Reviving Low-Enrollment Government Schools-2026: ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ದಾಖಲಾತಿ ಹೆಚ್ಚಿಸುವ ಪರಿಣಾಮಕಾರಿ ಮಾರ್ಗಗಳು

Reviving Low-Enrollment Government Schools: ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ದಾಖಲಾತಿ ಹೆಚ್ಚಿಸುವ ಪರಿಣಾಮಕಾರಿ ಮಾರ್ಗಗಳು

Reviving Low-Enrollment Government Schools: ಕಡಿಮೆ ದಾಖಲಾತಿಯ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿ ಸಂಖ್ಯೆಯನ್ನು ಹೆಚ್ಚಿಸಲು ಸಮಗ್ರ ಕಾರ್ಯಯೋಜನೆ, ಸಮುದಾಯದ ಸಹಭಾಗಿತ್ವ ಮತ್ತು ಹೊಸ ಆಲೋಚನೆಗಳ ಕುರಿತು ತಿಳಿದುಕೊಳ್ಳಿ.

ಈಗಾಗಲೇ ಕಳೆದ ಶೈಕ್ಷಣಿಕ ಸಾಲುಗಳಲ್ಲಿ ಕೆಲವು ಸರ್ಕಾರಿ ಶಾಲೆಗಳಲ್ಲಿ ಕಡಿಮೆ ದಾಖಲಾತಿಯೊಂದಿಗೆ ಕಾರ್ಯ ನಿರ್ವಹಿಸುವುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ.

ಈ ಹಿನ್ನಲೆಯಲ್ಲಿ ಶಾಲೆಗಳ ಸ್ಥಿರತೆ ಮತ್ತು ಗುಣಮಟ್ಟದ ಶಿಕ್ಷಣ ಮತ್ತು ಸಾರ್ವಜನಿಕ ವಿಶ್ವಾಸ ಹೆಚ್ಚಿಸುವುದು ಅತ್ಯಂತ ಅಗತ್ಯವಾಗಿದೆ. ಈ ಸಂಬಂಧ ಕೆಲವು ಕ್ರಮಗಳನ್ನು ಈ ತಕ್ಷಣ ಜಾರಿಗೊಳಿಸಿ 2026-27ನೇ ಶೈಕ್ಷಣಿಕ ಸಾಲಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿಯ ಹೆಚ್ಚಳಕ್ಕೆ ಕ್ರಮವಹಿಸುವುದು.

1. ಶಾಲೆಗಳ ಗುರುತು ಮತ್ತು ಡೇಟಾ ವಿಶ್ಲೇಷಣೆ:

▪️UDISE+ ಆಧಾರದಲ್ಲಿ ಕಡಿಮೆ ದಾಖಲಾತಿಯ ಶಾಲೆಗಳ ಪಟ್ಟಿ ಅಂತಿಮಗೊಳಿಸುವುದು.

▪️ಶಾಲೆಯಿಂದ ಹೊರಗುಳಿದ ಮಕ್ಕಳ ಗುರುತು ಮತ್ತು ಟ್ಯಾಕಿಂಗ್ ವ್ಯವಸ್ಥೆ.

2. ಸಮುದಾಯ ಅಧಾರಿತ ಪ್ರವೇಶ ಅಭಿಯಾನ:

▪️School Chalo / Praveshotsav ಅಭಿಯಾನವನ್ನು ಆಯೋಜಿಸುವುದು.
▪️SDMC, ಪಂಚಾಯತ, ಅಂಗನವಾಡಿ ಸಿಬ್ಬಂದಿಗಳ ಸಕ್ರಿಯ ಭಾಗವಹಿಸುವಿಕೆ.

3. ಗುಣಮಟ್ಟದ ಶಿಕ್ಷಣ ಸುಧಾರಣೆ:

▪️ಎಫ್‌ಎಲ್‌ಎನ್ ಕಾರ್ಯಕ್ರಮದ ಪರಿಣಾಮಕಾರಿ ಅನುಷ್ಠಾನ.

▪️ಶಿಕ್ಷಕರ ಸಾಮರ್ಥ್ಯ ವೃದ್ಧಿ ಮತ್ತು ಹೊಣೆಗಾರಿಕೆ ವ್ಯವಸ್ಥೆ.

4. ಮೂಲಸೌಕರ್ಯ ಸುಧಾರಣೆ:

▪️ಎಲ್ಲ ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳ ಖಚಿತತೆ

▪️ಮಕ್ಕಳ ಸ್ನೇಹಿ ವಾತಾವರಣದ ನಿರ್ಮಾಣ.

5. ವಿದ್ಯಾರ್ಥಿಗಳಲ್ಲಿ ಆಕರ್ಷಕ ಕಾರ್ಯಕ್ರಮಗಳು:

6. ಮೇಲ್ವಿಚಾರಣೆ ಮತ್ತು ವಿಮರ್ಶೆ:

▪️ಜಿಲ್ಲಾ ಮಟ್ಟದಲ್ಲಿ ಮಾಸಿಕ ಪ್ರಗತಿ ಪರಿಶೀಲನೆ.

▪️ವಿಭಾಗ ಮಟ್ಟದಲ್ಲಿ ನಿಯಮಿತ ವಿಮರ್ಶಾ ಸಭೆಗಳು.

7. ಜವಾಬ್ದಾರಿ ಹಂಚಿಕೆ:

▪️ಜಿಲ್ಲಾ ಹಂತದಲ್ಲಿ ಉಪನಿರ್ದೇಶಕರು (ಆಡಳಿತ) ಹಾಗೂ ಉಪನಿರ್ದೇಶಕರು (ಅಭಿವೃದ್ಧಿ), ಎಲ್ಲ ಶಿಕ್ಷಣಾಧಿಕಾರಿಗಳು, ಉಪನ್ಯಾಸಕರು ಕ್ರಮವಹಿಸುವುದು.

▪️ಬ್ಲಾಕ್ ಹಂತದಲ್ಲಿ ಬಿಆರ್‌ಸಿ/ಶಿಕ್ಷಣಾಧಿಕಾರಿಗಳು (ಪಿಎಂ ಪೋಷಣ್), ಬಿಆರ್‌ಪಿಗಳು ಮತ್ತು ಇಸಿಓಗಳು ಕ್ರಮವಹಿಸುವುದು.

▪️ಕ್ಲಸ್ಟರ್  ಹಂತದಲ್ಲಿ ಸಿಆರ್‌ಪಿ / ಐಇಆರ್‌ಟಿ ಕ್ರಮವಹಿಸುವುದು.

▪️ಶಾಲಾ ಮಟ್ಟದಲ್ಲಿ ಮುಖ್ಯ ಶಿಕ್ಷಕರು ಕ್ರಮವಹಿಸುವುದು.
▪️ಕ್ರೀಡೆ, ಸಾಂಸ್ಕೃತಿಕ ಮತ್ತು ವಿಜ್ಞಾನ ಚಟುವಟಿಕೆಗಳ ವಿಸ್ತರಣೆ.

▪️ಶಾಲೆಗಳನ್ನು ಚಟುವಟಿಕೆ ಆಧಾರಿತ ಕಲಿಕಾ ಕೆಂದ್ರಗಳನ್ನಾಗಿ ಅಭಿವೃದ್ಧಿಪಡಿಸುವುದು.

ದಾಖಲಾತಿ ಅಂದೋಲನದಲ್ಲಿ ಗುಡ್-ಪ್ರಾಕ್ಟಿಸ್ ಗಳ ಪಾತ್ರ ಅತ್ಯಂತ ಮಹತ್ವದ್ದು. ಸರಿಯಾದ ವಿಧಾನವನ್ನು ಅನುಸರಿಸಿದರೆ ಕಡಿಮೆ ದಾಖಲಾತಿಯ ಶಾಲೆಗಳಲ್ಲಿ ಉತ್ತಮ ಫಲಿತಾಂಶಗಳನ್ನು ಸಾಧಿಸಬಹುದು.

ಅ) “ಗುಡ್-ಪ್ರಾಕ್ಟಿಸ್ ಗಳೆಂದರೇನು?

ಶಾಲಾದಾಖಲಾತಿ ಹೆಚ್ಚಿಸಲು ಈಗಾಗಲೇ ಯಶಸ್ವಿಯಾಗಿ ಕೆಲಸ ಮಾಡಿದ ಪರಿಣಾಮಕಾರಿ ಕ್ರಮಗಳು (Prove Strategies).

▪️ವಿಶ್ವಾಸ ನಿರ್ಮಾಣ (Building Public Trust)
▪️ಪೋಷಕರು ಸರ್ಕಾರಿ ಶಾಲೆಗಳ ಮೇಲೆ ವಿಶ್ವಾಸ ಕಳೆದುಕೊಳ್ಳುವುದು ಪ್ರಮುಖ ಸಮಸ್ಯೆಯಾಗಿದ್ದು,
▪️ಡೆಮೋ ಕ್ಲಾಸ್‌ಗಳ ಮೂಲಕ, ತೆರೆದ ಮನೆ ದಿನ, ಕಲಿಕಾ ಫಲಿತಾಂಶದ ಪ್ರದರ್ಶಗಳ ಮೂಲಕ ಗುಣಮಟ್ಟದ ಶಿಕ್ಷಣ ಪ್ರದರ್ಶನ ಮಾಡುವುದು.
▪️Good Practices ಗಳ ಮೂಲಕ ಶಾಲೆಗಳ ಸಾಧನೆಗಳನ್ನು ತೋರಿಸಬಹುದು.

ಉದಾ: Result Display Board ಮತ್ತು ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳ ಪ್ರಚಾರ.

▪️ಸ್ಥಳಿಯ ಅಗತ್ಯತೆಗಳ ಮೂಲಕ ವ್ಯಾಟ್ಸ್-ಅಫ್ ಗುಂಪುಗಳನ್ನು ಸಾಮಾಜಿಕ ಜಾಲತಾಣಗಳನ್ನು ಸಮಯಕ್ಕನುಗುಣವಾಗಿ ನಿರ್ವಹಣೆ ಮಾಡುವುದು. ಆಂಗ್ಲ ಮಾಧ್ಯಮ, ಕೌಶಲ್ಯ ಆಧಾರಿತ ಕಲಿಕೆ.
▪️ಶಾಲಾ ಗೋಡೆಗಳ ಮಾಹಿತಿ.

ಆ) ಸಮುದಾಯದ ಪಾಲ್ಗೊಳ್ಳುವಿಕೆ ಹೆಚ್ಚಿಸುವುದು. ಎಸ್.ಡಿ.ಎಂ.ಸಿ, ಗ್ರಾಮಪಂಚಾಯತಿ ಮತ್ತು ಹಳೆಯ ವಿದ್ಯಾರ್ಥಿಗಳ ಭಾಗವಹಿಸುವಿಕೆ. ಗ್ರಾಮೀಣ ಶಿಕ್ಷಣ ವಹಿಯನ್ನು ಇಂದಿನವರೆಗೆ ನಿರ್ವಹಿಸುವುದು.

ಇ) ಮಕ್ಕಳ ಆಕರ್ಷಣೆ (Student Attraction):

▪️ಮಕ್ಕಳಿಗೆ ಆಕರ್ಷಕ ಚಟುವಟಿಕೆಗಳು,

▪️ಹುಟ್ಟು ಹಬ್ಬದ ಆಚರಣೆ,

▪️ಶಾಲಾ ಸಮವಸ್ತ್ರ, ದಿನ/ ಚಟುವಟಿಕೆ ದಿನ.

▪️ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘಗಳ ನಿರ್ವಹಣೆ.

ಈ) Drop-Out ಮಕ್ಕಳ ಪುನಃ ಸೇರ್ವಡೆ:

▪️ಮನೆಮನೆಗೆ ಭೇಟಿ ಮಾಡಿ ಮಕ್ಕಳನ್ನು ಶಾಲೆಗೆ ಮರಳಿ ತರುವುದು (Bridge Course).

ಉ) ಶಾಲೆಯ ಬ್ಯಾಡಿಂಗ್ (School Branding): ಖಾಸಗಿ ಶಾಲೆಗಳ ಸಮಾನವಾಗಿ ಪ್ರಚಾರ ಮಾಡುವುದು.

ಊ) ಶಿಕ್ಷಕರ ಸಕ್ರೀಯ ಪಾತ್ರ: ಶಿಕ್ಷಕರು ದಾಖಲಾತಿ ರಾಯಭಾರಿಗಳಾಗಿ, ದಾಖಲಾತಿ ಗುರಿ ಜವಾಬ್ದಾರಿಗಳ ಕಾರ್ಯನಿರ್ವಹಿಸುವುದು.

2026-27ನೇ ಸಾಲಿನ ದಾಖಲಾತಿ ಅಂದೋಲನವನ್ನು ನವೀನ ತಂತ್ರಜ್ಞಾನದ ಹಾಗೂ ಸಮುದಾಯದ ಸಹಭಾಗಿತ್ವದೊಂದಿಗೆ ಹಮ್ಮಿಕೊಳ್ಳುವ ಕುರಿತು.

2026-27ನೇ ಶೈಕ್ಷಣಿಕ ಸಾಲಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿಯನ್ನು ಹೆಚ್ಚಿಸುವ ಕಾರ್ಯಕ್ರಮವು ಕೇವಲ ಮನೆಮನೆ ಬೇಟಿಗೆ ಸಿಮೀತವಾಗದೇ, ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆಗಳಾದ ಪಿಎಂಶ್ರೀ, ದ್ವಿಭಾಷಾ ಬೋಧನೆ ಹಾಗೂ ಐಐಟಿ ಧಾರವಾಡ ಸಹಯೋಗದ ಡಿಜಿಟಲ್ ಟ್ಯೂಟರ್ ಸೌಲಭ್ಯಗಳನ್ನು ಸಾರ್ವಜನಿಕರಿಗೆ ಪರಿಣಾಮಕಾರಿಯಾಗಿ ತಲುಪಿಸುವುದು ಅತ್ಯಗತ್ಯವಾಗಿದೆ. ಈ ದಿಸೆಯಲ್ಲಿ ಬೆಳಗಾವಿ ವಿಭಾಗದ ವ್ಯಾಪ್ತಿಯಲ್ಲಿ ನವೀನ ಉಪಕ್ರಮಗಳನ್ನು ಆಯೋಜಿಸಲು ತಿಳಿಸಲಾಗಿದೆ.

1. ಡಿಜಿಟಲ್ ತಂತ್ರಜ್ಞಾನದ ಬಳಕೆ:

ಡಿಜಿಟಲ್ ಓಪನ್‌ಹೌಸ್:

▪️ಪ್ರತಿಯೊಂದು ಶಾಲೆಯ ಸ್ಮಾರ್ಟ ಕ್ಲಾಸ್‌ ರೂಂ ಹಾಗೂ ಹಸಿರು ಪರಿಸರದ ಸಂಕ್ಷಿಪ್ತ ವಿಡೀಯೊವನ್ನು ಸ್ಥಳೀಯ ವ್ಯಾಟ್ಸ್ ಅಫ್ ಗುಂಪುಗಳಲ್ಲಿ ಪ್ರಸಾರ ಮಾಡುವುದು.

▪️ಕ್ಯೂ-ಆರ್ ಕೋಡ್ ಆಧಾರಿತ ನೊಂದಣಿ: ಬಸ್‌ ನಿಲ್ದಾಣ ಮತ್ತು ಗ್ರಾಮ ಪಂಚಾಯತಿಗಳಲಿ ಕೂ-ಆರ್ ಕೋಡ್ ಹೊಂದಿರುವ ಬ್ಯಾನರ್‌ಗಳನ್ನು ಅಳವಡಿಸಿ ಅಸಕ್ತ ಪೋಷಕರು ಸುಲಭವಾಗಿ ವಿವರ ಸಲ್ಲಿಸಲು ವ್ಯವಸ್ಥೆ ಮಾಡುವುದು.

2. ಸಮುದಾಯ ಮತ್ತು ಹಳೆಯ ವಿದ್ಯಾರ್ಥಿಗಳ ಸಹಭಾಗಿತ್ವ:

▪️ಗೌರವ ಅಭಿಯಾನ ಶಾಲೆಯ ಯಶಸ್ವಿ ಹಳೆಯ ವಿದ್ಯಾರ್ಥಿಗಳನ್ನು ಒಳಗೊಂಡ ‘ಪ್ರೇರಣಾ ನಡಿಗೆ’ ಆಯೋಜಿಸಿ ಪೋಷಕರಲ್ಲಿ ವಿಶ್ವಾಸ ಮೂಡಿಸುವುದು.

▪️ ಅಂಗನವಾಡಿ ಕೇಂದ್ರಗಳಲ್ಲಿ ವಿಶೇಷ ಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ ಆಟೋಟ ಮತ್ತು ಕಲಿಕಾ ಹಬ್ಬಗಳನ್ನು ಆಯೋಜಿಸುವುದು.

3. ವಿಶೇಷ ಕಲಿಕಾ ಸೌಲಭ್ಯಗಳ ಪ್ರದರ್ಶನ:

▪️ಡಿಜಿಟಲ್ ಟ್ಯೂಟರ್ ಪ್ರಾತ್ಯಕ್ಷಿಕೆ:

▪️8 ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಲಭ್ಯವಿರುವ ಐಐಟಿ ಧಾರವಾಡ ಸಹಯೋಗದ ಡಿಜಿಟಲ್ ಕಲಿಕಾ ವ್ಯವಸ್ಥೆಯನ್ನು ಪೋಷಕರಿಗೆ ಪ್ರದರ್ಶಿಸುವುದು.

▪️ಪೂರ್ತಿ ಸಿಂಚನ ಪ್ರಭಾವ: ಎಸ್‌ಎಸ್‌ಎಲ್‌ಸಿ ಪರೀಕ್ಷಾ ಸಿದ್ಧತಾ ಕಾರ್ಯಕ್ರಮದ ಯಶಸ್ಸನ್ನು ಬಿಂಬಿಸುವ ಪೋಷ್ಟ್ಯರ್‌ಗಳನ್ನು ಪ್ರದರ್ಶಿಸುವುದು.

4. ಪರಿಸರ ಸ್ನೇಹಿ ದಾಖಲಾತಿ/ಹಸಿರು ದಾಖಲಾತಿ:

▪️ಪ್ರತಿ ಹೊಸ ದಾಖಲಾತಿಗೆ ಶಾಲೆಯ ಬಯೋ-ಗಾರ್ಡನ್ನಲ್ಲಿ ಒಂದು ಸಸಿ ನೆಟ್ಟು ಮಗುವನ್ನು ಸರ ಪೋಷಕನನ್ನಾಗಿ ಮಾಡುವ ಮೂಲಕ ಭಾವನಾತ್ಮಕ ಸಂಬಂಧ ಬೆಳೆಸುವುದು.

▪️ಈ ಕುರಿತು ಉಪನಿರ್ದೇಶಕರು (ಆಡಳಿತ) ಅವರು ಜಿಲ್ಲಾ ಮಟ್ಟದಲ್ಲಿ ಈ ಕಾರ್ಯಕ್ರಮಗಳ ಮೇಲ್ವಿಚಾರಣೆ ನಡೆಸಿ ಕ್ರಮವಹಿಸುವುದು.

▪️ಪ್ರತಿ ಬ್ಲಾಕ್‌ಗಳ ನೋಡಲ್ ಅಧಿಕಾರಿಗಳು ಪ್ರತಿ ಶಾಲೆಯಲ್ಲಿ ಈ ನವೀನ ಉಪಕ್ರಮಗಳು ಜಾರಿಯಾಗುತ್ತಿರುವುದನ್ನು ಖಚಿತಪಡಿಸಿಕೊಳ್ಳುವುದು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಸಹಕಾರ ಪಡೆದುಕೊಳ್ಳುವ ನಿಟ್ಟಿನಲ್ಲಿ ಈ ಮೇಲಿನ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಮುಂಬರುವ ಶೈಕ್ಷಣಿಕ ಸಾಲಿನಲ್ಲಿ ದಾಖಲಾತಿಯ ಗುರಿಯನ್ನು ಯಶಸ್ವಿಯಾಗಿ ತಲುಪಲು ಕ್ರಮ ಕೈಗೊಳ್ಳತಕ್ಕದ್ದು. ಎಂದು ಆದೇಶದಲ್ಲಿ ತಿಳಿಸಲಾಗಿದೆ.

Reviving Low-Enrollment

 

CLICK HERE TO DOWNLOAD

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!