Teacher Transfer-2024-25 ಶಿಕ್ಷಕರ ವರ್ಗಾವಣೆಗೆ ಇಂದಿನಿಂದ ಕೌನ್ಸೆಲಿಂಗ್,ಹುದ್ದೆಗಳ ಮರು ಹಂಚಿಕೆಗೆ ಚಾಲನೆ,20ಕ್ಕೆ ಸಾಮಾನ್ಯ/ಕೋರಿಕೆ ವರ್ಗ

Teacher Transfer-2024-25 ಶಿಕ್ಷಕರ ವರ್ಗಾವಣೆಗೆ ಇಂದಿನಿಂದ ಕೌನ್ಸೆಲಿಂಗ್,ಹುದ್ದೆಗಳ ಮರು ಹಂಚಿಕೆಗೆ ಚಾಲನೆ,20ಕ್ಕೆ ಸಾಮಾನ್ಯ/ಕೋರಿಕೆ ವರ್ಗ

Teacher Transfer-2024-25 ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ ಸೆ.11ರಿಂದ ನಡೆಯಲಿದೆ. ಶಾಲಾವಾರು, ಎಲ್ಲ ವೃಂದವಾರು ಹುದ್ದೆಗಳ ಅಂತಿಮ ಜೇಷ್ಠತಾ ಪಟ್ಟಿ ಪ್ರಕಟಿಸಲಾಗಿದೆ. ಹೆಚ್ಚುವರಿ ಶಿಕ್ಷಕರ ಸಮರ್ಪಕ ಮರು ಹೊಂದಾಣಿಕೆಗೆ ಬ್ಲಾಕ್ ಹಂತದಲ್ಲಿ ಕೌನ್ಸೆಲಿಂಗ್‌ ಗುರುವಾರ ಹಾಗೂ ಶುಕ್ರವಾರ (ಸೆ.11, 12) ನಡೆಯಲಿದೆ.

ನಂತರದಲ್ಲಿ ತಾಲೂಕು ಹಂತದಲ್ಲಿ ಉಳಿಕೆಯಾಗುವ ಹೆಚ್ಚುವರಿ ಶಿಕ್ಷಕರ ಕೌನ್ಸೆಲಿಂಗ್‌ ಜಿಲ್ಲಾ ಹಂತದಲ್ಲಿ ನಡೆಸಲಾಗುತ್ತದೆ. ಈ ನಂತರವೂ ಉಳಿಕೆಯಾಗುವ ಹೆಚ್ಚುವರಿ ಶಿಕ್ಷಕರನ್ನು ಜಿಲ್ಲೆಯೊಳಗೆ ಪಿಟಿಆರ್ ‌ ಪ್ರಕಾರ ಅತಿ ಹೆಚ್ಚಿನ ಮಕ್ಕಳ ದಾಖಲಾತಿಯಿರುವ ಶಾಲೆಗಳಿಗೆ ನಿಯೋಜಿಸಲಾಗುತ್ತದೆ ಎಂದು ತಿಳಿಸಲಾಗಿದೆ.

ನಿರ್ದಿಷ್ಟಪಡಿಸಿದ ಹಾಗೂ ತಾಂತ್ರಿಕ ಸಹಾಯಕರ ಹುದ್ದೆಗಳಲ್ಲಿ ಕಾರ್ಯ ಶಿಕ್ಷಕರ ವರ್ಗಾವಣೆಗೆ ಸೆ.16ರಂದು ಅಂತಿಮ ಜೇಷ್ಠತಾ ಪಟ್ಟಿ, 17 ರಂದು ಖಾಲಿ ಹುದ್ದೆಗಳ ಪ್ರಕಟಣೆ ಹಾಗೂ 18 ಮತ್ತು 19ರಂದು ಕೌನ್ಸೆಲಿಂಗ್‌ ನಡೆಸಲಾಗುತ್ತದೆ.

ಸಾಮಾನ್ಯ ಹಾಗೂ ಪರಸ್ಪರ ಕೋರಿಕೆ ಮೇರೆಗೆ ವರ್ಗಾವಣೆಗಾಗಿ 20ರಂದು ಅಂತಿಮ ಜೇಷ್ಠತಾ ಪಟ್ಟಿ ಪ್ರಕಟವಾಗಲಿದೆ.

ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಕೌನ್ಸೆಲಿಂಗ್ ಮೂಲಕ ಸ್ಥಳ ನಿಯುಕ್ತಿ ಪ್ರಕ್ರಿಯೆಯು ಸೆ.23ರಿಂದ 25ರವರೆಗೆ, ಪ್ರೌಢಶಾಲಾ ಶಿಕ್ಷಕರಿಗೆ 26 ರಿಂದ 29ರವರೆಗೆ ನಡೆಸಲಾಗುತ್ತದೆ ಎಂದು ಇಲಾಖೆ ಹೇಳಿದೆ.

ನಿರ್ದಿಷ್ಟ ಹುದ್ದೆಗಳಿಗೆ ನಿಯೋಜನೆ:

ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆ ಈ ಸಹ ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರ ತತ್ಸಮಾನ ವೃಂದದ ನಿರ್ದಿಷ್ಟಪಡಿಸಿದ ಹುದ್ದೆಗಳಿಗೆ ನಿಯೋಜನೆ ಪ್ರಕ್ರಿಯೆ ವೇಳಾಪಟ್ಟಿಯನ್ನು ಪರಿಷ್ಕರಿಸಲಾಗಿದೆ. ಅದರಂತೆ ಸೆ.12ರಂದು ಎಲ್ಲ ವೃಂದದ ಖಾಲಿ ಹುದ್ದೆಗಳ ಪಟ್ಟಿ ಪ್ರಕಟವಾಗಲಿದೆ.

ಪ್ರಾಥಮಿಕ ವಿಭಾಗದ ವೃಂದಗಳಿಗೆ ಸೆ.16ಕ್ಕೆ ಕೌನ್ಸೆಲಿಂಗ್‌ ನಿಗದಿಯಾಗಿದೆ. ಪ್ರೌಢಶಾಲಾ ವಿಭಾಗದ ವೃಂದಗಳು, ಮುಖ್ಯ ಶಿಕ್ಷಕರು/ ಗ್ರೂಪ್-ಬಿ ವೃಂದಗಳಿಗೆ ಸೆ.17ರಂದು ಸ್ಥಳ ನಿಯುಕ್ತ ಮಾಡಲಾಗುತ್ತದೆ.

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

error: Content is protected !!