Recent News: ಶಿಕ್ಷಕರ ಅನ್ಯ ಕಾರ್ಯಕ್ಕೆ ಸದ್ಯವೇ ಬ್ರೇಕ್!

Recent News: ಶಿಕ್ಷಕರ ಅನ್ಯ ಕಾರ್ಯಕ್ಕೆ ಸದ್ಯವೇ ಬ್ರೇಕ್!

Recent News: ಇನ್ನು ಮುಂದೆ ಶಾಲಾ ಸಮಯದಲ್ಲಿ ಶಿಕ್ಷಕರು ಮತ್ತು ಮುಖ್ಯೋಪಾಧ್ಯಾಯರು ಯಾವುದೇ ಸಮೀಕ್ಷೆ, ಸಭೆಗಳಿಗೆ ತೆರಳುವಂತಿಲ್ಲ. ಶಾಲಾ ಅವಧಿಯಲ್ಲಿ ಡಿಸಿ, ಸಿಇಒ ಸಹ ಸಭೆಗಳಿಗೆ ಶಿಕ್ಷಕರನ್ನು ಕರೆಯುವಂತಿಲ್ಲ. ಸರಕಾರಿ ಶಾಲೆಗಳಲ್ಲಿನ ಕಲಿಕೆಯ ಫಲಿತಾಂಶ ಸುಧಾರಿಸಲು ಹಾಗೂ ಅತ್ಯುತ್ತಮ ಬೋಧನೆ ಉದ್ದೇಶದಿಂದ ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ.

ಶಿಕ್ಷಣ ಇಲಾಖೆಯು ಶಾಲಾ ಶಿಕ್ಷಕರು ಮತ್ತು ಮುಖ್ಯೋಪಾಧ್ಯಾಯರಿಗಾಗಿ ಪ್ರತ್ಯೇಕವಾಗಿ ಮಾರ್ಗಸೂಚಿ ರೂಪಿಸಿದ್ದು, ಶೀಘ್ರದಲ್ಲೇ ಹೊರ ಬೀಳಲಿದೆ. ಜಿಲ್ಲಾ ಉಪನಿರ್ದೇಶಕರು (ಡಿಡಿಪಿಐ) ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು (ಬಿಇಒ) ಈ ನಿಯಮಗಳನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕಿದೆ.

ತರಬೇತಿ, ಸಮೀಕ್ಷೆ ಕಾರ್ಯ ಹೀಗೆ ಹತ್ತು ಹಲವು ಕೆಲಸಗಳಲ್ಲಿ ಶಿಕ್ಷಕರನ್ನು ತೊಡಗಿಸಿ ಕೊಳ್ಳುವುದರಿಂದ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಅಡ್ಡಿಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಈ ಕ್ರಮ ವಹಿಸಲಾಗಿದೆ.

ವಿದ್ಯಾರ್ಥಿಗಳು ಕೂಡ ತೆರಳುವಂತಿಲ್ಲ:

ಶಾಲಾ ಅವಧಿಯಲ್ಲಿ ಶಿಕ್ಷಕರು ಮಾತ್ರವಲ್ಲ, ವಿದ್ಯಾರ್ಥಿಗಳನ್ನು ಕೂಡ ಸಭೆ-ಸಮಾರಂಭದ ಹೆಸರಿನಲ್ಲಿ ಬೇರೆ ಎಲ್ಲೂ ಕಳುಹಿಸುವಂತಿಲ್ಲ. ಎನ್‌ಜಿಒಗಳು, ಖಾಸಗಿ ಕಂಪನಿಗಳು ಕೆಲವು ಕಾರ್ಯಕ್ರಮಗಳಿಗೆ ಜನ ಸೇರಿಸುವ ಉದ್ದೇಶದಿಂದ ಶಾಲಾ ವಿದ್ಯಾರ್ಥಿಗಳನ್ನು ಬಳಕೆ ಮಾಡಿಕೊಳ್ಳುವುದು ಸಹಜ ವಾಗಿದೆ. ಈ ಹಿನ್ನೆಲೆಯಲ್ಲಿ ಶಾಲಾ ವಿದ್ಯಾರ್ಥಿಗಳನ್ನು ಸಹ ಯಾವುದೇ ಕಾರಣಕ್ಕೂ ಶಾಲೆ ಬಿಟ್ಟು ಹೊರಗಡೆ ಕಳುಹಿಸುವಂತಿಲ್ಲ ಎಂದು ಇಲಾಖೆ ಮಾರ್ಗಸೂಚಿಯಲ್ಲಿ ತಿಳಿಸಿದೆ.

ರಾಜ್ಯದಲ್ಲಿ 46,757 ಸರಕಾರಿ ಶಾಲೆಗಳಿವೆ. ಇದರಲ್ಲಿ 42.92 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, 1.77 ಲಕ್ಷ ಶಿಕ್ಷಕರು ಕರ್ತವ್ಯನಿರ್ವಹಿಸುತ್ತಿದ್ದಾರೆ. ಸರಕಾರಿ ಶಾಲೆಗಳ ಶಿಕ್ಷಕರ ನ್ನು ಇಲಾಖೆ ಸಭೆ, ತರಬೇತಿ, ಸಮೀಕ್ಷೆ ಕಾರ್ಯ ಹೀಗೆ ಹತ್ತು ಹಲವು ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದರಿಂದ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಅಡ್ಡಿಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ತರಗತಿ ಅವಧಿಯಲ್ಲಿ ಶಿಕ್ಷಕರು ಯಾವುದೇ ಸಭೆ ಅಥವಾ ಸಮಿಕ್ಷೆಗಳಲ್ಲಿ ಭಾಗವಹಿಸದಂತೆ ಸೂಚನೆ ನೀಡಲಾಗಿದೆ.

ನಿಯೋಜನೆ-ಒಒಡಿ ಇಲ್ಲ:

ಶಿಕ್ಷಕರನ್ನು ಶಾಲಾ ಅವಧಿಯ ಸಮಯದಲ್ಲಿ ತರಬೇತಿಗಳಿಗೆ ನಿಯೋಜಿಸುವಂತಿಲ್ಲ. ಒಂದು ವೇಳೆ ಡಿಡಿಪಿಐ ಅಥವಾ ಬಿಇಒ ಮೌಖಿಕ ಅಥವಾ ಲಿಖಿತವಾಗಿಯೂ ಶಾಲಾ ಸಮಯದಲ್ಲಿ ಶಿಕ್ಷಕರನ್ನು ಎಲ್ಲಿಗೂ ಆಹ್ವಾನಿಸುವಂತಿಲ್ಲ.

ಈ ರೀತಿಯ ಸೂಚನೆಗಳನ್ನು ಮೀರಿಯೂ ಶಿಕ್ಷಕರು ತೆರಳಿದಲ್ಲಿ ಅವರಿಗೆ ಯಾವುದೇ ಸರಕಾರಿ ಕೆಲಸದ ಮೇಲೆ (ಒಒಡಿ) ಅವಕಾಶ ಕಲ್ಪಿಸುವುದಿಲ್ಲಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಅಲ್ಲದೆ, ಶಾಲಾ ಅವಧಿಯಲ್ಲಿ ಡಿ.ಸಿ. ಸಿಇಒಗಳು ಸಹ ಶಿಕ್ಷಕರು ಮತ್ತು ಮುಖ್ಯೋಪಾಧ್ಯಾಯರನ್ನು ಒಳಗೊಂಡ ಸಭೆಗಳನ್ನು ನಡೆಸುವಂತಿಲ್ಲ ಎಂದು ಸ್ಪಷ್ಟವಾಗಿ ಸೂಚಿಸಲಾಗಿದೆ.

CLICK HERE- MORE INFORMATION 

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!