UPI: ಸೆಪ್ಟೆಂಬರ್ 15 ರಿಂದ ಯುಪಿಐ ನಿಯಮ ಬದಲಾವಣೆಯ ವಿವರ
UPI: ಸೆಪ್ಟೆಂಬರ್ 15 ರಿಂದ ಯುಪಿಐ ನಿಯಮ ಬದಲಾವಣೆಯ ವಿವರ ಇಲ್ಲಿದೆ:: ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಸೇವೆಗಳನ್ನು ನಿರ್ವಹಣೆ ಮಾಡುವ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್ಪಿಸಿಐ) ಕೆಲವು ನಿರ್ದಿಷ್ಟ ವರ್ಗಗಳ ವಹಿವಾಟುಗಳ ಗರಿಷ್ಠ ಮಿತಿಯನ್ನು ಹೆಚ್ಚಿಸಿದೆ. ಈ ಬದಲಾವಣೆಯು ಸೆಪ್ಟೆಂಬರ್ 15 ರಿಂದ ಜಾರಿಗೆ ಬ೦ದಿವೆ. ಇದರಲ್ಲಿ ಹೆಚ್ಚಿನ ಮೌಲ್ಯದ ಪಾವತಿಗಳ ಮಿತಿಯನ್ನು ಹೆಚ್ಚಿಸುವುದು ಮತ್ತು ಕೆಲವು ವಹಿವಾಟುಗಳ ದೈನಂದಿನ ಮಿತಿಗಳನ್ನು ನಿಗದಿಪಡಿಸುವುದು ಸೇರಿದೆ. ಇವುಗಳ ಸಂಪೂರ್ಣ ಮಾಹಿತಿ ಇಲ್ಲಿದೆ.
UPI ನಿಯಮ ಬದಲಾವಣೆ:
UPIನ ನಿಯಮಗಳಲ್ಲಿ ಮತ್ತೆ ಬದಲಾವಣೆಯಾಗಿದ್ದು, ಕೆಲ ವಿಭಾಗಗಳ ಪಾವತಿಗೆ ಟ್ರಾನ್ಸಾಕ್ಷನ್ ಮಿತಿಯನ್ನು ಹೆಚ್ಚಿಸಲಾಗಿದೆ. ಐದು ಲಕ್ಷ ರೂ. ನಿಂದ ಹಿಡಿದು 10 ಲಕ್ಷ ರೂ. ವರೆಗೆ ಒಂದು ದಿನದ ವಹಿವಾಟು ಮಿತಿಯನ್ನು ಏರಿಸಲಾಗಿದೆ. ಈ ಬದಲಾವಣೆಯಿ೦ದಾಗಿ, ಬಳಕೆದಾರರು ಕೆಲವು ರೀತಿಯ ಪಾವತಿಗಳಿಗೆ ಒಂದೇ ಬಾರಿಗೆ ದೊಡ್ಡ ಮೊತ್ತವನ್ನು ವರ್ಗಾಯಿಸಬಹುದು.
ಈ ವರ್ಗಗಳಿಗೆ ಮಿತಿ ಹೆಚ್ಚಳ:
ಬಂಡವಾಳ ಮಾರುಕಟ್ಟೆ, ವಿಮೆ, ಸರ್ಕಾರಿ ಇ-ಮಾರುಕಟ್ಟೆ, ಪ್ರಯಾಣ, ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ, ವ್ಯಾಪಾರಿ ಪಾವತಿಗೆ ವಹಿವಾಟು ಮಿತಿಯನ್ನು ₹5 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಆಭರಣ ಖರೀದಿ ಮತ್ತು ಡಿಜಿಟಲ್ ಖಾತೆ ತೆರೆಯುವಿಕೆಗೆ ಮಿತಿಯನ್ನು ₹2 ಲಕ್ಷಕ್ಕೆ ಏರಿಸಲಾಗಿದೆ. ಅವಧಿ ಠೇವಣಿ ಡಿಜಿಟಲ್ ಖಾತೆ ತೆರೆಯುವಿಕೆ ಮತ್ತು FX ಚಿಲ್ಲರೆ ವ್ಯಾಪಾರಗಳಿಗೆ ₹5 ಲಕ್ಷದ ಮಿತಿಯನ್ನು ಅನ್ವಯಿಸಲಾಗಿದೆ.
ಇವರಿಗೆ ಮಾತ್ರ ಅನ್ವಯ:
ಯುಪಿಐ ಹೊಸ ನಿಯಮಗಳ ಪ್ರಕಾರ, ಒಬ್ಬ ಬಳಕೆದಾರ 24 ಗಂಟೆಗಳಲ್ಲಿ ₹10 ಲಕ್ಷದವರೆಗೆ ವಹಿವಾಟು ಮಾಡಬಹುದು. ಆದರೆ ಈ ಹೊಸ ನಿಯಮ ಪರಿಶೀಲಿಸಿದ ವ್ಯಾಪಾರಿಗಳಿಗೆ (ವೆರಿಫೈಡ್ ಮರ್ಚೆಂಟ್ಸ್) ಮಾಡುವ ಪಾವತಿಗಳಿಗೆ (ಪಿ2ಎಂ) ಮಾತ್ರ ಅನ್ವಯವಾಗಲಿವೆ. ವ್ಯಕ್ತಿಯಿ೦ದ ವ್ಯಕ್ತಿಗೆ (ಪಿ2 ಪಿ) ಹಣ ವರ್ಗಾವಣೆ ಮಾಡುವ ದೈನಂದಿನ ಮಿತಿ ಮೊದಲಿನಂತೆಯೇ 1 ಲಕ್ಷ ರೂ.ನಲ್ಲೇ ಮುಂದುವರೆಯಲಿದೆ .
ಎಲ್ಲಾ ಅಪ್ಲಿಕೇಶನ್ಗಳಲ್ಲಿ ಜಾರಿ:
ಫೋನ್ ಪೇ, ಪೇಟಿಎಂ, ಗೂಗಲ್ ಪೇ ಮತ್ತು ಇತರ ಎಲ್ಲಾ ಯುಪಿಐ ಆಧಾರಿತ ಅಪ್ಲಿಕೇಶನ್ಗಳು ಮತ್ತು ಸೇವಾ ಪೂರೈಕೆದಾರರು ಹೊಸ ನಿಯಮಗಳನ್ನು ಜಾರಿಗೆ ತರಬೇಕು. ಇಂದಿನಿಂದ ಬಳಕೆದಾರರು ಹೆಚ್ಚಿನ ಮಿತಿಗಳ ಪ್ರಯೋಜನ ಪಡೆಯಬಹುದು. ಇದು ಡಿಜಿಟಲ್ ಪಾವತಿಗಳನ್ನು ಸುಲಭಗೊಳಿಸುತ್ತದೆ. ದೊಡ್ಡ ವಹಿವಾಟುಗಳನ್ನು ಸರಳಗೊಳಿಸಿ ಬಳಕೆದಾರರಿಗೆ ಹೆಚ್ಚಿನ ಸೌಕರ್ಯ ಒದಗಿಸುತ್ತದೆ.
2 thoughts on “UPI: ಸೆಪ್ಟೆಂಬರ್ 15 ರಿಂದ ಯುಪಿಐ ನಿಯಮ ಬದಲಾವಣೆಯ ವಿವರ”