IBPS recuritment- ಗ್ರಾಮೀಣ ಬ್ಯಾಂಕ್‌ಗಳಲ್ಲಿ 13,217 ಹುದ್ದೆಗಳಿಗೆ ನೇಮಕಾತಿಗೆ ಅರ್ಜಿ ಆಹ್ವಾನ. ಕನ್ನಡದಲ್ಲೇ ಪರೀಕ್ಷೆ ಬರೆಯಿರಿ.ಕರ್ನಾಟಕದಲ್ಲಿಯೇ 1,425 ಸ್ಥಾನಗಳ ಭರ್ತಿ

IBPS recuritment- ಗ್ರಾಮೀಣ ಬ್ಯಾಂಕ್‌ಗಳಲ್ಲಿ 13,217 ಹುದ್ದೆಗಳಿಗೆ ನೇಮಕಾತಿಗೆ ಅರ್ಜಿ ಆಹ್ವಾನ. ಕನ್ನಡದಲ್ಲೇ ಪರೀಕ್ಷೆ ಬರೆಯಿರಿ.

IBPS recuritment- ಗ್ರಾಮೀಣ ಬ್ಯಾಂಕ್‌ಗಳಲ್ಲಿ 13,217 ಹುದ್ದೆಗಳಿಗೆ ನೇಮಕಾತಿಗೆ ಅರ್ಜಿ ಆಹ್ವಾನ. ಕನ್ನಡದಲ್ಲೇ ಪರೀಕ್ಷೆ ಬರೆಯಲು ಅವಕಾಶ: ನೀಡಲಾಗಿದೆ.ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್‌ ಪರ್ಸೋನೆಲ್ (ಐಬಿಪಿಎಸ್) ದೇಶದ 28 ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ ಗಳಲ್ಲಿ (ಆರ್‌ಆರ್‌ಬಿ) ಬರೋಬ್ಬರಿ 13,217 ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ. ಅದರಲ್ಲೂ ಕರ್ನಾಟಕ ಗ್ರಾಮೀಣ ಬ್ಯಾಂಕ್‌ವೊಂದರಲ್ಲೇ 1,425 ಹುದ್ದೆಗಳಿವೆ. ಅಫೀಸ್ ಅಸಿಸ್ಟೆಂಟ್ (ಮಲ್ಟಿ ಪರ್ಪಸ್), ಆಫೀಸರ್ ಸ್ಟೇಲ್ – 1, 11 ಹಾಗೂ ಸೈಲ್- 111 ರ ಹುದ್ದೆಗಳು ಇವಾಗಿವೆ. ಕಳೆದ ಬಾರಿ 8000ಕ್ಕೂ ಹೆಚ್ಚು ಹುದ್ದೆಗಳಿದ್ದವು. ಈ ಬಾರಿ ಇನ್ನೂ ಐದು ಸಾವಿರಕ್ಕೂ ಹೆಚ್ಚು ಸ್ಥಾನಗಳು ನೇಮಕಾತಿಗೆ ಸೇರ್ಪಡೆಯಾಗಿವೆ. ವಿಶೇಷವೆಂದರೆ ಎಲ್ಲ ಹಂತದ, ಎಲ್ಲ ರೀತಿಯ ವಿದ್ಯಾರ್ಹತೆಗೂ ಉದ್ಯೋಗಾವಕಾಶಗಳು ಇದರಲ್ಲಿವೆ.

ವಯೋಮಿತಿ:

* ಗ್ರೂಪ್ ಬಿ ಹುದ್ದೆಗೆ (ಆಫೀಸ್ ಅಸಿಸ್ಟೆಂಟ್ ) 18-28 ವರ್ಷದೊಳಗಿನವರಾಗಿರಬೇಕು. (2-9-1997) ಹಾಗೂ (2-9-2007) ರ ನಡುವೆ ಜನಿಸಿರಬೇಕು.

* ಅಸಿಸ್ಟೆಂಟ್ ಮ್ಯಾನೇಜರ್‌ಗೆ (ಸೈಲ್-1) 18ರಿಂದ 30 ವರ್ಷದೊಳಗಿರಬೇಕು. (2-9-1995) ಹಾಗೂ (2-9-2007ರ ನಡುವೆ ಜನಿಸಿರಬೇಕು).

* ಸ್ಕೆಲ್-2 ಆಫೀಸರ್ ಹುದ್ದೆಗೆ 21-32ವರ್ಷದೊಳಗಿರಬೇಕು,

* ಸ್ಕೂಲ್-3 ಆಫೀಸರ್(ಸೀನಿಯರ್ ಮ್ಯಾನೇಜರ್‌ಗೆ) 21-40 ವರ್ಷ ವಯೋಮಿತಿ ನಿಗದಿ ಮಾಡಲಾಗಿದೆ. ಮೀಸಲಾತಿ ಅನ್ವಯ ವಿವಿಧ ವರ್ಗಗಳಿಗೆ ವಯೋಮಿತಿಯಲ್ಲಿ 3-10 ವರ್ಷಗಳ ವಿನಾಯ್ತಿ ಇರಲಿದೆ.

* ವಿದ್ಯಾರ್ಹತೆ:

ಕನಿಷ್ಠ ಪದವಿ ಪಡೆದವರು ಈ ಹುದ್ದೆಗಳಿಗೆ
ಅರ್ಜಿ ಸಲ್ಲಿಸಬಹುದಾಗಿದೆ. ಆಫೀಸರ್ ಸೈಲ್-11ರ ಹುದ್ದೆಗಳಿಗೆ ಸಂಬಂಧಿಸಿದ ವಿಷಯದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನು ಅಪೇಕ್ಷಿಸಲಾಗಿದೆ. ಕೆಲ ಹುದ್ದೆಗಳಿಗೆ ಅನುಭವವನ್ನು ಕೋರಲಾಗಿದೆ.

ಕನ್ನಡದಲ್ಲೇ ಬರೆಯಿರಿ:

ಆಯಾ ರಾಜ್ಯದ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ಗಳ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಸ್ಥಳೀಯ ಭಾಷೆಯನ್ನು ಬಲ್ಲವರಾಗಿರಬೇಕು. ಮ್ಯಾನೇಜ‌ರ್ ಹಾಗೂ ಆಫೀಸ್ ಅಸಿಸ್ಟೆಂಟ್‌ಗಳ ರಾಜ್ಯದ ಹುದ್ದೆಗಳಿಗೆ ಕನ್ನಡದಲ್ಲಿಯೇ ಪರೀಕ್ಷೆ ಬರೆಯಬಹುದು. ಇತರ ಭಾಷೆಗಳ ಪರಿಚಯವಿದ್ದರೆ ಬೇರೆ ರಾಜ್ಯಗಳ ಹುದ್ದೆಗಳಿಗೂ ಅರ್ಜಿ ಸಲ್ಲಿಸಬಹುದು.

ಆದರೆ, ಅವುಗಳಿಗೆ ಹಿಂದಿ, ಇಂಗ್ಲಿಷ್ ಭಾಷೆಯಲ್ಲಿ ಪರೀಕ್ಷೆ ಬರೆಯಬೇಕಾಗುತ್ತದೆ. ಮೇಲ್ಮಟ್ಟದ ಹುದ್ದೆಗಳಿಗೆ ಎರಡು ಹಂತದ ಹಾಗೂ ಉಳಿದವುಗಳಿಗೆ ಒಂದೇ ಹಂತದ ಆನ್‌ಲೈನ್ ಪರೀಕ್ಷೆ ನಡೆಸಲಾಗುತ್ತದೆ.

ಸಂದರ್ಶನ:

ಆಫೀಸ‌ರ್ ಸೈಲ್-1, 1 ಹಾಗೂ 111ರ ಹುದ್ದೆಗಳಿಗೆ 100 ಅಂಕಗಳಿಗಾಗಿ ಸಂದರ್ಶನ ನಡೆಸಲಾಗುತ್ತದೆ. ಎರಡೂ ಹಂತದ ಪರೀಕ್ಷೆಯಲ್ಲಿ ಅರ್ಹತೆ ಪಡೆದು ಹೆಚ್ಚು ಅಂಕ ಗಳಿಸಿದವರನ್ನು ಆಯಾ ರಾಜ್ಯದ ಹುದ್ದೆಗಳ ಸಂಖ್ಯೆಗೆ ಅನುಗುಣವಾಗಿ ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ.

ಆನ್‌ಲೈನ್ ಪರೀಕ್ಷೆ ಹೇಗಿರುತ್ತೆ?

ಆಫೀಸ್ ಅಸಿಸ್ಟೆಂಟ್ ಹುದ್ದೆಗಳಿಗೆ ಪೂರ್ವಭಾವಿ ಪರೀಕ್ಷೆಯಲ್ಲಿ ರೀಸನಿಂಗ್ ಎಬಿಲಿಟಿ ಹಾಗೂ ನ್ಯೂಮರಿಕಲ್ ಎಬಿಲಿಟಿಯ ಒಟ್ಟು 80 ಅಂಕದ 80 ಪ್ರಶ್ನೆಗಳಿಗೆ ಒಟ್ಟಾರೆ 45 ನಿಮಿಷಗಳಲ್ಲಿ ಉತ್ತರಿಸಬೇಕಿರುತ್ತದೆ. ಆಫೀಸರ್ ಸ್ಕೆಲ್-1 ಹುದ್ದೆಗೆ ಇದೇ ಸ್ವರೂಪ ಅನ್ವಯವಾಗಲಿದೆ. ಮುಖ್ಯ ಪರೀಕ್ಷೆಯಲ್ಲಿ ರೀಸನಿಂಗ್, ಕಂಪ್ಯೂಟರ್ ಜ್ಞಾನ, ಸಾಮಾನ್ಯ ತಿಳಿವಳಿಕೆ, ಇಂಗ್ಲಿಷ್/ಹಿಂದಿ ಭಾಷೆ, ಕ್ವಾಂಟಿಟೇಟಿವ್ ಅಪ್ಟಿಟ್ಯೂಡ್ ಗಳ ಒಟ್ಟು 200 ಪ್ರಶ್ನೆಗಳಿಗೆ 200 ಅಂಕಗಳಿದ್ದು, 120 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ. ಇಂಗ್ಲಿಷ್/ಹಿಂದಿ ಹೊರತುಪಡಿಸಿ ಉಳಿದೆಲ್ಲವನ್ನು ಕನ್ನಡದಲ್ಲಿ ಉತ್ತರಿಸಬಹುದು. ಕರ್ನಾಟಕದಲ್ಲಿ ಕನ್ನಡ ಜತೆಗೆ, ಇಂಗ್ಲಿಷ್‌, ಹಿಂದಿ ಕೊಂಕಣಿಯಲ್ಲೂ ಪರೀಕ್ಷೆ ಬರೆಯಲು ಅವಕಾಶವಿದೆ. ಜನರಲ್‌ ಬ್ಯಾಂಕಿಂಗ್‌ ಆಫೀಸರ್, ಸ್ಪೆಷಲಿಸ್ಟ್ ಕೇಡರ್ ಹಾಗೂ ಆಫೀಸರ್ ಸ್ಟೇಲ್-111 ಹುದ್ದೆಗಳಿಗೆ ಒಂದೇ ಹಂತದ ಪರೀಕ್ಷೆಯಿದ್ದು, ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಮಾತ್ರ ಬರೆಯಬಹುದು.

ಪ್ರಮುಖ ದಿನಗಳು:

▪️ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಕೊನೆಯ ದಿನ |ಸೆ.21

▪️ಶುಲ್ಕ ಪಾವತಿಸಲು ಕೊನೆಯ ದಿನ ಸೆ.21

▪️ಪರೀಕ್ಷಾ ಪೂರ್ವ ತರಬೇತಿ ನಿಗದಿ ನವೆಂಬರ್-2025

▪️ಪೂರ್ವಭಾವಿ ಪರೀಕ್ಷೆಗೆ ಪ್ರವೇಶಪತ್ರ ನವೆಂಬರ್/ಡಿಸೆಂಬರ್-2025

▪️ಪೂರ್ವಭಾವಿ ಪರೀಕ್ಷೆಗೆ ಸಂಭಾವ್ಯ ಅವಧಿ |ನವೆಂಬರ್/ ಡಿಸೆಂಬರ್-2025

▪️ಆನ್‌ಲೈನ್ ಪರೀಕ್ಷೆಯ ಫಲಿತಾಂಶ ಡಿಸೆಂಬರ್-2025/ ಜನವರಿ-2026

▪️ಮುಖ್ಯ ಪರೀಕ್ಷೆ ಸಂಭಾವ್ಯ ಅವಧಿ ಡಿಸೆಂಬರ್-2025/ಜನವರಿ-2026

▪️ಮುಖ್ಯ ಪರೀಕ್ಷೆ ಫಲಿತಾಂಶ ಜನವರಿ-2026

▪️ಸಂದರ್ಶನಕ್ಕೆ ಪ್ರವೇಶಪತ್ರ ಜನವರಿ-2026

▪️ತಾತ್ಕಾಲಿಕ ನೇಮಕಾತಿ ಪತ್ರ ವಿತರಣೆ ಫೆಬ್ರವರಿ/ ಮಾರ್ಚ್-2026

ಪರೀಕ್ಷಾ ಕೇಂದ್ರಗಳು:

ಬೆಂಗಳೂರು, ಬೆಳಗಾವಿ, ದಾವಣಗೆರೆ, ಧಾರವಾಡ, ಹುಬ್ಬಳ್ಳಿ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ಉಡುಪಿ.

ಅರ್ಜಿ ಸಲ್ಲಿಸುವಾಗ ಗಮನಿಸಿ:

ಅರ್ಜಿ ಸಲ್ಲಿಸುವಾಗ ಕೈ ಬರಹದ ಡಿಕ್ಲರೇಷನ್ ಅನ್ನು ಅರ್ಜಿಯೊಂದಿಗೆ ಸಲ್ಲಿಸುವುದು ಕಡ್ಡಾಯ. ಬಿಳಿಯ ಕಾಗದದ ಮೇಲೆ ಕಪ್ಪು ಇಂಕ್ ಪೆನ್ನಿನಿಂದ ಬರೆದ ಪ್ರಮಾಣ ಪತ್ರವನ್ನು ಸ್ಕ್ಯಾನ್ ಮಾಡಿ ಅಪ್‌ ಲೋಡ್ ಮಾಡಬೇಕಿರುತ್ತದೆ. ಈ ಡಿಕ್ಲರೇಷನ್ ಅನ್ನು ಅಭ್ಯರ್ಥಿಯೇ ಬರೆದಿರಬೇಕು. ಕ್ಯಾಪಿಟಲ್‌ ಲೆಟರ್ಸ್‌ನಲ್ಲಿ ಬರೆದ ಡಿಕ್ಲರೇಷನ್ ಮತ್ತು ಸಹಿಯನ್ನು ಪರಿಗಣಿಸಲಾಗುವುದಿಲ್ಲ ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ. ನೀವು ಈ ಪರೀಕ್ಷೆಗೆ ಅರ್ಜಿ ಸಲ್ಲಿಸಬೇಕೆಂದಿದ್ದರೆ ಇ-ಮೇಲ್ ವಿಳಾಸ ಹಾಗೂ ಮೊಬೈಲ್ ಸಂಖ್ಯೆ ಹೊಂದಿರಬೇಕಾಗಿರುವುದು ಕಡ್ಡಾಯ. ಆದ್ದರಿಂದ ಇ-ಮೇಲ್ ಅಕೌಂಟ್ ಇಲ್ಲದಿದ್ದರೆ ಅರ್ಜಿ ಸಲ್ಲಿಸುವ ಮುನ್ನವೇ ಕ್ರಿಯೇಟ್ ಮಾಡಿಕೊಳ್ಳಿ.

ಹಾಗೆಯೇ ಅರ್ಜಿಯಲ್ಲಿ ನಮೂದಿಸಿದ ಇ-ಮೇಲ್ ಐ.ಡಿ.ಯನ್ನು ಪರೀಕ್ಷಾ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಚಾಲ್ತಿಯಲ್ಲಿರುವಂತೆ ನೋಡಿಕೊಳ್ಳಿ. ಅರ್ಜಿ ಸಲ್ಲಿಸುವಾಗ ಒಂದೇ ಬಾರಿಗೆ ಎಲ್ಲ ಮಾಹಿತಿಯನ್ನು ತುಂಬಬೇಕೆಂಬ ನಿಯಮವೇನಿಲ್ಲ ಡೇಟಾ ಸೇವ್ ಮಾಡಿ ಎಲ್ಲ ಮಾಹಿತಿಯನ್ನು ತುಂಬಿದ ನಂತರವೇ final submit ಬಟನ್ ಒತ್ತಿ.

 

ಪ್ರಮುಖ ಲಿಂಕ್ ಗಳು:

▪️ ಅಧಿಸೂಚನೆ ಡೌನ್ಲೋಡ್ ಮಾಡಲು- CLICK HERE

▪️ಅಧಿಕೃತ ಲಿಂಕ್ – CLICK HERE

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!