SSLC Preparatory Exam–2 and 3 2025–26 ರಾಜ್ಯಮಟ್ಟದ ಪ್ರಾಮಾಣಿತ ಕಾರ್ಯಚರಣಾ ವಿಧಾನ (SOP)

SSLC Preparatory Exam–2 and 3 2025–26 ರಾಜ್ಯಮಟ್ಟದ ಪ್ರಾಮಾಣಿತ ಕಾರ್ಯಚರಣಾ ವಿಧಾನ (SOP)

SSLC Preparatory Exam–2 and 3 2025–26: 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಪೂರ್ವಸಿದ್ಧತಾ ಪರೀಕ್ಷೆ-1ನ್ನು ದಿನಾಂಕ: 05.01.2026 ರಿಂದ 10.01.2026 ರವರೆಗೆ ನಡೆಸಲಾಗಿರುತ್ತದೆ. ಪೂರ್ವ ಸಿದ್ಧತಾ ಪರೀಕ್ಷೆಗೆ ಮುಖ್ಯ ಪರೀಕ್ಷೆಯ ಮಾದರಿಯಂತೆ ಪ್ರಶ್ನೆ ಪತ್ರಿಕೆಗಳನ್ನು ಮಂಡಲಿಯಿಂದ ಸಿದ್ದಪಡಿಸಿ, ಅಯಾ ದಿನದ ಪ್ರಶ್ನೆಪತ್ರಿಕೆಯನ್ನು ವೇಳಾಪಟ್ಟಿಯಂತೆ ವಿಷಯವಾರು ಪ್ರಶ್ನೆಪತ್ರಿಕೆಯನ್ನು ಪರೀಕ್ಷಾ ದಿನದಂದು ಪೂರ್ವಾಹ್ನ 07.00 ಗಂಟೆಗೆ ಪ್ರೌಢಶಾಲೆಗಳ ಮುಖ್ಯಶಿಕ್ಷಕರ ಶಾಲಾ ಲಾಗಿನ್ನಲ್ಲಿ ಅಪ್‌ ಲೋಡ್ ಮಾಡಲಾಗಿತ್ತು. ಸಂಬಂಧಿಸಿದ ಪ್ರೌಢ ಶಾಲಾ ಮುಖ್ಯ ಶಿಕ್ಷಕರು ಪ್ರಶ್ನೆಪತ್ರಿಕೆಯನ್ನು ಮುದ್ರಿಸಿಕೊಂಡು ಪೂರ್ವ ಸಿದ್ಧತಾ ಪರೀಕ್ಷೆಯನ್ನು ನಡೆಸಲು ಅಗತ್ಯ ಕ್ರಮವಹಿಸಲು ಉಲ್ಲೇಖಿತ-1ರ ಮಾರ್ಗಸೂಚಿಯಲ್ಲಿ ವಿವರವಾಗಿ ತಿಳಿಸಲಾಗಿತ್ತು.

ಡೌನ್‌ಲೋಡ್ ಮಾಡಿಕೊಂಡಿರುವ ಪ್ರಶ್ನೆಪತ್ರಿಕೆಯ ಮೇಲೆ ಸಂಬಂಧಿಸಿದ ಶಾಲಾ ಸಂಕೇತ Watermark ಬರುವಂತೆ ಕ್ರಮವಹಿಸಲಾಗಿತ್ತು. ಯಾವುದಾದರೂ ಶಾಲೆಯ ಪ್ರಶ್ನೆಪತ್ರಿಕೆಗಳು ಪರೀಕ್ಷಾ ಪೂರ್ವದಲ್ಲಿ ಮತ್ತು ಪರೀಕ್ಷಾ ಸಂದರ್ಭದಲ್ಲಿ ಸೋರಿಕೆಯಾದಲ್ಲಿ ಸಂಬಂಧಿಸಿದ ಶಾಲಾ ಮುಖ್ಯ ಶಿಕ್ಷಕರ ಮೇಲೆ ಮತ್ತು ಇದಕ್ಕೆ ಸಹಕರಿಸಿದವರ ವಿರುದ್ಧ ನಿಯಮಾನುಸಾರ ಕ್ರಮ ಜರುಗಿಸಲಾಗುವುದೆಂದು ತಿಳಿಸಲಾಗಿತ್ತು. ಆದಾಗ್ಯೂ ಸಹ ಪೂರ್ವಸಿದ್ಧತಾ ಪರೀಕ್ಷೆ-1ರಲ್ಲಿ ಕೆಲವು ಶಾಲೆಯ ಮುಖ್ಯೋಪಾಧ್ಯಾಯರು ಪ್ರಶ್ನೆಪತ್ರಿಕೆಯನ್ನು ಡೌನ್‌ಲೋಡ್ ಮಾಡಿಕೊಂಡು ಪರೀಕ್ಷಾ ಪ್ರಾರಂಭವಾಗುವ ಸಮಯಕ್ಕಿಂತ ಮುಂಚಿತವಾಗಿ ಸೋರಿಕೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವುದು ಕಂಡುಬಂದಿರುತ್ತದೆ. ಈ ರೀತಿಯಾಗಿ ಪ್ರಶ್ನೆಪತ್ರಿಕೆಗಳು ಸೋರಿಕೆ ಮಾಡಿರುವುದರಿಂದ ಇಲಾಖೆಗೆ ಮುಜುಗರ ಉಂಟಾಗಿರುತ್ತದೆ. ಈ ಕೃತ್ಯವನ್ನು ಇಲಾಖೆಯು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಸೈಬರ್ ಆರ್ಥಿಕ ಮತ್ತು ಮಾದಕ ಅಪರಾಧಗಳ ಪೊಲೀಸ್ ಠಾಣೆಯಲ್ಲಿ ಈಗಾಗಲೇ ದೂರು ದಾಖಲಿಸಿ, ಕೃತ್ಯವೆಸಗಿದ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿರುತ್ತದೆ.

ಎಸ್.ಎಸ್.ಎಲ್.ಸಿ. ಪೂರ್ವಸಿದ್ಧತಾ ಪರೀಕ್ಷೆ-2 ಮತ್ತು 3 ನ್ನು ಆಯುಕ್ತರ ಕಛೇರಿಯ ಮೇಲ್ವಿಚಾರಣೆಯಲ್ಲಿ ನಡೆಸಲಾಗುತ್ತಿದೆ. ಈ ಸಂಬಂಧ ಆಯುಕ್ತಾಲಯದ ಹಂತದಲ್ಲಿ ಪರೀಕ್ಷಾ ಮೇಲ್ವಿಚಾರಣೆಗೆ ನೋಡಲ್ ಅಧಿಕಾರಿಯನ್ನಾಗಿ ನಿರ್ದೇಶಕರು (ಪ್ರೌಢ ಶಿಕ್ಷಣ), ಆಯುಕ್ತರ ಕಛೇರಿ, ನೃಪತುಂಗ ರಸ್ತೆ, ಬೆಂಗಳೂರು ಇವರನ್ನು ನೇಮಿಸಲಾಗಿದೆ.

ಅಪರ ಆಯುಕ್ತರು, ಧಾರವಾಡ ಮತ್ತು ಅವರ ಆಯುಕ್ತರು, ಕಲಬುರ್ಗಿ ಇವರ ಕಛೇರಿ ವ್ಯಾಪ್ತಿಯ ವಿಭಾಗಗಳಿಗೆ ಸಂಬಂಧಿಸಿದಂತೆ ಆಯಾ ಆಯುಕ್ತಾಲಯದ ನಿರ್ದೇಶಕರನ್ನು ನೋಡಲ್ ಅಧಿಕಾರಿಗಳಾಗಿ ನೇಮಿಸಲಾಗಿದೆ. ಹಾಗೂ ಆಯಾ ವಿಭಾಗದ ವಿಭಾಗೀಯ ಸಹ ನಿರ್ದೇಶಕರು, ಇವರುಗಳು ಆಯಾ ವಿಭಾಗದ ಹಂತದಲ್ಲಿ ಸದರಿ ಪರೀಕ್ಷೆಯ ಮೇಲುಸ್ತುವಾರಿಯ ಜವಾಬ್ದಾರಿಯನ್ನು ವಹಿಸಿದೆ.

ಎಸ್.ಎಸ್.ಎಲ್.ಸಿ. ಪೂರ್ವಸಿದ್ಧತಾ ಪರೀಕ್ಷೆ-1 ರಲ್ಲಿ ನಡೆದ ರೀತಿಯ ಕೃತ್ಯಗಳು ಮರುಕಳಿಸದಂತೆ ಪೂರ್ವಸಿದ್ಧತಾ ಪರೀಕ್ಷೆ-2 ಮತ್ತು 3 ನ್ನು ನಡೆಸಲು ವಿವಿಧ ಹಂತದ ಅಧಿಕಾರಿಗಳು ಕೆಳಕಂಡಂತೆ ಪ್ರಾಮಾಣಿತ ಕಾರ್ಯಚರಣಾ ವಿಧಾನ (ಎಸ್.ಓ.ಪಿ) (Standard Operating Procedure) ವನ್ನು ಅನುಷ್ಠಾನಗೊಳಿಸತಕ್ಕದ್ದು ಹಾಗೂ ಯಾವುದೇ ಗೊಂದಲಕ್ಕೆ ಅವಕಾಶ ನೀಡದಂತೆ ಸುಸೂತ್ರವಾಗಿ ನಡೆಸತಕ್ಕದ್ದು:

ಜಿಲ್ಲಾ ಉಪನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಜವಾಬ್ದಾರಿಗಳು:

ಪೂರ್ವಸಿದ್ಧತಾ ಪರೀಕ್ಷೆ-2 ಮತ್ತು 3 ಕ್ಕೂ ಮುನ್ನ ಪ್ರಾಮಾಣಿತ ಕಾರ್ಯಚರಣಾ ವಿಧಾನ (ಎಸ್.ಓ.ಪಿ.) ಯಲ್ಲಿನ ಅಂಶಗಳಂತೆ ಕ್ರಮವಹಿಸಲು ತಮ್ಮ ಜಿಲ್ಲಾ / ತಾಲ್ಲೂಕು ವ್ಯಾಪ್ತಿಯ ಪ್ರೌಢಶಾಲೆಯ ಮುಖ್ಯಶಿಕ್ಷಕರೊಂದಿಗೆ ಸಭೆ ನಡೆಸಿ, ಪರೀಕ್ಷೆಯಲ್ಲಿ ಯಾವುದೇ ಅವ್ಯವಹಾರ ಮತ್ತು ಪ್ರಶ್ನೆಪತ್ರಿಕೆ ಸೋರಿಕೆಯ ಕೃತ್ಯಗಳು ನಡೆಯದಂತೆ ಕ್ರಮವಹಿಸಲು ತಿಳಿಸುವುದು.

ಪ್ರಶ್ನೆಪತ್ರಿಕೆ ಸೋರಿಕೆಯಾದಲ್ಲಿ ಅಂತಹ ಕೃತ್ಯವೆಸಗಿದವರ ವಿರುದ್ಧ ಕಾನೂನುಕ್ರಮ ಕೈಗೊಳ್ಳಲು ಕೂಡಲೇ ತಮ್ಮ ಜಿಲ್ಲಾ / ತಾಲ್ಲೂಕು ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಮಾಹಿತಿಯನ್ನು ಈ ಕಛೇರಿಗೆ ನೀಡುವುದು.

ಆರು ವಿಷಯಗಳ ಪರೀಕ್ಷಾ ದಿನದಂದು 10ನೇ ತರಗತಿ ವಿದ್ಯಾರ್ಥಿಗಳಿಗೆ ಬೆಳಿಗ್ಗೆ 9.00 ಗಂಟೆಗೆ ಶಾಲೆಯನ್ನು ಪ್ರಾರಂಭ ಮಾಡುವುದು.

2.ಡಯಟ್ ಪ್ರಾಂಶುಪಾಲರ ಜವಾಬ್ದಾರಿಗಳು:

ರಾಜ್ಯದ ಎಲ್ಲಾ ಡಯಟ್‌ಗಳ ಪ್ರಾಂಶುಪಾಲರುಗಳು ಪರೀಕ್ಷಾ ದಿನದಂದು ಅಯಾ ಡಯಟ್‌ಗಳ ಹಿರಿಯ ಉಪನ್ಯಾಸಕರು/ ಉಪನ್ಯಾಸಕರನ್ನು ಪರೀಕ್ಷಾ ದಿನಗಳಂದು ಪರೀಕ್ಷೆ ನಡೆಯುವ ಶಾಲೆಗಳಿಗೆ ಭೇಟಿ ನೀಡಿ ಪರೀಕ್ಷಾ ಕಾರ್ಯ ಪರಿಶೀಲಿಸಿ ವರದಿ ನೀಡಲು ಅಗತ್ಯ ನಿರ್ದೇಶನ ನೀಡುವುದು.

ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರೀಕ್ಷಾ ಚಟುವಟಿಕೆಗಳು ಪಾರರ್ದಶಕವಾಗಿ ಹಾಗೂ ಇಲಾಖಾ ಸೂಚನೆಯಂತೆ ನಡೆಯುತ್ತಿರುವ ಕುರಿತು ಮೇಲ್ವಿಚಾರಣೆ ಮಾಡುವುದು ಅಗತ್ಯ ಕಂಡುಬಂದಲ್ಲಿ ಕೂಡಲೇ ಉಪನಿರ್ದೇಶಕರು(ಆಡಳಿತ) ರವರ ಗಮನಕ್ಕೆ ತಂದು ಪರೀಕ್ಷಾ ಕಾರ್ಯದಲ್ಲಿ ಯಾವುದೇ ಲೋಪವಾಗದಂತೆ ಪರೀಕ್ಷಾ ಕಾರ್ಯದಲ್ಲಿ ತೊಡಗುವುದು.

ಶಾಲಾ ಮುಖ್ಯೋಪಾಧ್ಯಾಯರ ಕರ್ತವ್ಯಗಳು :

▪️ಎಸ್.ಎಸ್.ಎಲ್.ಸಿ ಪೂರ್ವಸಿದ್ಧತಾ ಪರೀಕ್ಷೆ-2ರ ಸಮಯ ಬದಲಾಗಿದ್ದು, ಬೆಳಗೆ, 11.00 ಗಂಟೆಗೆ ಪರೀಕ್ಷೆ ಪ್ರಾರಂಭವಾಗುವುದು ಅದರಂತೆ ವರಿಷ್ಕೃತ ವೇಳಾಪಟ್ಟಿಯನ್ನು ಮಂಡಲಿ ಜಾಲತಾಣದಲ್ಲಿ ಪ್ರಕಟಿಸಿದ್ದು, ಸದರಿ ವೇಳಾಪಟ್ಟಿಯನ್ನು ಡೌನ್‌ಲೋಡ್ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವುದು.

▪️ಆರು ವಿಷಯಗಳ ಪರೀಕ್ಷಾ ದಿನದಂದು 10ನೇ ತರಗತಿ ವಿದ್ಯಾರ್ಥಿಗಳಿಗೆ ಬೆಳಿಗೆ, 9.00 ಗಂಟೆಗೆ ಶಾಲೆಯನ್ನು ಪ್ರಾರಂಭ ಮಾಡುವುದು. ಯಾವುದೇ ವಿದ್ಯಾರ್ಥಿಯು ಪರೀಕ್ಷಾ ದಿನದಂದು ಗೈರು ಹಾಜರಾಗದಂತೆ ಕ್ರಮಕೈಗೊಂಡು, ಬೆಳಿಗ್ಗೆ 9.00 ಗಂಟೆಗೆ ಶಾಲೆಗೆ ಹಾಜರಾಗಿರುವುದನ್ನು ಖಾತರಿಪಡಿಸಿಕೊಳ್ಳುವುದು.

▪️ಪ್ರಶ್ನೆಪತ್ರಿಕೆಗಳನ್ನು ಆಯಾ ವಿಷಯದ ಪರೀಕ್ಷಾ ದಿನದಂದು ಪೂರ್ವಾಹ್ನ 09.30 ಗಂಟೆಗೆ ಮಂಡಲಿಯಿಂದ ಶಾಲಾ ಮುಖ್ಯಶಿಕ್ಷಕರ ಲಾಗಿನ್ಗೆ ಅಪ್‌ಲೋಡ್ ಮಾಡಲಾಗುವುದು. ಅಪ್‌ಲೋಡ್ ಮಾಡಲಾಗುವ ಪ್ರಶ್ನೆಪತ್ರಿಕೆಗಳನ್ನು ಸ್ವತ ಶಾಲಾ ಮುಖ್ಯಶಿಕ್ಷಕರೇ ತಮ್ಮ ಶಾಲಾ ಲಾಗಿನ್ ಮಾಡಿ ಮೊಬೈಲ್ ಸಂಖ್ಯೆಗೆ ಬರುವ ಓ.ಟಿ.ಪಿ. ನಮೂದಿಸುವ ಮೂಲಕ ಪ್ರಶ್ನೆಪತ್ರಿಕೆಗಳನ್ನು ಡೌನ್ಲೋಡ್ ಮಾಡಿಕೊಳ್ಳತಕ್ಕದು. ಆಯಾ ದಿನದ ವಿಷಯಗಳ ಪ್ರಶ್ನೆಪತ್ರಿಕೆಗಳು ಲಾಗಿನ್ನಲ್ಲಿ ಲಭ್ಯವಿರುವುದನ್ನು ಖಾತರಿಪಡಿಸಿಕೊಳ್ಳುವುದು.

▪️ಮುಖ್ಯ ಶಿಕ್ಷಕರು ತಮ್ಮ ಸ್ವಂತ ಮೊಬೈಲ್ ಸಂಖ್ಯೆಯನ್ನು ಮಾತ್ರ ಶಾಲಾ ಲಾಗಿನಿಂದ OTP ಪಡೆಯಲು ಉಪಯೋಗಿಸುವುದು. ಶಾಲಾ ಲಾಗಿನ್ ಮತ್ತು OTP ಯನ್ನು ಯಾರಿಗೂ ಹಂಚಿಕೊಳ್ಳಬಾರದು.

▪️ಪ್ರಶ್ನೆಪತ್ರಿಕೆಯನ್ನು ಮುಖ್ಯಶಿಕ್ಷಕರೇ ಖುದ್ದಾಗಿ ಡೌನ್‌ಲೋಡ್ ಮಾಡುವುದು ಪ್ರಶ್ನೆಪತ್ರಿಕೆಯನ್ನು ಯಾರಿಗೂ ಶೇರ್ ಮಾಡಕೂಡದು. ಹಾಗೂ ಶಾಲಾ ಸಂಕೇತದ (School Code) ವಾಟರ್ ಮಾರ್ಕ್ ಆಗಿ ಹೊಂದಿರುವ ಪ್ರಶ್ನೆ ಪತ್ರಿಕೆಗಳನ್ನು ಡೌನ್ ಲೋಡ್ ಮಾಡುವುದು.

▪️ಶಾಲಾ ಲಾಗಿನ್‌ಗೆ ಉಪಯೋಗಿಸುತ್ತಿರುವ ಮೊಬೈಲ್ ಸಂಖ್ಯೆಯು ಬದಲಾವಣೆಯಿದ್ದಲ್ಲಿ ಮನವಿ ಪತ್ರವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಮೇಲು ಸಹಿ ಮಾಡಿಸಿ ದಿನಾಂಕ:22.01.2026 ರೊಳಗೆ ಮಂಡಲಿಗೆ ಸಲ್ಲಿಸುವುದು.

▪️ಪ್ರಶ್ನೆಪತ್ರಿಕೆ ಮುದ್ರಣವನ್ನು ಗೌಪ್ಯತೆ ಕಾಪಾಡಿಕೊಂಡು ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಮುದ್ರಿಸಿಕೊಳ್ಳುವುದು.

▪️ಪ್ರಶ್ನೆಪತ್ರಿಕೆಗಳ ಮುದ್ರಣ ಸಂದರ್ಭದಲ್ಲಿ ಪೆನ್‌ಡ್ರೈವ್ / ಹಾರ್ಡ್ಡಿಸ್ಕ್ / ಮೊಬೈಲ್ ಫೋನ್ ಇತ್ಯಾದಿಗಳನ್ನು ಬಳಸದಂತೆ ಕ್ರಮವಹಿಸುವುದು. ಹಾಗೂ ಪ್ರಶ್ನೆಪತ್ರಿಕೆಗಳ ಮುದ್ರಣ ಕಾರ್ಯ ಆರಂಭವಾದ ಅದು ಮುಗಿಯುವವರೆಗೆ ಪ್ರಶ್ನೆಪತ್ರಿಕೆಗಳ ಮುದ್ರಣ ಕಾರ್ಯ ಹೊರತುಪಡಿಸಿ ಯಾವುದೇ ಬೇರೆ ಮುದ್ರಣ ಕಾರ್ಯ ನಡೆಸುವಂತಿಲ್ಲ.

▪️ಖಾಸಗಿ ವ್ಯಕ್ತಿಗಳು ಮುದ್ರಣ ಸ್ಥಳಕ್ಕೆ ಪ್ರವೇಶಿಸುವುದನ್ನು ನಿಷೇದಿಸುವುದು.

▪️ಮುದ್ರಣ ಕಾರ್ಯ ಮುಗಿದ ನಂತರ ಹೆಚ್ಚುವರಿಯಾಗಿ ಪ್ರಶ್ನೆಪತ್ರಿಕೆಗಳು ಉಳಿದಿದ್ದಲ್ಲಿ ಅವುಗಳನ್ನು ಸೂಕ್ತ ಭದ್ರತೆಯೊಂದಿಗೆ ಸುರಕ್ಷಿತವಾಗಿ ಸಂರಕ್ಷಿಸಿಕೊಂಡು ಪರೀಕ್ಷೆ ಮುಗಿದ ನಂತರ ಅವುಗಳನ್ನು ನಿಯಮಾನುಸಾರ ವಿಲೇ ಮಾಡುವುದು.

▪️ಪ್ರಶ್ನೆಪತ್ರಿಕೆಗಳು ಮುದ್ರಣ ಕಾರ್ಯ ಪೂರ್ಣಗೊಂಡ ನಂತರ ಪ್ರಶ್ನೆಪತ್ರಿಕೆಗಳ ಎಲ್ಲಾ ಮಾಹಿತಿಗಳನ್ನು అళిసి ಹಾಕಿರುವುದನ್ನು ಮತ್ತು ಯಾವುದೇ ಮಾಹಿತಿಯು ಗಣಕಯಂತ್ರ/ಪ್ರಿಂಟರ್‌ನಲ್ಲಿ ಉಳಿದುಕೊಳ್ಳದಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳುವುದು.

▪️ಮುದ್ರಣ ಕಾರ್ಯ ನಿರ್ವಹಿಸುವಾಗ ಸರಿಯಾಗಿ ಮುದ್ರಣ ಆಗದಿರುವ, ಬಳಸಲು ಯೋಗ್ಯವಲ್ಲದ ಅಥವಾ ಅಪೂರ್ಣವಾಗಿ ಮುದ್ರಿತವಾಗಿರುವ ಕಾಗದಗಳನ್ನು ಸಂಪೂರ್ಣವಾಗಿ ನಾಶಮಾಡುವುದು.

▪️ಪ್ರಶ್ನೆಪತ್ರಿಕೆ ಮುದ್ರಣ ಮತ್ತು ಪ್ಯಾಕಿಂಗ್ ಗೆ ಸಹಾಯಕ್ಕಾಗಿ ತಮ್ಮ ಶಾಲೆಯ ಒಬ್ಬರು ಶಿಕ್ಷಕರನ್ನು ನೋಡಲ್ ಶಿಕ್ಷಕರೆಂದು ನಿಯೋಜನೆ ಮಾಡಿಕೊಳ್ಳುವುದು. ಆದರೆ ನೋಡಲ್ ಶಿಕ್ಷಕರಿಗಾಗಲಿ /ಶಾಲಾ ಇತರೆ ಶಿಕ್ಷಕರಿಗಾಗಲಿ / ಶಾಲಾ ಆಡಳಿತ ಮಂಡಲಿಗಾಗಲಿ ಯಾವುದೇ ಕಾರಣಕ್ಕೂ ಶಾಲಾ ಲಾಗಿನ್ ಮತ್ತು OTP ನೀಡುವಂತಿಲ್ಲ. ಪ್ರಶ್ನೆಪತ್ರಿಕೆ ಮುದ್ರಣ ಮತ್ತು ವಿತರಣೆಯ ಪೂರ್ಣ ಜವಾಬ್ದಾರಿಯು ಶಾಲಾ ಮುಖ್ಯ ಶಿಕ್ಷಕರಾಗಿರುತ್ತದೆ.

▪️ಪ್ರಶ್ನೆಪತ್ರಿಕೆಯನ್ನು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಮುದ್ರಿಸಿದ ನಂತರ ನೋಡಲ್ ಶಿಕ್ಷಕರೆದುರು ಕೊಠಡಿವಾರು ಬೇಡಿಕೆ ಪಟ್ಟಿಯಂತೆ ಸುರಕ್ಷಿತವಾಗಿ ಪ್ಯಾಕಿಂಗ್ ಮಾಡಿ, ಪ್ಯಾಕಿಂಗ್ ಅನ್ನು ಬದಲಾಯಿಸಲಾಗದ ಸೀಲ್ ಅನ್ನು ಬಳಸಿ ಸೀಲಿಂಗ್ ಕಾರ್ಯದ ಬಳಿಕ ಸುರಕ್ಷಿತವಾಗಿಟ್ಟುಕೊಳ್ಳುವುದು. ಪರೀಕ್ಷಾ ಸಮಯ ಪ್ರಾರಂಭವಾಗುವವರೆಗೂ ಯಾವುದೇ ಕಾರಣಕ್ಕೂ ಪ್ರಶ್ನೆಪತ್ರಿಕೆ ಪ್ಯಾಕಿಂಗ್ ಓಪನ್ ಮಾಡದಂತೆ ಎಚ್ಚರಿಕೆ ವಹಿಸುವುದು.

▪️ಸೀಲ್ ಮಾಡಲಾದ ಪ್ರಶ್ನೆಪತ್ರಿಕೆ ಪ್ಯಾಕೆಟ್ ಗಳನ್ನು ಪರೀಕ್ಷಾ ಕೊಠಡಿಯ ಮೇಲ್ವಿಚಾರಕರಿಗೆ ಹಸ್ತಾಂತರಿಸಿ ಸ್ವೀಕೃತಿ ಪಡೆಯುವುದು. ನಂತರ ಪರೀಕ್ಷಾ ಕೊಠಡಿಯ ಮೇಲ್ವಿಚಾರಕರೇ ಸಂಪೂರ್ಣ ಜವಾಬ್ದಾರರಾಗಿರುತ್ತಾರೆ.

▪️ಪ್ರಶ್ನೆ ಪತ್ರಿಕೆಗಳನ್ನು ಯಾವುದೇ ವಿದ್ಯುನ್ಮಾನ ವಿಧಾನದಲ್ಲಿ ವರ್ಗಾವಣೆ ಮಾಡದಂತೆ ಶಾಲಾ ಮುಖ್ಯಶಿಕ್ಷಕರು ಎಚ್ಚರಿಕೆ ವಹಿಸುವುದು.

▪️ಪ್ರಶ್ನೆಪತ್ರಿಕೆಗಳನ್ನು ಒಂದೇ ಐಪಿ ವಿಳಾಸದಲ್ಲಿ ಒಂದೇ ಗಣಕಯಂತ್ರದಲ್ಲಿ ಡೌನ್ ಲೋಡ್ ಮಾಡುವುದು ಕಡ್ಡಾಯವಾಗಿರುತ್ತದೆ. ಕೇಂದ್ರ ಕಛೇರಿಯಿಂದ ಐಪಿ ವಿಳಾಸವನ್ನು ನಿಗಾವಹಿಸಲಾಗುವುದು. ಒಂದು ವೇಳೆ ಒಂದಕ್ಕಿಂತ ಹೆಚ್ಚು ಐಪಿ ವಿಳಾಸದಲ್ಲಿ ಡೌನ್‌ಲೋಡ್ ಮಾಡಿರುವುದು ಕಂಡುಬಂದಲ್ಲಿ ಅಂತಹ ಮುಖ್ಯಶಿಕ್ಷಕರ ಮೇಲೆ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು.

▪️ವಿದ್ಯಾರ್ಥಿಗಳು ಮತ್ತು ಸಹ ಶಿಕ್ಷಕರು ಪರೀಕ್ಷೆಗೆ ಮೊಬೈಲ್ ತರದಂತೆ ತಿಳಿಸುವುದು.

▪️ಶಾಲೆಯಲ್ಲಿ ಮೊಬೈಲ್ ಸ್ವಾಧಿನಾಧಿಕಾರಿಯಾಗಿ ಒಬ್ಬರು ಶಿಕ್ಷಕರನ್ನು ನೇಮಿಸುವುದು. ಒಂದು ವೇಳೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಮೊಬೈಲ್‌ನ್ನು ತಂದಿದ್ದಲ್ಲಿ ಪರೀಕ್ಷೆ ಪ್ರಾರಂಭಕ್ಕಿಂತ ಮುಂಚಿತವಾಗಿ ಪಡೆದು, ಪರೀಕ್ಷೆ ಮುಗಿಯುವವರೆವಿಗೂ ಸ್ವಾಧಿನಾಧಿಕಾರಿಗಳ ಸುಪರ್ದಿಯಲ್ಲಿ ಇಡತಕ್ಕದ್ದು.

▪️ಪರೀಕ್ಷಾ ನಂತರ ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ಶಾಲಾ ಹಂತದಲ್ಲಿ ಮಾಡುವುದು.

ನೋಡಲ್ ಶಿಕ್ಷಕರ ಜವಾಬ್ದಾರಿಗಳು:

▪️ಪೂರ್ವಸಿದ್ಧತಾ ಪರೀಕ್ಷೆ-2 ಮತ್ತು 3 ಕ್ಕೆ ಸಂಬಂಧಿಸಿದಂತೆ ಪ್ರಶ್ನೆಪತ್ರಿಕೆ ಮುದ್ರಣ, ಪ್ಯಾಕಿಂಗ್ ಮತ್ತು ವಿತರಣೆಗೆ ಖುದ್ದು ಹಾಜರಿದ್ದು, ಶಾಲಾ ಮುಖ್ಯ ಶಿಕ್ಷಕರಿಗೆ ಸಹಾಯ ಮಾಡುವುದು.

▪️ಪ್ರಶ್ನೆಪತ್ರಿಕೆ ಮುದ್ರಣ, ಪ್ಯಾಕಿಂಗ್ ಮತ್ತು ವಿತರಣೆಗೆ ಸಮಯದಲ್ಲಿ ಗೌಪ್ಯತೆಯನ್ನು ಕಾಪಾಡುವುದು. ಈ ಸಮಯದಲ್ಲಿ ಮೊಬೈಲ್ ಉಪಯೋಗಿಸಕೂಡದು.

▪️ಶಾಲಾ ಲಾಗಿನ್ ಮತ್ತು OTP ನಿರ್ವಹಣೆಯ ಕಾರ್ಯವನ್ನು ನೋಡಲ್ ಶಿಕ್ಷಕರು ನಿರ್ವಹಿಸುವಂತಿಲ್ಲ.

ವಿದ್ಯಾರ್ಥಿಗಳಿಗೆ ಸೂಚನೆಗಳು :

▪️ಪೂರ್ವ ಸಿದ್ಧತಾ ಪರೀಕ್ಷಾ ದಿನದಂದು 10ನೇ ತರಗತಿ ವಿದ್ಯಾರ್ಥಿಗಳು ಬೆಳಗ್ಗೆ 9.00 ಗಂಟೆಗೆ ಶಾಲೆಗೆ ಹಾಜರಾಗುವುದು.

▪️ಪರೀಕ್ಷೆಗೆ ವಿದ್ಯಾರ್ಥಿಗಳು ಮೊಬೈಲ್ ತರಬಾರದು.

▪️ಪರೀಕ್ಷಾ ಕೊಠಡಿಗೆ ಪುಸ್ತಕ ಮತ್ತು ಗೈಡ್ ಇವುಗಳನ್ನು ತರಬಾರದು.

▪️ಪರೀಕ್ಷಾ ಸಮಯಕ್ಕೆ ಮುನ್ನ ಯಾವುದೇ ಶಿಕ್ಷಕರು / ಪೋಷಕರು / ಕಿಡಿಗೇಡಿಗಳು ಪ್ರಶ್ನೆಪತ್ರಿಕೆ ನೀಡಿದ್ದಲ್ಲಿ ಸ್ವೀಕರಿಸಬಾರದು ಮತ್ತು ಇವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಬಾರದು.

ಕಾನೂನಾತ್ಮಕ ಕ್ರಮಗಳು:

ಪರೀಕ್ಷಾ ಕೇಂದ್ರದಿಂದ ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷಾ ಸಮಯದಲ್ಲಿ ನಕಲು ಮಾಡುವುದು, ಪ್ರಶ್ನೆಪತ್ರಿಕೆಯ ಫೋಟೋ ತೆಗೆಯುವುದು ಮತ್ತು ಪ್ರಶ್ನೆ ಪತ್ರಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ / ವಾಟ್ಸಾಪ್ ಮುಖಾಂತರ ಹರಿಬಿಡುವುದು, ಪರೀಕ್ಷಾ ಕೇಂದ್ರಗಳಲ್ಲಿ ಚೀಟಿಗಳನ್ನು ಸರಬರಾಜು ಮಾಡುವುದು ಇನ್ನಿತರ ಯಾವುದೇ ಪರೀಕ್ಷಾ ಅವ್ಯವಹಾರದ ಅಪರಾಧಕೃತ್ಯಕ್ಕೆ ಸಂಬಂಧಿಸಿದವರ ವಿರುದ್ಧ ಬಿಎನ್‌ಎಸ್ (ಭಾರತೀಯ ನ್ಯಾಯ ಸಂಹಿತೆ) ಕಾಯ್ದೆ 2023, ಮಾಹಿತಿ ತಂತ್ರಜ್ಞಾನ ಕಾಯ್ದೆ 2000, ಮತ್ತು ಮಂಡಳಿ ಕಾಯ್ದೆ 1966, ಕರ್ನಾಟಕ ಶಿಕ್ಷಣ ಕಾಯಿದೆ Karnataka Act No.18 of 2017 The Karnataka Education (Amendment) Act, 2017 ಮತ್ತು ಉಲ್ಲೇಖಿತ-2ರ ಸರ್ಕಾರದ ಆದೇಶ ಸಂಖ್ಯೆ ಇಡಿ 24 ಎಸ್ಎಲ್‌ಬಿ 2020 ದಿನಾಂಕ:18.03.2020ರನ್ವಯ ಮೊಕ್ಕದ್ಯಮ ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗುವುದು. ಹಾಗೂ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ)1957 ನಿಯಮದಂತೆ ಕ್ರಮ ಕೈಗೊಳ್ಳಲಾಗುವುದು.

▪️ವಿದ್ಯಾರ್ಥಿಗಳು ಪ್ರಶ್ನೆಪತ್ರಿಕೆಗಳನ್ನು ವ್ಯಾಟ್ಸ್ ಆಪ್/ ಯೂಟ್ಯೂಬ್/ ಇನ್ಸಾಗ್ರಾಂ ಅಥವಾ ಇನ್ನಿತರೆ ಯಾವುದೇ ಮಾಧ್ಯಮದಲ್ಲಿ ಪ್ರಸಾರ/ಪ್ರಚಾರ ಮಾಡಿದಲ್ಲಿ ಅಂತಹ ವಿದ್ಯಾರ್ಥಿಗಳ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು.

▪️ಅನುದಾನಿತ ಪ್ರೌಢಶಾಲೆಗಳು ಗೌಪ್ಯತೆಯನ್ನು ಕಾಯ್ದುಕೊಂಡಿರದಿದ್ದಲ್ಲಿ ಅಥವಾ ಪ್ರಶ್ನೆಪತ್ರಿಕೆಗಳನ್ನು ಬಹಿರಂಗಪಡಿಸಲು ಕಾರಣರಾದಲ್ಲಿ ಅಂತಹ ಶಾಲೆಯ ಮಾನ್ಯತೆಯನ್ನು ಹಿಂಪಡೆದು ಅನುದಾನ ಹಿಂಪಡೆಯಲು ನಿಯಮಾನುಸಾರ ಕ್ರಮ ವಹಿಸಲಾಗುವುದು.

▪️ಅನುದಾನ ರಹಿತ ಶಾಲೆಗಳು ಗೌಪ್ಯತೆಯನ್ನು ಕಾಯ್ದುಕೊಂಡಿರದಲ್ಲಿ ಅಥವಾ ಪ್ರಶ್ನೆಪತ್ರಿಕೆಗಳನ್ನು ಬಹಿರಂಗಪಡಿಸಲು ಕಾರಣರಾದಲ್ಲಿ ಶಾಲೆಯ ಮಾನ್ಯತೆಯನ್ನು ಶಾಶ್ವತವಾಗಿ ರದ್ದುಪಡಿಸಲಾಗುವುದು.

SSLC Preparatory Exam

 

CLICK HERE TO DOWNLOAD GUIDELINES

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!