Unit:2 Research Aptitude- ಸಂಶೋಧನೆ ಸಾಮರ್ಥ್ಯ
Unit:2 Research Aptitude- ಸಂಶೋಧನೆ ಸಾಮರ್ಥ್ಯ
1. ಸಂಶೋಧನೆ: ಅರ್ಥ
“Research” ಎಂದರೆ ಹೊಸ ಜ್ಞಾನವನ್ನು ಹುಡುಕುವುದು, ಅರ್ಥಮಾಡಿಕೊಳ್ಳುವುದು ಮತ್ತು ಅಭಿವೃದ್ಧಿಪಡಿಸುವ ವ್ಯವಸ್ಥಿತ ಪ್ರಕ್ರಿಯೆ. ಇದು ಸಮಸ್ಯೆಗೆ ವೈಜ್ಞಾನಿಕ ಆಧಾರದ ಮೇಲೆ ಉತ್ತರ ಹುಡುಕುವ ಕಾರ್ಯವಾಗಿದೆ. “Re” ಅಂದರೆ ಮತ್ತೆ-ಮತ್ತೆ, “Search” ಅಂದರೆ ಹುಡುಕುವುದು. ಆದ್ದರಿಂದ Research ಅಂದರೆ “ಮತ್ತೆ ಮತ್ತೆ ಪರಿಶೀಲಿಸಿ ನಿಖರ ಜ್ಞಾನವನ್ನು ಹುಡುಕುವುದು” ಎಂದು ಹೇಳಬಹುದು.
▪️ಸಂಶೋಧನೆಯ ಪ್ರಕಾರಗಳು (Types of Research)
ಸಂಶೋಧನೆ ಹಲವು ಉದ್ದೇಶಗಳು ಮತ್ತು ವಿಧಾನಗಳ ಆಧಾರದ ಮೇಲೆ ಪ್ರಕಾರಗಳಲ್ಲಿ ವಿಂಗಡಿಸಲಾಗಿದೆ. ಪ್ರತಿಯೊಂದು ಪ್ರಕಾರಕ್ಕೂ ತನ್ನದೇ ಆದ ವೈಶಿಷ್ಟ್ಯ, ಗುರಿ ಹಾಗೂ ಉಪಯೋಗವಿದೆ. ಅವುಗಳನ್ನು ವಿವರವಾಗಿ ನೋಡೋಣ:
1. ಮೂಲ ಸಂಶೋಧನೆ (Basic / Pure Research)
ಮೂಲ ಸಂಶೋಧನೆ ಎಂದರೆ ಹೊಸ ಜ್ಞಾನವನ್ನು ಪಡೆಯುವ ಉದ್ದೇಶದಿಂದ ಮಾಡಲಾಗುವ ಸಂಶೋಧನೆ. ಇದು ತಕ್ಷಣದ practically ಉಪಯೋಗಕ್ಕೆ ಬಾರದಿದ್ದರೂ, ಮುಂದಿನ ತಲೆಮಾರಿನ ಅಧ್ಯಯನಗಳಿಗೆ ಮತ್ತು ಸಿದ್ಧಾಂತಗಳ ಅಭಿವೃದ್ಧಿಗೆ ಸಹಾಯಕವಾಗುತ್ತದೆ.
ಉದಾಹರಣೆ: ಗಣಿತದಲ್ಲಿನ ಹೊಸ ಸೂತ್ರಗಳ ಕಂಡುಹಿಡಿಯುವುದು, ಭೌತಶಾಸ್ತ್ರದ ಸಿದ್ಧಾಂತಗಳನ್ನು ಸ್ಥಾಪಿಸುವುದು.
2. ಅನ್ವಯಿಕ ಸಂಶೋಧನೆ (Applied Research)
ಇದನ್ನು ಪ್ರಾಯೋಗಿಕ ಸಮಸ್ಯೆಗಳನ್ನು ಬಗೆಹರಿಸಲು ಮಾಡಲಾಗುತ್ತದೆ. ಅಂದರೆ ಸಮಾಜ, ಕೈಗಾರಿಕೆ, ವೈದ್ಯಕೀಯ, ಶಿಕ್ಷಣ ಕ್ಷೇತ್ರಗಳಲ್ಲಿ ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಗುರಿ ಇರುತ್ತದೆ. ಉದಾಹರಣೆ: ಕೃಷಿಯಲ್ಲಿ ಉತ್ತಮ ಬೀಜದ ತಳಿಯನ್ನು ಅಭಿವೃದ್ಧಿಪಡಿಸುವುದು, ಹೊಸ ಔಷಧಿ
ಸಂಶೋಧನೆ.
3. ವಿವರಣಾತ್ಮಕ ಸಂಶೋಧನೆ (Descriptive Research)
ಈ ಸಂಶೋಧನೆ ಯಾವುದಾದರೂ ಒಂದು ಪರಿಸ್ಥಿತಿ, ಸಮುದಾಯ ಅಥವಾ ಸಮಸ್ಯೆಯನ್ನು ವಿವರಿಸುವುದಕ್ಕೆ (Describe) ಬಳಸಲಾಗುತ್ತದೆ. ಇದು ಅಂಕಿ-ಅಂಶ ಸಂಗ್ರಹ, ಸಮೀಕ್ಷೆ, ವರದಿ ತಯಾರಿ ಮುಂತಾದವುಗಳ ಮೂಲಕ ನಡೆಯುತ್ತದೆ.
ಉದಾಹರಣೆ: ”ಗ್ರಾಮೀಣ ಪ್ರದೇಶದ ಶಿಕ್ಷಣದ ಸ್ಥಿತಿ” ಕುರಿತು ಸಮೀಕ್ಷೆ ಮಾಡುವುದು.
4. ವಿಶ್ಲೇಷಣಾತ್ಮಕ ಸಂಶೋಧನೆ (Analytical Research)
ಈ ಸಂಶೋಧನೆಯಲ್ಲಿ ಈಗಾಗಲೇ ಸಂಗ್ರಹಿಸಿದ ಮಾಹಿತಿಯನ್ನು ವಿಶ್ಲೇಷಣೆ (Analysis) ಮಾಡಿ ತೀರ್ಮಾನಕ್ಕೆ ಬರುತ್ತಾರೆ. ಅಂಕಿ-ಅಂಶಗಳನ್ನು ಹೋಲಿಕೆ ಮಾಡುವುದು, ಕಾರಣ-ಫಲಿತಾಂಶಗಳನ್ನು ಪತ್ತೆಹಚ್ಚುವುದು ಇದರ ಮುಖ್ಯ ಗುರಿ.
ಉದಾಹರಣೆ: ”ಭಾರತದ ಆರ್ಥಿಕ ಬೆಳವಣಿಗೆ ಮೇಲೆ ವಿದೇಶಿ ಹೂಡಿಕೆಯ ಪ್ರಭಾವ” ಕುರಿತು
ವಿಶ್ಲೇಷಣೆ.
5. ಪ್ರಾಯೋಗಿಕ ಸಂಶೋಧನೆ (Experimental Research)
ಈ ಸಂಶೋಧನೆ ಸಂಪೂರ್ಣವಾಗಿ ಪ್ರಯೋಗಗಳ (Experiments) ಮೂಲಕ ನಡೆಯುತ್ತದೆ. ಇಲ್ಲಿ ಸಂಶೋಧಕರು ನಿಯಂತ್ರಿತ ಪರಿಸ್ಥಿತಿಗಳನ್ನು ಸೃಷ್ಟಿಸಿ, ವ್ಯತ್ಯಾಸಗಳನ್ನು ನಿಯಂತ್ರಿಸಿ, ಕಾರಣ-ಫಲಿತಾಂಶದ ನಿಖರ ಸಂಬಂಧವನ್ನು ಕಂಡುಹಿಡಿಯುತ್ತಾರೆ.
ಉದಾಹರಣೆ: ವಿದ್ಯಾರ್ಥಿಗಳ ಸಾಧನೆಯಲ್ಲಿ “ಆಡಿಯೋ-ವಿಜುವಲ್ ಬೋಧನಾ ವಿಧಾನ” ಎಷ್ಟು ಪರಿಣಾಮಕಾರಿಯಾಗಿದೆ ಎಂದು ಪರಿಶೀಲಿಸುವುದು.
6. ಗುಣಾತ್ಮಕ ಸಂಶೋಧನೆ (Qualitative Research)
ಗುಣಾತ್ಮಕ ಸಂಶೋಧನೆ ಅಂದರೆ ಮಾನವೀಯ ಭಾವನೆಗಳು, ವರ್ತನೆ, ಅನುಭವ, ಮೌಲ್ಯಗಳು, ನಂಬಿಕೆಗಳು ಮುಂತಾದವುಗಳನ್ನು ಅಧ್ಯಯನ ಮಾಡುವ ಸಂಶೋಧನೆ. ಇಲ್ಲಿ ಸಂಖ್ಯೆಗಳಿಗಿಂತಲೂ ಅರ್ಥಮಾಡಿಕೊಳ್ಳುವಿಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಸಂದರ್ಶನ, ಗುಂಪು ಚರ್ಚೆ, ವೀಕ್ಷಣೆ ಮುಂತಾದ ವಿಧಾನಗಳನ್ನು ಬಳಸಲಾಗುತ್ತದೆ.
ಉದಾಹರಣೆ: ಗ್ರಾಮೀಣ ಮಹಿಳೆಯರ ಜೀವನ ಶೈಲಿ ಮತ್ತು ಸಾಮಾಜಿಕ ಬದಲಾವಣೆ ಕುರಿತು ಅಧ್ಯಯನ.
7. ಪ್ರಮಾಣಾತ್ಮಕ ಸಂಶೋಧನೆ (Quantitative Research)
ಪ್ರಮಾಣಾತ್ಮಕ ಸಂಶೋಧನೆ ಅಂದರೆ ಅಂಕಿ-ಅಂಶ (Numerical data) ಗಳ ಆಧಾರದ ಮೇಲೆ ನಡೆಯುವ ಸಂಶೋಧನೆ. ಇಲ್ಲಿ ಅಳೆಯಬಹುದಾದ ಅಂಶಗಳನ್ನು ಸಂಗ್ರಹಿಸಿ, ಅಂಕಿಅಂಶ ವಿಧಾನಗಳಿಂದ ವಿಶ್ಲೇಷಣೆ ಮಾಡಲಾಗುತ್ತದೆ.
ಉದಾಹರಣೆ: ”ನಗರ ಪ್ರದೇಶದ ಉದ್ಯೋಗವಕಾಶಗಳ ಶೇಕಡಾವಾರು ಪ್ರಮಾಣ” ಕುರಿತು
▪️ಅಧ್ಯಯನ ಸಾರಾಂಶ:
ಮೂಲ ಸಂಶೋಧನೆ ಹೊಸ ಜ್ಞಾನವನ್ನು ಪಡೆಯಲು ನೆರವಾಗುತ್ತದೆ; ಅನ್ವಯಿಕ ಸಂಶೋಧನೆ ನೈಜ ಸಮಸ್ಯೆಗಳನ್ನು ಬಗೆಹರಿಸುತ್ತದೆ; ವಿವರಣಾತ್ಮಕ ಸಂಶೋಧನೆ ವಿವರಿಸುತ್ತದೆ; ವಿಶ್ಲೇಷಣಾತ್ಮಕ ಸಂಶೋಧನೆ ತೀರ್ಮಾನಕ್ಕೆ ತರುತ್ತದೆ; ಪ್ರಾಯೋಗಿಕ ಸಂಶೋಧನೆ ಪ್ರಯೋಗಗಳಿಂದ ಕಾರಣ-ಫಲಿತಾಂಶ ತೋರಿಸುತ್ತದೆ; ಗುಣಾತ್ಮಕ ಸಂಶೋಧನೆ ಮಾನವೀಯ ಅಂಶಗಳನ್ನು ಗಮನಿಸುತ್ತದೆ; ಪ್ರಮಾಣಾತ್ಮಕ ಸಂಶೋಧನೆ ಅಂಕಿ-ಅಂಶಗಳ ಆಧಾರಿತ ನಿರ್ಣಯಗಳನ್ನು ನೀಡುತ್ತದೆ.
▪️ಸಂಶೋಧನೆಯ ಲಕ್ಷಣಗಳು: (Characteristics of Research)
ಸಂಶೋಧನೆ ಯಾವಾಗಲೂ ವೈಜ್ಞಾನಿಕ, ಕ್ರಮಬದ್ಧ ಮತ್ತು ನಿಖರವಾದ ರೀತಿಯಲ್ಲಿ ನಡೆಯಬೇಕು. ಇದರಲ್ಲಿರುವ ಕೆಲವು ಪ್ರಮುಖ ಲಕ್ಷಣಗಳನ್ನು ವಿವರವಾಗಿ ತಿಳಿಯೋಣ:
1. ವ್ಯವಸ್ಥಿತ (Systematic)
ಸಂಶೋಧನೆ ಅಸಂಘಟಿತವಾಗಿ ನಡೆಯುವುದಿಲ್ಲ. ಇದು ನಿಗದಿತ ಹಂತಗಳಲ್ಲಿ ಕ್ರಮಬದ್ಧವಾಗಿ ಸಾಗುತ್ತದೆ -ಉದಾಹರಣೆಗೆ, ಸಮಸ್ಯೆಯ ಆಯ್ಕೆ, ಉದ್ದೇಶ ನಿಗದಿ, ಹೈಪೋಥೆಸಿಸ್ ನಿರ್ಮಾಣ, ಡೇಟಾ ಸಂಗ್ರಹ, ವಿಶ್ಲೇಷಣೆ, ತೀರ್ಮಾನ. ಹೀಗಾಗಿ ಸಂಶೋಧನೆಯು ಸ್ಪಷ್ಟ ಮಾರ್ಗಸೂಚಿ ಹೊಂದಿದ ವೈಜ್ಞಾನಿಕ ಪ್ರಕ್ರಿಯೆ.
2. ವಸ್ತುನಿಷ್ಠ (Objective):
ಸಂಶೋಧನೆಯಲ್ಲಿ ಸಂಶೋಧಕರ ವೈಯಕ್ತಿಕ ಅಭಿಪ್ರಾಯ, ಭಾವನೆ ಅಥವಾ ಪೂರ್ವಗ್ರಹಗಳು ಪರಿಣಾಮ ಬೀರುವಂತಿಲ್ಲ. ಇದರಲ್ಲಿ ನಿಜವಾದ ತತ್ವಸಾರವನ್ನು ಹುಡುಕುವುದು ಮುಖ್ಯ. ಅಂದರೆ, ಫಲಿತಾಂಶವು “ನನ್ನ ಅಭಿಪ್ರಾಯ” ಎಂದು ಅಲ್ಲ. “ನಿಜವಾದ ಡೇಟಾ ತೋರಿಸುವಂತೆ” ಇರಬೇಕು.
3. ಸಾಕ್ಷ್ಯಾಧಾರಿತ (Evidence-based)
ಸಂಶೋಧನೆಯ ಫಲಿತಾಂಶವು ಊಹೆ, ನಂಬಿಕೆ ಅಥವಾ ಕಲ್ಪನೆಯ ಮೇಲೆ ಆಧಾರಿಸಿರಬಾರದು. ಇದು ಸಾಕ್ಷ್ಯಾಧಾರ (Evidence) ಗಳ ಮೇಲೆ ನಿಂತಿರಬೇಕು. ಅಂಕಿ ಅಂಶ, ದಾಖಲೆ, ವೀಕ್ಷಣೆ, ಪ್ರಯೋಗಗಳ ಮೂಲಕ ಸಿಕ್ಕಿರುವ ದೃಢವಾದ ಮಾಹಿತಿಯೇ ಸಂಶೋಧನೆಯ ಅಡಿಪಾಯ.
4. ಪುನರಾವರ್ತನೀಯ (Replicable):
ಒಂದು ಸಂಶೋಧಕ ಮಾಡಿದ ಸಂಶೋಧನಾ ಪ್ರಕ್ರಿಯೆಯನ್ನು ಇನ್ನೊಬ್ಬನು ಅದೇ ವಿಧಾನದಲ್ಲಿ ಮಾಡಿದರೂ ಹೋಲುವ ಫಲಿತಾಂಶ ಬರುವಂತಿರಬೇಕು. ಇದು ಸಂಶೋಧನೆಯ ನಂಬಿಗಸ್ತಿಕೆಯ (Reliability) ಗುರುತು.
5. ಸಾಮಾನ್ಯಕರಣ (Generalization)
ಸಂಶೋಧನೆಯು ಕೇವಲ ಒಂದು ಸ್ಥಳ ಅಥವಾ ಒಂದು ಗುಂಪಿಗೆ ಮಾತ್ರ ಸೀಮಿತವಾಗಿರಬಾರದು. ಅದರ ಫಲಿತಾಂಶಗಳನ್ನು ಇತರ ಸಂದರ್ಭಗಳಿಗೂ ಅನ್ವಯಿಸಬಹುದಾದಂತಿರಬೇಕು. ಉದಾಹರಣೆಗೆ, 100 ವಿದ್ಯಾರ್ಥಿಗಳಲ್ಲಿ ಕಂಡುಬಂದ ಬೋಧನಾ ವಿಧಾನಗಳ ಪರಿಣಾಮಕಾರಿತ್ವವನ್ನು ಸಾಮಾನ್ಯವಾಗಿ ಎಲ್ಲ ವಿದ್ಯಾರ್ಥಿಗಳಿಗೂ ಅನ್ವಯಿಸಬಹುದಾದಂತಿರಬೇಕು.
6. ಸೃಜನಾತ್ಮಕತೆ (Creativity):
ಸಂಶೋಧನೆ ಕೇವಲ ಹಳೆಯದನ್ನು ದೃಢಪಡಿಸುವುದಲ್ಲ, ಹೊಸ ವಿಚಾರಗಳು, ಹೊಸ ತತ್ವಗಳು, ಹೊಸ ವಿಧಾನಗಳು ಮೂಡಿಬರಲು ಸಹಕಾರಿ. ಅಂದರೆ ಸಂಶೋಧಕನು ತನ್ನ ಕಲ್ಪನೆಶಕ್ತಿ ಮತ್ತು ನವೀನ ಚಿಂತನೆ ಮೂಲಕ ಸಮಾಜಕ್ಕೆ ಹೊಸ ತಿಳುವಳಿಕೆಯನ್ನು ಕೊಡುವುದೇ ಸಂಶೋಧನೆಯ ಶ್ರೇಷ್ಠ ಲಕ್ಷಣ.
ಸಾರಾಂಶ:
ಸಂಶೋಧನೆ ಒಂದು ಕ್ರಮಬದ್ದ, ವಸ್ತುನಿಷ್ಠ, ಸಾಕ್ಷ್ಯಾಧಾರಿತ ಪ್ರಕ್ರಿಯೆ. ಇದು ನಂಬಿಗಸ್ತ (Replicable) ಆಗಿರಬೇಕು, ಇತರ ಸಂದರ್ಭಗಳಿಗೂ ಅನ್ವಯಿಸಬಹುದಾದಂತಿರಬೇಕು (Generalization), ಜೊತೆಗೆ ಸೃಜನಾತ್ಮಕತೆಯನ್ನೂ ಹೊಂದಿರಬೇಕು. ಹೀಗಾಗಿ ಸಂಶೋಧನೆ ಹೊಸ ಜ್ಞಾನವನ್ನು ನೀಡುವ ವಿಶ್ವಾಸಾರ್ಹ ಸಾಧನವಾಗಿದೆ.
▪️ಪಾಸಿಟಿವಿಸಮ್ (Positivism)
ಪಾಸಿಟಿವಿಸಂ ಎಂಬುದು ಸಂಶೋಧನೆಗೆ ಸಂಬಂಧಿಸಿದ ಒಂದು ಪ್ರಮುಖ ದಾರ್ಶನಿಕ ದೃಷ್ಟಿಕೋನ (Philosophical Approach). ಈ ತತ್ತ್ವವನ್ನು ಆಗಸ್ಟ್ ಕಾಮೆ (Auguste Comte) ಎಂಬ ಫ್ರೆಂಚ್ ಚಿಂತಕನು 19ನೇ ಶತಮಾನದಲ್ಲಿ ಪರಿಚಯಿಸಿದನು. ಕಾಯ್ದೆ ಅವರನ್ನು “ಪಾಸಿಟಿವಿಸಂನ ತಂದೆ” ಎಂದು ಕರೆಯಲಾಗುತ್ತದೆ.
1. ಪಾಸಿಟಿವಿಸಂ ನ ಮೂಲಭಾವನೆ:
ಪಾಸಿಟಿವಿಸಂ ಪಕಾರ ಸಮಾಜದ ಅಧ್ಯಯನವೂ ಸಹ ಪಕೃತಿ ವಿಜ್ಞಾನಗಳಂತೆಯೇ ನಡೆಸಬಹುದು.
▪️ಅಂದರೆ, ಸಮಾಜಶಾಸ್ತ್ರ, ಆರ್ಥಿಕಶಾಸ್ತ್ರ, ಶಿಕ್ಷಣಶಾಸ್ತ್ರ, ಮುಂತಾದ ಮಾನವೀಯ ವಿಷಯಗಳನ್ನೂ ವಿಜ್ಞಾನಶಾಸ್ತ್ರೀಯ ವಿಧಾನಗಳ ಮೂಲಕ ಅಧ್ಯಯನ ಮಾಡಬಹುದು.
▪️ಇದರಲ್ಲಿ ವೈಜ್ಞಾನಿಕ ವಿಧಾನ (Scientific Method), ಅಂಕಿ ಅಂಶ (Statistics),ಪ್ರಯೋಗ (Experiment), ವೀಕ್ಷಣೆ (Observation) ಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ.
2. ಪಾಸಿಟಿವಿಸಂ ನ ಪ್ರಮುಖ ಅಂಶಗಳು:
1.ವೈಜ್ಞಾನಿಕ ವಿಧಾನ (Scientific Method): ಸಂಶೋಧನೆ ಹಂತ ಹಂತವಾಗಿ ನಡೆಯಬೇಕು – ಸಮಸ್ಯೆ ಗುರುತಿಸುವುದು, ಹೈಪೋಥೆಸಿಸ್ ರೂಪಿಸುವುದು, ಪರೀಕ್ಷಿಸುವುದು, ತೀರ್ಮಾನಕ್ಕೆ ಬರುವುದು.
2. ಅಂಕಿ-ಅಂಶಾಧಾರಿತ (Quantitative):
ಅಳೆಯಬಹುದಾದ ಮಾಹಿತಿಯನ್ನೇ ಪರಿಗಣಿಸಬೇಕು. ಭಾವನೆ, ನಂಬಿಕೆ, ವೈಯಕ್ತಿಕ ಅನುಭವಗಳಿಗಿಂತ ಅಂಕಿ ಅಂಶಗಳಿಗೆ ಹೆಚ್ಚಿನ ಮೌಲ್ಯ ನೀಡಬೇಕು.
3. ವಸ್ತುನಿಷ್ಠತೆ (Objectivity):
ಸಂಶೋಧಕರ ವೈಯಕ್ತಿಕ ಅಭಿಪ್ರಾಯ, ಭಾವನೆಗಳು ಸಂಶೋಧನೆಗೆ ತೊಂದರೆ ಕೊಡಬಾರದು.
4. ಪರಿಶೀಲನೀಯತೆ (Verifiability):
ಫಲಿತಾಂಶಗಳನ್ನು ಇತರರು ಪರೀಕ್ಷಿಸಿ ದೃಢಪಡಿಸಬಹುದಾದಂತಿರಬೇಕು.
5. ಕಾರಣ-ಫಲಿತಾಂಶ ಸಂಬಂಧ (Cause and Effect):
ಪ್ರತಿಯೊಂದು ಘಟನೆಗೆ ಕಾರಣವಿರುತ್ತದೆ; ಆ ಕಾರಣ ಫಲಿತಾಂಶವನ್ನು ಸಂಶೋಧನೆಯ ಮೂಲಕ ಪತ್ತೆಹಚ್ಚಬಹುದು ಎಂದು ಪಾಸಿಟಿವಿಸ್ಟ್‌ಗಳು ನಂಬುತ್ತಾರೆ.
3. ಪಾಸಿಟಿವಿಸಂನ ಉಪಯೋಗಗಳು:
ಸಮಾಜದಲ್ಲಿ ನಡೆಯುವ ಘಟನೆಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಲು ಸಹಾಯಕ.
▪️ಅಂಕಿ-ಅಂಶಗಳ ಮೂಲಕ ನಂಬಿಗಸ್ತ ಮಾಹಿತಿಯನ್ನು ನೀಡುತ್ತದೆ.
▪️ಸಂಶೋಧನೆ ಪುನರಾವರ್ತನೀಯ (Replicable) ಆಗಿರಲು ಸಾಧ್ಯವಾಗುತ್ತದೆ.
▪️ಪಕೃತಿ ವಿಜ್ಞಾನಗಳಂತೆಯೇ ಸಮಾಜಶಾಸ್ತ್ರಕ್ಕೂ ಶಿಸ್ತು, ನಿಖರತೆ, ಪ್ರಮಾಣಿಕತೆ ತರಲು ನೆರವಾಗುತ್ತದೆ.
4. ಪಾಸಿಟಿವಿಸಂಗೆ ಉದಾಹರಣೆಗಳು:
ಸಮೀಕ್ಷೆಗಳು (Surveys): ವಿದ್ಯಾರ್ಥಿಗಳ ಸಾಧನೆ ಮತ್ತು ಹಾಜರಾತಿ ನಡುವಿನ ಸಂಬಂಧ ಅಧ್ಯಯನ.
▪️ಪ್ರಯೋಗಗಳು (Experiments):
▪️ಒಂದು ಬೋಧನಾ ವಿಧಾನ ಮತ್ತೊಂದಕ್ಕಿಂತ ಉತ್ತಮವೇ ಎಂಬುದನ್ನು ಪರೀಕ್ಷಿಸುವುದು.
▪️ಅಂಕಿ-ಅಂಶ ವಿಶ್ಲೇಷಣೆ (Statistical Analysis):
▪️ಉದ್ಯೋಗವಕಾಶಗಳ ಏರಿಕೆ-ಇಳಿಕೆ ಬಗ್ಗೆ ಅಂಕಿಅಂಶಗಳಿಂದ ನಿರ್ಧಾರಕ್ಕೆ ಬರುವುದು.
5. ಪಾಸಿಟಿವಿಸಂನ ಮಿತಿಗಳು (Limitations):
▪️ಮಾನವೀಯ ಭಾವನೆಗಳು, ನಂಬಿಕೆಗಳು, ಮೌಲ್ಯಗಳನ್ನು ಅಳೆಯಲು ಸಾಧ್ಯವಿಲ್ಲ.
▪️ಸಮಾಜ ಒಂದು ಸಂಕೀರ್ಣ ವ್ಯವಸ್ಥೆ: ಅದನ್ನು ಸಂಪೂರ್ಣವಾಗಿ ಅಂಕಿ-ಅಂಶಗಳ ಮೂಲಕ ವಿವರಿಸಲು ಸಾಧ್ಯವಿಲ್ಲ.
▪️ವೈಜ್ಞಾನಿಕ ವಿಧಾನವು ಎಲ್ಲಾ ಸಾಮಾಜಿಕ ಸಮಸ್ಯೆಗಳಿಗೆ ಸೂಕ್ತವಲ್ಲ.
ಸಾರಾಂಶ:
ಪಾಸಿಟಿವಿಸಂ ಅಂದರೆ ಸಂಶೋಧನೆ ವೈಜ್ಞಾನಿಕ, ಅಂಕಿಅಂಶಾಧಾರಿತ ಮತ್ತು ವಸ್ತುನಿಷ್ಠವಾಗಿರಬೇಕು ಎಂಬ ದೃಷ್ಟಿಕೋನ. ಇದು ಸಮಾಜ ಅಧ್ಯಯನಕ್ಕೂ ವಿಜ್ಞಾನಶಾಸ್ತ್ರೀಯ ವಿಧಾನಗಳನ್ನು ಅನ್ವಯಿಸಲು ಒತ್ತು ನೀಡುತ್ತದೆ. ಆದರೆ ಮಾನವೀಯ ಭಾವನೆ ಮತ್ತು ಅನುಭವಗಳ ಸೂಕ್ಷ್ಮ ಅಂಶಗಳನ್ನು ಸಂಪೂರ್ಣವಾಗಿ ಹಿಡಿಯಲು ಇದು ಸೀಮಿತವಾಗಿದೆ.
▪️ಪೋಸ್ಟ್-ಪಾಸಿಟಿವಿಸ್ಟಿಕ್ (Post-Positivistic) ದೃಷ್ಟಿಕೋನ
ಪೋಸ್ಟ್-ಪಾಸಿಟಿವಿಸಂ ಎಂಬುದು ಪಾಸಿಟಿವಿಸಂ ತತ್ವದ ಮುಂದುವರಿದ ರೂಪವಾಗಿದೆ. ಪಾಸಿಟಿವಿಸಂ ಸಂಶೋಧನೆಯನ್ನು ಸಂಪೂರ್ಣವಾಗಿ ವೈಜ್ಞಾನಿಕ ಹಾಗೂ ಅಂಕಿ-ಅಂಶಾಧಾರಿತವಾಗಿ ನೋಡುವಾಗ, ಪೋಸ್ಟ್-ಪಾಸಿಟಿವಿಸಂ ಅದರ ಮಿತಿಗಳನ್ನು ಗುರುತಿಸಿ ಮಾನವೀಯ ಅಂಶಗಳಿಗೂ ಮಹತ್ವ ನೀಡುತ್ತದೆ. ಇದು 20ನೇ ಶತಮಾನದಲ್ಲಿ ಸಾಮಾಜಿಕ ವಿಜ್ಞಾನಗಳಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆದಿದೆ.
1. ಪೋಸ್ಟ್-ಪಾಸಿಟಿವಿಸಂನ ಮೂಲಭಾವನೆ:
ಪಾಸಿಟಿವಿಸಂ ಹೇಳುವಂತೆ ಸಮಾಜವನ್ನು ವಿಜ್ಞಾನ ಶೈಲಿಯಲ್ಲಿ ಅಳೆಯಬಹುದು. ಆದರೆ ಮಾನವೀಯ ಅಂಶಗಳಲ್ಲಿ (ಭಾವನೆ, ನಂಬಿಕೆ, ಮೌಲ್ಯಗಳು) ಸಂಪೂರ್ಣ ವಸ್ತುನಿಷ್ಠತೆ (Objectivity) ಸಾಧ್ಯವಿಲ್ಲ.
ಪೋಸ್ಟ್-ಪಾಸಿಟಿವಿಸಂ ಪ್ರಕಾರ ಸಮಾಜ ಒಂದು ಸಂಕೀರ್ಣ, ಬಹುಮಟ್ಟಿನ ವಾಸ್ತವಿಕತೆ ಹೊಂದಿದೆ. ಅದನ್ನು ಒಂದೇ ರೀತಿಯ ಅಳತೆಯಿಂದ ವಿವರಿಸಲು ಸಾಧ್ಯವಿಲ್ಲ.
ಆದ್ದರಿಂದ ಸಂಶೋಧನೆಗೆ ಗುಣಾತ್ಮಕ (Qualitative) ಮತ್ತು ಪ್ರಮಾಣಾತ್ಮಕ (Quantitative) ಎರಡೂ ವಿಧಾನಗಳನ್ನು ಬಳಸಬೇಕು.
2. ಪೋಸ್ಟ್-ಪಾಸಿಟಿವಿಸಂನ ಪ್ರಮುಖ ಅಂಶಗಳು:
1. ವಸ್ತುನಿಷ್ಠತೆಗೆ ಮಿತಿ (Limited Objectivity):
ಸಂಪೂರ್ಣ ವಸ್ತುನಿಷ್ಠತೆ ಅಸಾಧ್ಯ. ಸಂಶೋಧಕರ ದೃಷ್ಟಿಕೋನ ಸಂಶೋಧನೆಗೆ ಪ್ರಭಾವ ಬೀರುತ್ತದೆ.
2. ಬಹುಮಟ್ಟಿನ ವಾಸ್ತವಿಕತೆ (Multiple Realities):
ಸಾಮಾಜಿಕ ವಾಸ್ತವಿಕತೆ ಒಂದೇ ಮಾದರಿಯಲ್ಲ; ಜನರ ಅನುಭವಗಳು, ಮೌಲ್ಯಗಳು, ಸಂಸ್ಕೃತಿ ಇತ್ಯಾದಿಗಳ ಆಧಾರದಲ್ಲಿ ವಿಭಿನ್ನವಾಗಿರುತ್ತವೆ.
3. ಮಿಶ್ರ ವಿಧಾನಗಳು (Mixed Methods):
ಅಂಕಿ-ಅಂಶಗಳ ಜೊತೆಗೆ ಸಂದರ್ಶನ, ವೀಕ್ಷಣೆ, ಜೀವನಕಥೆಗಳು ಮುಂತಾದ ಗುಣಾತ್ಮಕ ವಿಧಾನಗಳಿಗೂ ಮಹತ್ವ.
4. ಮೌಲ್ಯಗಳ ಪ್ರಭಾವ (Value-laden Research):
ಸಮಾಜದ ಮೌಲ್ಯಗಳು, ಸಂಶೋಧಕರ ನಿಲುವು, ಅಧ್ಯಯನವಾಗುವ ಸಮುದಾಯದ ಅನುಭವಗಳು ಎಲ್ಲವೂ ಸಂಶೋಧನೆಗೆ ಪರಿಣಾಮ ಬೀರುತ್ತವೆ.
5. ತಪ್ಪಿಸಿಕೊಳ್ಳಲಾರದ ಅಸ್ಪಷ್ಟತೆ (Inherent Uncertainty):
ಯಾವುದೇ ಸಂಶೋಧನೆಯೂ ಶೇ.100 ನಿಖರವಾಗುವುದಿಲ್ಲ; ಅದು ಅಂದಾಜು, ಸಾಧ್ಯತೆ ಮತ್ತು ವ್ಯಾಖ್ಯಾನಗಳ ಮೇಲೆ ಆಧಾರಿತವಾಗಿರುತ್ತದೆ.
3. ಪೋಸ್ಟ್-ಪಾಸಿಟಿವಿಸಂನ ಉಪಯೋಗಗಳು:
▪️ಮಾನವೀಯ ವಿಷಯಗಳನ್ನು ಸಮಗ್ರವಾಗಿ ಅಧ್ಯಯನ ಮಾಡಲು ನೆರವಾಗುತ್ತದೆ.
▪️ಸಮಾಜದ ವಾಸ್ತವಿಕತೆಯ ಸೂಕ್ಷ್ಮ ಅಂಶಗಳನ್ನು ಹಿಡಿಯಲು ಸಹಕಾರಿ.
▪️ಗುಣಾತ್ಮಕ ಮತ್ತು ಪ್ರಮಾಣಾತ್ಮಕ ಮಾಹಿತಿಗಳನ್ನು ಮಿಶ್ರಣ ಮಾಡಿ ಸಂಪೂರ್ಣ ಚಿತ್ರಣ ನೀಡುತ್ತದೆ.
▪️ಶಿಕ್ಷಣ, ಸಮಾಜಶಾಸ್ತ್ರ, ಮನೋವಿಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಪರಿಣಾಮಕಾರಿಯಾದ ವಿಧಾನ.
Steps of Research (ಸಂಶೋಧನೆಯ ಹಂತಗಳು)
1. Research Problem Selection and Formulation (ಸಂಶೋಧನಾ ಸಮಸ್ಯೆಯ ಆಯ್ಕೆ ಮತ್ತು ನಿರೂಪಣೆ)
ಸಂಶೋಧನೆಯ ಪ್ರಥಮ ಹಂತವು ಸಂಶೋಧಕನು ಅಧ್ಯಯನ ಮಾಡಬೇಕಾದ ಸಮಸ್ಯೆಯನ್ನು ಆಯ್ಕೆಮಾಡುವುದು. ಸಂಶೋಧನಾ ಸಮಸ್ಯೆ ಹೊಸತಾಗಿರಬೇಕು, ಪ್ರಾಯೋಗಿಕವಾಗಿರಬೇಕು ಮತ್ತು ಸಮಾಜಕ್ಕೆ ಉಪಯುಕ್ತವಾಗಿರಬೇಕು. ಸಮಸ್ಯೆಯ ನಿರೂಪಣೆ ಸ್ಪಷ್ಟವಾಗಿಲ್ಲದಿದ್ದರೆ, ಮುಂದಿನ ಹಂತಗಳು ಗೊಂದಲಕ್ಕೆ ದಾರಿ ಮಾಡಿಕೊಡುತ್ತವೆ.
ಉದಾಹರಣೆ: “ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಆನ್‌ಲೈನ್ ಶಿಕ್ಷಣದ ಪರಿಣಾಮ” ಎಂಬುದು ಸಂಶೋಧನಾ ಸಮಸ್ಯೆಯಾಗಿ ಆಯ್ಕೆಯಾಗಬಹುದು.
2. Review of Related Literature (ಸಾಹಿತ್ಯದ ಸಮೀಕ್ಷೆ ):
ಈ ಹಂತದಲ್ಲಿ ಸಂಶೋಧಕನು ತನ್ನ ವಿಷಯಕ್ಕೆ ಸಂಬಂಧಿಸಿದಂತೆ ಹಿಂದಿನ ಸಂಶೋಧನೆಗಳನ್ನು ಓದಿ ಅಧ್ಯಯನ ಮಾಡುತ್ತಾನೆ. ಇದರಿಂದಾಗಿಯೇ ಅವನಿಗೆ ಈಗಾಗಲೇ ಏನು ಕೆಲಸವಾಗಿದೆ. ಇನ್ನೂ ಯಾವ ಕ್ಷೇತ್ರದಲ್ಲಿ ಅಧ್ಯಯನ ಮಾಡಬೇಕಿದೆ ಎಂಬುದು ತಿಳಿಯುತ್ತದೆ. ಸಾಹಿತ್ಯ ಸಮೀಕ್ಷೆಯಿಂದ ಸಮಸ್ಯೆಯ ನವೀನತೆ, ಗುರಿಗಳು ಮತ್ತು ಸಂಶೋಧನಾ ವಿಧಾನಗಳು ಸ್ಪಷ್ಟವಾಗುತ್ತವೆ.
ಉದಾಹರಣೆ: ಆನ್‌ಲೈನ್ ಶಿಕ್ಷಣದ ಕುರಿತಂತೆ ಹಿಂದಿನ ಅಧ್ಯಯನಗಳ ಲೇಖನಗಳು, ಪುಸ್ತಕಗಳು, ಜರ್ನಲ್‌ಗಳು ಓದುವುದು.
3. Objectives and Hypothesis Formation (ಉದ್ದೇಶಗಳು ಮತ್ತು ಊಹೆಗಳ ರೂಪಣೆ):
ಸಂಶೋಧನೆಯ ಯಶಸ್ಸು ಅದರ ಉದ್ದೇಶಗಳ ಮೇಲೆ ಅವಲಂಬಿತವಾಗಿದೆ. ಉದ್ದೇಶಗಳು ಸ್ಪಷ್ಟ, ಮಾಪನೀಯ ಹಾಗೂ ಸಾಧನೀಯವಾಗಿರಬೇಕು. ಜೊತೆಗೆ, ಸಂಶೋಧಕನು ಊಹೆಗಳನ್ನು (Hypotheses) ರೂಪಿಸಬೇಕು. ಊಹೆ ಎಂದರೆ ಪರೀಕ್ಷಿಸಬಹುದಾದ ತಾತ್ಕಾಲಿಕ ಉತ್ತರ.
ಉದಾಹರಣೆ: ‘ಗ್ರಾಮೀಣ ವಿದ್ಯಾರ್ಥಿಗಳು ನಗರ ವಿದ್ಯಾರ್ಥಿಗಳಿಗಿಂತ ಆನ್‌ಲೈನ್ ತರಗತಿಗಳಲ್ಲಿ ಕಡಿಮೆ ಆಸಕ್ತಿ ತೋರುತ್ತಾರೆ” ಎಂಬುದು ಒಂದು ಊಹೆ.
4. Research Design and Methodology (ವಿಧಾನ ಮತ್ತು ವಿನ್ಯಾಸ):
ಸಂಶೋಧನೆಗೆ ಸೂಕ್ತವಾದ ವಿಧಾನವನ್ನು ಆಯ್ಕೆಮಾಡುವುದು ಅತ್ಯಂತ ಮುಖ್ಯ. ಇದು ಪ್ರಮಾಣಾತ್ಮಕ (Quantitative), ಗುಣಾತ್ಮಕ (Qualitative) ಅಥವಾ ಮಿಶ್ರ (Mixed) ರೀತಿಯಲ್ಲಿರಬಹುದು. ಮಾದರಿ (Sample) ಆಯ್ಕೆ, ಸಂಶೋಧನಾ ಉಪಕರಣಗಳು (ಪ್ರಶ್ನಾವಳಿ, ಸಂದರ್ಶನ, ಅವಲೋಕನ) ಈ ಹಂತದಲ್ಲೇ ನಿರ್ಧಾರವಾಗುತ್ತವೆ.
5. Data Collection (ಮಾಹಿತಿ ಸಂಗ್ರಹಣೆ):
ಮಾಹಿತಿಯನ್ನು ಪ್ರಾಥಮಿಕ (Primary) ಅಥವಾ ದ್ವಿತೀಯಕ (Secondary) ಮೂಲಗಳಿಂದ ಸಂಗ್ರಹಿಸಬಹುದು. ಪ್ರಾಥಮಿಕ ಮಾಹಿತಿಗೆ ಪ್ರಶ್ನಾವಳಿ, ಸಂದರ್ಶನ, ಸಮೀಕ್ಷೆ ಇತ್ಯಾದಿ ಬಳಸಲಾಗುತ್ತದೆ. ದ್ವಿತೀಯಕ ಮಾಹಿತಿಗೆ ಪುಸ್ತಕಗಳು, ಲೇಖನಗಳು, ಸರ್ಕಾರಿ ವರದಿಗಳು ಬಳಸಬಹುದು. ಈ ಹಂತದಲ್ಲಿ ಶಿಸ್ತಿನೊಂದಿಗೆ, ನಿಖರವಾದ ಮಾಹಿತಿ ಸಂಗ್ರಹಣೆ ನಡೆಯಬೇಕು.
6. Data Analysis and Interpretation (ಮಾಹಿತಿ ವಿಶ್ಲೇಷಣೆ ಮತ್ತು ವ್ಯಾಖ್ಯಾನ)
ಸಂಗ್ರಹಿಸಿದ ಮಾಹಿತಿಯನ್ನು ಅಂಕಿ-ಅಂಶಗಳ ವಿಧಾನಗಳಿಂದ (Statistical Tools) ವಿಶ್ಲೇಷಿಸಲಾಗುತ್ತದೆ. ವಿಶ್ಲೇಷಣೆಯ ನಂತರ, ಸಂಶೋಧಕನು ಊಹೆಗಳನ್ನು ಪರೀಕ್ಷಿಸಿ, ಫಲಿತಾಂಶಗಳನ್ನು ವಿವರಿಸುತ್ತಾನೆ. ವ್ಯಾಖ್ಯಾನ ಮಾಡುವಾಗ ನಿಷ್ಪಕ್ಷಪಾತತೆ, ತಾರ್ಕಿಕತೆ ಮತ್ತು ಶಿಸ್ತನ್ನು ಕಾಪಾಡಬೇಕು.
7. Findings and Conclusions (ಫಲಿತಾಂಶಗಳು ಮತ್ತು ನಿರ್ಣಯಗಳು)
ವಿಶ್ಲೇಷಣೆಯ ನಂತರ ದೊರಕಿದ ಮುಖ್ಯ ವಿಚಾರಗಳನ್ನು ಫಲಿತಾಂಶಗಳ ರೂಪದಲ್ಲಿ ಪ್ರಸ್ತುತಪಡಿಸಬೇಕು. ಇವು ಸ್ಪಷ್ಟವಾಗಿರಬೇಕು ಮತ್ತು ಉದ್ದೇಶಗಳಿಗೆ ಅನುಗುಣವಾಗಿರಬೇಕು. ನಿರ್ಣಯಗಳು ಸಮಾಜ, ಶಿಕ್ಷಣ, ಆರ್ಥಿಕತೆ ಅಥವಾ ಇತರ ಕ್ಷೇತ್ರಗಳಿಗೆ ಉಪಯುಕ್ತವಾಗುವಂತಿರಬೇಕು.
8. Report Writing and Presentation (ವರದಿ ಬರವಣಿಗೆ ಮತ್ತು ಪ್ರಸ್ತುತೀಕರಣ):
ಕೊನೆಯ ಹಂತವು ಸಂಶೋಧನೆಯ ವರದಿ ಬರೆಯುವುದಾಗಿದೆ. ವರದಿಯಲ್ಲಿ ಮುನ್ನುಡಿ, ಉದ್ದೇಶಗಳು, ವಿಧಾನ, ಡೇಟಾ, ವಿಶ್ಲೇಷಣೆ, ಫಲಿತಾಂಶಗಳು ಮತ್ತು ಗ್ರಂಥಪಟ್ಟಿ ಇರಬೇಕು. ವರದಿ ಸರಳ, ಸ್ಪಷ್ಟ ಮತ್ತು ತಾರ್ಕಿಕವಾಗಿರಬೇಕು. ಕೆಲವೊಮ್ಮೆ ಪ್ರಬಂಧ (Thesis) ಅಥವಾ ಸಂಶೋಧನಾ ಲೇಖನ (Research Paper) ರೂಪದಲ್ಲೂ ಪ್ರಸ್ತುತಪಡಿಸಲಾಗುತ್ತದೆ.
Thesis and Article writing:
Format and Styles of referencing.
1. Thesis Writing (ಪ್ರಬಂಧ ಬರವಣಿಗೆ)
Thesis ಅಂದರೆ ಸಂಶೋಧನೆಯ ಸಂಪೂರ್ಣ ವರದಿ. ಇದು ದೀರ್ಘಕಾಲದ ಸಂಶೋಧನಾ ಕಾರ್ಯದ ಫಲಿತಾಂಶ.
ರೂಪ (Format):
1. Title Page (ಶೀರ್ಷಿಕೆ ಪುಟ )
2. Declaration / Certificate (ಘೋಷಣೆ, ಪ್ರಮಾಣಪತ್ರ)
3. Acknowledgement ( ಕೃತಜ್ಞತೆ)
4. Abstract (ಸಂಕ್ಷಿಪ್ತ)
5. Table of Contents (ವಿಷಯ ಸೂಚಿ)
6. Introduction (ಪರಿಚಯ )
7. Review of Literature (ಸಾಹಿತ್ಯ ಸಮೀಕ್ಷೆ)
8. Objectives & Hypotheses (ಉದ್ದೇಶಗಳು ಮತ್ತು ಊಹೆಗಳು)
9. Methodology (ವಿಧಾನಶಾಸ್ತ್ರ)
10. Data Collection & Analysis (ಮಾಹಿತಿ ಸಂಗ್ರಹಣೆ ಮತ್ತು ವಿಶ್ಲೇಷಣೆ)
11. Findings & Discussion (ಫಲಿತಾಂಶ ಮತ್ತು ಚರ್ಚೆ)
12. Conclusion & Suggestions (ನಿರ್ಣಯ ಮತ್ತು ಸಲಹೆಗಳು)
13. References / Bibliography (ಉಲ್ಲೇಖಗಳು)
14. Appendices (ಪರಿಶಿಷ್ಟ್ಯಗಳು)
2. Article Writing (ಲೇಖನ ಬರವಣಿಗೆ)
Article ಅಂದರೆ ಸಂಶೋಧನಾ ಪ್ರಬಂಧದ ಸಂಕ್ಷಿಪ್ತ ರೂಪ, ಸಾಮಾನ್ಯವಾಗಿ Journals ಅಥವಾ Seminar/Conference ಗಾಗಿ ಬರೆಯಲಾಗುತ್ತದೆ.
ರೂಪ (Format):
1. Title (ಶೀರ್ಷಿಕೆ)
2. Author(s) name & Affiliation (ಲೇಖಕರ ಹೆಸರು ಮತ್ತು ಸಂಸ್ಥೆ)
3. Abstract (ಸಂಕ್ಷಿಪ್ತ – 150-300 ಪದಗಳು)
4. Keywords (ಮುಖ್ಯ ಪದಗಳು)
5. Introduction (ಪರಿಚಯ)
6. Methodology (ವಿಧಾನ)
7. Results and Discussion (ಫಲಿತಾಂಶ ಮತ್ತು ಚರ್ಚೆ)
8. Conclusion (ನಿರ್ಣಯ)
9. References (ಉಲ್ಲೇಖಗಳು)
10. Styles of Referencing (ಉಲ್ಲೇಖ ಶೈಲಿಗಳು)
ಸಂಶೋಧನಾ ಬರವಣಿಗೆಯಲ್ಲಿ ಉಲ್ಲೇಖಗಳು (References) ತುಂಬಾ ಮುಖ್ಯ. ನಾವು ಯಾವ ಮೂಲಗಳಿಂದ ಮಾಹಿತಿ ಪಡೆದಿದ್ದೇವೆ ಎಂಬುದನ್ನು ತಿಳಿಸುವುದು ನೈತಿಕ ಹೊಣೆಗಾರಿಕೆಯಾಗಿದೆ. ಇದು ಸಂಶೋಧನೆಗೆ ವಿಶ್ವಾಸಾರ್ಹತೆ ಕೊಡುತ್ತದೆ ಹಾಗೂ ಪ್ಲೇಜರಿಸಮ್ (Plagiarism – ಬೇರೆಯವರ ಬರಹವನ್ನು ತಮ್ಮದೇ ಎಂದು ಬಳಸುವುದು) ತಪ್ಪಿಸಲು ಸಹಕಾರಿಯಾಗುತ್ತದೆ. ವಿಭಿನ್ನ ಶಾಸ್ತ್ರಗಳಲ್ಲಿ ವಿಭಿನ್ನ ಉಲ್ಲೇಖ ಶೈಲಿಗಳನ್ನು ಬಳಸಲಾಗುತ್ತದೆ. ಮುಖ್ಯವಾಗಿ ಬಳಸುವ ಶೈಲಿಗಳು ಕೆಳಗಿನಂತಿವೆ:
1. APA Style (American Psychological Association)
ವೈಶಿಷ್ಟ್ಯಗಳು:
▪️ಸಮಾಜಶಾಸ್ತ್ರ, ಮನಶ್ಯಾಸ್ತ್ರ, ಶಿಕ್ಷಣ, ನಿರ್ವಹಣಾ ಶಾಸ್ತ್ರಗಳಲ್ಲಿ ಹೆಚ್ಚು ಬಳಕೆ.
▪️In-text citation (ಅಂದರೆ ಬರಹದೊಳಗಿನ ಉಲ್ಲೇಖ) ಲೇಖಕರ ಹೆಸರು + ವರ್ಷ ಆಧಾರಿತ.
▪️ಕೊನೆಯಲ್ಲಿ “References” ಶೀರ್ಷಿಕೆಯಡಿ ಸಂಪೂರ್ಣ ಉಲ್ಲೇಖ ಪಟ್ಟಿ ಕೊಡಬೇಕು.
ಉದಾಹರಣೆ:
In-text citation:
▪️(Sharma, 2020)- ಸಾಮಾನ್ಯ ಉಲ್ಲೇಖ
▪️(Sharma, 2020, p. 45) ಪುಟ ಸಂಖ್ಯೆಯೊಂದಿಗೆ
▪️Reference list:
▪️Sharma, R. (2020). Education in India. New Delhi: Sage.
2. MLA Style (Modern Language Association)
ವೈಶಿಷ್ಟ್ಯಗಳು:
▪️ಸಾಹಿತ್ಯ, ಕಲೆ, ಭಾಷಾಶಾಸ್ತ್ರ, ಹೂಮ್ಯಾನಿಟೀಸ್ ಕ್ಷೇತ್ರದಲ್ಲಿ ಹೆಚ್ಚು ಬಳಕೆ.
▪️In-text citation ನಲ್ಲಿ ಲೇಖಕರ ಹೆಸರು + ಪುಟ ಸಂಖ್ಯೆ ಮಾತ್ರ ಬರೆಯಲಾಗುತ್ತದೆ.
▪️ಕೊನೆಯಲ್ಲಿ “Works Cited” ಎಂಬ ಶೀರ್ಷಿಕೆಯಡಿ ಉಲ್ಲೇಖ ಪಟ್ಟಿ ಕೊಡಬೇಕು.
ಉದಾಹರಣೆ:
▪️In-text citation:
▪️(Sharma 45)
Works Cited:
Sharma, Ramesh. Education in India. New Delhi: Sage, 2020.
3. Chicago Style:
ವೈಶಿಷ್ಟ್ಯಗಳು:
▪️ಇತಿಹಾಸ, ಸಾಮಾಜಿಕ ವಿಜ್ಞಾನ, ಕಾನೂನು ಅಧ್ಯಯನದಲ್ಲಿ ಹೆಚ್ಚು ಬಳಕೆ.
ಎರಡು ವಿಧಾನಗಳಿವೆ:
1. Notes and Bibliography System – ಪಾದ ಟಿಪ್ಪಣಿಗಳು (Footnotes/Endnotes)
2. Author-Date System- ಲೇಖಕರ ಹೆಸರು ಮತ್ತು ವರ್ಷ
3. ಸಾಮಾನ್ಯವಾಗಿ ಪಾದಟಿಪ್ಪಣಿಗಳ ಮೂಲಕ ಹೆಚ್ಚಿನ ವಿವರ ನೀಡಲಾಗುತ್ತದೆ.
ಉದಾಹರಣೆ:
Footnote:
1. Ramesh Sharma, Education in India (New Delhi: Sage, 2020), 45.
Bibliography:
Sharma, Ramesh. Education in India. New Delhi: Sage, 2020.
4. Harvard Style
ವೈಶಿಷ್ಟ್ಯಗಳು:
▪️ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ ಸಂಶೋಧನೆಗಳಲ್ಲಿ ಹೆಚ್ಚು ಬಳಕೆ.
▪️APA ಶೈಲಿಯಂತೆಯೇ Author-Date ವಿಧಾನವನ್ನು ಅನುಸರಿಸುತ್ತದೆ.
▪️ಕೊನೆಯಲ್ಲಿ “Reference List” ನೀಡಬೇಕು.
ಉದಾಹರಣೆ:
▪️In-text citation:
▪️(Sharma, 2020, p. 45)
▪️Reference list:
▪️Sharma, R. (2020). Education in India. New Delhi: Sage.
▪️Application of ICT in Research (ಸಂಶೋಧನೆಯಲ್ಲಿ ತಂತ್ರಜ್ಞಾನ ಬಳಕೆ):
1. ಪರಿಚಯ:
ICT (Information and Communication Technology) ಅಂದರೆ ಮಾಹಿತಿ ಹಾಗೂ ಸಂವಹನ ತಂತ್ರಜ್ಞಾನ
▪️ಇಂದಿನ ಯುಗದಲ್ಲಿ ಸಂಶೋಧನೆಯ ಪ್ರತಿಯೊಂದು ಹಂತದಲ್ಲೂ ICT ಪ್ರಮುಖ ಪಾತ್ರವಹಿಸುತ್ತದೆ.
▪️ICT ಬಳಕೆಯಿಂದ ಸಂಶೋಧನೆ ವೇಗವಾಗಿ, ನಿಖರವಾಗಿ, ಕಡಿಮೆ ವೆಚ್ಚದಲ್ಲಿ ಮತ್ತು ಜಾಗತಿಕ ಮಟ್ಟದಲ್ಲಿ ಹಂಚಿಕೊಳ್ಳಬಹುದಾದಂತೆ ಆಗಿದೆ.
2. Literature Review ಗೆ ICT ಬಳಕೆ :
▪️ಸಂಶೋಧನಾ ವಿಷಯಕ್ಕೆ ಸಂಬಂಧಿಸಿದ ಸಾಹಿತ್ಯ ಸಂಗ್ರಹಿಸುವುದು ICT ಮೂಲಕ ಸುಲಭವಾಗಿದೆ.
▪️ಆನ್ಲೈನ್ ಡೇಟಾಬೇಸ್ ಗಳು JSTOR, Springer, ScienceDirect, Google Scholar.
▪️ಇ- ಲೈಬ್ರರಿ Shodhganga (India), NDL (National Digital Library).
ಉದಾಹರಣೆ: ಸಂಶೋಧಕನು “Online Learning in Rural Areas” ಕುರಿತು ಸಂಶೋಧನೆ ಮಾಡುವಾಗ 200ಕ್ಕೂ ಹೆಚ್ಚು ಅಂತರಾಷ್ಟ್ರೀಯ ಲೇಖನಗಳನ್ನು ಗೂಗಲ್ ಸ್ಕಾಲರ್ ಮೂಲಕ ಪಡೆಯಬಹುದು.
3. Data Collection 2 ICT:
▪️ICT ಉಪಕರಣಗಳ ಮೂಲಕ ಮಾಹಿತಿ ಸಂಗ್ರಹಣೆ ಹೆಚ್ಚು ಸುಲಭ ಮತ್ತು ನಿಖರ.
▪️Online Survey Tools: Google Forms, SurveyMonkey, Qualtrics.
▪️Interviews/FGDs: Zoom, Microsoft Teams, Google Meet ಮೂಲಕ ಆನ್ಲೈನ್ ಸಂದರ್ಶನ.
▪️Sensors, Mobile Apps, Social Media Analytics ( ಆಧುನಿಕ ಸಂಶೋಧನೆಗಳಲ್ಲಿ ಉಪಯೋಗ)
▪️ಉದಾಹರಣೆ: ವಿದ್ಯಾರ್ಥಿಗಳ ಅಭಿಪ್ರಾಯ ತಿಳಿಯಲು Google Forms ಮೂಲಕ 500 ಪ್ರತಿಕ್ರಿಯೆಗಳನ್ನು ಒಂದು ವಾರದಲ್ಲಿ ಸಂಗ್ರಹಿಸಬಹುದು.
4. Data Analysis 2 ICT:
ದೊಡ್ಡ ಪ್ರಮಾಣದ ಡೇಟಾವನ್ನು ಕೈಯಿಂದ ವಿಶ್ಲೇಷಿಸುವುದು ಕಷ್ಟ; ICT ಇದನ್ನು ಸುಲಭಗೊಳಿಸುತ್ತದೆ.
▪️Statistical Software: SPSS, R, Stata, SAS.
▪️Spreadsheet Tools: MS Excel, Google Sheets.
▪️Programming Languages: Python (Pandas, NumPy, SciPy, Matplotlib).
ಉದಾಹರಣೆ: ಸಂಶೋಧಕನು ವಿದ್ಯಾರ್ಥಿಗಳ ಅಂಕಿಅಂಶಗಳನ್ನು SPSS ಮೂಲಕ Regression Analysis ಮಾಡಿ ನಿಖರ ಫಲಿತಾಂಶ ಪಡೆಯಬಹುದು.
5. Data Storage , Management:
▪️ICT ಉಪಕರಣಗಳು ಡೇಟಾವನ್ನು ಭದ್ರವಾಗಿ ಸಂಗ್ರಹಿಸಿ, ಹಂಚಿಕೊಳ್ಳಲು ಸಹಕಾರ.
▪️Cloud Storage: Google Drive, Dropbox, OneDrive.
▪️Research Data Management Systems: DSpace, Dataverse.
ಉದಾಹರಣೆ: ದೊಡ್ಡ ಪ್ರಮಾಣದ ಚಿತ್ರ/ವೀಡಿಯೊಗಳನ್ನು Dropbox ಮೂಲಕ ಸಂಶೋಧನಾ ತಂಡ ಹಂಚಿಕೊಳ್ಳಬಹುದು.
6. Citation Referencing Management:
▪️ಸಂಶೋಧನೆಯಲ್ಲಿ ಉಲ್ಲೇಖ ಶೈಲಿಗಳನ್ನು ಪಾಲಿಸುವುದು ಮುಖ್ಯ. ICT ಇದನ್ನು ಸ್ವಯಂಪ್ರೇರಿತಗೊಳಿಸುತ್ತದೆ.
▪️Reference Management Tools: Mendeley, Zotero, EndNote, RefWorks.
ಉದಾಹರಣೆ: APA ಶೈಲಿಯ 200 ಉಲ್ಲೇಖಗಳನ್ನು ಕೈಯಿಂದ ಬರೆಯುವುದಕ್ಕಿಂತ Mendeley ಸ್ವಯಂಪ್ರೇರಿತವಾಗಿ “Reference List” ಸಿದ್ಧಪಡಿಸುತ್ತದೆ.
7. Report Writing , Documentation:
▪️ಸಂಶೋಧನಾ ವರದಿ ಬರವಣಿಗೆಯಲ್ಲಿ ICT ಉಪಕರಣಗಳು ಸಹಕಾರ.
▪️Word Processing: MS Word, Google Docs, LaTeX.
▪️Presentation: MS PowerPoint, Canva, Prezi.
▪️Plagiarism Checking Tools: Turnitin, Urkund.
▪️ಉದಾಹರಣೆ: LaTeX ಮೂಲಕ ಗಣಿತ ಸಮೀಕರಣಗಳನ್ನು ನಿಖರವಾಗಿ ಪ್ರಸ್ತುತಪಡಿಸಬಹುದು.
8. Research Communication &, Publication:
ಸಂಶೋಧನಾ ಫಲಿತಾಂಶಗಳನ್ನು ICT ಮೂಲಕ ಜಾಗತಿಕ ಮಟ್ಟದಲ್ಲಿ ಹಂಚಿಕೊಳ್ಳಬಹುದು.
Online Journals: Elsevier, Springer, Taylor & Francis.
Conferences/Webinars: ICT ಮೂಲಕ ಆನ್‌ಲೈನ್ ಕಾನ್ಸರೆನ್ಸ್ ಗಳಲ್ಲಿ ಭಾಗವಹಿಸಬಹುದು.
Social Media: ResearchGate, Academia.edu, LinkedIn.
ಉದಾಹರಣೆ: ಸಂಶೋಧಕನು ತನ್ನ ಲೇಖನವನ್ನು ResearchGate ನಲ್ಲಿ ಹಂಚಿಕೊಂಡರೆ, ವಿಶ್ವದಾದ್ಯಂತದ ಓದುಗರಿಂದ ಪ್ರತಿಕ್ರಿಯೆ ಪಡೆಯಬಹುದು.
9. Ethical Use of ICT in Research
▪️ಡೇಟಾ ಗೌಪ್ಯತೆ (Data Privacy) ಕಾಪಾಡುವುದು ಮುಖ್ಯ.
▪️Plagiarism ತಪ್ಪಿಸಲು ICT ಉಪಕರಣಗಳ ಬಳಕೆ ಅಗತ್ಯ.
▪️ಸರಿಯಾದ Citation ಹಾಗೂ Copyright ಪಾಲನೆ.
10. Conclusion
ICT ಇಂದಿನ ಸಂಶೋಧನೆಗೆ ಅಗತ್ಯವಸ್ತು.
ಸಾಹಿತ್ಯ ಸಂಗ್ರಹದಿಂದ ಹಿಡಿದು, ಡೇಟಾ ಸಂಗ್ರಹಣೆ, ವಿಶ್ಲೇಷಣೆ, ವರದಿ ಬರವಣಿಗೆ, ಪ್ರಕಟಣೆ ಎಲ್ಲ ಹಂತದಲ್ಲೂ ICT ಪ್ರಮುಖ.
ಸಂಶೋಧನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜ್ಞಾನ ವಿನಿಮಯಕ್ಕೆ ದಾರಿ ಮಾಡಿಕೊಡುತ್ತಿದೆ.
Research Ethics (ಸಂಶೋಧನಾ ನೈತಿಕತೆ)
ಸಂಶೋಧನಾ ನೈತಿಕತೆ ಅಂದರೆ ಸಂಶೋಧನೆ ನಡೆಸುವಾಗ ಅನುಸರಿಸಬೇಕಾದ ನೈತಿಕ ಮೌಲ್ಯಗಳು ಮತ್ತು ನಿಯಮಗಳು. ಇವು ಸಂಶೋಧನೆಯ ಪ್ರಾಮಾಣಿಕತೆ, ನಂಬಿಕೆ ಮತ್ತು ಗುಣಮಟ್ಟವನ್ನು ಖಚಿತಪಡಿಸುತ್ತವೆ. ಸಂಶೋಧಕನು ತಾನು ನಡೆಸುವ ಕೆಲಸದಲ್ಲಿ ಸತ್ಯಾಸತ್ಯತೆ, ಪಾರದರ್ಶಕತೆ ಮತ್ತು ಹೊಣೆಗಾರಿಕೆ ಇರಬೇಕು.
ಪ್ರಮುಖ ಅಂಶಗಳು:
1. ಪ್ರಾಮಾಣಿಕತೆ (Honesty):
ಡೇಟಾ, ಫಲಿತಾಂಶ, ವಿಧಾನ, ಉಲ್ಲೇಖಗಳಲ್ಲಿ ವಾಸ್ತವಿಕತೆ ಇರಬೇಕು.
ಸುಳ್ಳು ಡೇಟಾ ತಯಾರಿಸುವುದು ನೈತಿಕವಲ್ಲ.
2. ಅಪಹರಣ (Plagiarism) ತಪ್ಪಿಸುವುದು:
ಬೇರೆಯವರ ಕೆಲಸವನ್ನು ತಮ್ಮದೇ ಎಂದು ತೋರಿಸುವುದು ನೈತಿಕ ತಪ್ಪು. ಸರಿಯಾದ ಉಲ್ಲೇಖ (APA, MLA, Chicago) ನೀಡಬೇಕು.
3. ಗೌಪ್ಯತೆ (Confidentiality):
ಸಂಶೋಧನೆಯಲ್ಲಿ ಭಾಗವಹಿಸುವವರ ವೈಯಕ್ತಿಕ ಮಾಹಿತಿ ಗುಪ್ತವಾಗಿರಬೇಕು.
4. ಸಮ್ಮತಿ (Informed Consent):
ಅಧ್ಯಯನದಲ್ಲಿ ಭಾಗವಹಿಸುವವರ ಅನುಮತಿ ಪಡೆಯಬೇಕು.
5. ನಿಷ್ಪಕ್ಷಪಾತತೆ (Objectivity):
ಸಂಶೋಧನೆಗೆ ಯಾವುದೇ ರೀತಿಯ ಪೂರ್ವಗ್ರಹ, ವೈಯಕ್ತಿಕ ಲಾಭ, ರಾಜಕೀಯ ಅಥವಾ ಧಾರ್ಮಿಕ ಒತ್ತಡ ಬಾರದಂತೆ ನೋಡಿಕೊಳ್ಳಬೇಕು.
6. ಬೌದ್ಧಿಕ ಸ್ವತ್ತಿನ ಹಕ್ಕು (Intellectual Property Rights):
ಲೇಖಕರ ಹಕ್ಕುಗಳನ್ನು ಗೌರವಿಸಬೇಕು.
7. ಸಮಾಜದ ಹಿತಾಸಕ್ತಿ (Social Responsibility):
ಸಂಶೋಧನೆಯ ಫಲಿತಾಂಶವು ಸಮಾಜಕ್ಕೆ ಹಾನಿಯಲ್ಲ, ಉಪಯುಕ್ತವಾಗಿರಬೇಕು.
8. ಪ್ರಕಟಣೆ ನೈತಿಕತೆ (Publication Ethics):
ಒಂದು ಕೆಲಸವನ್ನು ಪುನಃ ಪುನಃ ಪ್ರಕಟಿಸುವುದು (Duplicate Publication) ತಪ್ಪು. ಸಹಲೇಖಕರ ಹೆಸರನ್ನು ನ್ಯಾಯಸಮ್ಮತವಾಗಿ ಸೇರಿಸಬೇಕು.

ಮುಂದುವರಿಯುವುದು………..