಲ್ಲಿ ಸಾರ್ವಜನಿಕರಿಂದ ಆಕ್ಷೇಪಣೆ ಆಹ್ವಾನಿಸಲಾಗಿತ್ತು ಆದ್ರೆ ಇದೀಗ ಗ್ರಾಪಂ ಕರಡು ಆಕ್ಷೇಪಣೆ ಸಲ್ಲಿಕೆ ಅವಧಿ ಮೇ 8ರ ತನಕ ವಿಸ್ತರಣೆ ಮಾಡಲಾಗಿದೆ 

ಗ್ರಾಮ ಪಂಚಾಯಿತಿಗಳ ಚುನಾಯಿತ ಸದಸ್ಯರ ಸಂಖ್ಯೆ ನಿಗದಿ ಕುರಿತು.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ 5ರಡಿ ಹಾಗೂ 308(ಇ)(ಎಫ್) ರ ಪ್ರಕರಣದಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು ವಿವಿಧ ಜಿಲ್ಲೆಗಳ, ಎಲ್ಲಾ ತಾಲ್ಲೂಕುಗಳಿಂದ ಆಯ್ಕೆಯಾಗುವ ಗ್ರಾಮ ಪಂಚಾಯತಿ ಚುನಾಯಿತ ಸದಸ್ಯರ ಸಂಖ್ಯೆಯನ್ನು ಕೋಷ್ಠಕ ದಲ್ಲಿರುವಂತೆ ನಿಗದಿಪಡಿಸಿದೆ.

ಕೋಷಕದ 2ನೇ ಅಂಕಣದಲ್ಲಿರುವ ಗ್ರಾಮ ಪಂಚಾಯಿತಿಯಿಂದ ಆಯ್ಕೆಯಾಗುವ ಚುನಾಯಿತ ಸದಸ್ಯರ ಸಂಖ್ಯೆಯನ್ನು 3ನೇ ಅಂಕಣದಲ್ಲಿ ನಿಗದಿಪಡಿಸಿದೆ.

ವಿವಿಧ ಜಿಲ್ಲೆಗಳ , ಗ್ರಾಮ ಪಂಚಾಯತಿ ಚುನಾಯಿತ ಸದಸ್ಯರ ಸಂಖ್ಯೆಗೆ ಸಂಬಂಧಿಸಿದಂತೆ ಆಕ್ಷೇಪಣೆಗಳಿದ್ದಲ್ಲಿ, ಪ್ರಕಟಣೆಯ ದಿನಾಂಕದಿಂದ 7 (ಏಳು) ದಿವಸಗಳ ಒಳಗಾಗಿ ಅಂದರೆ ದಿನಾಂಕ:24-04-2026, ಸಂಜೆ 5.00 ಗಂಟೆಯ ಒಳಗೆ ಸಲ್ಲಿಸಲು ತಿಳಿಸಿದೆ.

ಗ್ರಾಪಂ ಕರಡು ಪ್ರಕಟಣೆ: ಆಕ್ಷೇಪಣೆ ಸಲ್ಲಿಕೆ ಅವಧಿ ಮೇ 8ರ ತನಕ ವಿಸ್ತರಣೆ

ಆಕ್ಷೇಪಣೆಗಳನ್ನು ಆನ್‌ಲೈನ್ ಮೂಲಕ ಹಾಗೂ ಖುದ್ದಾಗಿ/ಅಂಚೆಯ ಮೂಲಕ ಈ ಕೆಳಕಂಡ ವಿಳಾಸಕ್ಕೆ ಸಲ್ಲಿಸತಕ್ಕದ್ದು ಅಂಚೆಯ ಮೂಲಕ ಸಲ್ಲಿಸಿದಾಗಲೂ, ಆಯೋಗವು ನಮೂದಿಸಿದ ದಿನಾಂಕದೊಳಗೆ ಸಲ್ಲಿಸತಕ್ಕದ್ದು ನಂತರ ಸ್ವೀಕೃತವಾದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಹಾಗೂ ಅಂಚೆ ಇಲಾಖೆಯ ವಿಳಂಬಕ್ಕೆ ಆಯೋಗವು ಜವಾಬ್ದಾರರಾಗಿರುವುದಿಲ್ಲ ಎಂದು RDPR ನಿಂದ ಮಹತ್ವದ ಮಾಹಿತಿ .

(ಅ) ಆನ್ ಲೈನ್ ಮೂಲಕ: ವೆಬ್ಸೈಟ್ ವಿಳಾಸ https://rdpr.karnataka.gov.in/rdc/public/ ಸದರಿ ವೆಬ್ಸೈಟ್ ನ ಮುಖಪುಟದ ಎಡಭಾಗದಲ್ಲಿರುವ ಸಾರ್ವಜನಿಕ ಸಲಹೆಗಳು ಎಂಬ ಶೀರ್ಷಿಕೆಯನ್ನು CLICK ಮಾಡಿ ತಮ್ಮ ಆಕ್ಷೇಪಣೆಗಳನ್ನು ಆನ್‌ಲೈನ್ ನಲ್ಲಿ ಸಲ್ಲಿಸಬಹುದು.

(ಆ) ಖುದ್ದಾಗಿ/ಅಂಚೆ ಮೂಲಕ:

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ 3ನೇ ಗೇಟ್, 2ನೇ ಮಹಡಿ,ಕೊಠಡಿ ಸಂಖ್ಯೆ 222/A ಬಹುಮಹಡಿ ಕಟ್ಟಡ,ಅಂಬೇಡ್ಕರ್ ವೀಧಿ ಬೆಂಗಳೂರು-560001

RDPR Important Notification



CLICK HERE TO DOWNLOAD PDF-01

CLICK HERE TO DOWNLOAD PDF-02

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!