SATS ನಲ್ಲಿ 2025–26ನೇ ಸಾಲಿಗೆ 10ನೇ ತರಗತಿ ಅರ್ಹ ವಿದ್ಯಾರ್ಥಿಗಳ SSLC ಪರೀಕ್ಷಾ ನೋಂದಣಿ

SATS ನಲ್ಲಿ 2025–26ನೇ ಸಾಲಿಗೆ 10ನೇ ತರಗತಿ ಅರ್ಹ ವಿದ್ಯಾರ್ಥಿಗಳ ಎಸ್‌ಎಸ್‌ಎಲ್‌ಸಿ ಪರೀಕ್ಷಾ ನೋಂದಣಿ:

SATS ನಲ್ಲಿ 2025–26ನೇ ಸಾಲಿಗೆ 10ನೇ ತರಗತಿ ಅರ್ಹ ವಿದ್ಯಾರ್ಥಿಗಳ ಎಸ್‌ಎಸ್‌ಎಲ್‌ಸಿ ಪರೀಕ್ಷಾ ನೋಂದಣಿ: ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖಿತ ಪತ್ರದಲ್ಲಿ 2026ರ ಮಾರ್ಚ್/ಏಪ್ರಿಲ್ ಮಾಹೆಯಲ್ಲಿ ನಡೆಯಲಿರುವ 2025-26ನೇ ಸಾಲಿನ SSLC ಮುಖ್ಯ ಪರೀಕ್ಷೆ-1 ಕ್ಕೆ ಹಾಜರಾಗುವ ಶಾಲಾ ವಿದ್ಯಾರ್ಥಿಗಳ ನೋಂದಣಿಗೆ ಸಂಬಂಧಿಸಿದಂತೆ, SATS ನ ದಾಖಲೆಗಳ ಪ್ರಕಾರ ಒಟ್ಟು 8,40,196 ವಿದ್ಯಾರ್ಥಿಗಳ ಮಾಹಿತಿ ಇದ್ದು, ಇವರಲ್ಲಿ 7,99,762 ವಿದ್ಯಾರ್ಥಿಗಳು ಮಾತ್ರ SSLC ಪರೀಕ್ಷೆಗೆ ನೋಂದಣಿಯಾಗಿರುತ್ತಾರೆ ಉಳಿದ 40,434 ವಿದ್ಯಾರ್ಥಿಗಳ ನೋಂದಣಿ ಬಾಕಿ ಇರುವುದಾಗಿ ತಿಳಿಸಿರುತ್ತಾರೆ. ಜಿಲ್ಲಾವಾರು ವಿದ್ಯಾರ್ಥಿಗಳ ಸಂಖ್ಯೆಯನ್ನು ಅನುಬಂಧ-1 ರಲ್ಲಿರುವಂತೆ ಒದಗಿಸಿರುತ್ತಾರೆ.

ಮುಂದುವರೆದಂತೆ, ಬಾಕಿ ಇರುವ ನೋಂದಣಿ ಪೂರ್ಣಗೊಳಿಸಲು ಎಲ್ಲಾ ಜಿಲ್ಲೆಗಳ ಉಪನಿರ್ದೇಶಕರು (ಆಡಳಿತ) ರವರಿಗೆ ನಿರ್ದೇಶನ ನೀಡಲು ಕೋರಿದ್ದಾರೆ.

ಈ ಹಿನ್ನಲೆಯಲ್ಲಿ, ರಾಜ್ಯದ ಎಲ್ಲಾ ಉಪನಿರ್ದೇಶಕರು (ಆ) ರವರು ಈ ಕುರಿತು ಆದ್ಯ ಗಮನ ನೀಡಿ, KSEAB ಮಂಡಳಿ ನಿಗಧಿಪಡಿಸಿರುವ ಅರ್ಹತೆಯನ್ನು ಹೊಂದಿರುವ ಹಾಗೂ SSLC ಪರೀಕ್ಷೆಗೆ ನೊಂದಣಿ ಬಾಕಿ ಇರುವ ವಿದ್ಯಾರ್ಥಿಗಳು ಕೂಡಲೇ SSLC ಪರೀಕ್ಷೆಗೆ ನೊಂದಣಿ ಮಾಡಿಸಲು ಕ್ರಮವಹಿಸುವುದು.

ಈ ಸಂಬಂಧ ತಮ್ಮ ಅಧೀನ ಅಧಿಕಾರಿಗಳಿಗೆ ಶಾಲಾವಾರು ಜವಾಬ್ದಾರಿ ಹಂಚಿಕೆ ಮಾಡಿ, ಸದರಿಯವರು ಹಂಚಿಕೆ ಮಾಡಿರುವ ಪ್ರೌಢ ಶಾಲೆಗಳಿಗೆ ಭೇಟಿ ನೀಡಿ SATS ನೋಂದಣಿ ಮತ್ತು SSLC ನೊಂದಣಿಗೆ ಸಂಬಂಧಿಸಿದಂತೆ ವ್ಯತ್ಯಾಸ ಪರಿಶೀಲಿಸಿ ಅರ್ಹ ವಿದ್ಯಾರ್ಥಿಗಳನ್ನು ಕಡ್ಡಾಯವಾಗಿ SSLC ಪರೀಕ್ಷೆಗೆ ನೊಂದಣಿಯಾಗುವಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ನಿರ್ದೇಶನ ನೀಡುವುದು.

ಇದರೊಂದಿಗೆ, ನೊಂದಣಿಯಾಗಿರದ SSLC ವಿದ್ಯಾರ್ಥಿಗಳ ಪಟ್ಟಿಯನ್ನು ಸೂಕ್ತ ಕಾರಣ/ವಿವರಣೆಯೊಂದಿಗೆ ಪಡೆದು ಪರಿಶೀಲಿಸಿ ಅರ್ಹ ವಿದ್ಯಾರ್ಥಿಗಳ ನೊಂದಣಿಗೆ ತುರ್ತು ಅಗತ್ಯ ಕ್ರಮವಹಿಸುವುದು. ಈ ಕುರಿತು ವಹಿಸಿರುವ ಕ್ರಮಗಳ ಕುರಿತು ವರದಿಯನ್ನು ಈ ಕಚೇರಿಗೆ ಹಾಗೂ ನಿರ್ದೇಶಕರು (ಪರೀಕ್ಷೆಗಳು) ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ, ಬೆಂಗಳೂರು ರವರಿಗೆ ಸಲ್ಲಿಸುವುದು. ಈ ಕುರಿತು ಜ್ಞಾಪನ

SATS

 

 

CLICK HERE TO DOWNLOAD

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!