What is the Indus Waters Treaty? Here is important information.

What is the Indus Waters Treaty? Here is important information.

What is the Indus Waters Treaty?  ಪಾಕಿಸ್ತಾನ ಪ್ರೇರಿತ, ಪಹಲ್ದಾಂ ಉಗ್ರಕೃತ್ಯಕ್ಕೆ ಪ್ರತಿಯಾಗಿ ಪ್ರಾಭಾರತವು ಪಾಕಿಸ್ತಾನದ ಮೇಲೆ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದೆ. ಇದರಲ್ಲಿ, ಸಿಂಧೂ ನದಿ ಜಲ ಒಪ್ಪಂದ ರದ್ದು ಕೂಡ ಒಂದು. ಈ ಜಲ ಒಪ್ಪಂದದ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

ಸಿಂಧೂ ಜಲ ಒಪ್ಪಂದ?: ಭಾರತ ಮತ್ತು ಪಾಕಿಸ್ತಾನ

ವಿಭಜನೆಯಾದ ಮೇಲೆ ನದಿ ನೀರು ಹಂಚಿಕೆ ವಿಚಾರವಾಗಿ ಸತತ ಒಂಬತ್ತು ವರ್ಷಗಳ ಕಾಲ ಮಾತುಕತೆ ನಡೆಯಿತು. ಅಂತಿಮವಾಗಿ ವಿಶ್ವಬ್ಯಾಂಕ್ ಮಧ್ಯಸ್ಥಿಕೆಯಲ್ಲಿ 1960ರ ಸೆಪ್ಟೆಂಬರ್ 19ರಂದು ಭಾರತ ಹಾಗೂ ಪಾಕಿಸ್ತಾನದ ನಡುವೆ ಸಿಂಧೂ ನದಿ ಒಪ್ಪಂದ ಏರ್ಪಟ್ಟಿತ್ತು. ವಿಶ್ವಬ್ಯಾಂಕ್‌ನ ಅಂದಿನ ಅಧ್ಯಕ್ಷ ಯೂಜೀನ್ ಬ್ಲ್ಯಾಕ್ ಅವರ ಸಮ್ಮುಖದಲ್ಲಿ ಭಾರತದ ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ, ಪಾಕಿಸ್ತಾನದ ಅಂದಿನ ಅಧ್ಯಕ್ಷ ಅಯೂಬ್ ಖಾನ್ ಸಹಿ ಹಾಕಿದ್ದರು. ಸಿಂಧೂ ನದಿ ಹಾಗೂ ಅದರ ಉಪನದಿಗಳಾದ ರಾವಿ, ಬಿಯಾಸ್, ಸಟೆಜ್, ಝೇಲಂ ಹಾಗೂ ಚೆನಾಬ್ ನದಿಗಳ ನೀರಿನ ಬಳಕೆ ಹಾಗೂ ಹಂಚಿಕೆಯನ್ನು ಈ ಒಪ್ಪಂದ ವಿವರಿಸುತ್ತದೆ.

ಒಪ್ಪಂದದನ್ವಯ ಪೂರ್ವದ ನದಿಗಳಾದ ರಾವಿ, ಬಿಯಾಸ್ ಹಾಗೂ ಸಟ್ಲಜ್ ನೀರು ಭಾರತಕ್ಕೆ ಸಂಬಂಧಿಸಿದ್ದರೆ, ಪಶ್ಚಿಮದ ನದಿಗಳಾದ ಚೆನಾಬ್, ಝೇಲಂ ಹಾಗೂ ಸಿಂಧೂ ನದಿಗಳ ನೀರು ಪಾಕಿಸ್ತಾನಕ್ಕೆ ಸೇರಿವೆ. ಆದರೆ, ಪಾಕಿಸ್ತಾನಕ್ಕೆ ಹಂಚಿಕೆಯಾಗಿರುವ ಸಿಂಧೂ, ಚೆನಾಬ್ ಹಾಗೂ ಝೇಲಂ ನದಿಗಳ ವ್ಯಾಪ್ತಿಯಲ್ಲಿ ಜಲವಿದ್ಯುತ್ ಯೋಜನೆಯಂತಹ ಕಾಮಗಾರಿಗಳನ್ನು ನಡೆಸಲು ಒಪ್ಪಂದದಲ್ಲಿ ನಿರ್ಬಂಧವಿಲ್ಲ. ಒಪ್ಪಂದದಲ್ಲಿ ಜಲವಿದ್ಯುತ್ ಸ್ಥಾವರ ನಿರ್ಮಾಣ, ಪ್ರವಾಹ ನಿಯಂತ್ರಣ ಹಾಗೂ 150 ಟಿಎಂಸಿಗೂ ಅಧಿಕ ಪ್ರಮಾಣದ ನೀರನ್ನು ಶೇಖರಣೆ ಮಾಡಲು ಭಾರತಕ್ಕೆ ಅವಕಾಶವಿದೆ. ಆದರೆ, ಭಾರತ ಈವರೆಗೆ ನೀರು ಶೇಖರಿಸಿಡುವ ಯತ್ನವನ್ನು ಮಾಡಿಲ್ಲ.

ಒಪ್ಪಂದ ಮರುಪರಿಶೀಲನೆಗೆ ನೋಟಿಸ್:

2024ರ ಆಗಸ್ಟ್ 30ರಂದು ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ಮರುಪರಿಶೀಲಿಸುವ ಕುರಿತು ಪಾಕಿಸ್ತಾನಕ್ಕೆ ನೋಟಿಸ್‌ ಕೂಡ ನೀಡಿತ್ತು. ಆರು ದಶಕದಷ್ಟು ಹಳೆಯ ಒಪ್ಪಂದವು ಹವಾಮಾನ ವೈಪರೀತ್ಯ ಪಾಕಿಸ್ತಾನಕ್ಕೆ ತಳಮಳ

ಒಪ್ಪಂದದ ಅಡಿಯಲ್ಲಿ ಭಾರತವು ಸಿಂಧೂ ಮತ್ತು ಅದರ ಉಪ ನದಿಗಳಿಂದ ಶೇಕಡಾ 19.5 ರಷ್ಟು ನೀರು ಪಡೆದರೆ, ಪಾಕಿಸ್ತಾನ ಸುಮಾರು ಶೇ. 80ರಷ್ಟು ನೀರು ಪಡೆಯುತ್ತದೆ. ಪಾಕಿಸ್ತಾನದ ಶೇ.65ರಷ್ಟು ಭೂಪ್ರದೇಶದ ಕೃಷಿಯು ಸಿಂಧೂ ಮತ್ತು ಉಪನದಿಗಳ ಮೇಲೆ ಅವಲಂಬಿತವಾಗಿದೆ. ಪಾಕಿಸ್ತಾನದಲ್ಲಿ ಬೇಡಿಕೆಯ ಶೇ.90ರಷ್ಟು ಆಹಾರ ಪದಾರ್ಥ ಬೆಳೆಯುವುದು ಸಿಂಧೂ ನದಿ ನೀರಿನಿಂದ. ಶೇ.68ರಷ್ಟು ಗ್ರಾಮೀಣ ಜನಸಂಖ್ಯೆ ಸಿಂಧೂ ನದಿ ನೀರಿನನ್ನು ಅವಲಂಬಿಸಿದೆ. ಒಪ್ಪಂದ ರದ್ದಾಗಿರುವುದರಿಂದ ಪಾಕಿಸ್ತಾನಕ್ಕೆ ಭಾರಿ ದೊಡ್ಡ ಹೊಡೆತ ಬೀಳಲಿದೆ.

ಹಾಗೂ ಜಾಗತಿಕ ತಾಪಮಾನ ವಿಚಾರಗಳನ್ನು ಒಳಗೊಂಡಿದೆ. ತಿದ್ದುಪಡಿ ಮೂಲಕ ಈ ಅಂಶಗಳನ್ನು ಒಪ್ಪಂದಕ್ಕೆ ಹೊಸದಾಗಿ ಸೇರ್ಪಡೆ ಮಾಡಬೇಕು ಎಂಬುದು ಭಾರತದ ವಾದವಾಗಿತ್ತು. ಆದರೆ, ಇದೇ ಸಂದರ್ಭ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತ – ಕೈಗೊಂಡ ಕಿಶನ್ ಗಂಗಾ ಹಾಗೂ ರತಲೆ ಜಲವಿದ್ಯುತ್ ಯೋಜನೆಗಳಿಗೆ ಪಾಕಿಸ್ತಾನ ಆಕ್ಷೇಪ ವ್ಯಕ್ತಪಡಿಸಿತ್ತು. ಮಾತ್ರವಲ್ಲದೆ, ಸಿಂಧೂ ನದಿ ಹಾಗೂ ಉಪನದಿಗಳು ಪಾಕಿಸ್ತಾನದ ಆರ್ಥಿಕತೆ ಹಾಗೂ ಆಹಾರ ಭದ್ರತೆಗೆ ಅಡಿಪಾಯ ಹಾಕಿವೆ. ಹಾಗಾಗಿ, ಭಾರತ ಈ ಯೋಜನೆಗಳನ್ನು ಕೈಬಿಡಬೇಕು ಎಂದು ಒತ್ತಾಯಿಸಿದ ಪಾಕ್ ಅಂತಾರಾಷ್ಟ್ರೀಯ ನ್ಯಾಯಾಲಯದ ಮೆಟ್ಟಿಲೇರಿತ್ತು. ಆದರೆ, ಇದಕ್ಕೂ ಮೊದಲೇ 2022ರಲ್ಲಿ ವಿವಾದವನ್ನು ಬಗೆಹರಿಸಲು ವಿಶ್ವಬ್ಯಾಂಕ್ ತಟಸ್ಥ ತಜ್ಞರ ಕಮಿಟಿಯನ್ನು ನೇಮಿಸಿತ್ತು. 2025ರ ಜನವರಿಯಲ್ಲಿ ಈ ತಟಸ್ಥ ತಜ್ಞರ ತಂಡ ಜಮ್ಮು-ಕಾಶ್ಮೀರದಲ್ಲಿ ಭಾರತ ನಿರ್ಮಿಸಲು ಉದ್ದೇಶಿಸಿರುವ ಎರಡು ಜಲವಿದ್ಯುತ್ ಯೋಜನೆಗಳಿಗೆ ಸಂಬಂಧಿಸಿದಂತೆ ಭಾರತದ ವಾದವನ್ನು ಎತ್ತಿ ಹಿಡಿಯಿತು. ಸದ್ಯ ಒಪ್ಪಂದವನ್ನೇ ರದ್ದು ಮಾಡಲಾಗಿದ್ದು, ಭಾರತ ಮುಂದಿನ ನಡೆಯ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ.

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

error: Content is protected !!