SBI JOBS- 2024: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸಹಾಯಕ ವ್ಯವಸ್ಥಾಪಕರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.

SBI JOBS-2024-25

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ( SBI-JOBS-2024) ಸ್ಪೆಷಲಿಸ್ಟ್‌ ಕೇಡರ್ ಆಫೀಸರ್ ಹುದ್ದೆಗಳನ್ನು ರೆಗ್ಯುಲರ್ ಆಧಾರದಲ್ಲಿ ಭರ್ತಿ ಮಾಡುವುದಕ್ಕಾಗಿ ಅಧಿಸೂಚನೆ ಹೊರಡಿಸಿದೆ.ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ವಿದ್ಯಾರ್ಹತೆ, ಅರ್ಜಿ ಸಲ್ಲಿಕೆ ಮಾಡುವ ವಿಧಾನ, ಅರ್ಜಿ ಶುಲ್ಕ, ಇತರೆ ಹೆಚ್ಚಿನ ವಿವರಗಳನ್ನು ಇಲ್ಲಿ ನೀಡಲಾಗಿದೆ. 2024 ನೇ ನವೆಂಬರ್ 22 ರಿಂದ ಡಿಸೆಂಬರ್ 12 ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ಒದಗಿಸಲಾಗಿದೆ.

ಹುದ್ದೆಗಳ ವಿವರ:

1) ಸಹಾಯಕ ವ್ಯವಸ್ಥಾಪಕ (ಇಂಜಿನಿಯರ್ – ಸಿವಿಲ್)- 43

2) ಸಹಾಯಕ ವ್ಯವಸ್ಥಾಪಕ (ಇಂಜಿನಿಯರ್ – ಇಲೆಕ್ಟ್ರಿಕಲ್)- 25

3) ಸಹಾಯಕ ವ್ಯವಸ್ಥಾಪಕ (ಇಂಜಿನಿಯರ್ – ಫೈಯರ್)- 101

ಶೈಕ್ಷಣಿಕ ಅರ್ಹತೆ:

ಬಿಇ, ಬಿ.ಟೆಕ್‌ ಶಿಕ್ಷಣವನ್ನು ಸಿವಿಲ್, ಇಲೆಕ್ಟ್ರಿಕಲ್, ಸೇಫ್ಟಿ ಅಂಡ್ ಫೈಯರ್ ಇಂಜಿನಿಯರಿಂಗ್ ವಿಷಯಗಳಲ್ಲಿ ಪಾಸಾಗಿರಬೇಕು. ಮತ್ತು ಕನಿಷ್ಠ 2 ವರ್ಷ ವಿದ್ಯಾರ್ಹತೆ ನಂತರ ಕಾರ್ಯಾನುಭವ ಪಡೆದಿರಬೇಕು.

ವಯೋಮಿತಿ ವಿವರ:

ಸಹಾಯಕ ವ್ಯವಸ್ಥಾಪಕ (ಇಂಜಿನಿಯರ್ – ಸಿವಿಲ್, ಇಲೆಕ್ಟ್ರಿಕಲ್) ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ 21 ವರ್ಷ ಆಗಿರಬೇಕು. ಗರಿಷ್ಠ 30 ವರ್ಷ ವಯಸ್ಸು ಮೀರಿರಬಾರದು.

ಫೈಯರ್ ಡಿಪಾರ್ಟ್‌ಮೆಂಟ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಗರಿಷ್ಠ 40 ವರ್ಷ ವಯಸ್ಸು ಮೀರಿರಬಾರದು. ಬ್ಯಾಕ್‌ಲಾಗ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಗರಿಷ್ಠ 30 ವರ್ಷ ವಯಸ್ಸು ಮೀರಿರಬಾರದು.

ವೇತನ ಶ್ರೇಣಿ :

₹48,480- 85,920.
ಈ ಮೇಲಿನ ವೇತನದ ಜತೆಗೆ DA, HRA, CCA, PF, NPS, LFC, ಮೆಡಿಕಲ್ ಸೌಲಭ್ಯಗಳು, ರಜೆಗಳು, ಇತರೆ ಸೌಲಭ್ಯಗಳು ಲಭ್ಯವಾಗಲಿವೆ.

ನೇಮಕಾತಿ ಪ್ರಕ್ರಿಯೆ:

ಆನ್‌ಲೈನ್‌ ಮೂಲಕ ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಫೈಯರ್ ಇಂಜಿನಿಯರಿಂಗ್ ವಿಭಾಗದ ಹುದ್ದೆಗೆ ಶಾರ್ಟ್‌ಲಿಸ್ಟಿಂಗ್ ಮತ್ತು ಇಂಟೆರ್ಯಾಕ್ಷನ್‌ ಮೂಲಕ ಮಾತ್ರ ಆಯ್ಕೆ ಮಾಡಲಾಗುತ್ತದೆ.

ಲಿಖಿತ ಪರೀಕ್ಷೆಯಲ್ಲಿ ಜೆನೆರಲ್ General Aptitude, Professional Knowledge ಕುರಿತಾದ ಪ್ರಶ್ನೆಗಳು ಇರುತ್ತವೆ. ಒಟ್ಟು 2-15 ಗಂಟೆ ಸಮಯವನ್ನು ಪರೀಕ್ಷೆಗೆ ನಿಗದಿ ಮಾಡಲಾಗಿರುತ್ತದೆ.

ಅರ್ಜಿ ಶುಲ್ಕದ ವಿವರ

General / OBC / EWS ಅಭ್ಯರ್ಥಿಗಳಿಗೆ ರೂ.750.
SC / ST / PWD ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ಡೆಬಿಟ್ ಕಾರ್ಡ್‌, ಕ್ರೆಡಿಟ್ ಕಾರ್ಡ್‌, ಇಂಟರ್ನೆಟ್‌ ಬ್ಯಾಂಕಿಂಗ್ ಮೂಲಕ ಶುಲ್ಕ ಪಾವತಿ ಮಾಡಬಹುದಾಗಿದೆ.

ಪ್ರಮುಖ ದಿನಾಂಕಗಳ ಮಾಹಿತಿ:

ಅರ್ಜಿ ಸಲ್ಲಿಕೆಗೆ ಆರಂಭಿಕ ದಿನಾಂಕ 22-11-2024

ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ 12-12-2024

ಅರ್ಜಿ ತಿದ್ದುಪಡಿ ಮಾಡಲು ಕೊನೆ ದಿನಾಂಕ 12-12-2024

ಅರ್ಜಿ ಶುಲ್ಕ ಪಾವತಿಗಾಗಿ ಕೊನೆ ದಿನಾಂಕ 12-12-2024

ಅರ್ಜಿ ಮುದ್ರಿಸಿ ತೆಗೆದುಕೊಳ್ಳಲು ಕೊನೆ ದಿನಾಂಕ 27-12-2024

ಅರ್ಜಿ ಸಲ್ಲಿಕೆ ಮಾಡಲು- CLICK HERE

ಹೆಚ್ಚಿನ ಮಾಹಿತಿಗಾಗಿ- CLICK HERE

 

3 thoughts on “SBI JOBS- 2024: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸಹಾಯಕ ವ್ಯವಸ್ಥಾಪಕರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.”

Leave a Comment