SBI GOOD NEWS:ಎಸ್‌ಬಿಐ ಖಾತಾದಾರರಿಗೆ ಗುಡ್ ನ್ಯೂಸ್: ಈಗ ₹50 ಸಾವಿರ

SBI GOOD NEWS:ಎಸ್‌ಬಿಐ ಖಾತಾದಾರರಿಗೆ ಗುಡ್ ನ್ಯೂಸ್: ಈಗ ₹50 ಸಾವಿರ

SBI GOOD NEWS:ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ (ಎಸ್‌ಬಿಐ) ತನ್ನ ಖಾತಾದಾರರಿಗೆ ಗುಡ್ ನ್ಯೂಸ್ ನೀಡಿದೆ. ಉಳಿತಾಯ ಖಾತೆಗಳಲ್ಲಿ ಹೆಚ್ಚುವರಿ ಆದಾಯ ಪಡೆಯಲು ಬ್ಯಾಂಕ್ ಆಟೋ ಸ್ವೀಪ್ ಗರಿಷ್ಠ ಮಿತಿ ಹೆಚ್ಚಿಸಿದೆ. ಇದುವರೆಗೆ ಈ ಸೌಲಭ್ಯ ₹35 ಸಾವಿರವರೆಗೆ ಮಾತ್ರ ಇತ್ತು. ಇತ್ತೀಚೆಗೆ ಬ್ಯಾಂಕ್‌ ಅದನ್ನು ₹50 ಸಾವಿರಕ್ಕೆ ಹೆಚ್ಚಿಸಿ ಹೊಸ ನಿಯಮವನ್ನು ಜಾರಿಗೆ ತಂದಿದೆ.

ಇದರಿಂದ ಗ್ರಾಹಕರು ಸೇವಿಂಗ್ಸ್ ಅಕೌಂಟ್‌ನಲ್ಲಿ ಇರುವ ಹಣದ ಮೇಲೆ ಹೆಚ್ಚು ಬಡ್ಡಿ ಪಡೆಯುವ ಅವಕಾಶ ಹೊಂದಿದ್ದಾರೆ.

ಇ-ಮೇಲ್‌ಗಳ ಮೂಲಕ ಮಾಹಿತಿ:

ಈ ನಿರ್ಧಾರವನ್ನು ಎಸ್‌ಬಿಐ ತನ್ನ ಖಾತಾದಾರರಿಗೆ ಅಧಿಕೃತವಾಗಿ ತಿಳಿಸಿದೆ. ಇ-ಮೇಲ್ ಗಳ ಮೂಲಕ “ಸೇವಿಂಗ್ಸ್ ಬ್ಯಾಂಕ್ ಅಕೌಂಟ್‌ಗಳಲ್ಲಿ ಆಟೋ ಸ್ವೀಪ್ ಸೌಲಭ್ಯ ಕನಿಷ್ಠ ಮಿತಿ ₹35 ಸಾವಿರದಿಂದ ₹50 ಸಾವಿರಕ್ಕೆ ಹೆಚ್ಚಿಸಲಾಗಿದೆ. ಇದೀಗ ಮಲ್ಟಿ ಆಪ್ಸನ್ ಡಿಪಾಸಿಟ್ (MOD) ಕೂಡಾ ₹50 ಸಾವಿರವಾಗಿ ಜಾರಿಯಲ್ಲಿದೆ” ಎ೦ದು ವಿವರಿಸಿದೆ. ಇದಲ್ಲದೆ, ಸೋಶಿಯಲ್ ಮೀಡಿಯಾ ವೇದಿಕೆಗಳ ಮೂಲಕವೂ ಈ ಮಾಹಿತಿಯನ್ನು ಹಂಚಿಕೊಂಡಿದೆ.

ಮಲ್ಟಿ ಆಪ್ಸನ್ ಡಿಪಾಸಿಟ್ ಸ್ಕಿಮ್:

ಮಲ್ಟಿ ಆಪ್ಸನ್ ಡಿಪಾಸಿಟ್ ಸ್ಟ್ರೀಮ್ (MOD) ಎಂಬುದು ಗ್ರಾಹಕರ ಉಳಿತಾಯವನ್ನು ಬಡ್ಡಿ ರೂಪದಲ್ಲಿ ಹೆಚ್ಚಿಸುವ ವಿಶೇಷ ವಿಧಾನ. ಸೇವಿಂಗ್ಸ್‌ ಅಕೌಂಟ್‌ನಲ್ಲಿ ನಿರ್ದಿಷ್ಟ ಪ್ರಮಾಣಕ್ಕಿಂತ ಹೆಚ್ಚು ಹಣ ಇದ್ದರೆ ಅದು ಸ್ವಯಂಚಾಲಿತವಾಗಿ ಫಿಕ್ಸ್‌ಡ್ ಡಿಪಾಸಿಟ್ ಆಗಿ ಮಾರ್ಪಡುತ್ತದೆ. ಇದರಿಂದ ಸಾಮಾನ್ಯ ಸೇವಿಂಗ್ಸ್ ಬಡ್ಡಿಗಿಂತ ಹೆಚ್ಚು ಆದಾಯ ಬರುತ್ತದೆ. ಅಗತ್ಯವಿದ್ದರೆ ಆ ಹಣ ಮರುಸ್ವರೂಪದಲ್ಲಿ ಸೇವಿಂಗ್ಸ್ ಖಾತೆಗೆ ವಾಪಸ್ಸು ಬರುತ್ತದೆ.

ಹೆಚ್ಚಿನ ಆದಾಯ:

ಎಸ್‌ಬಿಐ ಈ ಸೌಲಭ್ಯವನ್ನು ವಿಸ್ತರಿಸುವ ಮೂಲಕ ಸಂಬಳ ಖಾತಾದಾರರು, ಎನ್‌ಆರ್‌ಐಗಳು ಮತ್ತು ವೆಲ್ತ್ ಕಸ್ಟಮರ್‌ಗಳಿಗೂ ಲಾಭವಾಗುವಂತೆ ಮಾಡಿದೆ. “ನಿಮ್ಮ ಹಣವನ್ನು ಪ್ರತ್ಯೇಕವಾಗಿ ಇಡಬೇಕಾದ ಅಗತ್ಯವಿಲ್ಲ. MOD ಸ್ಕಿಮ್ ಮೂಲಕ ಹೆಚ್ಚುವರಿ ಆದಾಯ, ಸಂಪೂರ್ಣ ಪ್ರವೇಶ ಎರಡನ್ನೂ ಒಟ್ಟಿಗೆ ಪಡೆಯಬಹುದು” ಎ೦ದು ಬ್ಯಾಂಕ್ ವಿವರಿಸಿದೆ. ಗ್ರಾಹಕರು ಇಂಟರ್‌ನೆಟ್‌ ಬ್ಯಾಂಕಿಂಗ್‌ ಅಥವಾ ಸಮೀಪದ ಶಾಖೆಯ ಮೂಲಕ ಈ ಸೌಲಭ್ಯವನ್ನು ಪ್ರಾರಂಭಿಸಬಹುದು.

ಬಡ್ಡಿಯ ಮೇಲೂ ಬಡ್ಡಿ:

ಪ್ರತಿ ಮೂರು ತಿಂಗಳಿಗೊಮ್ಮೆ ಕಾಂಪೌಂಡಿಂಗ್ ಇ೦ಟರೆಸ್ಟ್ ರೂಪದಲ್ಲಿ ಆದಾಯ ಸಿಗುತ್ತದೆ. ಅಂದರೆ ಬಡ್ಡಿಯ ಮೇಲೂ ಬಡ್ಡಿ ದೊರೆಯುತ್ತದೆ. ಆದರೆ, ಅವಧಿ ಮುಗಿಯುವ ಮುನ್ನ ಹಣವನ್ನು ತೆಗೆದುಕೊಂಡರೆ ಸ್ವಲ್ಪ ದ೦ಡ ಇರಬಹುದು. ಆದರೂ, ಸೇವಿಂಗ್ಸ್ ಖಾತೆಯಲ್ಲಿ ಹಣ ಇಡುವವರಿಗೆ ಈ ಸೌಲಭ್ಯದಿಂದ ಹೆಚ್ಚುವರಿ ಆದಾಯ ಪಡೆಯುವ ಅವಕಾಶ ಹೆಚ್ಚಾಗಿದೆ ಎ೦ದು ಪರಿಣಿತರು ಹೇಳುತ್ತಿದ್ದಾರೆ.

 

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!