SATS SOFTWARE: ಮೌಲ್ಯಾಂಕನಗಳ ಅಂಕಗಳನ್ನು SATS ತಂತ್ರಾಂಶದಲ್ಲಿ ಇಂದೀಕರಿಸುವಾಗ ಗಮನಿಸಬೇಕಾದ ಮುಖ್ಯಾಂಶಗಳು
SATS SOFTWARE: ಪ್ರಸ್ತುತ ರಾಜ್ಯದ ಶಾಲೆಗಳಲ್ಲಿ ರೂಪಣಾತ್ಮಕ ಮೌಲ್ಯಾಂಕನ FA-1, FA-2, FA-3 ಮತ್ತು FA·4 ಹಾಗೂ ಸಂಕಲನಾತ್ಮಕ ಮೌಲ್ಯಾಂಕನ SA-1 ಮತ್ತು SA-2 ಗಳಲ್ಲಿ C, C+, B, B+, A A+ ಶ್ರೇಣಿಗಳನ್ನು ಮಾತ್ರ SATS ತಂತ್ರಾಂಶದಲ್ಲಿ ಇಂದೀಕರಿಸಲು ಅವಕಾಶ ಕಲ್ಪಿಸಲಾಗಿತ್ತು.
ಉಲ್ಲೇಖ-2 ರಂತೆ ಸದರಿ ಮೌಲ್ಯಾಂಕನದ ಅಂಕಗಳನ್ನು SATS ನಲ್ಲಿ ಇಂದೀಕರಿಸಿದಲ್ಲಿ ವಿದ್ಯಾರ್ಥಿಗಳ ಕಲಿಕೆಯನ್ನು ವಿಶ್ಲೇಷಿಸಿ ಪರಿಹಾರಾತ್ಮಕ ಕ್ರಮಕೈಗೊಳ್ಳಲು ಸಹಕಾರಿಯಾಗುವ ಹಿನ್ನೆಲೆಯಲ್ಲಿ SATS ತಂತ್ರಾಂಶದಲ್ಲಿ ಅಂಕಗಳನ್ನು ನಮೂದಿಸಲು ಅವಕಾಶ ಕಲ್ಪಿಸಲಾಗಿದೆ. ಅದರಂತೆ, 2025-26ನೇ ಸಾಲಿನ ಎಲ್ಲಾ ಮೌಲ್ಯಾಂಕನಗಳ ಫಲಿತಾಂಶದ ಅಂಕಗಳನ್ನು SATS ತಂತ್ರಾಂಶದಲ್ಲಿ ನಮೂದಿಸಲು ಕೂಡಲೇ ಕ್ರಮ ಕೈಗೊಳ್ಳುವುದು.
ಪ್ರಥಮ ಆದ್ಯತೆಯಾಗಿ 10ನೇ ತರಗತಿ ವಿದ್ಯಾರ್ಥಿಗಳ ಸಂಕಲನಾತ್ಮಕ ಮೌಲ್ಯಾಂಕನದ (SAT ಅಥವಾ ಮಧ್ಯಂತರ ಪರೀಕ್ಷೆ) ಅಂಕಗಳನ್ನು ದಿನಾಂಕ: 25-09-2025 ರೊಳಗೆ SATS ತಂತ್ರಾಂಶದಲ್ಲಿ ಕಡ್ಡಾಯವಾಗಿ ಇಂದೀಕರಿಸಲು ಎಲ್ಲಾ ಶಾಲೆಯ ಮುಖ್ಯ ಶಿಕ್ಷಕರಿಗೆ ಸೂಚಿಸಿದೆ ಹಾಗೂ ಈ ಅಂಕಗಳನ್ನು ವಿಶ್ಲೇಷಿಸಿ ಜಿಲ್ಲಾವಾರು ಪ್ರಗತಿ ವರದಿಯನ್ನು ಸಿದ್ಧಪಡಿಸಬೇಕಾಗಿದ್ದು, ತುರ್ತು ಕ್ರಮವಹಿಸುವುದು. ತಡವಾದಲ್ಲಿ ಉಪನಿರ್ದೇಶಕರು (ಆಡಳಿತ), BEO ಮತ್ತು ಮುಖ್ಯ ಶಿಕ್ಷಕರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಜ್ಞಾಪನದಲ್ಲಿ ತಿಳಿಸಲಾಗಿದೆ.
