New EPFO App: ಏಪ್ರಿಲ್‌ನಿಂದ EPFO ಸದಸ್ಯರಿಗೆ ಹೊಸ ಮೊಬೈಲ್ ಆ್ಯಪ್: ಖಾತೆ ಸೇವೆಗಳು ಇನ್ನಷ್ಟು ಸುಲಭ

New EPFO App: ಏಪ್ರಿಲ್‌ನಿಂದ EPFO ಸದಸ್ಯರಿಗೆ ಹೊಸ ಮೊಬೈಲ್ ಆ್ಯಪ್: ಖಾತೆ ಸೇವೆಗಳು ಇನ್ನಷ್ಟು ಸುಲಭ

New EPFO App: ನೌಕರರ ಭವಿಷ್ಯ ನಿಧಿ ಸಂಘಟನೆ (ಇಪಿಎಫ್‌ಒ) ಚಂದಾದಾರರು ಪ್ರಸಕ್ತ ಸಾಲಿನ ಏಪ್ರಿಲ್ ನಿಂದ ಭವಿಷ್ಯ ನಿಧಿ (ಇಪಿಎಫ್)ಯನ್ನು ತಮ್ಮ ಬ್ಯಾಂಕ್‌ಗಳಿಂದ ಯುಪಿಐ ಆಧಾರಿತ ಪಾವತಿ ಮೂಲಕ ಹಿಂತೆಗೆದುಕೊಳ್ಳಬಹುದು ಎಂದು ಉನ್ನತ ಮೂಲಗಳು ತಿಳಿಸಿವೆ.

ಇದರಿಂದ 8 ಕೋಟಿ ಸದಸ್ಯರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ನೌಕರರ ಭವಿಷ್ಯ ನಿಧಿ ಸಂಸ್ಥೆ ಹೊಸ ಮೊಬೈಲ್ ಫೋನ್ ಅಪ್ಲಿಕೇಶನ್ ಅನ್ನು ಹೊರತರಲಿದೆ, ಇದರ ಮೂಲಕ ಸದಸ್ಯರು ತಮ್ಮ ‘ಇಪಿಎಫ್ ಹಣವನ್ನು ಹಿಂಪಡೆಯಬಹುದು. ಬಾಕಿ ಎಷ್ಟು ಎಂಬುದನ್ನು ತಿಳಿದುಕೊಳ್ಳಬಹುದು.

ಸೇವಾ ದಕ್ಷತೆಯನ್ನು ಸುಧಾರಿಸಲು ಮತ್ತು ಸೇವೆಯಲ್ಲಿ ಇರಬಹುದಾದ ಯಾವುದೇ ತಾಂತ್ರಿಕ ನ್ಯೂನತೆಗಳನ್ನು ನಿವಾರಿಸಲು ಇಪಿಎಫ್‌ಒ ಪ್ರಸ್ತುತ 100 ನಕಲಿ ಖಾತೆಗಳನ್ನು ಬಳಸಿಕೊಂಡು ಪ್ರಯೋಗಗಳನ್ನು ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಕಾರ್ಮಿಕ ಸಚಿವಾಲಯವು ಈ ವರ್ಷದ ಏಪ್ರಿಲ್ ನಲ್ಲಿ ಹೊಸ ಅಪ್ಲಿಕೇಶನ್‌ಗೆ ದೊಡ್ಡ ಸಮಾರಂಭದಲ್ಲಿ ಚಾಲನೆ ನೀಡಲಿದೆ.

▪️ಭವಿಷ್ಯ ನಿಧಿಯಿಂದ ಕ್ಷಿಪ್ರವಾಗಿ ಹಣ ಪಡೆಯಲು ಒತ್ತಾಸೆ

▪️8 ಕೋಟಿ ಸದಸ್ಯರಿಗೆ ವರದಾನ



ಪ್ರಸ್ತುತ, ಇಪಿಎಫ್ ಒ ಸದಸ್ಯರು ತಮ್ಮ ಇಪಿಎಫ್ ಹಣವನ್ನು ಪಡೆಯಲು ಹಿಂಪಡೆಯುವಿಕೆ ಕ್ರೈಮ್ ಗಳಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಯೂನಿವರ್ಸಲ್ ಆಕೌಂಟ್‌ನಂಬರ್(ಯುಎಎನ್) ಬಳಸಬೇಕಾಗುತ್ತದೆ.

ಇಲ್ಲವೇ ಇಪಿಎಫ್ ಖಾತೆ ವಹಿವಾಟಿಗೆ ಯುಎಂಎಎನ್‌ಜಿ ಆ್ಯಪ್ ಬಳಸಬೇಕಾಗುತ್ತದೆ. ಆದರೆ ಹೊಸ ಆ್ಯಪ್ ಸದಸ್ಯರಿಗೆ ಸೇವೆಯನ್ನುಕ್ಷಿಪ್ರಗೊಳಿಸುತ್ತದೆ.

ಹೊಸ ಆ್ಯಪ್‌ನಿಂದ ಅರ್ಜಿ ಸಲ್ಲಿಸದ 3 ದಿನಗಳಲ್ಲಿ ಹಣವನ್ನು ಇಪಿಎಫ್‌ನಿಂದ ಪಡೆಯಬಹುದಾಗಿದೆ.

ಎಲ್ಲವೂ ವಿದ್ಯುನ್ಮಾನ ವ್ಯವಸ್ಥೆಯಲ್ಲೇ ಇತ್ಯರ್ಥವಾಗುತ್ತದೆ. ಈ ಆಟೋ-ಸೆಟಲ್ಮೆಂಟ್ ಮಿತಿಯನ್ನು ಈಗಾಗಲೇ 1 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ಹೊಸ ವ್ಯವಸ್ಥೆಯಿಂದ

ಹೆಚ್ಚಿನ ಸಂಖ್ಯೆಯ ಇಪಿಎಫ್ ಒ ಸದಸ್ಯರಿಗೆ ಅನಾರೋಗ್ಯ, ಶಿಕ್ಷಣ, ಮದುವೆ ಮತ್ತು ವಸತಿ ಉದ್ದೇಶಗಳಿಗಾಗಿ ಬೇಗ ಹಣವನ್ನು ಪಡೆಯಬಹುದು.

ಇಪಿಎಫ್‌ಒ ಮೇಲಿನ ಹೊರೆಯನ್ನು ಕಡಿಮೆ ಮಾಡಲು ಹೊಸ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸ ಲಾಗುತ್ತಿದೆ, ಏಕೆಂದರೆ ಪ್ರತಿ ವರ್ಷ 5 ಕೋಟಿಗೂ ಹೆಚ್ಚು ಕ್ರೈಮ್‌ಗಳನ್ನು ಇತ್ಯರ್ಥಪಡಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

New EPFO App
ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!