School Tour-2025: ಶಿಕ್ಷಣ ಇಲಾಖೆಯಿಂದ ಶೈಕ್ಷಣಿಕ ಪ್ರವಾಸಕ್ಕೆ ಮಹತ್ವದ ಮಾರ್ಗಸೂಚಿ ಪ್ರಕಟ

School Tour: ಶಿಕ್ಷಣ ಇಲಾಖೆಯಿಂದ ಶೈಕ್ಷಣಿಕ ಪ್ರವಾಸಕ್ಕೆ ಮಹತ್ವದ ಮಾರ್ಗಸೂಚಿ ಪ್ರಕಟ.

School Tour: ಶಿಕ್ಷಣ ಇಲಾಖೆಯಿಂದ ಶೈಕ್ಷಣಿಕ ಪ್ರವಾಸಕ್ಕೆ ಮಹತ್ವದ ಮಾರ್ಗಸೂಚಿ ಪ್ರಕಟ- ಕರ್ನಾಟಕ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸ ಕೈಗೊಳ್ಳಲು ಶಿಕ್ಷಣ ಇಲಾಖೆಯು ಮಹತ್ವದ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಈ ಮಾರ್ಗಸೂಚಿಯು ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಶೈಕ್ಷಣಿಕ ಉದ್ದೇಶಗಳನ್ನು ಪ್ರಮುಖವಾಗಿ ಪರಿಗಣಿಸಿ ರೂಪಿಸಲಾಗಿದೆ. ಇದರ ಮೂಲಕ ವಿದ್ಯಾರ್ಥಿಗಳಿಗೆ ಸುರಕ್ಷಿತ ಮತ್ತು ಜ್ಞಾನಾರ್ಜನೆಗೆ ಸಹಕಾರಿಯಾಗುವ ಪ್ರವಾಸಗಳನ್ನು ಆಯೋಜಿಸಲು ಇಲಾಖೆ ಒತ್ತು ನೀಡಿದೆ.

ಒಂದು ವಾರದ ಮುಂಚಿತವಾಗಿ ಅನುಮತಿ:

ಶೈಕ್ಷಣಿಕ ಪ್ರವಾಸ ಕೈಗೊಳ್ಳಲು ಶಾಲೆಗಳ ಮುಖ್ಯ ಶಿಕ್ಷಕರು ಮತ್ತು ಶಾಲಾ ಆಡಳಿತ ಮಂಡಳಿಗಳು ಒಂದು ವಾರದ ಮುಂಚಿತವಾಗಿ ಅಗತ್ಯ ದಾಖಲೆಗಳೊಂದಿಗೆ ಶಿಕ್ಷಣ ಇಲಾಖೆಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಅನುಮತಿ ಪಡೆಯದೆ ಪ್ರವಾಸ ಕೈಗೊಂಡು ಸುರಕ್ಷತಾ ಕ್ರಮಗಳನ್ನು ಉಲ್ಲಂಘಿಸಿದರೆ, ಸಂಬಂಧಿಸಿದ ಮುಖ್ಯ ಶಿಕ್ಷಕರು ಮತ್ತು ಶಾಲಾ ಆಡಳಿತ ಮಂಡಳಿಯನ್ನು ನೇರ ಹೊಣೆಯಾಗಲಿದೆ.

ಅನುಮತಿಗಾಗಿ ಸಲ್ಲಿಸಬೇಕಾದ ದಾಖಲೆಗಳು:

ಮುಖ್ಯ ಗುರುಗಳ ಮನವಿ, ಶೈಕ್ಷಣಿಕ ಪ್ರವಾಸದ ಸ್ಥಳಗಳ ವೇಳಾಪಟ್ಟಿ, ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಪಟ್ಟಿ, ಪೋಷಕರ ಒಪ್ಪಿಗೆ ಪತ್ರ, ವಾಹನಗಳ ನೋಂದಣಿ, ಪರವಾನಗಿ, ವಿಮೆ, ಚಾಲಕರ ಪರವಾನಗಿ, ಆಡಳಿತ ಮಂಡಳಿ/ಎಸ್.ಡಿ.ಎಂ.ಸಿ ಅನುಮತಿ, ಮಕ್ಕಳ ಸುರಕ್ಷತೆ, ರಾಜ್ಯದೊಳಗೆ ಪ್ರವಾಸದ ದೃಢೀಕರಣ, ರಜಾ ಅವಧಿಗಳ ಸರಿದೂಗಿಸುವಿಕೆ ಮತ್ತು ಪ್ರಥಮ ಚಿಕಿತ್ಸೆ ಪೆಟ್ಟಿಗೆಯ ಕಡ್ಡಾಯ ಕೊ೦ಡೊಯ್ಯುವಿಕೆಯ ಬಗ್ಗೆ ದೃಢೀಕರಣಗಳು ಸೇರಿ 15 ಅಂಶಗಳ ಮಾರ್ಗಸೂಚಿ ನೀಡಲಾಗಿದೆ.

ಷರತ್ತುಗಳು:

ಪ್ರತಿ ವರ್ಷ ಡಿಸೆಂಬ‌ರ್ ಅಂತ್ಯದೊಳಗೆ ಶೈಕ್ಷಣಿಕ ಪ್ರವಾಸ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಡಿಸೆ೦ಬರ್ ನಂತರ ಪ್ರವಾಸ ಕೈಗೊಳ್ಳಬಾರದು.

ಪ್ರವಾಸಕ್ಕೆ ಇಲಾಖಾ ಅನುಮತಿ ಕಡ್ಡಾಯ. ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಮಾಹಿತಿಯನ್ನು ಇಲಾಖೆಗೆ ನೀಡಬೇಕು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಥವಾ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆಯ ವಾಹನಗಳಲ್ಲೇ ಪ್ರವಾಸ ಕೈಗೊಳ್ಳಬೇಕು. ಖಾಸಗಿ ಹಾಗೂ ಮಿನಿ ಬಸ್ಸುಗಳನ್ನು ಬಳಸುವಂತಿಲ್ಲ.

ನಿಗದಿಪಡಿಸಿದ ಸ್ಥಳಾವಕಾಶ ಮೀರದಂತೆ ಎಚ್ಚರ ವಹಿಸಬೇಕು. ವಿದ್ಯಾರ್ಥಿನಿಯರ ಮೇಲ್ವಿಚಾರಣೆಯನ್ನು ಮಹಿಳಾ ಶಿಕ್ಷಕರೇ ನೋಡಿಕೊಳ್ಳಬೇಕು.

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!