Vidyanjali 2.0 portal: ವಿದ್ಯಾಂಜಲಿ 2.0 ಪೋರ್ಟಲ್ ನಲ್ಲಿ ಜಿಲ್ಲೆಯ ಎಲ್ಲಾ ಸರ್ಕಾರಿ/ಅನುದಾನಿತ ಶಾಲೆಗಳಲ್ಲಿ ವಿಶೇಷ ಅಭಿಯಾನ 5.0 ರಡಿ ಸಾಂಸ್ಥಿಕರಣಗೊಳಿಸಿ ಶಾಲಾ ಪರಿಸರವನ್ನು ಹೆಚ್ಚಿಸುವ ಬಗ್ಗೆ ಸುತ್ತೋಲೆ

Vidyanjali 2.0 portal: ವಿದ್ಯಾಂಜಲಿ 2.0 ಪೋರ್ಟಲ್ ನಲ್ಲಿ ಜಿಲ್ಲೆಯ ಎಲ್ಲಾ ಸರ್ಕಾರಿ/ಅನುದಾನಿತ ಶಾಲೆಗಳಲ್ಲಿ ವಿಶೇಷ ಅಭಿಯಾನ 5.0 ರಡಿ ಸಾಂಸ್ಥಿಕರಣಗೊಳಿಸಿ ಶಾಲಾ ಪರಿಸರವನ್ನು ಹೆಚ್ಚಿಸುವ ಬಗ್ಗೆ ಸುತ್ತೋಲೆ

Vidyanjali 2.0 portal: ಶಿಕ್ಷಣ ಸಚಿವಾಲಯ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ, ಭಾರತ ಸರ್ಕಾರವು ಶಾಲಾ ಶಿಕ್ಷಣದಲ್ಲಿ ಸಮುದಾಯ, ಸ್ವಯಂ ಸೇವಕರು ಮತ್ತು ಸ್ವಯಂ ಸೇವಾ ಸಂಸ್ಥೆಗಳ ಕೊಡುಗೆ/ಸೇವೆಗಳನ್ನು ಗುರುತಿಸಿ ಶಾಲೆಗಳಿಗೆ ಸದುಪಯೋಗವಾಗುವಂತೆ ಮಾಡಲು ವಿದ್ಯಾಂಜಲಿ 2.0 ಕಾರ್ಯಕ್ರಮದ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಿದೆ. ಈ ಕಾರ್ಯಕ್ರಮವು ಶಾಲೆಗಳೊಂದಿಗೆ ಸಮುದಾಯ, ಸ್ವಯಂ ಸೇವಕರು ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸ್ವಯಂ ಪ್ರೇರಿತ ಕೊಡುಗೆಗಳನ್ನು ಹಾಗೂ ಸೇವೆಗಳನ್ನು ಒಟ್ಟುಗೊಡಿಸುವ ಒಂದು ವೇದಿಕೆಯಾಗಿದೆ.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ 2025-26ನೇ ಸಾಲಿನಲ್ಲಿ ವಿದ್ಯಾಂಜಲಿ 2.0 ಪೋರ್ಟಲ್‌ನ ಮೂಲಕ ಸರ್ಕಾರಿ ಶಾಲೆಗಳಲ್ಲಿ ವಿಶೇಷ ಅಭಿಯಾನ 5.0 ರಡಿ ಸ್ವಚ್ಛತೆಯನ್ನು ಸಾಂಸ್ಥಿಕರಣಗೊಳಿಸಿ ಶಾಲಾ ಪರಿಸರವನ್ನು ಹೆಚ್ಚಿಸುವ ಸಲುವಾಗಿ ಈ ಕೆಳಕಂಡ ಕಾರ್ಯಕ್ರಮಗಳನ್ನು ದಿನಾಂಕ:31.10.2025 ವರೆಗೆ ಹಮ್ಮಿಕೊಳಲು ಉಲ್ಲೇಖದನ್ವಯ ಸೂಚಿಸಲಾಗಿದೆ.

ವಿಶೇಷ ಅಭಿಯಾನ 5.0 ರಡಿಯಲ್ಲಿ ಶಾಲೆಗಳಲ್ಲಿ ಹಮ್ಮಿಕೊಳ್ಳಬೇಕಾಗಿರುವ ಕಾರ್ಯಕ್ರಮಗಳು:

1. ಸ್ವಚ್ಛತಾ ಕಾರ್ಯಕ್ರಮದಡಿಯಲ್ಲಿ ಶಾಲಾ ಆವರಣದ ವೈಟ್ ವಾಶಿಂಗ್/ಪೇಂಟಿಂಗ್ /ಸ್ವಚ್ಛತಾ ಕಾರ್ಯ

2. ಗೋಡೆ ಮೇಲೆ ಚಿತ್ರಕಲೆ ಬಿಡಿಸುವುದು.

3. ವಿದ್ಯುತ್/ಎಲೆಕ್ಟ್ರಾನಿಕ್ ದುರಸೀಕರಣ.

4. ಶೌಚಾಲಯಗಳು/ಕುಡಿಯುವ ನೀರಿನ ಸೌಲಭ್ಯಗಳನ್ನು ಅವಶ್ಯಕ ದುರಸ್ತ್ರೀಕರಣಗೊಳ್ಳಿಸಿ. ಕ್ರಿಯಾತ್ಮಕಗೊಳಿಸುವುದು.

5. ಸ್ಥಳೀಯ ಕಲಾ ಪ್ರಕಾರಗಳಿಂದ ಪ್ರೇರಿತವಾದ ಭಿತ್ತಿ ಚಿತ್ರಗಳ ಮೂಲಕ ಶಾಲಾ ಆವರಣವನ್ನು ಸುಂದರಗೊಳಿಸುವಲ್ಲಿ ಭಾಗವಹಿಸುವುದು.

ವಿಶೇಷ ಅಭಿಯಾನ 5.0 ರಡಿಯಲ್ಲಿ ಭಾಗವಹಿಸುವ ‘ಜನ ಭಾಗೀದಾರಿ.

1. ಈ ವಿಶೇಷ ಅಭಿಯಾನದ ಮೂಲಕ ಶಾಲೆಗಳ ಹಳೆಯ ವಿದ್ಯಾರ್ಥಿಗಳ ಸಂಘ, Alumniಗಳು.

2. ಸರ್ಕಾರಿ ಶಾಲಾ ವ್ಯಾಪ್ತಿಯಲ್ಲಿ ಬರುವ ಗ್ರಾಮ ಪಂಚಾಯಿತಿ/ಸ್ಥಳೀಯ ಸಂಸ್ಥೆಗಳು (Panchayath Raj Institutions)

3. ಸರ್ಕಾರಿ ಶಾಲೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳು (SDMC)

4. ಸ್ವಯಂ ಸೇವಾ ಸಂಸ್ಥೆಗಳು, ಬಹುರಾಷ್ಟ್ರೀಯ ಕಂಪನಿಗಳು(CSR Fund) ಮೂಲಕ,

5. ಸ್ಥಳೀಯ ವ್ಯಾಪಾರಸ್ಥರು ಮತ್ತು ಸ್ವಯಂ ಸೇವಕರುಗಳು ಇವರುಗಳನ್ನು ವಿದ್ಯಾಂಜಲಿ ಪೋರ್ಟಲ್ ನಲ್ಲಿ ನೋಂದಣಿ ಮಾಡಿಸಿಕೊಂಡು, ವಿಶೇಷ ಅಭಿಯಾನ 5.0 ರಡಿಯಲ್ಲಿ ಭಾಗೀದಾರರನ್ನಾಗಿ ಮಾಡಿಕೊಳ್ಳಲು ತಿಳಿಸಿದೆ.

ಶಾಲಾ ಮುಖ್ಯ ಶಿಕ್ಷಕರ ಜವಾಬ್ದಾರಿ:

1. ಶಾಲೆಯ ಸುತ್ತ ಮುತ್ತ, ಇರುವ ದಾನಿಗಳನ್ನು ಗುರುತಿಸಿ, ಶಾಲೆಗೆ ಅವರಿಂದ ಪಡೆಯಬಹುದಾದ ಸೇವೆಯನ್ನು ವಿದ್ಯಾಂಜಲಿ ಪೋರ್ಟಲ್ ಮೂಲಕ ನೋಂದಾಯಿಸಿ, ತಿಳಿಸಲಾದ ದಿನಾಂಕದೊಳಗೆ ವಿಶೇಷ ಅಭಿಯಾನ 5.0 ರಡಿಯಲ್ಲಿ ಭಾಗವಹಿಸುವಂತೆ ಕ್ರಮವಹಿಸುವುದು.

2. ‘ನಿರ್ವಹಣೆ ಹಾಗೂ ದುರಸ್ತಿ’ ಅಡಿಯಲ್ಲಿ ಸ್ವಯಂ ಸೇವಾ ಸಂಸ್ಥೆಗಳು, ಬಹುರಾಷ್ಟ್ರೀಯ ಕಂಪನಿಗಳನ್ನು (CSR Fund) ಗುರುತಿಸಿ, ವಿದ್ಯಾಂಜಲಿ ಪೋರ್ಟಲ್ ಮೂಲಕ ಪ್ರಾಜೆಕ್ಟ್‌ಗಳನ್ನು ತಯಾರಿಸಿ ಶಾಲೆಗಳಿಗೆ ಸೇವೆಯನ್ನು ಒದಗಿಸುವಂತೆ ಕ್ರಮವಹಿಸುವುದು.

3. ಶಾಲೆಗಳಲ್ಲಿ ತ್ವರಿತವಾಗಿ ಆಗಬೇಕಾಗಿರುವ ಸಣ್ಣ ಪುಟ್ಟ ದುರಸ್ತಿಗಳಾದ ವಿದ್ಯುತ್/ಎಲೆಕ್ಟ್ರಾನಿಕ್ ದುರಸ್ತಿ ಮತ್ತು ಶೌಚಾಲಯಗಳು/ಕುಡಿಯುವ ನೀರಿನ ಸೌಲಭ್ಯಗಳ ದುರಸ್ಥಿಗಳನ್ನು SDMC ಯವರೊಂದಿಗೆ ಚರ್ಚಿಸಿ ಪಟ್ಟಿ ಮಾಡುವುದು.

4. ಶಾಲಾ ಆವರಣವನ್ನು ಸುಂದರಗೊಳಿಸಲು ಸ್ಥಳೀಯ ಕಲಾ ಪ್ರಕಾರಗಳಿಂದ ಪ್ರೇರಿತವಾದ ಭಿತ್ತಿ ಚಿತ್ರಗಳನ್ನು ವಿದ್ಯಾರ್ಥಿಗಳಿಂದ /ಶಿಕ್ಷಕರಿಂದ ಹಾಗೂ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ತಯಾರಿಸಿ ಶಾಲಾ ಆವರಣವನ್ನು ಸುಂದರಗೊಳಿಸುವುದು.

ತಾಲ್ಲೂಕು ಮತ್ತು ಜಿಲ್ಲಾ ಹಂತದ ಅಧಿಕಾರಿಗಳ ಜವಾಬ್ದಾರಿಗಳು:

1. ವಿಶೇಷ ಅಭಿಯಾನ 5.0 ರಡಿಯಲ್ಲಿ ತಮ್ಮ ವ್ಯಾಪ್ತಿಗೆ ಬರುವ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ದಿನಾಂಕ:31.10.2025 ವರೆಗೆ ಸದರಿ ಅಭಿಯಾನ ನಡೆಯುವಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು.

2. ತಾಲ್ಲೂಕು ಮತ್ತು ಜಿಲ್ಲಾ ಹಂತದಲ್ಲಿ ಏಕಕಾಲದಲ್ಲಿ ಶಾಲೆಗಳಲ್ಲಿ ಹಮ್ಮಿಕೊಳ್ಳಬೇಕಾಗಿರುವ ಕಾರ್ಯಕ್ರಮಗಳ ಬಗ್ಗೆ ಕ್ರಿಯಾಯೋಜನೆಯನ್ನು ತಯಾರಿಸಿ, ಅನುಷ್ಠಾನಗೊಳಿಸುವ ಬಗ್ಗೆ ಕ್ರಮಕೈಗೊಳ್ಳೂವುದು.

3. ಜಿಲ್ಲಾ ಹಾಗೂ ತಾಲ್ಲೂಕು ವ್ಯಾಪ್ತಿಯಲ್ಲಿ SDMC/ಸಮುದಾಯ/ಶಾಲಾ ಹಳೆಯ ವಿದ್ಯಾರ್ಥಿಗಳು/ನೆರೆ-ಹೊರೆಯ ವ್ಯಾಪಾರಿಗಳು, ಸಂಘ-ಸಂಸ್ಥೆಗಳು/ಪಂಚಾಯತಿಗಳು/ CSR ಗಳು ಶಾಲಾ ಆವರಣದ ವೈಟ್ ವಾಶಿಂಗ್/ಪೇಂಟಿಂಗ್/ವಿದ್ಯುತ್ ರಿಪೇರಿ/ಕುಡಿಯುವ ನೀರಿನ ವ್ಯವಸ್ಥೆ/ಶೌಚಾಲಯ ರಿಪೇರಿ/ಸುಚಿತ್ರದಂತಹ ಕಾರ್ಯಕ್ರಮಗಳಲ್ಲಿ ವಿದ್ಯಾಂಜಲಿ ಪೋರ್ಟಲ್ ಮೂಲಕ ತೊಡಗಿಸಿಕೊಳ್ಳುವಂತೆ ಸಜ್ಜುಗೊಳಿಸುವುದು.

4. ವಿದ್ಯಾಂಜಲಿ 2.0 ಕಾರ್ಯಕ್ರಮದ ಜಿಲ್ಲಾ ಹಂತದ ನೋಡಲ್ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಬ್ಲಾಕ್‌ನಲ್ಲಿನ ಶಾಲೆಗಳಲ್ಲಿ ವಿಶೇಷ ಅಭಿಯಾನ 5.0 ರಡಿಯಲ್ಲಿ ಮಾಡಲಾಗಿರುವ ಕಾರ್ಯಕ್ರಮದ ವರದಿಯನ್ನು ತಪ್ಪದೇ ಪ್ರತಿ ವಾರದ ಗುರುವಾರ ನೀಡಲಾಗುವ GOOGLE SHEETನಲ್ಲಿ ಪೋಟೋಗಳ ಸಹಿತ ಮಾಹಿತಿಯನ್ನು ನೀಡುವುದು.

5. ಶಾಲೆಗಳಿಂದ ವಿದ್ಯಾಂಜಲಿ ಪೋರ್ಟಲ್ ನಲ್ಲಿ ಕಾರ್ಯಕ್ರಮ ಅನುಷ್ಠಾನಕ್ಕೂ ಮೊದಲಿನ ಹಾಗೂ ನಂತರದ ಫೋಟೋಗಳನ್ನು ಅಪ್ಲೋಡ್ ಮಾಡುವಂತೆ ಕ್ರಮವಹಿಸುವುದು.

6. ತಾಲ್ಲೂಕು ಹಾಗೂ ಜಿಲ್ಲಾ ಹಂತದ ನೋಡಲ್ ಅಧಿಕಾರಿಗಳು ಕಾರ್ಯಕ್ರಮ ಅನುಷ್ಠಾನದ ಕುರಿತು ವರದಿ ತಯಾರಿಸಿ ರಾಜ್ಯ ಕಛೇರಿಗೆ ಸಲ್ಲಿಸುವುದು.

7. ಜಿಲ್ಲಾ ಹಾಗೂ ತಾಲೂಕು ಹಂತದ ಅಧಿಕಾರಿಗಳು NGOS, CSRS, NRIs, PSUs, Corporates, Industry Bodies ಮತ್ತು ಸ್ಥಳೀಯ ವ್ಯಾಪಾರಿಗಳ ಸೇವೆಯನ್ನು ತಮ್ಮ ವ್ಯಾಪ್ತಿಯಲ್ಲಿನ ಶಾಲೆಗಳಲ್ಲಿ ವೈಟ್ ವಾಶಿಂಗ್/ಪೇಂಟಿಂಗ್/ವಿದ್ಯುತ್ ರಿಪೇರಿ/ಕುಡಿಯುವ ನೀರಿನ ವ್ಯವಸ್ಥೆ/ಶೌಚಾಲಯ ರಿಪೇರಿ/ಸುಚಿತ್ರದಂತಹ ಅತ್ಯವಶ್ಯಕತೆ ಇರುವ ಶಾಲೆಗಳ ಪಟ್ಟಿ ಸಿದ್ಧಪಡಿಸಿಕೊಂಡು ಸ್ಥಳಿಯ ಜನ ಭಾಗೀದಾರರೊಂದಿಗೆ ಹೊಂದಾಣಿಕೆ (Twinning) ಮಾಡಿ ವಿಶೇಷ ಅಭಿಯಾನವನ್ನು 5.0 ರನ್ನು ಯಶಿಸ್ತಿಗೊಳ್ಳಿಸಲು ಕ್ರಮವಹಿಸುವುದು.


CLICK HERE TO DOWNLOAD CIRCULAR

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!