Reservation Roster: ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿಯನ್ನು ಕಲ್ಪಿಸಿರುವ ಪರಿಣಾಮವಾಗಿ ರಾಜ್ಯ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳಿಗೆ ಪರಿಷ್ಕೃತ ನೇರ ನೇಮಕಾತಿ ಬಿಂದುಗಳಿಗೆ ಸಮತಳ ಮೀಸಲಾತಿ ರೋಸ್ಟರ್ ಅನ್ನು ನಿಗದಿಪಡಿಸುವ ಬಗ್ಗೆ.
Reservation Roster: ಪ್ರಸ್ತಾವನೆ :
1. ರಾಜ್ಯ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳಿಗೆ ಮಾಡುವ ನೇಮಕಾತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ನಿಗದಿಪಡಿಸಲಾಗಿದ್ದ ಶೇಕಡ 15 ಮತ್ತು ಶೇಕಡ 3 ರಷ್ಟು ಮೀಸಲಾತಿಯನ್ನು ಕ್ರಮವಾಗಿ ಶೇಕಡ 17 ಮತ್ತು ಶೇಕಡ 7 ಕ್ಕೆ ಹೆಚ್ಚಿಸಿದ ಹಿನ್ನೆಲೆಯಲ್ಲಿ, ನೇರ ನೇಮಕಾತಿ ಮುಖಾಂತರ ಭರ್ತಿ ಮಾಡುವ ರಿಕ್ತ ಸ್ಥಾನಗಳನ್ನು ವರ್ಗೀಕರಣ ಮಾಡಲು ಮೇಲೆ (1) ರಲ್ಲಿ ಓದಲಾದ ದಿನಾಂಕ 28.12.2022 ರ ಸರ್ಕಾರದ ಆದೇಶದಲ್ಲಿ 100 ಬಿಂದುಗಳ ಪರಿಷ್ಕೃತ ರೋಸ್ಟರ್ (Roster) ಅನ್ನು ನಿಗದಿಪಡಿಸಿ ಆದೇಶಿಸಲಾಗಿರುತ್ತದೆ.
2. ಪ್ರತಿಯೊಂದು ನೇರ ಮೀಸಲಾತಿ ಪ್ರವರ್ಗದಡಿ (under each category of vertical reservation) ಮಾಜಿ ಸೈನಿಕ, ಅಂಗವಿಕಲ, ಮಹಿಳೆ, ಯೋಜನೆಗಳಿಂದ ನಿರ್ವಸಿತರಾದವರು, ಗ್ರಾಮೀಣ ಅಭ್ಯರ್ಥಿ. ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿ ಮತ್ತು ತೃತೀಯ ಲಿಂಗಿಗಳಿಗೆ ಕಲ್ಪಿಸಲಾದ ಸಮತಳ ಮೀಸಲಾತಿಯನ್ನು ಜಾರಿಗೊಳಿಸಲು ನಿಗದಿಪಡಿಸಲಾಗಿದ್ದ 20 ಬಿಂದುಗಳ ರೋಸ್ಮರನ್ನು ಮಾರ್ಪಡಿಸಿ, ಮೇಲೆ (2) ರಲ್ಲಿ ಓದಲಾದ ದಿನಾಂಕ 08.03.2023ರ ಸರ್ಕಾರದ ಆದೇಶದ ಅನುಬಂಧದಲ್ಲಿ 100 ಬಿಂದುಗಳ ರೋಸ್ಟರ್(Roster) ಅನ್ನು ನಿಗದಿಪಡಿಸಿ ಆದೇಶಿಸಲಾಗಿರುತ್ತದೆ.
3. ಪರಿಶಿಷ್ಟ ಜಾತಿಗಳಲ್ಲಿರುವ 101 ಜಾತಿಗಳನ್ನು ಪ್ರವರ್ಗ-ಎ, ಪ್ರವರ್ಗ-ಬಿ ಮತ್ತು ಪ್ರವರ್ಗ-ಸಿ ಗಳೆಂದು 3 ಪ್ರವರ್ಗಗಳಾಗಿ ವರ್ಗೀಕರಿಸಿ, ಶಿಕ್ಷಣ ಮತ್ತು ಉದ್ಯೋಗದಲ್ಲಿ ಪರಿಶಿಷ್ಟ ಜಾತಿಗಳಿಗೆ ಪ್ರಸ್ತುತ ಜಾರಿಯಲಿರುವ ಶೇಕಡ 17 ಮೀಸಲಾತಿಯನ್ನು ಪ್ರವರ್ಗ-ಎ ರಲ್ಲಿನ ಸಮುದಾಯಗಳಿಗೆ ಶೇಕಡ 6, ಪ್ರವರ್ಗ-ಬಿ ರಲ್ಲಿನ ಸಮುದಾಯಗಳಿಗೆ ಶೇಕಡ 6 ಮತ್ತು ಪ್ರವರ್ಗ-ಸಿ ರಲ್ಲಿನ ಸಮುದಾಯಗಳಿಗೆ ಶೇಕಡ 5 ರಷ್ಟು ಮೀಸಲಾತಿಯನ್ನು ಮೇಲೆ (3) ರಲ್ಲಿ ಓದಲಾದ ದಿನಾಂಕ 25.08.2025 ರ ಸರ್ಕಾರದ ಆದೇಶದಲ್ಲಿ ನಿಗದಿಪಡಿಸಿ ಆದೇಶಿಸಲಾಗಿರುತ್ತದೆ.
4. ಮೇಲೆ (3) ರಲ್ಲಿ ಓದಲಾದ ದಿನಾಂಕ 25.08.2025 ರ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ, ಮೇಲೆ (1) ರಲ್ಲಿ ಓದಲಾದ ದಿನಾಂಕ 28.12.2022 ರ ಸರ್ಕಾರದ ಆದೇಶದ ಅನುಬಂಧದಲ್ಲಿ ನಿಗದಿಪಡಿಸಿದ 100 ಬಿಂದುಗಳ ರೋಸ್ಟರಿನಲ್ಲಿ, ಪರಿಶಿಷ್ಟ ಜಾತಿಗಳಿಗೆ ಗುರುತಿಸಲಾಗಿರುವ 17 ಬಿಂದುಗಳನ್ನು ಮಾತ್ರ ಪುನರ್ ವರ್ಗೀಕರಿಸಿ, ಮೇಲೆ (4) ರಲ್ಲಿ ಓದಲಾದ ದಿನಾಂಕ 03.09.2025ರ ಆದೇಶದಲ್ಲಿ ಆದೇಶಿಸಲಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಮೇಲೆ (2) ರಲ್ಲಿ ಓದಲಾದ, ಸಮತಳ ಮೀಸಲಾತಿಗೆ ಸಂಬಂಧಿಸಿದ ದಿನಾಂಕ 08.03.2023ರ ಸರ್ಕಾರಿ ಆದೇಶವನ್ನು ಅನುಸರಿಸುವ ಕುರಿತು ಈ ಕೆಳಕಂಡ ಆದೇಶ.
ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 03 ಸೆಹಿಮ 2025,ಬೆಂಗಳೂರು, ದಿನಾಂಕ:06.09.2025
5. ಪ್ರಸ್ತಾವನೆಯಲ್ಲಿ ವಿವರಿಸಿದ ಹಿನ್ನೆಲೆಯಲ್ಲಿ, ಮೇಲೆ (2) ರಲ್ಲಿ ಓದಲಾದ, ಸಮತಳ ಮೀಸಲಾತಿಯನ್ನು ಜಾರಿಗೊಳಿಸುವುದಕ್ಕೆ ಸಂಬಂಧಿಸಿದಂತೆ ಹೊರಡಿಸಲಾದ ದಿನಾಂಕ 08.03.2023ರ ಸರ್ಕಾರಿ ಆದೇಶದ ಅನುಬಂಧದಲ್ಲಿ ನಿಗದಿಪಡಿಸಲಾದ 100 ಬಿಂದುಗಳ ರೋಸ್ಟರನ್ನು ಅನುಸರಿಸುವ ಸಂದರ್ಭದಲ್ಲಿ, ಮೇಲೆ (3) ರಲ್ಲಿ ಓದಲಾದ ದಿನಾಂಕ 25.08.2025 ರ ಸರ್ಕಾರದ ಆದೇಶದನ್ವಯ ಪರಿಶಿಷ್ಟ ಜಾತಿಗಳನ್ನು ಪ್ರವರ್ಗ-ಎ ಪ್ರವರ್ಗ-ಬಿ ಮತ್ತು ಪ್ರವರ್ಗ-ಸಿ ಗಳೆಂದು 3 ಪವರ್ಗಗಳಾಗಿ ವರ್ಗೀಕರಿಸಿ, ಪ್ರವರ್ಗ-ಎ ರಲ್ಲಿನ ಸಮುದಾಯಗಳಿಗೆ ಶೇಕಡ 6, ಪ್ರವರ್ಗ-ಬಿ ರಲ್ಲಿನ ಸಮುದಾಯಗಳಿಗೆ ಶೇಕಡ 6 ಮತ್ತು ಪ್ರವರ್ಗ-ಸಿ ರಲ್ಲಿನ ಸಮುದಾಯಗಳಿಗೆ ಶೇಕಡ 5 ರಷ್ಟು ಮೀಸಲಾತಿಯನ್ನು ನಿಗದಿಪಡಿಸಿರುವುದರಿಂದ, ಅವುಗಳನ್ನು ಅಂದರೆ, ಪರಿಶಿಷ್ಟ ಜಾತಿ (ಪ್ರವರ್ಗ-ಎ), ಪರಿಶಿಷ್ಟ ಜಾತಿ (ಪ್ರವರ್ಗ-ಬಿ) ಮತ್ತು ಪರಿಶಿಷ್ಟ ಜಾತಿ (ಪ್ರವರ್ಗ-ಸಿ) ಎಂದು ಪರಿಗಣಿಸಿ. ಪ್ರತಿಯೊಂದು ನೇರ ಮೀಸಲಾತಿಯಡಿ ಸಮತಳ ಮೀಸಲಾತಿಯನ್ನು ಅನ್ವಯಿಸತಕ್ಕದ್ದೆಂದು ಈ ಮೂಲಕ ಆದೇಶಿಸಲಾಗಿರುತ್ತದೆ.
1 thought on “Reservation Roster: ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿಯನ್ನು ಕಲ್ಪಿಸಿರುವ ಪರಿಣಾಮವಾಗಿ ರಾಜ್ಯ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳಿಗೆ ಪರಿಷ್ಕೃತ ನೇರ ನೇಮಕಾತಿ ಬಿಂದುಗಳಿಗೆ ಸಮತಳ ಮೀಸಲಾತಿ ರೋಸ್ಟರ್ ಅನ್ನು ನಿಗದಿಪಡಿಸುವ ಬಗ್ಗೆ.”