RTE- Regarding submitting a request for RTE refund for the second installment of the year 2024-25 through online software
2024-25ನೇ ಸಾಲಿನ ಎರಡನೇ ಕಂತಿನ RTE ಮರುಪಾವತಿಗೆ ಆನ್‌ಲೈನ್ ತಂತ್ರಾಂಶದ ಮೂಲಕ ಬೇಡಿಕೆ ಸಲ್ಲಿಸುವ ಬಗ್ಗೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ 2024-25ನೇ ಸಾಲಿನ ಪ್ರಥಮ ಕಂತಿನ ಆರ್.ಟಿ.ಇ. ಶುಲ್ಕ ಮರುಪಾವತಿಗೆ ಉಲ್ಲೇಖ (4)ರಂತೆ ತಂತ್ರಾಂಶ ಬಿಡುಗಡೆ ಮಾಡಲಾಗಿರುತ್ತದೆ. ಅದರಂತೆ ಪ್ರಥಮ ಕಂತಿನ ಆರ್.ಟಿ.ಇ. ಶುಲ್ಕ ಮರುಪಾವತಿ ಮಂಜೂರಾದ ಶಾಲೆಗಳಿಗೆ ಎರಡನೇ ಕಂತಿನ ಶುಲ್ಕ ಮರುಪಾವತಿಗೆ ಬೇಡಿಕೆ ಸಲ್ಲಿಸಲು ತಂತ್ರಾಂಶದಲ್ಲಿ ದಿನಾಂಕ: 07.02.2025 ರಿಂದ ಅವಕಾಶ ನೀಡಲಾಗಿದೆ. ತಂತ್ರಾಂಶದ ಮೂಲಕ ಎರಡನೇ ಕಂತಿನ ಶುಲ್ಕ ಮರುಪಾವತಿಗೆ ಬೇಡಿಕೆ ಸಲ್ಲಿಸಲು ಅನುಸರಿಸಬೇಕಾದ ಕ್ರಮಗಳು ಕೆಳಕಂಡಂತಿದೆ.
1.2024-25ನೇ ಸಾಲಿನ ಪ್ರಥಮ ಕಂತಿನ ಶುಲ್ಕ ಮರುಪಾವತಿ ಮಂಜೂರಾತಿ ಆದೇಶವಾದ ಶಾಲೆಗಳು ಮಾತ್ರ ಎರಡನೇ ಕಂತಿನ ಶುಲ್ಕ ಮರುಪಾವತಿಗೆ ಬೇಡಿಕೆ ಸಲ್ಲಿಸಲು ಅರ್ಹವಾಗಿರುತ್ತವೆ.
2.ಎರಡನೇ ಕಂತಿನ ಶುಲ್ಕ ಮರುಪಾವತಿಗೆ ಎಸ್.ಎ.ಟಿ.ಎಸ್.ನ ದತ್ತಾಂಶದಲ್ಲಿ ದಾಖಲಾಗಿರುವ ಜುಲೈ 2024 ರಿಂದ ಡಿಸೆಂಬರ್ 2024ರ ಮಾಹೆವರೆಗಿನ ಹಾಜರಾತಿಯಲ್ಲಿ 60% ರಷ್ಟು ಹಾಜರಾತಿ ಹೊಂದಿರುವ ಆರ್.ಟಿ.ಇ. ವಿದ್ಯಾರ್ಥಿಗಳು ಮಾತ್ರ ಎರಡನೇ ಕಂತಿನ ಶುಲ್ಕ ಮರುಪಾವತಿಗೆ ಅರ್ಹರಾಗಿರುತ್ತಾರೆ.
3.ಎರಡನೇ ಕಂತಿನ ಶುಲ್ಕ ಮರುಪಾವತಿಗೆ ಎಸ್.ಎ.ಟಿ.ಎಸ್.ನಲ್ಲಿ 7 ತರಗತಿಯವರೆಗಿನ ಎಲ್ಲಾ ಆರ್.ಟಿ.ಇ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ (ಸಿಸಿಇ) 2.2.1. 2.2.2, ಮತ್ತು 2.2.1 ಮೌಲ್ಯಾಂಕನದ ಗ್ರೇಡ್ ದಾಖಲಿಸುವುದು ಹಾಗೂ 8ನೇ ತರಗತಿಯ ಆರ್.ಟಿ.ಇ. ವಿದ್ಯಾರ್ಥಿಗಳಿಗೆ ಉಲ್ಲೇಖ (3) ಜ್ಞಾಪನ ದನ್ವಯ SATS ನಲ್ಲಿ ಶೈಕ್ಷಣಿಕ ಪ್ರಗತಿ (ಸಿಸಿಇ) ಎಫ್.ಎ.1, ಎಫ್.ಎ.2 ಮೌಲ್ಯಾಂಕನದ ಗ್ರೇಡ್ ಮಾತ್ರ ದಾಖಲಿಸುವುದು ಕಡ್ಡಾಯವಾಗಿರುತ್ತದೆ.
4.ಶುಲ್ಕ ಮರುಪಾವತಿ ತಂತ್ರಾಂಶದಲ್ಲಿ ಲಾಗಿನ್ ಆಗಿ ಎಲ್ಲಾ ಅರ್ಹ ಆರ್.ಟಿ.ಇ. ವಿದ್ಯಾರ್ಥಿಗಳ ವಿವರಗಳ ಲಭ್ಯವಿರುವ ಬಗ್ಗೆ ಖಾತ್ರಿಪಡಿಸಿಕೊಂಡು ಎರಡನೇ ಕಂತಿನ ಶುಲ್ಕ ಮರುಪಾವತಿಗೆ ತಂತ್ರಾಂಶದಲ್ಲಿ ಬೇಡಿಕೆ ಸಲ್ಲಿಸುವುದು.
5.ಶಾಲೆಗಳು ತಂತ್ರಾಂಶದ ಮೂಲಕ ಸಲ್ಲಿಸಿರುವ ಬೇಡಿಕೆಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಪರಿಶೀಲಿಸಿ ಎಲ್ಲಾ ಅರ್ಹ ಆರ್.ಟಿ.ಇ. ವಿದ್ಯಾರ್ಥಿಗಳ ವಿವರಗಳು ಇರುವುದನ್ನು ಖಾತ್ರಿಪಡಿಸಿಕೊಂಡು ಅನುಮೋದನೆ ನೀಡಿ ಮುಂದಿನ ಹಂತಕ್ಕೆ ಸಲ್ಲಿಸುವುದು.
6.ತಮ್ಮ ಲಾಗಿನ್ ನಲ್ಲಿ ಸ್ವೀಕೃತವಾದ ಪ್ರಸ್ತಾವನೆಗಳನ್ನು ವಿಳಂಬಕ್ಕೆ ಅವಕಾಶ ನೀಡದೇ ಆಯಾ ದಿನವೇ ಇತ್ಯರ್ಥಪಡಿಸಲು ಕ್ಷೇತ್ರಶಿಕ್ಷಣಾಧಿಕಾರಿಗಳು ಮತ್ತು ಉಪನಿರ್ದೇಶಕರು ಕ್ರಮವಹಿಸುವುದು.
7.ಕ್ಷೇತ್ರ ಶಿಕ್ಷಣಾಧಿಕಾರಿಗಳು ಅನುಮೋದನೆ ನೀಡಿದಂತಹ ಎರಡನೇ ಕಂತಿನ ಶುಲ್ಕ ಮರುಪಾವತಿ ಬೇಡಿಕೆಗಳನ್ನು ಉಪನಿರ್ದೇಶಕರು ಪರಿಶೀಲಿಸಿ ಸರಿಯಿದ್ದಲ್ಲಿ ಅನುಮೋದನೆ ನೀಡಿ, ಕೂಡಲೇ ಮಂಜೂರಾತಿ ಆದೇಶ ಜನರೇಟ್ ಮಾಡಿ ಶಾಲೆಗಳ ಬ್ಯಾಂಕ್ ಖಾತೆಗೆ ಮರುಪಾವತಿ ಮೊಬಲಗನ್ನು ಸಂದಾಯಿಸಲು ಅಗತ್ಯ ಕ್ರಮವಹಿಸುವುದು.
8.ಹಿಂದಿನ ಸಾಲುಗಳಲ್ಲಿ ಹೆಚ್ಚುವರಿ ಆರ್.ಟಿ.ಇ. ಶುಲ್ಕ ಮರುಪಾವತಿಯ ಶಾಲೆಗಳ ಪ್ರಕರಣಗಳಿಗೆ ಸಂಬಂಧಿಸಿದಂತೆ ಉಲ್ಲೇಖ (4)ರ ಪತ್ರದಲ್ಲಿ ತಿಳಿಸಿರುವಂತೆ ಕ್ರಮವಹಿಸುವುದು. ಈ ಕುರಿತು ಸುತ್ತೋಲೆ ಪ್ರಕಟ
CLICK HERE TO DOWNLOAD CIRCULAR