SSLC–PUC Exam updates: 3 ಪರೀಕ್ಷೆಗಳ ಬದಲು 2 ಪರೀಕ್ಷೆಗಳು, ಪಾಸಿಂಗ್ ಅಂಕ ಇಳಿಕೆ – ಸರ್ಕಾರದ ತೀರ್ಮಾನ
SSLC–PUC ಹೊಸ ಪರೀಕ್ಷಾ ನಿಯಮ: 3 ಪರೀಕ್ಷೆಗಳ ಬದಲು 2 ಪರೀಕ್ಷೆಗಳು, ಪಾಸಿಂಗ್ ಅಂಕ ಇಳಿಕೆ – ಸರ್ಕಾರದ ತೀರ್ಮಾನ: ಪ್ರಸಕ್ತ ಶೈಕ್ಷಣಿಕ ವರ್ಷ ಕಳೆಯುತ್ತಿದ್ದು,
ಎಸ್ಸೆಸ್ಸೆಲ್ಸಿ-ಪಿಯುಸಿ ವಾರ್ಷಿಕ ಪರೀಕ್ಷೆಗಳು ಹತ್ತಿರ ಬರುತ್ತಿವೆ. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಈ ಹಿಂದೆ ಜಾರಿ ಮಾಡಲಾಗಿದ್ದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಮೂರು ಪೂರಕ ಪರೀಕ್ಷೆ ಪರಿಕಲ್ಪನೆಯನ್ನು ರಾಜ್ಯ ಶಿಕ್ಷಣ ಇಲಾಖೆ ಹಿಂತೆಗೆದುಕೊಂಡಿದೆ.
ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪೂರಕ ಪರೀಕ್ಷೆ ಎಂಬ ಪರಿಕಲ್ಪನೆ ತೆಗೆದು ಹಾಕಿದ್ದ ಶಿಕ್ಷಣ ಇಲಾಖೆ, ವರ್ಷಕ್ಕೆ ಒಂದು ವಾರ್ಷಿಕ ಪರೀಕ್ಷೆ ಬದಲಾಗಿ ವರ್ಷಕ್ಕೆ ಮೂರು ವಾರ್ಷಿಕ ಪರೀಕ್ಷೆಗಳನ್ನು ನಡೆಸಲು ತೀರ್ಮಾನಿಸಿತ್ತು. ಇದೀಗ ವರ್ಷಕ್ಕೆ ಮೂರು ಎಂಬ ಪರೀಕ್ಷಾ ಸೂತ್ರವನ್ನು ರಾಜ್ಯ ಸರ್ಕಾರ ಕೈಬಿಟ್ಟಿದೆ.
ಇನ್ನು ವರ್ಷಕ್ಕೆ ಎರಡು ಪರೀಕ್ಷೆಗಳು ಮಾತ್ರ ಇರಲಿವೆ. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳ ಉತ್ತೀರ್ಣ ಅಂಕಗಳನ್ನು ಶೇ. 35 ರಿಂದ ಶೇ. 33ಕ್ಕೆ ಇಳಿಕೆ ಮಾಡಲಾಗಿದೆ. ಪಾಸಿಂಗ್ ಅಂಕ ಕಡಿಮೆ ಮಾಡಿರುವ ಕಾರಣಕ್ಕೆ ಪರೀಕ್ಷೆ-3ನ್ನು ರದ್ದು ಮಾಡಲಾಗಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
SSLC- PUC ಉತ್ತೀರ್ಣ ಅಂಕ ಇಳಿಕೆ:
ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳ ಉತ್ತೀರ್ಣ ಅಂಕಗಳನ್ನು ಶೇ. 35 ರಿಂದ ಶೇ. 33ಕ್ಕೆ ಇಳಿಕೆ ಮಾಡಿದೆ. ಹೀಗಾಗಿ ಮೂರು ಪರೀಕ್ಷೆಗಳ ಅಗತ್ಯವಿಲ್ಲ ಎಂದು ಇಲಾಖೆ ಅಭಿಪ್ರಾಯ ಪಟ್ಟಿದೆ. ಹೀಗಾಗಿ ಮೂರು ಬಾರಿಯ ಪರೀಕ್ಷಾ ಸೂತ್ರ ಕೈಬಿಡಲಾಗಿದ್ದು, ವರ್ಷಕ್ಕೆ ಎರಡು ಪರೀಕ್ಷೆ ನಡೆಸಲು ನಿರ್ಧಾರ ಮಾಡಲಾಗಿದೆ. ಈಗಾಗಲೇ 2026ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ-1 ಮತ್ತು 2ರ ಅಂತಿಮ ವೇಳಾಪಟ್ಟಿ ಪ್ರಕಟವಾಗಿದೆ.
ಮೊದಲು ಪಿಯುಸಿ ಪರೀಕ್ಷೆ
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು 2025-26ನೇ ಸಾಲಿನ ಎರಡನೇ ಪಿಯುಸಿ ಮತ್ತು ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅಂತಿಮ ವೇಳಾಪಟ್ಟಿಯ ಪ್ರಕಾರ, ದ್ವಿತೀಯ ಪಿಯುಸಿ ಪರೀಕ್ಷೆಗಳು 2026ರ ಫೆಬ್ರವರಿ 28ರಂದು ಪ್ರಾರಂಭವಾಗಲಿದ್ದು, ಮಾರ್ಚ್ 17 ಕ್ಕೆ ಪರೀಕ್ಷೆಗಳು ಮುಕ್ತಾಯಗೊಳ್ಳಲಿದೆ.

ನಂತರ ಎಸ್ಸೆಸ್ಸೆಲ್ಸಿ ಪರೀಕ್ಷೆ:
ಪಿಯು ಪರೀಕ್ಷೆಯ ನಂತರ ಎಸ್ಸೆಸ್ಸೆಲ್ಸಿ ಪರೀಕ್ಷೆ 2026ರ ಮಾರ್ಚ್ 18ರಂದು ಆರಂಭವಾಗಿ ಏಪ್ರಿಲ್ 2 ರವರೆಗೆ ನಡೆಯಲಿವೆ. 2026ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆ-1 ಮತ್ತು ಪರೀಕ್ಷೆ-2ರ ಅಂತಿಮ ವೇಳಾಪಟ್ಟಿಗಾಗಿ ಶಿಕ್ಷಣ ಇಲಾಖೆಯ ಜಾಲತಾಣ www.kseab. karnataka.gov.inನಲ್ಲಿ ಗಮನಿಸಬಹುದು.