Setubandha Achievement Test 2026: 10ನೇ ತರಗತಿ ಪುನರ್ವಿಂಗಡಣೆ ಕುರಿತು ಮಾಹಿತಿ
Setubandha Achievement Test 2026: ಸೇತುಬಂಧ ಸಾಫಲ್ಯ ಪರೀಕ್ಷೆಯ ಫಲಿತಾಂಶದ ಆಧಾರದ ಮೇಲೆ 10ನೇ ತರಗತಿ ವಿದ್ಯಾರ್ಥಿಗಳ ಪುನರ್ವಿಂಗಡಣೆ (Reshuffling) ಹಾಗೂ ಶೈಕ್ಷಣಿಕ ಪುಗತಿ ಕ್ರಮಗಳ ಕುರಿತು.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಪ್ರಸಕ್ತ ಸಾಲಿನ ಎಸ್ಎಸ್ಎಲ್ಸಿ (SSLC) ವಾರ್ಷಿಕ ಪರೀಕ್ಷೆಯಲ್ಲಿ ಕಲಬುರಗಿ ಜಿಲ್ಲೆಯ ಫಲಿತಾಂಶದ ಗುಣಮಟ್ಟವನ್ನು ಉತ್ತಮಪಡಿಸಲು ಹಾಗೂ ಶೇಕಡಾವಾರು ಪ್ರಗತಿಯನ್ನು ಹೆಚ್ಚಿಸಲು ಶೈಕ್ಷಣಿಕ ಕಾರ್ಯತಂತ್ರಗಳನ್ನು ರೂಪಿಸುವುದು ಅತ್ಯಗತ್ಯವಾಗಿರುತ್ತದೆ.
ಶಾಲಾ ಹಂತದಲ್ಲಿ ವಿದ್ಯಾರ್ಥಿಗಳ ಮೂಲ ಕಲಿಕಾ ಸಾಮರ್ಥ್ಯ ಮತ್ತು ನ್ಯೂನತೆಗಳನ್ನು ಗುರುತಿಸಲು ಈಗಾಗಲೇ ನಡೆಸಿರುವ ಸೇತುಬಂಧ ಸಾಫಲ್ಯ ಪರೀಕ್ಷೆಯ ಫಲಿತಾಂಶವನ್ನು ಸೂಕ್ಷ್ಮವಾಗಿ ವಿಶ್ಲೇಷಿಸಬೇಕಾಗಿದೆ.
ಈ ಪರೀಕ್ಷೆಗಳ ಪ್ರಗತಿಯ ಆಧಾರದ ಮೇಲೆ, ಶಾಲೆಗಳಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳನ್ನು ಅವರ ಕಲಿಕಾ ಮಟ್ಟಕ್ಕೆ ಅನುಗುಣವಾಗಿ (ಹಿಂದುಳಿದ, ಸಾಧಾರಣ ಮತ್ತು ಚುರುಕಾದ ವಿದ್ಯಾರ್ಥಿಗಳೆಂದು) ವಿಷಯವಾರು ಕಲಿಕಾ ಗುಂಪುಗಳಾಗಿ ಪುನರ್ವಿಂಗಡಣೆ (Reshuffing) ಮಾಡಲು ಕ್ರಮ ಕೈಗೊಳ್ಳಬೇಕಿದೆ. 29 ಅಂಶಗಳ ಕಾರ್ಯಕ್ರಮ ಬಳಸಿಕೊಂಡು ಶಾಲಾ ಹಂತದಲ್ಲಿ ಕ್ರಿಯಾ ಯೋಜನೆ ರೂಪಿಸಿಕೊಂಡು ಆಯಾ ಘಟಕ/ಪಾಠ ಭೋದನೆಯ ನಂತರ ನಿರ್ದಿಷ್ಟ ಕಲಿಕಾಂಶಗಳನ್ನು ಪುನರ್ಮನನ ಮಾಡಿಸುವುದು.
ಈ ಪುನರ್ವಿಂಗಡಣೆಯ ಮುಖ್ಯ ಉದ್ದೇಶವೇನೆಂದರೆ, ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ವಿಶೇಷ ಪರಿಹಾರ ಬೋಧನೆ (Remedial Teaching) ಮತ್ತು ವೈಯಕ್ತಿಕ ಗಮನ ಹರಿಸಲು ಶಿಕ್ಷಕರಿಗೆ ಅನುಕೂಲ ಕಲ್ಪಿಸುವುದಾಗಿದೆ. ಆದ್ದರಿಂದ, ನಿಮ್ಮ ವ್ಯಾಪ್ತಿಯ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರೌಢಶಾಲೆಗಳಲ್ಲಿ ಈ ಪ್ರಕ್ರಿಯೆಯು ಕಟ್ಟುನಿಟ್ಟಾಗಿ ಅನುಷ್ಠಾನಗೊಳ್ಳುವಂತೆ ನೋಡಿಕೊಳ್ಳಲು ಹಾಗೂ ಈ ಕುರಿತು ಶಾಲಾ ಮುಖ್ಯಸ್ಮರಿಗೆ ಸೂಕ್ತ ನಿರ್ದೇಶನ ನೀಡಲು ಸೂಚಿಸಲಾಗಿದೆ.
ತಾಲ್ಲೂಕುವಾರು ಕೈಗೊಂಡ ವಿದ್ಯಾರ್ಥಿಗಳ ಪುನರ್ವಿಂಗಡಣೆಯ ವರದಿ ಹಾಗೂ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ. ಈ ಕಚೇರಿಗೆ ಶೀಘ್ರವಾಗಿ ಸಲ್ಲಿಸಲು ತಿಳಿಸಿದೆ.

CLICK HERE – DOWNLOAD MEMORANDUM