Teacher promotion: ಶಿಕ್ಷಕರ ಬಡ್ತಿ ಪ್ರಕ್ರಿಯೆಗೆ ತಡೆ!
Teacher promotion: ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 6 ರಿಂದ 8ನೇ ತರಗತಿಯ ಪದವೀಧರ ಪ್ರಾಥಮಿಕ ಶಿಕ್ಷಕರಿಗೆ ಪ್ರೌಢ ಶಾಲಾ ಸಹ ಶಿಕ್ಷಕರು ಗ್ರೇಡ್-2 ಹುದ್ದೆಗೆ ಬಡ್ತಿ ನೀಡುವ ಕುರಿತು ಉಲ್ಲೇಖ (3) ರ ಪತ್ರದಲ್ಲಿ ಉಲ್ಲೇಖ(1) ರಲ್ಲಿ ರಾಜ್ಯ ಪತ್ರದಲ್ಲಿ ಪುಕಟಿತವಾದ ವೃಂದ ಮತ್ತು ನೇಮಕಾತಿ ನಿಯಮದಂತೆ ಸರ್ಕಾರಿ ಪ್ರಾಥಮಿಕ ಶಾಲಾ ವೃಂದದ ಶಿಕ್ಷಕರಿಂದ ಪ್ರೌಢಶಾಲಾ ಸಹ ಶಿಕ್ಷಕರು ಗ್ರೇಡ್-2 ವೃಂದಕ್ಕೆ ಬಡ್ತಿ ನೀಡುವ ಕುರಿತು ಕಲಬುರಗಿ ವಿಭಾಗದ ಜಿಲ್ಲಾ ಉಪನಿರ್ದೇಶಕರು(ಆಡಳಿತ) ಇವರುಗಳಿಗೆ ವೇಳಾ ಪಟ್ಟಿಯೊಂದಿಗೆ ಬಡ್ತಿಗೆ ಕ್ರಮವಹಿಸಲು ಸೂಚಿಸಿರುತ್ತೀರಿ.
ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 6 ರಿಂದ 8 ನೇ ತರಗತಿ ಪದವೀಧರ ಶಿಕ್ಷಕರಿಗೆ ಪ್ರೌಢ ಶಾಲಾ ಶಿಕ್ಷಕರು ಗ್ರೇಡ್-2 ಹುದ್ದೆಗೆ ಬಡ್ತಿ ನೀಡುವ ಕುರಿತು ಮಾನ್ಯ ಕೆ.ಎ.ಟಿ. ಅರ್ಜಿ ಸಂಖ್ಯೆ 3443-3503/2020 ಮತ್ತು 857-917/2021 ಗಳಲ್ಲಿ ಶ್ರೀ ನಾರಾಯಣ ಬಾಳಪ್ಪಾ ಮತ್ತಿತರರು ದಾಖಲಿಸಿದ ದಾವೆಗೆ ಘನ ನ್ಯಾಯಾಲಯವು ದಿ:12-05-2021 ರಂದು ತೀರ್ಪು ನೀಡಿದ್ದು ಸದರಿ ತೀರ್ಪಿನಲ್ಲಿ ಪ್ರಾಥಮಿಕ ಶಾಲಾ ಸಹ ಶಿಕ್ಷಕರ ಹುದ್ದೆಯಿಂದ ಪ್ರೌಢ ಶಾಲಾ ಸಹ ಶಿಕ್ಷಕರ ಹುದ್ದೆಗೆ ನೀಡಿರುವ ಬಡ್ತಿಗಳನ್ನು ಹಿಂಪಡೆಯಲು ಸೂಚಿಸಿರುತ್ತದೆ. ಆದ್ದರಿಂದ ಈ ತೀರ್ಪು ಆದ ನಂತರ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಯಿಂದ ಪ್ರೌಢ ಶಾಲಾ ಸಹ ಶಿಕ್ಷಕರ ಹುದ್ದೆಗೆ ಬಡ್ತಿ ನೀಡುವುದನ್ನು ತಡೆಹಿಡಿಯಲು ಈ ಕಛೇರಿಯಿಂದ ಸೂಚಿಸಲಾಗಿದೆ.
ಸರ್ಕಾರದ ಅನುಮತಿಯಂತೆ ಮಾನ್ಯ ಕೆ.ಎ.ಟಿ. ಅರ್ಜಿ ಸಂಖ್ಯೆ 3443-3503/2020 ಮತ್ತು 857-917/2021 ಗಳ ತೀರ್ಪನ್ನು ಪ್ರಶ್ನಿಸಿ ಘನ ಉಚ್ಚ ನ್ಯಾಯಾಲಯ, ಬೆಂಗಳೂರು, ಇಲ್ಲಿ WP 16936/2021 ನ್ನು ಸಲ್ಲಿಸಿದ್ದು ಮಾನ್ಯ ನ್ಯಾಯಾಲಯವು ದಿ:31-08-2024 ರಲ್ಲಿ ತೀರ್ಪು ನೀಡಿರುತ್ತದೆ. ಸದರಿ ತೀರ್ಪಿನಲ್ಲಿ 2016 ರ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ ನಿಯಮಗಳು ಅಂತಿಮಗೊಂಡ ನಂತರ ಸರ್ಕಾರದ ಹಂತದಲ್ಲಿ ಈಗಾಗಲೇ ಪ್ರಾಥಮಿಕ ಶಾಲಾ ಸಹ ಶಿಕ್ಷಕರ ಹುದ್ದೆಯಿಂದ ಪ್ರೌಢ ಶಾಲಾ ಸಹ ಶಿಕ್ಷಕರ ಹುದ್ದೆಗೆ ನೀಡಿರುವ ಬಡ್ತಿಗಳನ್ನು ಕೆ.ಎ.ಟಿ ಆದೇಶದಂತೆ ಹಿಂಪಡೆಯುವ ಕುರಿತು ಪರಿಶೀಲಿಸಿ ತೀರ್ಮಾನ ತೆಗೆದುಕೊಳ್ಳಲು ಆದೇಶಿಸಿರುತ್ತದೆ. ತೀರ್ಪಿನ ಉದ್ಭತ ಭಾಗ ಈ ಕೆಳಗಿನಂತೆ ಇರುತ್ತದೆ:
“It is submitted that the draft rules under Notification Dated:28-08-2024 is published, these writ petitions would no more survive for survive for consideration.
Learned AAG would further submit that before finalization of C&R Rules, which is published on 28-08-2024, if the review of promotion takes place as directed, it would lead to an anomalous position. Hence, he prays time to implement the direction at para-21.1 issued by the Tribunal till Draft Rules Published under Notification dated 28-08-2024 is finalized.
The request of the learned AAG appears to be reasonable. Hence we permit the Government to review the promotion as directed under Para-21.1 after finalization of C&R Rules, published under Notification dated 28-08-2024. On finalization of the C&R Rules, the direction issued by the Tribunal under para 21.1 shall be carried out. Accordingly writ petition stand disposed off.”
ದಿನಾಂಕ:27-03-2025 ರಂದು 2016 ರ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿಗಳನ್ನು ಸಕಾರದಿಂದ ಹೊರಡಿಸಲಾಗಿದೆ. ಸದರಿ ಆದೇಶವು ರಾಜ್ಯ ಪತ್ರದಲ್ಲಿ ದಿ: 28-03-2025 ರಂದು ಪ್ರಕಟಿತವಾಗಿರುತ್ತದೆ. ಸದರಿ ತಿದ್ದುಪಡಿ ನಿಯಮಗಳನ್ನು ಮಾನ್ಯ ಕೆ.ಎಸ್.ಎ.ಟಿ. ಬೆಂಗಳೂರು, ಇಲ್ಲಿ ನಿಂದನಾ ದಾವೆ CTA ರಲ್ಲಿ ಮಾನ್ಯ ನ್ಯಾಯಾಲಯಕ್ಕೆ compliance affidavit ಮೂಲಕ ದಿ: 28-03-2025 ರಂದು ಸಲ್ಲಿಸಲಾಗಿದೆ. ಸದರಿ ವಿಷಯ ಕುರಿತು ಆಲಿಕೆಯನ್ನು ಮಾನ್ಯ ನ್ಯಾಯಾಲಯವು ದಿ: 25-04-2025 ರಂದು ನಿಗದಿಪಡಿಸಿರುತ್ತದೆ.
ಈ ಮೇಲಿನ ಅಂಶಗಳಂತೆ ಪ್ರಸ್ತುತ ಅಂತಿಮ ತಿದ್ದುಪಡಿ ನಿಯಮಗಳು ಪ್ರಕಟಣೆಯಾಗಿದ್ದು, ಆದರೆ WP 16936/2021 ರಲ್ಲಿನ ತೀರ್ಪಿನ ಅಂಶದ ಕುರಿತು ಸರ್ಕಾರದಿಂದ ನಿರ್ದೇಶನ ಪಡೆದ ನಂತರ, ಸದರಿ ನಿರ್ದೇಶನದಂತೆ ಪ್ರೌಢ ಶಾಲಾ ಶಿಕ್ಷಕರು ಗ್ರೇಡ್-2 ಹುದ್ದೆಗೆ ಬಡ್ತಿ ನೀಡುವ ಕುರಿತು ಕ್ರಮವಹಿಸ ಬೇಕಿರುತ್ತದೆ.
ರಿಟ್ ಪೆಟಿಷನ್ ಅರ್ಜಿ ಸಂಖ್ಯೆ :16936/2021 ದಿನಾಂಕ:31.08.2024 ತೀರ್ಪಿನಂತೆ ಅನುಷ್ಠಾನಗೊಳಿಸಲು ಸರ್ಕಾರಕ್ಕೆ ಮಾರ್ಗದರ್ಶನ ಕೋರಿ ದಿನಾಂಕ:06-11-2024 ಮತ್ತು 16.04.2025 ರಂದು ಪತ್ರ ಬರೆಯಲಾಗಿದೆ(ಪ್ರತಿ ಲಗತ್ತಿಸಿದೆ).
ದಿನಾಂಕ:28.03.2025 ರಂದು ಪ್ರಕಟಿತವಾದ ವೃಂದ ಮತ್ತು ನೇಮಕಾತಿ ನಿಯಮದಂತೆ ಪ್ರಾಥಮಿಕ ಶಾಲಾ ವೃಂದದಿಂದ ಪ್ರೌಢಶಾಲಾ ಸಹ ಶಿಕ್ಷಕರು ಗ್ರೇಡ್-2 ವೃಂದಕ್ಕೆ ಬಡ್ತಿಯ ಪ್ರಕ್ರಿಯೆಯನ್ನು ಸರ್ಕಾರದ ನಿರ್ದೇಶನ/ಮಾರ್ಗದರ್ಶನ ಬಂದ ನಂತರ ಕ್ರಮವಹಿಸಬೇಕಾಗಿರುವುದರಿಂದ ತಮ್ಮ ಕಛೇರಿಯಿಂದ ಹೊರಡಿಸಿರುವ ಬಡ್ತಿ ಪ್ರಕ್ರಿಯೆಯನ್ನು ಸರ್ಕಾರದ ಮಾರ್ಗದರ್ಶನ ಬರುವವರೆಗೂ ತಡೆಹಿಡಿಯಲು ಕೋರಿದೆ.

