ಬಿಮಾ ಸಖಿ ಯೋಜನೆ: ಮಹಿಳೆಯರಿಗೆ ದೊರೆಯಲಿದೆ ಪ್ರತಿ ತಿಂಗಳು ₹7000 ವರೆಗೆ ಹಣ:
ಬಿಮಾ ಸಖಿ ಯೋಜನೆ: ಬಿಮಾ ಸಖಿ ಯೋಜನೆ: ಮಹಿಳೆಯರಿಗೆ ದೊರೆಯಲಿದೆ ಪ್ರತಿ ತಿಂಗಳು ₹7000 ವರೆಗೆ ಹಣ: ಮಹಿಳೆಯರ ಆರ್ಥಿಕ ಬಲವರ್ಧನೆಗೆ ಒತ್ತು ನೀಡಿರುವ LIC ಇದೀಗ ‘ಬಿಮಾ ಸಖಿ ಯೋಜನೆ’ ಪರಿಚಯ ಮಾಡಿದೆ. ಈ ಯೋಜನೆಯು ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಉದ್ಯೋಗ ಹಾಗೂ ಆದಾಯದ ಅವಕಾಶ ನೀಡಲು ರೂಪಿಸಲಾದ ಯೋಜನೆ ಇದಾಗಿದೆ.
ಬಿಮಾ ಸಖಿಯಾಗಿ ಆಯ್ಕೆಯಾದ ಮಹಿಳೆಯರಿಗೆ LIC ವತಿಯಿಂದ ಮೂರು ವರ್ಷಗಳ ಉಚಿತ ತರಬೇತಿ ನೀಡಲಾಗುತ್ತದೆ. ಮೊದಲ ವರ್ಷದಲ್ಲಿ ತಿಂಗಳಿಗೆ 7000 ರೂ., 2ನೇ ವರ್ಷ 6000 ರೂ., 3ನೇ ವರ್ಷ 5000 ರೂ.ಸ್ಟೈಫಂಡ್ ರೂಪದಲ್ಲಿ ನೀಡಲಾಗುತ್ತದೆ. ಈ ಮೂರು ವರ್ಷಗಳಲ್ಲಿ ಒಟ್ಟು 2 ಲಕ್ಷದಷ್ಟು ಹಣ ಮಹಿಳೆಯರಿಗೆ ಸಿಗಲಿದೆ.
ಈ ಯೋಜನೆ ಕೇವಲ ಮಹಿಳೆಯರಿಗೆ ಮಾತ್ರ ಮೀಸಲಿರಿಸಿದ್ದು ಅರ್ಜಿಯನ್ನು ಸಲ್ಲಿಕೆ ಮಾಡಲು, ಮಹಿಳೆಯರು LIC ಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ “ಬಿಮಾ ಸಖಿ ಯೋಜನೆ”ಗೆ ಅರ್ಜಿ ಸಲ್ಲಿಕೆ ಮಾಡಬಹುದು. ಮುಖ್ಯವಾಗಿ, ಈ ಯೋಜನೆಗೆ ಹಾಲಿ LIC ಉದ್ಯೋಗಿಗಳ ಸಂಬಂಧಿಗಳು ಅರ್ಜಿ ಸಲ್ಲಿಸಲು ಅರ್ಹತೆಯನ್ನು ಹೊಂದಿರುವದಿಲ್ಲ.
ಬಿಮಾ ಸಖಿ ಯೋಜನೆಗೆ ಅರ್ಹತೆ ಗಳು ಏನು?
ವಯೋಮಿತಿ:
ಅರ್ಜಿ ಸಲ್ಲಿಕೆ ಮಾಡುವ ದಿನಾಂಕದಂದು ಕನಿಷ್ಠ 18 ವರ್ಷಗಳು ಗರಿಷ್ಠ ವಯಸ್ಸು 70 ವರ್ಷಗಳು (ಕೊನೆಯ ಜನ್ಮದಿನದಂದು)
ವಿದ್ಯಾರ್ಹತೆ:
ಕನಿಷ್ಠ ಅರ್ಹತೆ – 10 ನೇ ತರಗತಿಯಲ್ಲಿ ಪಾಸಾಗಿರಬೇಕು.

