Sethubandha: ಸೇತುಬಂಧ ಸಾಫಲ್ಯ ಪರೀಕ್ಷೆ ಮತ್ತು FLN ಪರೀಕ್ಷೆಯ ಪ್ರಗತಿ ಪರಿಶೀಲನೆ ಸಂಬಂಧ ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ 02 ನೇ ಹಂತದಲ್ಲಿ ಭೇಟಿ ನೀಡುವ ಕುರಿತು ಸುತ್ತೋಲೆ ಪ್ರಕಟ.
Sethubandha: ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, 2025-26ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳನ್ನು ಉಲ್ಲೇಖ (2) ರಂತೆ ರಾಜ್ಯಾದ್ಯಂತ ಪ್ರಾರಂಭಿಸಲಾಗಿರುತ್ತದೆ, ಮುಂದುವರೆದ ಭಾಗವಾಗಿ ನಿರೀಕ್ಷಿತ ಸೇತುಬಂಧ ಕಲಿಕಾಫಲ ಹಾಗೂ RUN ಕಲಿಕಾಫಲಗಳ ಪ್ರಗತಿ ಪರಿಶೀಲನೆ ಸಂಬಂಧ ರಾಜ್ಯ, ಜಿಲ್ಲಾ ಮತ್ತು ತಾಲ್ಲೂಕು ಹಂತದ ಅಧಿಕಾರಿಗಳ ನೇತೃತ್ವದಲ್ಲಿ 02 ನೇ ಸುತ್ತಿನ ಶಾಲಾ ಭೇಟಿಯನ್ನು ದಿನಾಂಕ:01/07/2025 ರಿಂದ 04/07/2025 ರ ವರೆಗೆ ನಡೆಸುವುದು.
ಜಿಲ್ಲಾ ಮತ್ತು ತಾಲ್ಲೂಕುಗಳ ಎಲ್ಲಾ ಅಧಿಕಾರಿಗಳಿಗೆ ದಿನಾಂಕ:05/07/2025 ರಂದು ರಾಜ್ಯ ಹಂತದ ಅಧಿಕಾರಿಗಳ ನೇತೃತ್ವದಲ್ಲಿ ಪ್ರಗತಿ ಪರಿಶೀಲನೆಯನ್ನು ನಡೆಸಲಾಗುವುದು. ಆದ್ದರಿಂದ, ಜಿಲ್ಲೆಯ ಎಲ್ಲಾ ಶಾಲೆಗಳನ್ನು ಭೇಟಿ ಮಾಡಿ FUN & ಸೇತುಬಂಧದ ಸಾಫಲ್ಯ ಪರೀಕ್ಷೆಯ ನಂತರ ಕಲಿಕಾ ಫಲ ಗಳಿಸದ ಬಾಕಿ ಉಳಿದಿರುವ ಮಕ್ಕಳ ನಿಖರ ಮಾಹಿತಿಯನ್ನು ಗೂಗಲ್ ಫಾರಂನಲ್ಲಿ ಭರ್ತಿ ಮಾಡಲು ಉಪನಿರ್ದೇಶಕರು, ಆಡಳಿತ ಹಾಗೂ ಉಪನಿರ್ದೇಶಕರು ಅಭಿವೃದ್ಧಿರವರ ನೇತೃತ್ಯದಲ್ಲಿ ಈ ಹಿಂದಿನ ಕ್ರಿಯಾ ಯೋಜನೆಯಂತೆ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಹಂತದ ಅಧಿಕಾರಿಗಳಿಗೆ ಹಿಂದೆ ಭೇಟಿ ನೀಡಿದ ಶಾಲೆಗಳಿಗೆ ಭೇಟಿ ನೀಡಲು ಕ್ರಮವಹಿಸಲು ಸೂಚಿಸಿದೆ.
ಭೇಟಿ ನೀಡಿದ ಸಂದರ್ಭದಲ್ಲಿ ನೀಡುವ ಲಿಂಕ್‌ನ್ನು ಬಳಸಿಕೊಂಡು ಮಾಹಿತಿ ಭರ್ತಿ ಮಾಡಲು ಕ್ರಮವಹಿಸುವುದು.
ಸೇತುಬಂಧ ಕಾರ್ಯಕ್ರಮ ವೀಕ್ಷಿಸಲು /ಅವಲೋಕಿಸಲು ನಿಯೋಜಿತ ಅಧಿಕಾರಿಗಳ ಪಟ್ಟಿ ಇಲ್ಲಿದೆ