Shimoga District Court Recruitment 2026: 56 ಜವಾನರ ಹುದ್ದೆಗಳ ಭರ್ತಿ – ಅರ್ಜಿ ಸಲ್ಲಿಸಿ

Shimoga District Court Recruitment 2026: 56 ಜವಾನರ ಹುದ್ದೆಗಳ ಭರ್ತಿ – ಅರ್ಜಿ ಸಲ್ಲಿಸಿ

Shimoga District Court Recruitment 2026: ಶಿವಮೊಗ್ಗ ಜಿಲ್ಲಾ ನ್ಯಾಯಾಲಯ ನೇಮಕಾತಿ 2026ರ ಅಧಿಸೂಚನೆ ಪ್ರಕಟವಾಗಿದೆ. 56 ಜವಾನರ ಹುದ್ದೆಗಳಿಗೆ ನೇರ ನೇಮಕಾತಿ ನಡೆಯುತ್ತಿದೆ. ಅರ್ಹತೆ, ವಯೋಮಿತಿ, ವೇತನ, ಅರ್ಜಿ ಶುಲ್ಕ, ಪ್ರಮುಖ ದಿನಾಂಕಗಳು ಹಾಗೂ ಆನ್‌ಲೈನ್ ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಶಿವಮೊಗ್ಗ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಘಟಕದ ವಿವಿಧ ನ್ಯಾಯಾಲಯಗಳಲ್ಲಿ ಕೆಳಗೆ ವಿವರಿಸಿರುವಂತೆ ಖಾಲಿ ಇರುವ ಜವಾನ (PEON) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸತಕ್ಕದ್ದು.

ಅರ್ಜಿಗಳನ್ನು ಶಿವಮೊಗ್ಗದ ಜಿಲ್ಲಾ ನ್ಯಾಯಾಲಯ ವೆಬ್ ಸೈಟ್ https://shivamogga.dcourts.gov.in/notice-category/recruitments/ ನಲ್ಲಿ ನೀಡಲಾದ ಲಿಂಕ್ ಮೂಲಕ ಆನ್‌ಲೈನ್‌ನಲ್ಲಿ ದಿನಾಂಕ:23.07.2026 ರಿಂದ ದಿನಾಂಕ:24.08.2026 ರ ರಾತ್ರಿ 11.59 ರವರೆಗೆ ಮಾತ್ರ ಸಲ್ಲಿಸತಕ್ಕದ್ದು.

1. ಹುದ್ದೆಗಳ ಸಂಖ್ಯೆ 56

ಹುದ್ದೆಗಳ ವರ್ಗೀಕರಣಃ

ವಿ.ಸೂ.:

1.# “ಪರಿಶಿಷ್ಟ ಜಾತಿ ಪ್ರವರ್ಗ-ಸಿ” ಯಲ್ಲಿ ತೋರಿಸಿರುವ ಒಂದು ಹುದ್ದೆಯನ್ನು 59 ಅತ್ಯಂತ ಹಿಂದುಳಿದ ಜಾತಿಯವರಿಗೆ ಮೀಸಲಿರಿಸಿದ್ದು, ಒಂದು ವೇಳೆ ಸದರಿ 59 ಜಾತಿಗಳಲ್ಲಿ ಅಭ್ಯರ್ಥಿಗಳು ಲಭ್ಯವಾಗದಿದ್ದಲ್ಲಿ ಆ ಹುದ್ದೆಯನ್ನು ಪ್ರವರ್ಗ-ಸಿ ರಲ್ಲಿನ ಇತರೆ ಜಾತಿಗಳಿಗೆ ನೀಡಲಾಗುವುದು.

2. ಅಂಗವಿಕಲ ಮೀಸಲಾತಿಃ

*ಸಾಮಾನ್ಯ ವರ್ಗ ರೋಸ್ಟರ್ ಸಂಖ್ಯೆ 24 – (Locomotor Disability including Cerebral Palsy, Leprosy Cured, Dwarfism, Acid Attack Victims and Muscular Dystrophy)

**ಪ್ರವರ್ಗ -1-ರೋಸ್ಟರ್ ಸಂಖ್ಯೆ – 4 – (ಅಂಧ / ದೃಷ್ಟಿ ಮಾಂದ್ಯ)

***ಪ್ರವರ್ಗ-3 ಬಿ – ರೋಸ್ಟರ್ ಸಂಖ್ಯೆ – 4 – (ಅಂಧ / ದೃಷ್ಟಿ ಮಾಂದ್ಯ)

3. ಅಂಗವಿಕಲರಿಗೆ ಮೀಸಲಾದ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಲಭ್ಯವಿಲ್ಲದೇ ಇದ್ದಲ್ಲಿ ಅಂತಹ ರಿಕ್ತ ಸ್ಥಾನಗಳನ್ನು ಮುಂದಿನ ನೇಮಕಾತಿಗೆ ಮುಂದೊಯ್ಯಲಾಗುವುದು.

4. ಮಹಿಳಾ ಅಭ್ಯರ್ಥಿಗಳು, ಯೋಜನೆಗಳಿಂದ ನಿರ್ವಸಿತರಾದವರು, ತೃತೀಯ ಲಿಂಗಿಗಳು ಹಾಗೂ ಮಾಜಿ ಸೈನಿಕರಿಗೆ ಮೀಸಲಾದ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಲಭ್ಯವಿಲ್ಲದೇ ಇದ್ದಲ್ಲಿ ಅಂತಹ ರಿಕ್ತ ಸ್ಥಾನಗಳನ್ನು ಆಯಾ ವರ್ಗಕ್ಕೆ ಸೇರಿದ ಇತರೆ ಅರ್ಹ ಅಭ್ಯರ್ಥಿಗಳಿಂದ ಭರ್ತಿ ಮಾಡಿಕೊಳ್ಳಲಾಗುವುದು.

2) ವೇತನ ಶ್ರೇಣಿ 27000-650-29600-725-32500-800-35700-900-39300-1000-43300-1125-46675 ಹಾಗೂ ಇತರೆ ಭತ್ಯೆಗಳು.

3) ಶೈಕ್ಷಣಿಕ ವಿದ್ಯಾರ್ಹತೆ:

(ಅ) ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ನಡೆಸುವ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತೀರ್ಣತೆ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.

ಸೂಚನೆಃ

ಕರ್ನಾಟಕ ಸರ್ಕಾರದ ಸುತ್ತೋಲೆ ಸಂಖ್ಯೆ ಸಿಆಸುಇ 81 ಸೇವನೆ 2017, ದಿನಾಂಕ 27.02.2018 ರಲ್ಲಿ ಈ ಕೆಳಕಂಡ ವಿದ್ಯಾರ್ಹತೆ/ ಕೋರ್ಸ್ಗಳನ್ನು ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಎಸ್.ಎಸ್.ಎಲ್.ಸಿ ವಿದ್ಯಾರ್ಹತೆಯ ತತ್ಸಮಾನ ವಿದ್ಯಾರ್ಹತೆ/ ಕೋರ್ಸ್‌ಗಳೆಂದು ಸ್ಪಷ್ಟಪಡಿಸಲಾಗಿರುತ್ತದೆ. .

1. ಸಿ.ಬಿ.ಎಸ್.ಇ ಮತ್ತು ಐ.ಸಿ.ಎಸ್.ಇ ಮಂಡಳಿಯು ನಡೆಸುವ ಕ್ಲಾಸ್ 10 ಪರೀಕ್ಷೆ.

2. ಇತರೆ ರಾಜ್ಯ ಸರ್ಕಾರದ ಪರೀಕ್ಷಾ ಮಂಡಳಿಗಳಿಂದ ನಡೆಸುವ ಕ್ಲಾಸ್‌ 10 ಪರೀಕ್ಷೆ.

3. ನ್ಯಾಷನಲ್ ಇನ್‌ಸ್ಟಿಟೂಟ್ ಆಫ್ ಓಪನ್ ಸೂಲಿಂಗ್ (NIOS) ವತಿಯಿಂದ ನಡೆಸುವ ಪ್ರೌಢ ಶಿಕ್ಷಣ ಮಟ್ಟದ ಕೋರ್ಸ್.

4. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಪ್ರೌಢ ಶಿಕ್ಷಣ ಮಟ್ಟದ ಕೋರ್ಸ್ (KOS)

ಟಿಪ್ಪಣಿ :

ಕರ್ನಾಟಕ ಸರ್ಕಾರದ ಸುತ್ತೋಲೆ ಸಂಖ್ಯೆ ಸಿಆಸುಇ 81 ಸೇವನೆ 2017, ದಿನಾಂಕ 27-02-2018 ರನ್ವಯ ವಿದ್ಯಾರ್ಹತೆಯನ್ನು ಹೊಂದದೆ ಇರುವ ಅಭ್ಯರ್ಥಿಗಳು ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರೆ ಅಂತಹ ಅಭ್ಯರ್ಥಿಗಳ ಅರ್ಜಿಗಳನ್ನು ತಿರಸ್ಕರಿಸಲಾಗುವುದು ಹಾಗೂ ಅಂತಹ ಅಭ್ಯರ್ಥಿಗಳ ಅರ್ಜಿಗಳನ್ನು ನೇಮಕಾತಿಗೆ ಪರಿಗಣಿಸಲಾಗುವುದಿಲ್ಲ.

(ಆ) ಕನ್ನಡ ಓದಲು ಮತ್ತು ಬರೆಯಲು ತಿಳಿದಿರಬೇಕು.

5) ವಯೋಮಿತಿ (ಅರ್ಜಿ ಸಲ್ಲಿಸಲು ಕೊನೆಯ ದಿನಾಂಕಕ್ಕೆ ಅನುಗುಣವಾಗಿ):

(ಅ) ಕನಿಷ್ಟ ವಯೋಮಿತಿಃ 18 ವರ್ಷ

(ಆ) ಗರಿಷ್ಠ ವಯೋಮಿತಿಃ

ಸಾಮಾನ್ಯ ವರ್ಗ:35+5* ವರ್ಷಗಳು

▪️2A, 2B, 3A, 3B: 38 + 5* ವರ್ಷಗಳು

▪️ಪರಿಶಿಷ್ಟ ಜಾತಿ : ಪರಿಶಿಷ್ಟ ಪಂಗಡ : ಪ್ರವರ್ಗ-1 : 40 + 5* ವರ್ಷಗಳು

ವಿ.ಸೂಃ *ಸರ್ಕಾರದ ಆದೇಶ ಸಂಖ್ಯೆ: ಸಿಅಸುಇ 262 ಸೆನೆನಿ 2025, ದಿನಾಂಕಃ 29.01.2026 ರನ್ವಯ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಎಲ್ಲಾ ಪ್ರವರ್ಗಗಳ ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ನಿಗಧಿಪಡಿಸಿರುವ ಗರಿಷ್ಟ ವಯೋಮಿತಿಯಲ್ಲಿ ಒಂದು ಬಾರಿಯ ಕ್ರಮವಾಗಿ (as a one time measure) 5 ವರ್ಷಗಳ ಸಡಿಲಿಕೆ ನೀಡಲಾಗುವುದು.

*ಕರ್ನಾಟಕ ನಾಗರೀಕ ಸೇವೆಗಳು (ಸಾಮಾನ್ಯ ನೇಮಕಾತಿ) ನಿಯಮ 1977 ರಲ್ಲಿ ನಿರ್ದಿಷ್ಟಪಡಿಸಿರುವಂತೆ ಈ ಕೆಳಗಿನ ಸಂದರ್ಭಗಳಲ್ಲಿ ಸದರಿ ನಿಯಮಗಳಲ್ಲಿ ನಿಗದಿಪಡಿಸಿರುವ ಗರಿಷ್ಟ ವಯೋಮಿತಿಯನ್ನು ಕೆಳಗೆ ತಿಳಿಸಿರುವಷ್ಟರ ಮಟ್ಟಿಗೆ ಹೆಚ್ಚಿಸಲಾಗುವುದು.

6) ಅರ್ಜಿ ಸಲ್ಲಿಸುವ ವಿಧಾನ :

ಪಾವತಿಸಬೇಕಾದ ನಿಗದಿತ ಅರ್ಜಿ ಶುಲ್ಕ ಹಾಗೂ ವಿಧಾನಃ

ಅಭ್ಯರ್ಥಿಗಳ ವರ್ಗ ಅರ್ಜಿ ಶುಲ್ಕ
ಸಾಮಾನ್ಯ ವರ್ಗ (General) ₹200
ಪ್ರವರ್ಗ-2ಎ, 2ಬಿ, 3ಎ ಮತ್ತು 3ಬಿ ₹100
ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST), ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳು ಶುಲ್ಕದಿಂದ ಸಂಪೂರ್ಣ ವಿನಾಯಿತಿ

ಗಮನಿಸಿ: ಅರ್ಜಿ ಶುಲ್ಕವನ್ನು ಅಧಿಸೂಚನೆಯಲ್ಲಿ ಸೂಚಿಸಿರುವ ಆನ್‌ಲೈನ್ ಪಾವತಿ ವಿಧಾನಗಳ ಮೂಲಕ ಮಾತ್ರ ಪಾವತಿಸಬೇಕು.

ನ್ಯಾಯಾಲಯದ ವೆಬ್ಸೈಟ್ https://shivamogga.dcourts.gov.in/notice-category/recruitments/ರಲ್ಲಿ ನೀಡಲಾದ ಲಿಂಕ್ ಮುಖಾಂತರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ State Bank Collect ಮೂಲಕ ನಿಗದಿತ ಶುಲ್ಕವನ್ನು online payment through SBI e pay modes / net banking/ credit card /debit card / UPI ID ಸೌಲಭ್ಯದ ಮೂಲಕ ಪಾವತಿಸಕ್ಕದ್ದು. ಇದನ್ನು ಹೊರತುಪಡಿಸಿ ಯಾವುದೇ ನಗದು : 

ಡಿಮ್ಯಾಂಡ್ ಡ್ರಾಫ್ಟ್ : ಪೋಸ್ಟಲ್ ಆರ್ಡರ್ : ಮನಿ ಆರ್ಡರ್ : ಚಲನ್ ಇವುಗಳನ್ನು ಸ್ವೀಕರಿಸಲಾಗುವುದಿಲ್ಲ. ನಿಗದಿತ ಶುಲ್ಕ ಪಾವತಿಸದ ಅಭ್ಯರ್ಥಿಗಳ ಅರ್ಜಿಗಳನ್ನು ತಿರಸ್ಕರಿಸಲಾಗುವುದು ಹಾಗೂ ಒಮ್ಮೆ ಪಾವತಿ ಮಾಡಿದ ಶುಲ್ಕವನ್ನು ಮರುಪಾವತಿ ಮಾಡಲಾಗುವುದಿಲ್ಲ.

7) ಅಭರ್ಥಿಗಳು ON-LINE ಮೂಲಕ ಅರ್ಜಿ ಭರ್ತಿ ಮಾಡುವ ಮೊದಲು ಕೆಳಕಂಡ ಸೂಚನೆಗಳನ್ನು ಕಡ್ಡಾಯವಾಗಿ ತಿಳಿದುಕೊಳ್ಳತಕ್ಕದ್ದು.

1. ಅಭ್ಯರ್ಥಿಗಳು ಅರ್ಜಿಯನ್ನು ON-LINE ಮೂಲಕ ಸಲ್ಲಿಸುವ ಮೊದಲು ಕೊಟ್ಟಿರುವ ಎಲ್ಲಾ ಸೂಚನೆಗಳನ್ನು ಗಮನವಿಟ್ಟು ಓದಿಕೊಳ್ಳಬೇಕು ಮತ್ತು ತಪ್ಪಾಗದಂತೆ ನೋಡಿಕೊಳ್ಳುವುದು. ಸರಿಯಾದ ಮಾಹಿತಿ ನೀಡದೇ ಇರುವ ಮತ್ತು ಅಪೂರ್ಣ ಮಾಹಿತಿಯುಳ್ಳ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

2. ಅಭ್ಯರ್ಥಿಗಳು ವಿವಿಧ ವರ್ಗಗಳಿಗೆ ಒಂದೇ ಅರ್ಜಿಯನ್ನು ಸಲ್ಲಿಸಬೇಕು. ಸದರಿ ಅರ್ಜಿಯಲ್ಲಿಯೇ ತಾವು ಕ್ಷೇಮು ಮಾಡುವ ತಮ್ಮ ಮೀಸಲಾತಿಗಳ ಬಗ್ಗೆ ನಮೂದಿಸತಕ್ಕದ್ದು.

3. ಅಭ್ಯರ್ಥಿಗಳು ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸುವುದು ಹಾಗೂ ಇ-ಮೇಲ್ ಐಡಿಯನ್ನು ಹೊಂದಿದ್ದಲ್ಲಿ ನಮೂದಿಸುವುದು. ಒಂದು ವೇಳೆ SMS ಅಥವಾ ಇ-ಮೇಲ್ ಮುಖಾಂತರ ಅಭ್ಯರ್ಥಿಗಳಿಗೆ ಸಂದೇಶ ತಲುಪದಿದ್ದಲ್ಲಿ ಈ ಪ್ರಾಧಿಕಾರವು ಹೊಣೆಯಾಗುವುದಿಲ್ಲ.

4. ಅಭ್ಯರ್ಥಿಯು ಭಾವಚಿತ್ರ ಮತ್ತು ಸಹಿಯನ್ನು ಸ್ಕ್ಯಾನ್ ಮಾಡಿ ಆಪ್ ಲೋಡ್ ಮಾಡಲು ಈ ಕೆಳಕಂಡ ನಿರ್ದೇಶನಗಳನ್ನು ಪಾಲಿಸತಕ್ಕದ್ದು.

ಅ) ಬಣ್ಣದ ಭಾವಚಿತ್ರವು ಇತ್ತೀಚಿನದ್ದಾಗಿದ್ದು, ಅಳತೆಯಲ್ಲಿ 5 cm ಉದ್ದ x 3.6 cm ಅಗಲವುಳ್ಳದ್ದಾಗಿರಬೇಕು ಮತ್ತು 50 kb ಅಳತೆಯದ್ದಾಗಿರಬೇಕು ಹಾಗೂ ಅದು .jpg ನಮೂನೆಯಲ್ಲಿರಬೇಕು. ಭಾವಚಿತ್ರದ ಹಿಂಬದಿಯು ಬಿಳಿ ಬಣ್ಣದ್ದಾಗಿರಬೇಕು.

ಆ) ಭಾವಚಿತ್ರವನ್ನು ಸ್ಕಾನ್ ಮಾಡಿ ಅರ್ಜಿಗೆ ಅಪ್‌ಲೋಡ್ ಮಾಡಬೇಕು (ಯಾವುದೇ ಕಾರಣಕ್ಕೂ ಭಾವಚಿತ್ರದ ಮೇಲೆ ಸಹಿ ಮಾಡಬಾರದು)

ಇ) ಅಭ್ಯರ್ಥಿಯು ಕಪ್ಪು ಬಾಲ್‌ಪಾಯಿಂಟ್ ಪೆನ್ನಿನಲ್ಲಿ ಬಿಳಿ ಹಾಳೆಯ ಮೇಲೆ ಸಹಿ ಮಾಡಿ (2.5 cm ಉದ್ದ x 7.5 cm ಅಗಲವುಳ್ಳದ್ದಾಗಿರಬೇಕು ಮತ್ತು 26 kb ಅಳತೆಯದ್ದಾಗಿರಬೇಕು ಹಾಗೂ ಅದು .jpg ನಮೂನೆಯಲ್ಲಿರಬೇಕು.) ಅಪ್‌ಲೋಡ್ ಮಾಡಬೇಕು

5. ಅಭ್ಯರ್ಥಿಯು, ಅನ್ ಲೈನ್ ಅರ್ಜಿಯನ್ನು ಸಲ್ಲಿಸುವ ಸಂದರ್ಭದಲ್ಲಿ ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ನಡೆಸುವ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಅಥವಾ ತತ್ಸಮಾನ ಪರೀಕ್ಷೆಯ ಅಂಕಪಟ್ಟಿಯನ್ನು ಸ್ಕ್ಯಾನ್ ಮಾಡಿ ಪಿಡಿಎಫ್ ನಮೂನೆಯಲ್ಲಿ ತಪ್ಪದೇ ಅಪ್ಲೋಡ್ ಮಾಡತಕ್ಕದ್ದು ಹಾಗೂ ಅಪ್ಲೋಡ್ ಮಾಡಿದ ಪ್ರತಿಯು ಸ್ಪಷ್ಟವಾಗಿರತಕ್ಕದ್ದು.

6. ತದನಂತರ ಅಭ್ಯರ್ಥಿಯು ON – LINE ಅರ್ಜಿಯಲ್ಲಿ ಕೋರಲಾದ ಎಲ್ಲಾ ಮಾಹಿತಿಗಳನ್ನೂ ಭರ್ತಿ ಮಾಡಿ ನಿಗದಿತ ಶುಲ್ಕ ಪಾವತಿಸಲು ಅರ್ಜಿಯಲ್ಲಿ ತಿಳಿಸಿರುವಂತೆ ಕ್ರಮ ಕೈಗೊಳ್ಳುವುದು. ತದನಂತರ ಅರ್ಜಿಯನ್ನು ಹಾಗೂ ಆನ್ ಲೈನ್ ನಲ್ಲಿ ಶುಲ್ಕವನ್ನು ತುಂಬಿದ ಪ್ರತಿಯನ್ನು down load ಮಾಡಿಕೊಂಡು ನೇಮಕಾತಿ ಪ್ರಕ್ರಿಯೆ ಮುಗಿಯುವವರೆಗೂ ತಮ್ಮ ಹತ್ತಿರ ಕಾಯ್ದಿರಿಸಿಕೊಳ್ಳತಕ್ಕದ್ದು ಹಾಗೂ ಸಂದರ್ಶನದ ಸಮಯದಲ್ಲಿ ಹಾಜರುಪಡಿಸತಕ್ಕದ್ದು.

7. ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದವರೆಗೂ ವಿಳಂಬ ಮಾಡದೇ ಮುಂಚಿತವಾಗಿ ಅರ್ಜಿಗಳನ್ನು ಸಲ್ಲಿಸತಕ್ಕದ್ದು. ಒಮ್ಮೆ ಶುಲ್ಕವನ್ನು ಆನ್ ಲೈನ್ SBI e-pay ನಲ್ಲಿ ಪಾವತಿಸಿದ ನಂತರ ಅದನ್ನು ಯಾವುದೇ ಸಂದರ್ಭದಲ್ಲಿ ಹಿಂದಿರುಗಿಸಲಾಗುವುದಿಲ್ಲ.

8. ನ್ಯಾಯಾಲಯದ ಅಧಿಕೃತ ವೆಬ್ ಸೈಟ್ ನಲ್ಲಿ ಅರ್ಜಿಯನ್ನು ಆನ್ ಲೈನ್ ಮೂಲಕ ನೋಂದಾಯಿಸಲು ಸಲ್ಲಿಸಲು ಹಾಗೂ ಶುಲ್ಕವನ್ನು ಪಾವತಿಸಲು ದಿನಾಂಕಃ24.08.2026 ರ ರಾತ್ರಿ 11.59 ರವರೆಗೆ ಅವಕಾಶವಿರುತ್ತದೆ.

9. ಅರ್ಹ ಅಭ್ಯರ್ಥಿಗಳಿಗೆ SMS & E-Mail ಮುಖಾಂತರ ಮಾಹಿತಿ ನೀಡಲಾಗುವುದು. ಸಂದರ್ಶನಕ್ಕೆ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ನ್ಯಾಯಾಲಯದ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುವುದು. ಸದರಿ ಪಟ್ಟಿಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುವುದು.

10. ಆನ್ ಲೈನ್ ಹೊರತುಪಡಿಸಿ ಇತರೆ ಯಾವುದೇ ವಿಧಾನದಲ್ಲಿ ಕಳುಹಿಸಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

11. ಅಭ್ಯರ್ಥಿಗಳು ಯಾವುದೇ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರ ಅಥವಾ ಸಾರ್ವಜನಿಕ ಉದ್ದಿಮೆಗಳಲ್ಲಿ ಉದ್ಯೋಗ ಹೊಂದಿದ್ದರೆ, ಅಂತಹ ಅಭ್ಯರ್ಥಿಗಳು ಆನ್ ಲೈನ್ ನಲ್ಲಿ ಅರ್ಜಿಯನ್ನು ಭರ್ತಿಮಾಡುವ ಸಂಧರ್ಭದಲ್ಲಿ ‘ಹೌದು’ ಅಥವಾ ‘ಇಲ್ಲ’ ಎಂಬುದನ್ನು ನಿಗದಿತ ಕಾಲಂನಲ್ಲಿ ನಮೂದಿಸತಕ್ಕದ್ದು ಮತ್ತು ಅವರು ಆಯ್ಕೆಗೊಂಡ ಸಂದರ್ಭದಲ್ಲಿ, ಕರ್ನಾಟಕ ಸಿವಿಲ್ ಸೇವೆಗಳು (ಸಾಮಾನ್ಯ ನೇಮಕಾತಿ) ನಿಯಮಗಳು 1977ರ ತಿದ್ದುಪಡಿಯಾದ ನಿಯಮ 11ರ ಪ್ರಕಾರ ಅವರು ಕರ್ತವ್ಯ ನಿರ್ವಹಿಸುತ್ತಿರುವ ಸಂಬಂಧಿತ ಇಲಾಖೆಯಿಂದ “ನಿರಪೇಕ್ಷಣ ಪತ್ರ’ವನ್ನು ಹಾಜರುಪಡಿಸತಕ್ಕದ್ದು.

12. ಪರಿಶಿಷ್ಟ ಜಾತಿಃ ಪರಿಶಿಷ್ಟ ಪಂಗಡಃ ಪ್ರವರ್ಗ-1:2 ಎ:2 ಬಿ:3 ಎ:3 ಬಿ ಅಡಿಯಲ್ಲಿ ಮೀಸಲಾತಿಯನ್ನು ಕ್ಲೇಮು ಮಾಡುವ ಅಭ್ಯರ್ಥಿಗಳು, ಕರ್ನಾಟಕ ಸರ್ಕಾರವು ನಿಗದಿಪಡಿಸಿರುವ ನಮೂನೆಯಲ್ಲಿ ಮತ್ತು ಸಕ್ಷಮ ಪ್ರಾಧಿಕಾರವು ನೀಡಿದ ಪ್ರಮಾಣಪತ್ರವನ್ನು ಹೊಂದಿರತಕ್ಕದ್ದು.

13. ಗ್ರಾಮೀಣ, ಅಂಗವಿಕಲ, ಕನ್ನಡ ಮಾಧ್ಯಮ, ಯೋಜನಾ ನಿರಾತ್ರಿತ, ಮಾಜಿ ಸೈನಿಕ ಹಾಗೂ ತ್ರತೀಯ ಲಿಂಗಿ ಅಭ್ಯರ್ಥಿಗಳ ಅಡಿಯಲ್ಲಿ ಮೀಸಲಾತಿಯನ್ನು ಕ್ಷೇಮು ಮಾಡುವ ಅಭ್ಯರ್ಥಿಗಳು ಸಕ್ಷಮ ಪ್ರಾಧಿಕಾರಗಳು ನೀಡಿದ ಪ್ರಮಾಣಪತ್ರಗಳನ್ನು ಹೊಂದಿರತಕ್ಕದ್ದು. ಗ್ರಾಮೀಣ ಪ್ರವರ್ಗದ ಅಡಿಯಲ್ಲಿ ಮೀಸಲಾತಿಯನ್ನು ಕ್ಷೇಮು ಮಾಡುವ ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳು ಕೆನೆಪದರ ಪ್ರಮಾಣಪತ್ರವನ್ನು (Creamy Layer Certificate) ಸಲ್ಲಿಸತಕ್ಕದ್ದು.

14. ಮೇಲ್ಕಂಡ ಕ್ರಮ ಸಂಖ್ಯೆ 12 ಹಾಗೂ 13ರ ಅಡಿಯಲ್ಲಿ ಪ್ರಯೋಜನಗಳನ್ನು ಕ್ಷೇಮು ಮಾಡುವ ಅಭ್ಯರ್ಥಿಗಳು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದಂದು ಅಥವಾ ಅದಕ್ಕಿಂತ ಮುಂಚೆ ಸಕ್ಷಮ ಪ್ರಾಧಿಕಾರಿಗಳು ನೀಡಿದ ಸಂಬಂಧಪಟ್ಟ ಪ್ರಮಾಣಪತ್ರಗಳನ್ನು ಹೊಂದಿರತಕ್ಕದ್ದು.

15. ವಿಕಲಚೇತನರು : ಮಾಜಿ ಸೈನಿಕರು : ವಿಧವೆಯರು, ವಯೋಮಿತಿ ಸಡಿಲಿಕೆಗಾಗಿ ಸಕ್ಷಮ ಪ್ರಾಧಿಕಾರಗಳು ನೀಡಿದ ಪ್ರಮಾಣಪತ್ರಗಳನ್ನು ಹೊಂದಿರತಕ್ಕದ್ದು.

16. ಮೌಖಿಕ ಪರೀಕ್ಷೆಯ ಸಮಯದಲ್ಲಿ ದಾಖಲೆಗಳ ಪರಿಶೀಲನೆಗಾಗಿ ಕರೆಯಲ್ಪಡುವ ಅಭ್ಯರ್ಥಿಗಳು, ಶೈಕ್ಷಣಿಕ ವಿದ್ಯಾರ್ಹತೆ, ಜನ್ಮ ದಿನಾಂಕವನ್ನು ತೋರಿಸಲು ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ ಮೀಸಲಾತಿಗೆ ಸಂಬಂಧಿಸಿದಂತೆ ಕ್ಷೇಮು ಮಾಡಿದ ಮೀಸಲಾತಿಗಳು, ಇವುಗಳಿಗೆ ಸಂಬಂಧಿಸಿದಂತೆ ಅಗತ್ಯ ಮೂಲ ದಾಖಲೆಗಳನ್ನು ಪರಿಶೀಲನೆಗಾಗಿ ಸಲ್ಲಿಸತಕ್ಕದ್ದು, ಪರಿಶೀಲನೆ ಮಾಡುವಾಗ ಅರ್ಜಿದಾರರು ಅರ್ಜಿಯಲ್ಲಿ ಒದಗಿಸಿರುವ ಮಾಹಿತಿಯು ಸುಳ್ಳೆಂದು ಕಂಡುಬಂದಲ್ಲಿ, ಆಗ ಅವರ ಅಭ್ಯರ್ಥಿಕೆಯು ತಿರಸ್ಕೃತವಾಗುತ್ತದೆ ಹಾಗೂ ಅವರು ಸುಳ್ಳು ಮಾಹಿತಿ ನೀಡಿದ್ದಕ್ಕಾಗಿ ಕ್ರಿಮಿನಲ್ ಪ್ರಾಸಿಕ್ಯೂಷನ್ ಗೂ ಸಹಾ ಗುರಿಯಾಗಬೇಕಾಗುತ್ತದೆ.

17. ಅಭ್ಯರ್ಥಿಗಳು ತಮ್ಮ 10ನೇ ತರಗತಿಯ ಅಂಕಪಟ್ಟಿಯಲ್ಲಿ ಅಂಕಗಳು ಶ್ರೇಣಿಯಲ್ಲಿದ್ದರೆ ಅಥವಾ CGPA ಆಗಿದ್ದರೆ, ಸಂಬಂಧಪಟ್ಟ ಪ್ರಾಧಿಕಾರದಿಂದ ಅಂಕಗಳಾಗಿ ಪರಿವರ್ತಿಸಿದ ಅಂಕಪಟ್ಟಿಯನ್ನು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದಂದು ಅಥವಾ ಅದಕ್ಕಿಂತ ಮುಂಚೆಯೇ ಪಡೆದು, ಗರಿಷ್ಠ ಅಂಕಗಳು, ಪಡೆದ ಅಂಕಗಳು ಮತ್ತು ಒಟ್ಟು ಶೇಕಡಾವಾರನ್ನು ಕಡ್ಡಾಯವಾಗಿ ನಿಗದಿತ ಕಾಲಂನಲ್ಲಿ ನಮೂದಿಸಬೇಕು.

18. ಅಭ್ಯರ್ಥಿಯು ನೇಮಕಾತಿ ಸಂಬಂಧದಲ್ಲಿ ಯಾವುದೇ ಅಕ್ರಮ ಮತ್ತು ಅನುಚಿತ ಮಾರ್ಗವನ್ನು ಅವಲಂಬಿಸಿರುವುದು ಕಂಡುಬಂದಲ್ಲಿ ಅಂತಹವರನ್ನು ನೇಮಕಾತಿಗೆ ಪರಿಗಣಿಸಲಾಗುವುದಿಲ್ಲ.

8) ಪರಿವೀಕ್ಷಣಾ ಅವಧಿಃ

ಆಯ್ಕೆಯಾದ ಅಭ್ಯರ್ಥಿಗಳು ಕರ್ನಾಟಕ ಸೇವಾ ನಿಯಮ (ಪರಿವೀಕ್ಷಣೆ ನಿಯಮಗಳು) 1977 ರ ಅವಧಿಗೆ ಅಥವಾ ಅಗತ್ಯವಿದ್ದರೆ ವಿಸ್ತರಿಸಬಹುದಾದ ಅವಧಿಗೆ ಪ್ರಕಾರ ಎರಡು ವರ್ಷಗಳ ಪರಿವೀಕ್ಷಣಾರ್ಥಿಗಳಾಗಿರುತ್ತಾರೆ.

9) ಪಿಂಚಣಿ ಸೌಲಭ್ಯಃ

1. ಸರ್ಕಾರದ ಆದೇಶ ಸಂಖ್ಯೆ ಎಫ್.ಡಿ. (ಎಸ್.ಪಿ.ಎಲ್)/04 ಪಿ/ಇ/ಟಿ/2025, ದಿನಾಂಕ:31.03.2006 ಮತ್ತು ಸಂಬಂಧಿಸಿದ ಆದೇಶಗಳು.

2. ಸರ್ಕಾರದ ಆದೇಶ ಸಂಖ್ಯೆ ಆಇ 34 ಪಿಇಎಸ್ 2018, ದಿನಾಂಕ23.06.2018 ರಂತೆ ಮತ್ತು ಸಂಬಂಧಿಸಿದ ಆದೇಶಗಳು ಅನ್ವಯಿಸುವುದು.

10) ಆಯ್ಕೆ ವಿಧಾನಃ

ಅಭ್ಯರ್ಥಿಗಳ ಆಯ್ಕೆಯು ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮ, 1977 ಹಾಗೂ ಕರ್ನಾಟಕ ಅಧೀನ ನ್ಯಾಯಾಲಯಗಳ (ಲಿಪಿಕ ಮತ್ತು ಇತರೆ ಹುದ್ದೆಗಳ) (ನೇಮಕಾತಿ) ನಿಯಮ,1982, ಹಾಗೂ ಕರ್ನಾಟಕ ಅಧೀನ ನ್ಯಾಯಾಲಯಗಳ (ಲಿಪಿಕ ಮತ್ತು ಇತರೆ ಹುದ್ದೆಗಳ (ನೇಮಕಾತಿ) (ತಿದ್ದುಪಡಿ) ನಿಯಮ 2007 ಹಾಗೂ 2021 ರ ಪ್ರಕಾರ.

ಕನ್ನಡ ಓದಲು ಮತ್ತು ಬರೆಯಲು ಅಭ್ಯರ್ಥಿ ಹೊಂದಿರುವ ಸಾಮರ್ಥ್ಯ ಮತ್ತು ಸಾಮಾನ್ಯ ಜ್ಞಾನದ ಬಗ್ಗೆ ಸಂದರ್ಶನ.

ಅರ್ಹತಾ ಪರೀಕ್ಷೆಯಲ್ಲಿ ಗಳಿಸಿರುವ ಒಟ್ಟು ಶೇಕಡಾವಾರು ಅಂಕಗಳ ಆಧಾರದ ಮೇಲೆ ಒಂದು ಹುದ್ದೆಗೆ 10 ಅಭ್ಯರ್ಥಿಗಳಂತೆ (1:10 ರ ಅನುಪಾತದಲ್ಲಿ) ಅತೀ ಹೆಚ್ಚು ಅಂಕ ಪಡೆದ ಅಭ್ಯರ್ಥಿಗಳನ್ನು ಪ್ರಕಟಿಸಿರುವ ಹುದ್ದೆಗಳಿಗೆ ಅನುಗುಣವಾಗಿ ಸಂದರ್ಶನಕ್ಕೆ ಕರೆಯಲಾಗುವುದು. ಸಂದರ್ಶನದಲ್ಲಿ ಗಳಿಸುವ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ಸಂದರ್ಶನವು 10 ಅಂಕಗಳನ್ನು ಒಳಗೊಂಡಿರುತ್ತದೆ.

ವಿಶೇಷ ಸೂಚನೆಃ ಈ ಅಧಿಸೂಚನೆಗೆ ಸಂಬಂಧಿಸಿದಂತೆ ಹೊರಡಿಸಲಾಗುವ ನೇಮಕಾತಿ ಆದೇಶವು ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯದ W.P.No.200448/2025, 17968/2025 ಹಾಗೂ 3145/2023 ರ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ.

Shimoga District Court

Important Links Access
📄 Notification CLICK HERE
📝 Online Application CLICK HERE
🌐 Official Website CLICK HERE
ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!