HSRP-ಫಲಕ ಅಳವಡಿಕೆ:ಈ ದಿನಾಂಕದವರೆಗೆ ವಿಸ್ತರಣೆ, ಆದೇಶ ಇಲ್ಲಿದೆ.
HSRP number plate: High security registration plate:
ಅಧಿಸೂಚನೆ
ದಿನಾಂಕ:01.04.2019ಕ್ಕಿಂತ ಪೂರ್ವದಲ್ಲಿ ನೋಂದಣಿಯಾಗಿರುವ ಎಲ್ಲಾ ವರ್ಗದ ವಾಹನಗಳಿಗೆ ಅತೀ ಸುರಕ್ಷಿತ ನೋಂದಣಿ ಫಲಕ ಅಳವಡಿಸಲು ಸರ್ಕಾರದ ಅಧಿಸೂಚನೆ ಸಂಖ್ಯೆ: TD 193 TDO 2021, ದಿನಾಂಕ:17.08.2023 ರಲ್ಲಿ ದಿನಾಂಕ:31.03.2025ರವರೆಗೆ ವಿಸ್ತರಿಸಲಾಗಿದೆ.
ಕರ್ನಾಟಕ ರಾಜ್ಯದಲ್ಲಿ ವಾಹನಗಳ ಸುರಕ್ಷತೆ ಹಾಗೂ ಏಕರೂಪದ ಫಲಕದ ದೃಷ್ಟಿಯಿಂದ ಕೇಂದ್ರ ಸರ್ಕಾರ ಹಾಗೂ ನ್ಯಾಯಾಲಯದ ಸೂಚನೆ ಮೇರೆಗೆ ಜಾರಿಗೆ ತಂದಿರುವ High security registration plate ( HSRP) ಅಳವಡಿಸಿಕೊಳ್ಳಬೇಕಾದ ಅಂತಿಮ ಗಡುವು ಮುಂದೆ ಹೋಗುತ್ತಲೇ ಇದೆ.
ಸರ್ಕಾರವು ಈಗಾಗಲೇ ಅನೇಕ ಸಲ ವಿಸ್ತರಣೆ ಮಾಡಿರುವ ಕರ್ನಾಟಕ ಸಾರಿಗೆ ಇಲಾಖೆಯು ಮತ್ತೊಮ್ಮೆ ನಂಬರ್ ಫಲಕ ತಮ್ಮ ವಾಹನಗಳಿಗೆ ಅಳವಡಿಕೆ ಮಾಡಿಕೊಳ್ಳಲು ಮತ್ತೊಮ್ಮೆ ದಿನಾಂಕವನ್ನು ವಿಸ್ತರಣೆ ಮಾಡಿ ಅಧಿಸೂಚನೆ ಹೊರಡಿಸಿದೆ. ನೂತನ ಅಧಿಸೂಚನೆ ಅನುಸಾರ 2025 ರ ಮಾರ್ಚ್ 31ರ ಒಳಗೆ HSRP ನಂಬರ್ ಫಲಕ ಅಳವಡಿಕೆ ಮಾಡಿಕೊಳ್ಳಲು ಅವಕಾಶವನ್ನು ನೀಡಿದೆ.
HSRP ನಂಬರ್ ಫಲಕವನ್ನು ಪಡೆಯುವದು ಹೇಗೆ?
- ಮೊದಲಿಗೆ https://transport.karnataka.gov.in ಅಥವಾ www.siam.in ಪೋರ್ಟಲ್‌ನಲ್ಲಿ ಲಾಗಿನ್ ಆಗಬೇಕು. ನಂತರ ಇಲ್ಲಿ Book HSRP ಕ್ಲಿಕ್ ಮಾಡಿ ಮುಂದುವರೆಯಿರಿ.
- ನಂತರ ನಿಮ್ಮ ವಾಹನ ತಯಾರಕ ಕಂಪನಿ ಆಯ್ಕೆ ಮಾಡಿ.
- ನಿಮ್ಮ ವಾಹನದ ವಿವರವನ್ನು ಅಲ್ಲಿ ನಮೂದಿಸಿ.
- ನಂತರ ನಿಮ್ಮ ಸಮೀಪದ ಅಥವಾ ನಿಮ್ಮ ಡೀಲರ್ ಶೋ ರೂಂ ಆಯ್ಕೆ ಮಾಡಿ.
- HSRP ನಂಬರ್ ಪ್ಲೇಟ್‌ಗೆ ಅಲ್ಲಿ ನಮೂದಿಸಿದ ಹಣವನ್ನು ಆನ್‌ಲೈನ್‌ನಲ್ಲಿ ಪಾವತಿಸಿ.
- ನಂತರ ಮೊಬೈಲ್ ನಂಬರ್‌ಗೆ ಬರುವ ಒಟಿಪಿಯನ್ನು ನಮೂದಿಸಿ.
- ನಂತರ HSRP ನಂಬರ್ ಪ್ಲೇಟ್ ಅಳವಡಿಸಲು ನಿಮ್ಮ ಅನುಕೂಲದ ದಿನಾಂಕವನ್ನು ನಮೂದಿಸಿ ಪ್ರಿಂಟ್ ಕಾಪಿ ಪಡೆದುಕೊಳ್ಳಿ.
ಹೆಚ್ಚಿನ ಮಾಹಿತಿಗಾಗಿ – CLICK HERE