Probationary Rules: ಖಾಯಂ ಪೂರ್ವ ಸೇವಾವಧಿ, ಮಾಹಿತಿ-01

Probationary Rules: ಖಾಯಂ ಪೂರ್ವ ಸೇವಾವಧಿ ಸರ್ಕಾರಿ ನೌಕರರಿಗೆ ಮುಖ್ಯ ಮಾಹಿತಿ.

Probationary Rules:

ಕರ್ನಾಟಕ ಸರ್ಕಾರದ ಸೇವೆಗೆ ಸೇರುವವರಿಗೆ ಸರ್ಕಾರ ಪ್ರಸ್ತುತ ಎರಡು ವರ್ಷಗಳ ಖಾಯಂ ಪೂರ್ವ ಸೇವಾವಧಿಯನ್ನು ನಿಗದಿಪಡಿಸಿದೆ. ಅಂದರೆ ಅಭ್ಯರ್ಥಿಯು ಯಾವ ಹುದ್ದೆಗೆ ಸೇರುತ್ತಾನೋ ಆ ಹುದ್ದೆಗೆ ಅಂತಹ ಅಭ್ಯರ್ಥಿಯ ಸೂಕ್ತತೆಯನ್ನು ನಿರ್ಧರಿಸುವುದೇ ಈ ಖಾಯಂ ಪೂರ್ವ ಸೇವಾ ಅವಧಿ. ಅಭ್ಯರ್ಥಿಯು ಹೊಂದಿರುವ ಹುದ್ದೆಗೆ ನಿಗದಿಪಡಿಸಿದ ಇಲಾಖಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವುದರ ಜೊತೆಗೆ ಈ ಅವಧಿಯಲ್ಲಿ ಅಭ್ಯರ್ಥಿಯ ನಡವಳಿಕೆಯು ಅವನು ಹೊಂದಿರುವ ಹುದ್ದೆಗೆ ಹಾಗೂ ಸರ್ಕಾರಿ ಸೇವೆಗೆ ಸೂಕ್ತವಾಗಿದ್ದಲ್ಲಿ ಮಾತ್ರ ಅಂತಹ ಅಭ್ಯರ್ಥಿಯ ಖಾಯಂ
ಪೂರ್ವ ಸೇವಾವಧಿಯನ್ನು ತೃಪ್ತಿಕರವೆಂದು ಘೋಷಿಸಲಾಗುತ್ತದೆ. ಖಾಯಂಪೂರ್ವ ಸೇವಾವಧಿಯನ್ನು ತೃಪ್ತಿಕರವೆಂದು ಘೋಷಿಸಿದ ನಂತರವಷ್ಟೇ ಅವನು ಖಾಯಂ ನೌಕರನಾಗುತ್ತಾನೆ.

ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಬೋಧಕ ಮತ್ತು ಬೋಧಕೇತರ ವೃಂದಗಳಿದ್ದು, ವೃಂದ ಮತ್ತು ನೇಮಕಾತಿ ನಿಯಮಗಳನ್ವಯ ಕೆಲವು ವೃಂದಗಳಿಗೆ ಇಲಾಖಾ ಪರೀಕ್ಷೆಯನ್ನು ನಿಗದಿಪಡಿಸಲಾಗಿದೆ. ಖಾಯಂಪೂರ್ವ ಸೇವಾವಧಿಯಲ್ಲಿ ಶಿಕ್ಷಕರಿಗೆ ಯಾವುದೇ ಇಲಾಖಾ ನಿಗದಿಪಡಿಸಿರುವುದಿಲ್ಲ. ಬೋಧಕೇತರ ವೃಂದದಲ್ಲಿ ಗ್ರೂಪ್ ಡಿ’ ವೃಂದದ ನೌಕರರಿಗೆ ಯಾವುದೇ ಇಲಾಖಾ ಪರೀಕ್ಷೆಯನ್ನು ನಿಗದಿಪಡಿಸಿರುವುದಿಲ್ಲ. ದ್ವಿತೀಯ ದರ್ಜೆ ಸಹಾಯಕ, ಪ್ರಥಮ ದರ್ಜೆ ಸಹಾಯಕ ಮುಂತಾದ ವೃಂದಗಳಿಗೆ ಇಲಾಖಾ ಪರೀಕ್ಷೆಯನ್ನು ಹಾಗೂ ಕನ್ನಡ ಭಾಷಾ ಪರೀಕ್ಷೆಯನ್ನು ನಿಗದಿಪಡಿಸಲಾಗಿದೆ. ಇದರ ಹೊರತಾಗಿ ನೇರ ನೇಮಕಾತಿ ಇಲ್ಲದ ಹುದ್ದೆಗಳಿಗೆ ಬಡ್ತಿ ಹೊಂದಲು ಆಯಾ ವೃಂದಗಳಿಗನುಸಾರವಾಗಿ ಇಲಾಖಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕಾಗಿರುತ್ತದೆ.

ಪರೀಕ್ಷೆಯ ಹೊರತಾಗಿ ಖಾಯಂ ಪೂರ್ವ ಸೇವಾವಧಿಯನ್ನು ತೃಪ್ತಿಕರವೆಂದು ಘೋಷಣೆ ಮಾಡಲು ತೃಪ್ತಿಕರವಾಗಿ ಸೇವೆ ಸಲ್ಲಿಸಿರುವ ಬಗ್ಗೆ ಎರಡು ವರ್ಷಗಳ ಕಾರ್ಯನಿರ್ವಹಣಾ ವರದಿ. ನೌಕರರ ಮೇಲೆ ಇಲಾಖಾ ವಿಚಾರಣೆ ಹಾಗೂ ನ್ಯಾಯಾಲಯದ

ಪ್ರಕರಣಗಳು ಬಾಕಿ ಇಲ್ಲವೆಂಬ ಬಗ್ಗೆ ದೃಢೀಕರಣ ಪತ್ರ ನೀಡಬೇಕಾಗುತ್ತದೆ. ಎರಡು ವರ್ಷಗಳ ಅವಧಿಯಲ್ಲಿ ಅಭ್ಯರ್ಥಿಯು ವಿಚ್ಛಿನ್ನತೆಯಿಲ್ಲದ ನಿರಂತರ ಸೇವೆ ಸಲ್ಲಿಸಿರಬೇಕು.

ಖಾಯಂ ಪೂರ್ವ ಸೇವಾವಧಿಯನ್ನು ಒಂದು ವರ್ಷದವರೆಗೆ ವಿಸ್ತರಿಸಲು ನೇಮಕಾತಿ ಪ್ರಾಧಿಕಾರಕ್ಕೆ ಅಧಿಕಾರವಿರುತ್ತದೆ. ತದನಂತರ ಖಾಯಂಪೂರ್ವ ಸೇವಾವಧಿಯನ್ನು ಘೋಷಣೆ ಮಾಡಲು ಸರ್ಕಾರದ ಹೊರತಾಗಿ ಇಲಾಖಾ ಮುಖ್ಯಸ್ಥರಿಗಾಗಲೀ ಅಥವಾ ಇನ್ನಾವುದೇ ಪ್ರಾಧಿಕಾರಿಗಳಿಗೆ ಅಧಿಕಾರವಿರುವುದಿಲ್ಲ.

ನೌಕರರು 1ನೇ ತಾರೀಖಿನಂದು ಕರ್ತವ್ಯಕ್ಕೆ ಹಾಜರಾಗಿದ್ದಲ್ಲಿ ಅಂತಹ ನೌಕರರ ಖಾಯಂಪೂರ್ವ ಅವಧಿ ಹಿಂದಿನ ತಿಂಗಳ ಕೊನೆಯ ದಿನಾಂಕಕ್ಕೆ ಮುಕ್ತಾಯವಾಗುವುದರಿಂದ ಖಾಯಂಪೂರ್ವ ಅವಧಿ ತೃಪ್ತಿಕರವೆಂದು ಘೋಷಣೆಯಾಗದೆ 2ನೇ ವಾರ್ಷಿಕ ವೇತನ ಬಡ್ತಿಯನ್ನು ನೀಡಲು ಅವಕಾಶವಿರುವುದಿಲ್ಲ. ಆದರೆ 1ನೇ ತಾರೀಖಿನ ಹೊರತಾಗಿ ಉಳಿದ ದಿನಾಂಕಗಳಲ್ಲಿ ಹಾಜರಾಗಿದ್ದಲ್ಲಿ ಪ್ರೊಬೆಷನರಿ ಅವಧಿ ಮುಕ್ತಾಯಗೊಳ್ಳಲು ಇನ್ನೂ ಹಲವು ದಿನಗಳು ಇರುವಾಗಲೇ ಆಯಾ ತಿಂಗಳ ಒಂದನೇ ತಾರೀಖಿಗೆ ವಾರ್ಷಿಕ ವೇತನ ಬಡ್ತಿಯನ್ನು ಮಂಜೂರು ಮಾಡಬೇಕಾಗುವುದರಿಂದ ಅಂತಹ ನೌಕರರಿಗೆ ಖಾಯಂ ಪೂರ್ವ ಅವಧಿ ಘೋಷಣೆಯಾಗದೆ ಎರಡನೇ ವಾರ್ಷಿಕ ವೇತನ ಬಡ್ತಿಯನ್ನು ಮಂಜೂರು ಮಾಡಬಹುದು ಆದರೆ ಖಾಯಂ ಪೂರ್ವ ಅವಧಿ ತೃಪ್ತಿಕರವೆಂದು ಘೋಷಣೆಯಾಗದೆ ಮೂರನೇ ವಾರ್ಷಿಕ ವೇತನ ಬಡ್ತಿಯನ್ನು ಮಂಜೂರು ಮಾಡಲು ಅವಕಾಶವಿರುವುದಿಲ್ಲ.(ಸರ್ಕಾರದ ಪತ್ರ ಸಂಖ್ಯೆ:ಎಫ್‌ಡಿ 49 ಎಸ್.ಆರ್.ಎಸ್.80 ದಿನಾಂಕ:20.08.1980) ಉಳಿದಂತೆ ಪ್ರೊಬೆಷನರಿ ನಿಯಮಾವಳಿಯ ಕೆಲವು ಪ್ರಮುಖ ನಿಯಮಗಳನ್ನು ಕೆಳಗೆ ಉಲ್ಲೇಖಿಸಿದೆ.

KARNATAKA CIVIL SERVICES (PROBATION) RULES, 1977, RULE-4 (1) The period of probation may, for reason to be recorded in writing, be extended:-

(i)by the Gov-ernor or the Government by such period as he or it deems. fit:,

(ii)by any other appointing authority by such period not exceeding half of the prescribed period of probation: RULE-5 (1) At the end of the prescribed of, as the case may be reduced or extended period of probation, the appointing authority shall consider the suitability of the probationer hold the post to which he was appointed, and RULE-5 (1)(b) if the appointing authority decides that the probationer is not suitable to hold the post to which he was appointed or has not passed the special examinations or special tests, if any, required to be passed during the period of probation, it shall, unless the period of probation is extend under the rule 4, by order, discharge him from service.

RULE-6 (2) an order discharging a probationer under this rule shall indicate the grounds for the discharge but no formal proceedings under the Karnataka Civil Services (Classification, Control and Appeal) Rules 1957, shall be necessary.

RULE-8 No appeal shall be against an order discharging a probationer under rule 5 or rule 6.

ಮೇಲಿನ ನಿಯಮಗಳಂತೆ ಸಕ್ಷಮ ಪ್ರಾಧಿಕಾರಿಗಳು ನಿಗದಿತ ಅವಧಿಯಲ್ಲಿ ನೌಕರರ ಖಾಯಂಪೂರ್ವ ಅವಧಿಯನ್ನು ಘೋಷಣೆ ಮಾಡದೆ ಅಂತಹ ನೌಕರರು ಮೃತರಾದ ಸಂದರ್ಭಗಳು ಬಂದಿದ್ದು, ಇಂತಹ ಪ್ರಕರಣಗಳಲ್ಲಿ ಮಹಾಲೇಖಪಾಲರು ಪಿಂಚಣಿ ಪ್ರಸ್ತಾವನೆಯನ್ನು ವಾಪಸ್ ಕಳುಹಿಸುವಂತಹ ಸನ್ನಿವೇಶಗಳುಂಟಾಗುತ್ತದೆ. ಇದರಿಂದಾಗಿ ಮೃತ ನೌಕರನ ಅವಲಂಬಿತರು ತೊಂದರೆಗೆ ಒಳಗಾಗಬೇಕಾಗುತ್ತದೆ. ಈ ಬಗ್ಗೆ ಸರ್ಕಾರದ ಅಧಿಕೃತ ಜ್ಞಾಪನ ಸಂಖ್ಯೆ:ಸಿಆಸುಇ 149 ಸೆನೆನಿ 2010 ದಿನಾಂಕ:18,10,2010 ರಲ್ಲಿ ಸರ್ಕಾರವು ಸ್ಪಷ್ಟ ನಿರ್ದೇಶನವನ್ನು ನೀಡಿರುತ್ತದೆ.

ಇದನ್ನೂ ನೋಡಿ…..Government employees: ಒಂದೇ ಸ್ಥಳದಲ್ಲಿ ವಾಸಿಸುವ ಸರ್ಕಾರಿ ನೌಕರ/ಳ-ಪತಿ/ಪತ್ನಿಯವರಿಗೆ ಮನೆ ಬಾಡಿಗೆ ಭತ್ಯೆ ದೊರೆಯುತ್ತದೆಯೇ?

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!