ಕೃಷಿಕ ಬಂಧುಗಳಿಗೆ ಇದೀಗ ಶುಭ ಸುದ್ದಿ….
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಫಲಾನುಭವಿ ನೀವಾಗಿದ್ದರೆ ನಿಮಗೆ ಶುಭ ಸುದ್ದಿಯನ್ನು ಕೇಂದ್ರ ಸರ್ಕಾರ ನೀಡಿದೆ ರೈತರಿಗೆ ಆರ್ಥಿಕ ನೆರವು ನೀಡುವ ಸಂಬಂಧ ಕೇಂದ್ರ ಸರ್ಕಾರದಿಂದ ರೈತರಿಗೆ ಪಿಎಂ ಕಿಸಾನ್ ನಿಧಿ ಯೋಜನೆಗೆ ಸಂಬಂಧಿಸಿದಂತೆ ದೊಡ್ಡ ಬಿಗ್ ಅಪ್ಡೇಟ್ ಮಾಹಿತಿ ನೀಡಲಾಗಿದೆ.
ನವರಾತ್ರಿ ಸುಸಂದರ್ಭದಲ್ಲಿ ಭಾರತ ದೇಶದಾದ್ಯಂತ ಸುಮಾರು 9 ಕೋಟಿಗಿಂತ ಹೆಚ್ಚು ರೈತ ಬಾಂಧವರಿಗೆ ಸುಭ ಸುದ್ದಿ ನೀಡಲಾಗಿದೆ. ರೈತರ ಖಾತೆಗಳಿಗೆ ಕೇಂದ್ರ ಸರ್ಕಾರವು ₹ 2000 ನ್ನು ಜಮೆ ಮಾಡಲಿದೆ.ಆದ್ದರಿಂದ ಪಿಎಂ ಕಿಸಾನ್ ಹಣ ಬಿಡುಗಡೆ ಮಾಡುವ ಕುರಿತಾಗಿ ಮಾಹಿತಿ ನೀಡಲಾಗಿದ್ಸು, ಅಕ್ಟೋಬರ್ ತಿಂಗಳ 5 ನೇ ದಿನಾಂಕದಂದು 18 ನೇ ಕಂತಿನ ಹಣವನ್ನು ಜಮೆ ಮಾಡುವುದಾಗಿ ಅಧೀಕೃತವಾಗಿ ವೆಬ್ಸೈಟ್ ನಲ್ಲಿ ಮಾಹಿತಿ ಒದಗಿಸಲಾಗಿದೆ.
ಪಿಎಂ ಕಿಸಾನ್ ಸಮ್ಮಾನ್ ವೆಬ್ಸೈಟ್ ನಲ್ಲಿ ನೀಡಿದ ಮಾಹಿತಿ ಪ್ರಕಾರ ಸನ್ಮಾನ್ಯ ಪ್ರಧಾನ ಮಂತ್ರಿಗಳು ರೈತರಿಗೆ 18 ನೇ ಕಂತಿನ ಹಣವನ್ನು ಬಿಡುಗಡೆ ಮಾಡಲಿದ್ದಾರೆ.
ಕೇಂದ್ರ ಸರ್ಕಾರವು ಬಡ ರೈತರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಈ ಕಿಸಾನ್ ಸಮ್ಮಾನ್ ಹಣವನ್ನು ಬಿಡುಗಡೆ ಮಾಡಲಾಗುತ್ತದೆ.
ರೈತರಿಗೆ ಹಣವನ್ನು ನೆರವಾಗಿ DBT ಖಾತೆಗೆ ಜಮೆಯಾಗುವದರಿಂದ ಪರೀಕ್ಷಿಸಿಕೊಳ್ಳಬಹುದಾಗಿದೆ.
ಫಲಾನುಭವುಗಳ [Beneficiary Status] ಸ್ಟೇಟಸ್ ಪರೀಕ್ಷೆ ಮಾಡುವುದರ ಮುಖೇನ ತಮ್ಮ ಖಾತೆಗೆ ಕಿಸಾನ್ ಸಮ್ಮಾನ್ ನಿಧಿ ಹಣ ಜಮೆಯಾಗುವುದನ್ನು ತಿಳಿಯಬಹುದಾಗಿದೆ.
E-Kyc ಮಾಡದ ರೈತರಿಗೆ ಹಣ ಹಣ ಪಡೆಯುವಲ್ಲಿ ತೊಂದರೆಯಾಗುವ ಸಾಧ್ಯತೆ ಇದೆ. ಆದ್ದರಿಂದ ರೈತರು ಈ ಯೋಜನೆಯ ಪ್ರಯೋಜನೆಯನ್ನು ಪಡೆಯಲು ಮೊಬೈಲ್ ಸಂಖ್ಯೆ & ಆಧಾರ್ ಮೂಲಕ ಓಟಿಪಿ ಸಹಾಯದಿಂದ ಪಿಎಂ ಕಿಸಾನ್ ಪೋರ್ಟಲ್ಗೆ ಭೇಟಿ ನೀಡುವ ಮುಖಾಂತರ ರೈತರು e-kyc ಪೂರ್ಣಗೊಳಿಸಬಹುದು.
ಜೊತೆಗೆ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ e-kyc ಪೂರ್ಣಗೊಳಿಸಬಹುದು.
ಪ್ರಧಾನ ಮಂತ್ರಿ ಕಿಸಾನ್ ಯೋಜನೆ ಫಲಾನುಭವಿಯ ಸ್ಥಿತಿ ಪರಿಶೀಲನೆ ಮಾಡುವುದು ಹೇಗೆ? ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಹಂತಗಳ ಮೂಲಕ ಪಡೆಯಬಹುದು.
▶ ಮೊದಲಿಗೆ ಪಿಎಂ ಕಿಸಾನ್ ಅಧೀಕೃತ ವೆಬ್ಸೈಟ್ ಗೆ ಭೇಟಿ ನೀಡಿ https://pmkisan.gov.in/BeneficiaryStatus_New.aspx ಮುಂದುವರೆಯಿರಿ.
▶ Know Your Status ಸ್ಟೇಟಸ್’ ಟ್ಯಾಬ್ ಮೇಲೆ ಕ್ಲಿಕ್ ಮಾಡಿ ಮುಂದುವರೆಯಿರಿ.
▶ ರೈತರು ತಮ್ಮ ನಿಮ್ಮ ನೋಂದಣಿ ಸಂಖ್ಯೆ, ಕ್ಯಾಪ್ಚಾ ಕೋಡ್ ಅನ್ನು ನಮೂದು ಮಾಡಿ ಮತ್ತು ಡೇಟಾ ಮಾಹಿತಿ ಪಡೆಯಿರಿ
▶ ಆಯ್ಕೆಯನ್ನು ಆರಿಸಿ ಮುಂದುವರೆಯಿರಿ.
▶ ನಿಮ್ಮ ಸ್ಥಿತಿ ಗೋಚರವಾಗುತ್ತದೆ..
▶ ಫಲಾನುಭವಿಗಳ ಪಟ್ಟಿಯಲ್ಲಿ ಹೆಸರನ್ನು ಪರಿಶೀಲಿನೆ ಮಾಡಿ.
PM Kisan Beneficiary List as on 27-09-2024
ಆತ್ಮೀಯ ರೈತ ಬಾಂಧವರೇ ಇದೀಗ ಪಿಎಂ ಕಿಸಾನ್ 18ನೇ ಕಂತಿನ ಹಣ ಬಿಡುಗಡೆಯಾಗಿದ್ದು,
ಈ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ 18ನೇ ಕಂತಿನ ಹಣ ನಿಮಗೆ ಬರುವುದು. ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಲು ಲಿಂಕ್ ಕ್ಲಿಕ್ ಮಾಡಿ
https://pmkisan.gov.in/Rpt_BeneficiaryStatus_pub.aspx
▪️ಫಲಾನುಭವಿಗಳ ಪಟ್ಟಿ ನೋಡಲು ಈ ವಿಧಾನ ಅನುಸರಿಸಿ.
▪️ಮೊದಲಿಗೆ ನಿಮ್ಮ ರಾಜ್ಯವನ್ನು ಆಯ್ಕೆ ಮಾಡಿ
▪️ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿ
▪️ನಿಮ್ಮ ತಾಲೂಕು ಆಯ್ಕೆ ಮಾಡಿ
▪️ನಂತರ ನಿಮ್ಮ ಊರನ್ನು ಆಯ್ಕೆ ಮಾಡಿ.
▪️ಇಲ್ಲಿ ನಿಮಗೆ ನಿಮ್ಮ ಊರಿನ ಎಲ್ಲ ಪಿಎಂ ಕಿಸಾನ್ ಫಲಾನುಭವಿಗಳ ಪಟ್ಟಿ ದೊರೆಯುವುದು.
ಅಧೀಕೃತ ಮಾಹಿತಿಗಾಗಿ- CLICK HERE
ನನ್ನ ಹೆಸರು ಆನಂದ ನನಗೆ 12 ಕಂತು ಬಂದು ಈಗ ಬರ್ಥ್ ಇಲ್ಲ