UPSC Exam for the post of Medical Officer
UPSC: MBBS ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಕೇಂದ್ರದ ಇಲಾಖೆಗಳಲ್ಲಿ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ.
ಕೇಂದ್ರ ಲೋಕಸೇವಾ ಆಯೋಗವು (UPSC) ‘Combined Medical Services’ (CMS) ಪರೀಕ್ಷೆಗೆ ಅಧಿಸೂಚನೆ ಪ್ರಕಟಿಸಲಾಗಿದೆ.ಭಾರತೀಯ ರೈಲ್ವೆ ಕೇಂದ್ರ ಆರೋಗ್ಯ ಸೇವೆ ಸೇರಿದಂತೆ ಕೇಂದ್ರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ವೈದ್ಯಾಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲು ನಡೆಸುವ ಸಿಎಂಎಸ್ ಪರೀಕ್ಷೆ ನಡೆಸಲಿರುವ ಆಯೋಗ ಈ ಬಾರಿ ಒಟ್ಟು 705 ಹುದ್ದೆಗಳಿಗೆ ನೇಮಕಾತಿ ನಡೆಸಲಿದೆ. ಈ ಪರೀಕ್ಷೆಗೆ ಮಾ.11ರೊಳಗೆ ಅರ್ಜಿ ಸಲ್ಲಿಸುವಂತೆ ತಿಳಿಸಲಾಗಿದೆ.
ಒಟ್ಟು ಹುದ್ದೆಗಳು: 705
ಹುದ್ದೆಗಳ ವಿವರ:
ಕೇಂದ್ರ ಆರೋಗ್ಯ ಸೇವೆಯಲ್ಲಿನ ಹುದ್ದೆಗಳಾಗಿವೆ.
▪️ಜನರಲ್ ಡ್ಯೂಟಿ ಮೆಡಿಕಲ್ ಆಫೀಸರ್ ಸಬ್ ಕೇಡರ್ ಹುದ್ದೆಗಳು: 226
▪️ರೈಲ್ವೆಯಲ್ಲಿನ ಅಸಿಸ್ಟೆಂಟ್ ಡಿವಿಷನಲ್ ಮೆಡಿಕಲ್ ಆಫೀಸರ್-450
▪️ದಿಲ್ಲಿ ಮುನ್ಸಿಪಲ್ ಕಾರ್ಪೋರೇಷನ್ನಲ್ಲಿನ ಜನರಲ್ ಡ್ಯೂಟಿ ಮೆಡಿಕಲ್ ಆಫೀಸರ್-29
ಒಟ್ಟು 705 ಹುದ್ದೆಗಳ ಭರ್ತಿಗೆ ಈ ಪರೀಕ್ಷೆ ನಡೆಸಲಾಗುತ್ತಿದೆ.
ಪರೀಕ್ಷೆಯು ಜುಲೈ 20ರಂದು ಜರುಗಲಿದೆ.
ಪರೀಕ್ಷೆ ಕೇಂದ್ರಗಳು:
ರಾಜ್ಯದಲ್ಲಿ ಬೆಂಗಳೂರು ಮತ್ತು ಧಾರವಾಡದಲ್ಲಿ ಪರೀಕ್ಷಾ ಕೇಂದ್ರಗಳಿರಲಿವೆ.
ಅರ್ಹತೆಗಳೇನು?
ಎಂಬಿಬಿಎಸ್ ಓದಿರುವ 32 ವರ್ಷದೊಳಗಿನ ಅಭ್ಯರ್ಥಿಗಳು (1993ರ ಆಗಸ್ಟ್ 2ರ ನಂತರ ಜನಿಸಿದವರು) ಈ ಪರೀಕ್ಷೆ ಬರೆಯಲು ಅರ್ಜಿ ಸಲ್ಲಿಸಬಹುದಾಗಿದೆ. ಅಂತಿಮ ವರ್ಷದ ಪರೀಕ್ಷೆ ಬರೆಯಬೇಕಾಗಿರುವ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಸಲು ಅವಕಾಶವಿದೆ. ಜೊತೆಗೆ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಗೆ ಅನುಗುಣವಾಗಿ ಇಂಟರ್ನ್ಷಿಪ್ ಪಡೆದಿರು ವುದು ಕಡ್ಡಾಯ.
ವಯೋಮಿತಿ ಸಡಿಲಿಕೆ:
ವಯೋಮಿತಿಯಲ್ಲಿ ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇರುತ್ತದೆ.
ಪರೀಕ್ಷೆ ಹೇಗಿರುತ್ತದೆ?
ಆನ್ಲೈನ್ನಲ್ಲಿ ಲಿಖಿತ ಪರೀಕ್ಷೆ, ದೈಹಿಕ ಮತ್ತು ವೈದ್ಯಕೀಯ ಪರೀಕ್ಷೆ ಹಾಗೂ ಸಂದರ್ಶನ ನಡೆಸಿ ನೇಮಕ ಮಾಡಿಕೊಳ್ಳಲಾಗುತ್ತದೆ. ಆನ್ಲೈನ್ ಎಕ್ಸಾಮ್ನಲ್ಲಿ 2 ಆಪ್ಟೆಕ್ಟಿವ್ ಮಾದರಿಯ ಪ್ರಶ್ನೆಪತ್ರಿಕೆಗಳಿಗೆ ಅಭ್ಯರ್ಥಿಗಳು ಉತ್ತರಿಸಬೇಕು. ಎರಡೂ ಪತ್ರಿಕೆಗಳಿಗೆ ತಲಾ 250ರಂತೆ ಒಟ್ಟು 500 ಅಂಕ ನಿಗದಿಪಡಿಸಲಾಗಿರುತ್ತದೆ. ಪರ್ಸನಾಲಿಟಿ ಟೆಸ್ಟ್ಗೆ 100 ಅಂಕಗಳನ್ನು ನಿಗದಿ ಪಡಿಸಲಾಗಿದೆ. ಪರೀಕ್ಷೆ ಕುರಿತ ಸಂಪೂರ್ಣ ಮಾಹಿತಿಯನ್ನು ಅಧಿಸೂಚನೆಯಲ್ಲಿ ನೀಡಲಾಗಿದೆ.
ಅರ್ಜಿ ಶುಲ್ಕದ ವಿವರ:
200 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.
ಅಭ್ಯರ್ಥಿಗಳು ಪ್ರತ್ಯೇಕವಾಗಿ ಶುಲ್ಕ ಪಾವತಿಸಬೇಕಾಗುತ್ತದೆ. ಎಸ್ಸಿ/ಎಸ್ಟಿ, ವಿಶೇಷಚೇತನ ಹಾಗೂ ಮಹಿಳಾ ಅಭ್ಯರ್ಥಿ ಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ಶುಲ್ಕವನ್ನು SBI ಬ್ಯಾಂಕ್ನಲ್ಲಿ ಚಲನ್ ಪಡೆದು ಪಾವತಿಸಬಹುದು ಅಥವಾ ವೀಸಾ/ಮಾಸ್ಟರ್/ ರುಪೇ/ಕ್ರೆಡಿಟ್ / ಡೆಬಿಟ್ ಕಾರ್ಡ್ ಮೂಲಕವೂ ಎಸ್ಬಿಐ ಬ್ಯಾಂಕ್ನಲ್ಲಿ ಪಾವತಿಸಬಹುದು. ನಗದು ಪಾವತಿಸಲು ಮಾ.10 ಕೊನೆಯ ದಿನ. ಮತ್ತು ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಲು ಮಾ.11 ಕೊನೆಯ ದಿನವಾಗಿದೆ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಕೊನೆಯ ದಿನ: 11-03-2025
ಅರ್ಜಿ ತಿದ್ದುಪಡಿಗೆ ಕೊನೆಯ ದಿನಾಂಕಗಳು: 12-03-2025 ರಿಂದ 18-03-2025 ವರೆಗೆ
ರಾಜ್ಯದಲ್ಲಿ ಪರೀಕ್ಷಾ ಕೇಂದ್ರಗಳು:
ಬೆಂಗಳೂರು ಮತ್ತು ಧಾರವಾಡ
ಸಹಾಯವಾಣಿ ಸಂಖ್ಯೆಗಳು:
011-23385271/23381125/23098543
ಅರ್ಜಿ ಸಲ್ಲಿಸಲು ವೆಬ್ಸೈಟ್: www.upsconline.nic.in