SBIನಲ್ಲಿ 541 ಪ್ರೊಬೆಷನರಿ ಆಫೀಸರ್ ಹುದ್ದೆಗಳ ನೇಮಕಾತಿಗೆ ಅರ್ಜಿ
SBIನಲ್ಲಿ 541 ಪ್ರೊಬೆಷನರಿ ಆಫೀಸರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ದೇಶದ ಅತ್ಯಂತ ದೊಡ್ಡ ಬ್ಯಾಂಕ್‌ಗಳಲ್ಲಿ ಒಂದಾಗಿರುವ ‘ಸ್ಟೇಟ್ ಆಫ್ ಇಂಡಿಯಾ’ (ಎಸ್‌ಬಿಐ) ಈ ವರ್ಷದ ಪ್ರೊಬೆಷನರಿ ನೇಮಕಾತಿಗೆ ಚಾಲನೆ ನೀಡಿದೆ.ಕಳೆದ ವರ್ಷ 600 ಹುದ್ದೆಗಳಿಗೆ ನೇಮಕಾತಿ ನಡೆಸಿರುವ SBI ಈ ವರ್ಷಕ್ಕೆ 541 ಹುದ್ದೆಗಳನ್ನಷ್ಟೇ ಮೀಸಲಿಟ್ಟಿದೆ. ಹಾಗೆ ನೋಡಿದರೆ ವರ್ಷ ಕಳೆದಂತೆ SBI ಪ್ರೊಬೆಷನರಿ ಆಫೀಸರ್‌ಗಳ ನೇಮಕ ಸಂಖ್ಯೆ ಕಡಿಮೆಯಾಗುತ್ತಿದೆ.
2023ರಲ್ಲಿ 2000 ಹುದ್ದೆಗಳಿಗೆ ನೇಮಕ ನಡೆಸಿರುವ SBI ಈ ವರ್ಷ 41 ಬ್ಯಾಕ್‌ಲಾಗ್ ಸೇರಿ 541 ಹುದ್ದೆಗಳಿಗೆ ನೇಮಕ ನಡೆಸುವುದಾಗಿ ತಿಳಿಸಿದೆ.
ಜೂನ್ 24 ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಜುಲೈ 14 ತನಕ ಕಾಲಾವಕಾಶವಿದೆ.
ಒಟ್ಟು ಹುದ್ದೆಗಳ ಸಂಖ್ಯೆ:541
▪️ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ 80,
▪️ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 36, ▪️ಆರ್ಥಿಕವಾಗಿ ದುರ್ಬಲ ವರ್ಗದವರಿಗೆ 50 ಮತ್ತು ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 135 ಹುದ್ದೆಗಳನ್ನು ಮೀಸಲಿಡಲಾಗಿದೆ. ಮುಂಬರುವ ಜುಲೈ/ಆಗಸ್ಟ್‌ನಲ್ಲಿ ಪೂರ್ವಭಾವಿ ಪರೀಕ್ಷೆ ನಡೆಯಲಿದ್ದು, 2025ರ ಸೆಪ್ಟೆಂಬರ್‌ನಲ್ಲಿ ಮುಖ್ಯ ಪರೀಕ್ಷೆ ನಡೆಯಲಿದೆ ಎಂದು ಅಧಿಸೂಚನೆಯಲ್ಲಿ SBI ತಿಳಿಸಿದೆ.
ಅರ್ಹತೆಗಳೇನಿರಬೇಕು?
ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಹಾಗೆಯೇ ಅಂತಿಮ ವರ್ಷದ/ ಸೆಮಿಸ್ಟರ್ ಪದವಿ ಪರೀಕ್ಷೆ ಬರೆಯಲಿರುವ ಅಭ್ಯರ್ಥಿಗಳಿಗೂ ಅರ್ಜಿ ಸಲ್ಲಿಸಲು ಅವಕಾಶವಿದೆ. ಅಂದರೆ ಅಭ್ಯರ್ಥಿಗಳು 2025ರ ಏಪ್ರಿಲ್ 1ಕ್ಕೆ ನಿಗದಿತ ವಿದ್ಯಾರ್ಹತೆಯನ್ನು ಹೊಂದಿರಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ 21 ರಿಂದ 30 ವರ್ಷದೊಳಗಿರಬೇಕು.
ಅರ್ಜಿ ಶುಲ್ಕದ ವಿವರ:
ಸಾಮಾನ್ಯ ಮತ್ತು ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳು 750 ರೂ. ಮತ್ತು ಎಸ್‌ಸಿ/ಎಸ್‌ಟಿ/ ವಿಶೇಷಚೇತನ ಅಭ್ಯರ್ಥಿಗಳಿಗೆ ಸಂಪೂರ್ಣ ಶುಲ್ಕ ವಿನಾಯ್ತಿ ನೀಡಲಾಗಿದೆ.
ಪರೀಕ್ಷಾ ಪೂರ್ವ ತರಬೇತಿ:
ಪರೀಕ್ಷಾ ಪೂರ್ವ ತರಬೇತಿ ಪರಿಶಿಷ್ಟ ಜಾತಿ/ಪಂಗಡ ಮತ್ತು ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಗಳಿಗೆ ಬ್ಯಾಂಕ್ ವತಿಯಿಂಧ ಪರೀಕ್ಷಾಪೂರ್ವ ತರಬೇತಿ ನೀಡಲಾಗುತ್ತದೆ. ಪೂರ್ವಭಾವಿ ಪರೀಕ್ಷೆಗೆ ನಿಗದಿಪಡಿಸಿದ ಕೇಂದ್ರಗಳಲ್ಲೇ ತರಬೇತಿಯನ್ನೂ ನೀಡಲಾಗುತ್ತದೆ. ತರಬೇತಿ ಪಡೆಯಲು ಇಚ್ಛಿಸುವವರು ಆನ್‌ಲೈನ್ ಮೂಲಕ ತರಬೇತಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಪರೀಕ್ಷೆ ನಡೆಯುವ ಮೊದಲೇ ಜುಲೈನಲ್ಲಿ ಈ ತರಬೇತಿ ನೀಡಲಾಗುತ್ತದೆ ಎಂದು SBI ಪ್ರಕಟಿಸಿದೆ.
ರಾಜ್ಯದಲ್ಲಿ ಪರೀಕ್ಷಾ ಕೇಂದ್ರಗಳು:
▪️ಪೂರ್ವಭಾವಿ ಪರೀಕ್ಷೆ ಬೆಳಗಾವಿ, ಬೆಂಗಳೂರು, ಧಾರವಾಡ/ಹುಬ್ಬಳ್ಳಿ, ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಉಡುಪಿಯಲ್ಲಿ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗುತ್ತದೆ.
▪️ಮುಖ್ಯ ಪರೀಕ್ಷೆಗೆ ಬೆಂಗಳೂರು, ಮಂಗಳೂರು ಮತ್ತು ಹುಬ್ಬಳ್ಳಿ/ಧಾರವಾಡದಲ್ಲಿ ಪರೀಕ್ಷೆ ನಡೆಯಲಿದೆ. ಪ್ರತಿವರ್ಷ ಬೆಂಗಳೂರು ಒಂದು ಕಡೆ ಮುಖ್ಯ ಪರೀಕ್ಷೆ ಬರೆಯಲು ಅವಕಾಶ ನೀಡುತ್ತಿದ್ದ ಎಸ್‌ಬಿಐ, ಈ ಬಾರಿ ರಾಜ್ಯದ ಮೂರು ಕಡೆ ಕೇಂದ್ರಗಳನ್ನು ತೆರೆಯಲಿದೆ.
ನೇಮಕ ಹೇಗೆ?
ಮೊದಲ ಹಂತವಾಗಿ ಪೂರ್ವಭಾವಿ ಪರೀಕ್ಷೆ ನಡೆಯಲಿದೆ. ರಾಜ್ಯದಲ್ಲಿ8 ಕಡೆಗಳಲ್ಲಿ ಪರೀಕ್ಷಾ ಕೇಂದ್ರಗಳು ಇರಲಿವೆ. ಈ ಪರೀಕ್ಷೆಯಲ್ಲಿ ಬ್ಯಾಂಕ್ ನಿಗದಿಪಡಿಸಿದಷ್ಟು ಅಂಕ ಪಡೆದು ತೇರ್ಗಡೆಯಾದವರು ಮುಖ್ಯ ಪರೀಕ್ಷೆ ಬರೆಯಲು ಅರ್ಹತೆ ಪಡೆಯುತ್ತಾರೆ. ಈ ಎರಡೂ ಮಾದರಿಯ ಪರೀಕ್ಷೆಗಳು ಆನ್‌ಲೈನ್‌ನಲ್ಲೇ ನಡೆಯಲಿದ್ದು, ವಸ್ತುನಿಷ್ಠ ಮತ್ತು ವಿವರಣಾತ್ಮಕ ಮಾದರಿಯ ಪ್ರಶ್ನೆಗಳಿಗೆ ಅಭ್ಯರ್ಥಿಗಳು ಉತ್ತರಿಸಬೇಕಾಗುತ್ತದೆ. ಇದರಲ್ಲಿ ಅರ್ಹತೆ ಪಡೆದವರು ಮುಂದಿನ ಹಂತದಲ್ಲಿ ನಡೆಯಲಿರುವ ಗುಂಪು ಚರ್ಚೆ ಮತ್ತು ಸಂದರ್ಶನದಲ್ಲಿ ಭಾಗವಹಿಸಿ ನೇಮಕಕ್ಕೆ ಅರ್ಹತೆ ಪಡೆಯಬೇಕಾಗುತ್ತದೆ. ಪ್ರೊಬೆಷನರಿ ಆಫೀಸರ್ ಆಗಿ ಆಯ್ಕೆಯಾದವರು ದೇಶದ ಯಾವುದೇ ಭಾಗದಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು. ಎರಡು ವರ್ಷದ ತರಬೇತಿಯ ನಂತರ ಅಭ್ಯರ್ಥಿಗಳನ್ನು ಆಫೀಸರ್‌ಗಳಾಗಿ ನೇಮಕ ಮಾಡಿಕೊಳ್ಳಲಾಗುತ್ತದೆ.
ಮಹತ್ವದ ದಿನಾಂಕಗಳು:
▪️ಅರ್ಜಿ ಸಲ್ಲಿಸಲು ಕೊನೆಯ ದಿನ: ಜುಲೈ 14, 2025
▪️ಪೂರ್ವಭಾವಿ ಪರೀಕ್ಷೆ: ಜುಲೈ/ಆಗಸ್ಟ್, 2025 (ಫಲಿತಾಂಶ: ಆಗಸ್ಟ್/ಸೆಪ್ಟೆಂಬರ್)
▪️ಮುಖ್ಯ ಪರೀಕ್ಷೆ: ಸೆಪ್ಟೆಂಬರ್, 2025 (ಫಲಿತಾಂಶ: ಅಕ್ಟೋಬರ್)
▪️ಗುಂಪು ಚರ್ಚೆ ಮತ್ತು ಸಂದರ್ಶನ: ಅಕ್ಟೋಬರ್/ನವೆಂಬರ್, 2025
▪️ಅಂತಿಮ ಫಲಿತಾಂಶ ಪ್ರಕಟ: ನವೆಂಬರ್/ಡಿಸೆಂಬರ್, 2025
▪️ವೇತನ: 48, 480–89,920 ರೊ.
▪️ಸಹಾಯವಾಣಿ : 022-22820427
ಹೆಚ್ಚಿನ ವಿವರಗಳಿಗಾಗಿ– CLICK HERE
ಇದನ್ನೂ ನೋಡಿ....Indian Railwy Recuritment: ಭಾರತೀಯ ರೈಲ್ವೆಯಲ್ಲಿ 6,238 ಟೆಕ್ನಿಷಿಯನ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ, ಸಂಪೂರ್ಣ ಮಾಹಿತಿ ಇಲ್ಲಿದೆ.