PM POSHAN: 2024-25 ನೇ ಸಾಲಿನ ಪಿ.ಎಂ.ಪೋಷಣ್ ಯೋಜನೆಯಡಿಯಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೆ ಬಳಸುವ ಸೂರ್ಯಕಾಂತಿ ಎಣ್ಣೆಯ ಪ್ರಮಾಣದಲ್ಲಿ 10% ಕಡಿಮೆಗೊಳಿಸುವ ಬಗ್ಗೆ.

PM POSHAN: 2024-25 ನೇ ಸಾಲಿನ ಪಿ.ಎಂ.ಪೋಷಣ್ ಯೋಜನೆಯಡಿಯಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೆ ಬಳಸುವ ಸೂರ್ಯಕಾಂತಿ ಎಣ್ಣೆಯ ಪ್ರಮಾಣದಲ್ಲಿ 10% ಕಡಿಮೆಗೊಳಿಸುವ ಬಗ್ಗೆ.

 

PM POSHAN: ಮೇಲ್ಕಂಡ ವಿಷಯ ಹಾಗೂ ಉಲ್ಲೇಖಕ್ಕೆ ಸಂಬಂಧಿಸಿದಂತೆ 2024-25 ನೇ ಸಾಲಿನ ಪಿ.ಎಂ.ಪೋಷಣ್ ಯೋಜನೆಯಡಿಯಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೆ ಬಳಸುವ ಸೂರ್ಯಕಾಂತಿ ಎಣ್ಣೆಯನ್ನು 1ರಿಂದ 5 ನೇ ತರಗತಿ ಮಕ್ಕಳಿಗೆ 5 ಗ್ರಾಂ ಹಾಗೂ 6 ರಿಂದ 10 ನೇ ತರಗತಿ ಮಕ್ಕಳಿಗೆ 7.5 ಗ್ರಾಂ ಪ್ರಮಾಣವನ್ನು ಬಳಸಲಾಗುತ್ತಿದೆ.

1990 ರಲ್ಲಿ 0.4 ಮಿಲಿಯನ್ ಗೆ ಹೋಲಿಸಿದರೆ 2022 ರಲ್ಲಿ ದೇಶಾದ್ಯಂತ 5 ರಿಂದ 19 ವಯೋಮಾನದವರಲ್ಲಿ 12.5 ಮಿಲಿಯನ್ ರಷ್ಟು ಅಧಿಕ ತೂಕವನ್ನು ಹೊಂದಿರುತ್ತಾರೆಂದು ಲ್ಯಾನ್ಸೆಟ್ ಪತ್ರಿಕೆ ವರದಿ ಮಾಡಿದೆ.

ಹೆಚ್ಚುತ್ತಿರುವ ಸ್ಕೂಲಕಾಯತೆ ಮತ್ತು ಹೃದ್ರೋಗ ಸಮಸ್ಯೆಯ ಹಿನ್ನೆಲೆಯಲ್ಲಿ ಅಡುಗೆ ಎಣ್ಣೆಯನ್ನು 10% ಕಡಿಮೆ ಬಳಸುವಂತೆ ಪ್ರಧಾನ ಮಂತ್ರಿಗಳು ಕರೆ ನೀಡಿರುತ್ತಾರೆ.

ಆದುದರಿಂದ ಶಾಲೆಗಳ ಮಧ್ಯಾಹ್ನದ ಬಿಸಿಯೂಟದಲ್ಲಿ ಬಳಸುವ ಸೂರ್ಯಕಾಂತಿ ಎಣ್ಣೆಯ ಪ್ರಮಾಣವನ್ನು 10% ರಷ್ಟು ಕಡಿಮೆ ಮಾಡಲು ಶಿಕ್ಷಕರು, ಪೋಷಕರು, ಶಾಲಾ ವಿದ್ಯಾರ್ಥಿಗಳು ಮತ್ತು ಸಮುದಾಯದ ಸದಸ್ಯರಲ್ಲಿ ಜಾಗೃತಿ ಮೂಡಿಸುವ ಕ್ರಮ ತುರ್ತು ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಕೆಳಕಂಡ ಅಂಶಗಳನ್ನು ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಕಾರ್ಯದರ್ಶಿಗಳು ಮಾರ್ಗಸೂಚಿಯಲ್ಲಿ ತಿಳಿಸಿರುವಂತೆ ಅನುಸರಿಸುವುದು.

1. ಪುಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ (ಪಿ.ಎಂ. ಪೋಷಣ್) ಯೋಜನೆಯು ವಿದ್ಯಾರ್ಥಿಗಳಿಗೆ ಪೌಷ್ಠಿಕ ಬಿಸಿ ಊಟವನ್ನು ಒದಗಿಸುವ ಗುರಿಯನ್ನು ಹೊಂದಿರುವ ಪ್ರಮುಖ ಹಕ್ಕು ಆಧಾರಿತ, ಕೇಂದ್ರ ಪ್ರಾಯೋಜಿತ ಯೋಜನೆಯಾಗಿದೆ. ಈ ಉಪಕ್ರಮವು ಬಾಲ-ವಾಟಿಕಾ, ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ 1 ರಿಂದ 8 ನೇ ತರಗತಿಗಳಲ್ಲಿ ದಾಖಲಾದ ಎಲ್ಲಾ ಮಕ್ಕಳಿಗೆ ಪ್ರಯೋಜನವನ್ನು ನೀಡಲಾಗುತ್ತಿದೆ.

2. ಅತಿಯಾದ ಅಡುಗೆ ಎಣ್ಣೆ ಸೇವನೆಯು ಬೊಜ್ಜು, ಹೃದ್ರೋಗ ಮತ್ತು ಜೀರ್ಣಕಾರಿ ಸಮಸ್ಯೆಗಳಂತಹ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದೆ. ಆದ್ದರಿಂದ, ವಿದ್ಯಾರ್ಥಿಗಳಲ್ಲಿ ಆರೋಗ್ಯಕರ ಜೀವನ ಶೈಲಿಯನ್ನು ಉತ್ತೇಜಿಸಲು, ದೈನಂದಿನ ಊಟದಲ್ಲಿ ಎಚ್ಚರಿಕೆಯಿಂದ ಅಡುಗೆ ಎಣ್ಣೆ ಸೇವನೆಯ ಬಗ್ಗೆ, ಜಾಗೃತಿ ಮೂಡಿಸುವುದು ಅತ್ಯಗತ್ಯ.

3. ಬಾಲ್ಯದ ಸ್ಕೂಲಕಾಯತೆಯು ಇಂದಿನ ಜಗತ್ತಿನಲ್ಲಿ ಹೆಚ್ಚುತ್ತಿರುವ ಕಾಳಜಿಯಾಗಿದೆ. ಅಡುಗೆ ಎಣ್ಣೆಯ ಅತಿಯಾದ ಸೇವನೆಯ ದುಷ್ಪರಿಣಾಮಗಳು ಮತ್ತು ಸ್ಕೂಲಕಾಯತೆಗೆ ಅದರ ಪರಿಣಾಮದ ಬಗ್ಗೆ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ತುರ್ತು ಅವಶ್ಯಕತೆಯಿದೆ. ಪಿ.ಎಂ. ಪೋಷಣ್ ಯೋಜನೆಯಡಿಯ ವಿದ್ಯಾರ್ಥಿಗಳಲ್ಲಿ ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸಲು ಅತ್ಯುತ್ತಮ ಅವಕಾಶವನ್ನು ಒದಗಿಸುತ್ತದೆ, ಕನಿಷ್ಠ ಅಡುಗೆ ಎಣ್ಣೆಯಿಂದ ತಾಜಾ ಹಾಗೂ ಪೌಷ್ಠಿಕ ಬಿಸಿ ಊಟವನ್ನು ತಯಾರಿಸಲು ಮತ್ತು ಸೇವಿಸಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತದೆ.

4. ಪಿ.ಎಂ. ಪೋಷಣ್ ಯೋಜನೆಯಡಿಯಲ್ಲಿ, ಬಿಸಿಯೂಟವನ್ನು ಪೌಷ್ಠಿಕಾಂಶಗಳ ಸಮತೋಲನಗೊಳಿಸಲು ಎಚ್ಚರಿಕೆಯಿಂದ ಸಿದ್ಧಪಡಿಸಲಾಗಿದೆ, ಅಕ್ಕಿ/ಗೋಧಿ/ಸಿರಿಧಾನ್ಯಗಳು, ದ್ವಿದಳ ಧಾನ್ಯಗಳು ಮತ್ತು ತರಕಾರಿಗಳನ್ನು ಒಳಗೊಂಡಿದೆ. ಡಬಲ್ ಫೋರ್ಟಿಫೈಡ್ ಸಾಲ್ಟ್ (ಡಿಎಫ್‌ಎಸ್) ಅನ್ನು ಅಳತೆ ಮಾಡಿದ ಪ್ರಮಾಣದಲ್ಲಿ ಬಳಸಲಾಗುತ್ತದೆ. ಸಾರವರ್ಧಿತ ಖಾದ ತೈಲವು ವಿಟಮಿನ್ ಎ ಮತ್ತು ಡಿ ಯಿಂದ ಸಮೃದ್ಧವಾಗಿದೆ. ಶಾಲಾ ಪೌಷ್ಠಿಕ ಉದ್ಯಾನಗಳಲ್ಲಿ ಬೆಳೆದ ತರಕಾರಿಗಳನ್ನು ನೇರವಾಗಿ ಬಳಸಿಕೊಳ್ಳಲಾಗುತ್ತದೆ.

ತೋಟಗಾರಿಕೆಯಲ್ಲಿ  ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ, ವಿದ್ಯಾರ್ಥಿಗಳು ಪೌಷ್ಠಿಕ ಆಹಾರದ ಮಹತ್ವವನ್ನು ಅರ್ಥೈಸಿಕೊಳ್ಳುತ್ತಿದ್ದು ಬಹುಪೌಷ್ಠಿಕ ಆಹಾರವನ್ನು ಸೇವಿಸುವ ಬಗ್ಗೆ, ಸಮರ್ಪಕ ಅರಿವನ್ನು ಬೆಳೆಸಿಕೊಳ್ಳುತ್ತಿದ್ದಾರೆ.

ಕಡಿಮೆಯಾದ ತೈಲ ಸೇವನೆಯ ಪ್ರಯೋಜನಗಳ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಈ ಕೆಳಕಂಡ ಚಟುವಟಿಕೆಗಳನ್ನು ಶಾಲಾ ಹಂತದಲ್ಲಿ ಕೈಗೊಳ್ಳುವಂತೆ ಶಿಫಾರಸ್ಸು ಮಾಡಲಾಗಿದೆ.

1. ಬಿಸಿಯೂಟದಲ್ಲಿ ಅಡುಗೆ ಎಣ್ಣೆಯ ಬಳಕೆಯನ್ನು ಕಡಿಮೆ ಮಾಡುವ ಮಹತ್ವದ ಕುರಿತು ಅಡುಗೆ ಸಿಬ್ಬಂದಿಗಳಿಗೆ ತರಬೇತಿಗಳನ್ನು ಕಡ್ಡಾಯವಾಗಿ ಹಮ್ಮಿಕೊಳ್ಳುವುದು.

2. ಆರೋಗ್ಯ ಸಂಸ್ಥೆಗಳು ಮತ್ತೆ Home Science ಕಾಲೇಜುಗಳ ಪೌಷ್ಟಿಕ ತಜ್ಞರನ್ನು ಆಹ್ವಾನಿಸಿ ಕಡಿಮೆ ಅಡುಗೆ ಎಣ್ಣೆ ಬಳಸಿ ತಯಾರಿಸಬಹುದಾದ ಆಹಾರಗಳ ಕುರಿತು ತರಬೇತಿಗಳನ್ನು ಹಮ್ಮಿಕೊಳ್ಳುವುದು ಹಾಗೂ ಪಾಕ ವಿಧಾನಗಳನ್ನು ಎಲ್ಲರಿಗೂ ತಲುಪಿಸುವುದು.

3. ಆರೋಗ್ಯಕರ ಆಹಾರ ಪದ್ಧತಿಗಳ ಕುರಿತು ಶಾಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ಸೂಕ್ತ ಬಹುಮಾನವನ್ನು ನೀಡುವುದು.

4. ಪೋಷಣೆ ಮತ್ತು ಆರೋಗ್ಯ ಕುರಿತು ಗುಂಪು ಚರ್ಚೆ, ಪ್ರಬಂಧ ಬರವಣಿಗೆಯಂತಹ ಚಟುವಟಿಕೆಗಳಲ್ಲಿ Eco club ಅಡಿಯಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುವುದು.

5. ಆರೋಗ್ಯಕರ ಆಹಾರ ಜೀವನ ಶೈಲಿಯನ್ನು ಕಾಪಾಡಿಕೊಳ್ಳಲು ಮತ್ತು ಹೆಚ್ಚುವರಿ ಕ್ಯಾಲೊರಿಗಳನ್ನು ಕಡಿಮೆ ಮಾಡಲು ನಿಯಮಿತವಾದ ವ್ಯಾಯಾಮ ಮತ್ತು ಯೋಗ ಹಾಗೂ ಕ್ರೀಡಾ ಚಟುವಟಿಕೆಗಳನ್ನು ಶಾಲೆಗಳಲ್ಲಿ ಅಳವಡಿಸುವುದು.

6. ವಿದ್ಯಾರ್ಥಿಗಳಲ್ಲಿ ಸ್ಕೂಲಕಾಯತೆಯನ್ನು ಗುರುತಿಸಲು ಮತ್ತು ಸಮತೋಲನ ಆಹಾರ ವನ್ನು ಸೇವಿಸಲು ಹಾಗೂ ವಿದ್ಯಾರ್ಥಿಗಳ ದೈಹಿಕ ವ್ಯಾಯಾಮ ಚಟುವಟಿಕೆಗಳನ್ನು ಹೆಚ್ಚಿಸುವ ಕುರಿತು ಪೋಷಕರಿಗೆ ಮಾರ್ಗದರ್ಶನ ನೀಡಲು ತರಬೇತಿಗಳನ್ನು ಹಮ್ಮಿಕೊಳ್ಳುವುದು.

7. ವಿದ್ಯಾರ್ಥಿಗಳು ಮನೆಯಲ್ಲಿಯೇ ಪಾಲಕರ ಮೇಲ್ವಿಚಾರಣೆಯಲ್ಲಿ ಕಡಿಮೆ ಎಣ್ಣೆಯಿಂದ ಆಹಾರ ತಯಾರಿಸಿ, ಪಾಲಕರ ಮಾರ್ಗದರ್ಶನದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಚಿತ್ರಗಳನ್ನು ಹಂಚಿಕೊಳ್ಳಲು ಮತ್ತು ಆರೋಗ್ಯಕರ ಆಹಾರ ಪದ್ಧತಿಯನ್ನು ಉತ್ತೇಜಿಸಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಬಹುದು.

8. ಅತಿಯಾದ ತೈಲ ಬಳಕೆಯ ಅಪಾಯಗಳ ಬಗ್ಗೆ, ವಿದ್ಯಾರ್ಥಿಗಳಿಗೆ ತಿಳಿಸಲು ವೈದ್ಯರು, ಆರೋಗ್ಯ ತಜ್ಞರು ಮತ್ತು ಪೌಷ್ಠಿಕ ತಜ್ಞರು ಇವರುಗಳಿಂದ ಸೆಮಿನಾರ್ಗಗಳು ಕಾರ್ಯಾಗಾರಗಳು ಮತ್ತು ಅತಿಥಿ ಉಪನ್ಯಾಸಗಳನ್ನು ಜಿಲ್ಲೆ, ತಾಲ್ಲೂಕು ಮತ್ತು ಶಾಲಾ ಹಂತದಲ್ಲಿ ಜಾಗೃತಿ ಅಭಿಯಾನಗಳನ್ನು ಆಯೋಜಿಸುವುದು. ಶಾಲೆಗಳಲ್ಲಿ PM VIDYA ಮತ್ತು DIKSHA ಇವುಗಳನ್ನು ಸೇರಿದಂತೆ Jingles, Video Pomos, e-Contents ಇತ್ಯಾದಿಗಳ ಮೂಲಕ ಕಡಿಮೆ
ಅಡುಗೆ ಎಣ್ಣೆ ಬಳಕೆ ಕುರಿತು ತರಬೇತಿ ಹಮ್ಮಿಕೊಳ್ಳುವುದು.

9. ಪರ್ಯಾಯ ಅಡುಗೆ ವಿಧಾನಗಳನ್ನು ಬಳಸಿಕೊಂಡು ರುಚಿಕರವಾದ, ಕಡಿಮೆ ಎಣ್ಣೆ ಯನ್ನು ಬಳಸಿ ಆಹಾರ ಪದಾರ್ಥಗಳನ್ನು ತಯಾರಿಸುವ ವಿಧಾನಗಳನ್ನು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಪ್ರದರ್ಶನಗಳ ಮೂಲಕ ಅರಿವು ಮೂಡಿಸುವುದು.

10. ಕಡಿಮೆ ತೈಲ ಬಳಕೆಯ ಪ್ರಯೋಜನಗಳನ್ನು ಕುರಿತು ಶಾಲೆಗಳಲ್ಲಿ ಆಕರ್ಷಕವಾಗಿರುವ ಪೋಸ್ಮರ್‌ಗಳು, ಬ್ಯಾನರ್‌ಗಳು ಮತ್ತು ಇನ್ನೊಗ್ರಾಫಿಕ್ಸ್ ಅನ್ನು ಪ್ರದರ್ಶಿಸುವುದು.

11. ಆರೋಗ್ಯಕರ, ಕಡಿಮೆ ಅಡುಗೆ ಎಣ್ಣೆ ಬಳಸಿ ತಯಾರಿಸಿದ ಆಹಾರಗಳನ್ನು ಶಾಲೆಗಳಲ್ಲಿ ವಿತರಿಸುವಂತೆ ಪ್ರೋತ್ಸಾಹಿಸುವುದು.

12. ಶಾಲೆಗಳಲ್ಲಿ ಸಹಪಾಠಿಗಳಿಗೆ ಉತ್ತಮ ಆಹಾರದ ಆಯ್ಕೆ ಹಾಗೂ ಕಡಿಮೆ ಅಡುಗೆ ಎಣ್ಣೆಯ ಬಳಕೆ ಕುರಿತು ಚರ್ಚೆಗಳನ್ನು ನಡೆಸಲು ತರಗತಿವಾರು ವಿದ್ಯಾರ್ಥಿಗಳಿಗೆ ಆರೋಗ್ಯ ರಾಯಭಾರಿಗಳನ್ನು ನೇಮಿಸುವುದು.

13. ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ತಾವು ಸೇವಿಸುವ ಅಡುಗೆ ಎಣ್ಣೆಯ ಪ್ರಮಾಣ ಬಳಕೆ ಕುರಿತು ಮತ್ತು ಅವರ ಆರೋಗ್ಯ ಮತ್ತು ಶಕ್ತಿಯ ಮಟ್ಟದಲ್ಲಿನ ಬದಲಾವಣೆಗಳನ್ನು ಗಮನಿಸಲು. ಶಿಕ್ಷಕರು ಶಾಲಾ ಹಂತದಲ್ಲಿ ಕಾರ್ಯ ಯೋಜನೆಗಳನ್ನು ( Project) ನೀಡುವುದು.

14. ಶಾಲೆಗಳಲ್ಲಿ ಅಥವಾ ಮನೆಗಳಲ್ಲಿ Deep frying ಮಾಡುವ ಬದಲು ಹಬೆಯಲ್ಲಿ ಬೇಯಿಸುವುದು, ಹುರಿಯುವುದು, ಕುದಿಸುವುದು ಮತ್ತು ಬೇಯಿಸುವಂತಹ ಮುಂತಾದ ಆರೋಗ್ಯಕರ ಅಡುಗೆ ವಿಧಾನಗಳನ್ನು ಅಳವಡಿಸಿಕೊಳ್ಳುವುದು.

15. ಅಡುಗೆ ತಯಾರಿಸುವಾಗ ಎಣ್ಣೆಯ ಪ್ರಮಾಣವನ್ನು ಅಳೆದು ಬಳಸಲು ಅಡುಗೆ ಸಿಬ್ಬಂದಿಗಳಿಗೆ ಉತ್ತೇಜಿಸುವುದು.

16. ಸಂಸ್ಕರಿಸಿದ ಆಹಾರಗಳು(Processed Foods)
ಮತ್ತು ಜಂಕ್ ಫುಡ್ (Junk Foods) ಗಳು ಹೆಚ್ಚಿನ ಪ್ರಮಾಣದಲ್ಲಿ ಅನಾರೋಗ್ಯಕರ ಕೊಬ್ಬುಗಳನ್ನು ಹೊಂದಿರುತ್ತವೆ. ಇಂತಹ ಆಹಾರ ಪದಾರ್ಥಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ, ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು. ಇದರ ಬದಲಾಗಿ, ಸಮತೋಲನ ಪೌಷ್ಠಿಕ ಆಹಾರಗಳಾದ ಹಣ್ಣುಗಳು, ತರಕಾರಿಗಳು ಮತ್ತು ಧಾನ್ಯಗಳನ್ನು ಸಮತೋಲನ ಆಹಾರವಾಗಿ ಸೇವಿಸುವಂತೆ ವಿದ್ಯಾರ್ಥಿಗಳಿಗೆ ಉತ್ತೇಜಿಸುವುದು ಹಾಗೂ ಮಾರ್ಗದರ್ಶನ ನೀಡುವುದು.

17. ಆರೋಗ್ಯಕರ ಆಹಾರ ಪದ್ಧತಿಯ ಪ್ರಾಮುಖ್ಯತೆಯನ್ನು ಬಲಪಡಿಸಲು ವಿದ್ಯಾರ್ಥಿಗಳು, ಪೋಷಕರು ಮತ್ತು ಸಮುದಾಯದ ಸದಸ್ಯರನ್ನು ಒಳಗೊಂಡ ವಿಶೇಷ “ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ” (SDMC) ಸಭೆಗಳನ್ನು ಆಯೋಜಿಸುವುದು.

 

CLICK HERE TO DOWNLOAD

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!