Reviving Low-Enrollment Government Schools: ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ದಾಖಲಾತಿ ಹೆಚ್ಚಿಸುವ ಪರಿಣಾಮಕಾರಿ ಮಾರ್ಗಗಳು
Reviving Low-Enrollment Government Schools: ಕಡಿಮೆ ದಾಖಲಾತಿಯ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿ ಸಂಖ್ಯೆಯನ್ನು ಹೆಚ್ಚಿಸಲು ಸಮಗ್ರ ಕಾರ್ಯಯೋಜನೆ, ಸಮುದಾಯದ ಸಹಭಾಗಿತ್ವ ಮತ್ತು ಹೊಸ ಆಲೋಚನೆಗಳ ಕುರಿತು ತಿಳಿದುಕೊಳ್ಳಿ.
ಈಗಾಗಲೇ ಕಳೆದ ಶೈಕ್ಷಣಿಕ ಸಾಲುಗಳಲ್ಲಿ ಕೆಲವು ಸರ್ಕಾರಿ ಶಾಲೆಗಳಲ್ಲಿ ಕಡಿಮೆ ದಾಖಲಾತಿಯೊಂದಿಗೆ ಕಾರ್ಯ ನಿರ್ವಹಿಸುವುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ.
ಈ ಹಿನ್ನಲೆಯಲ್ಲಿ ಶಾಲೆಗಳ ಸ್ಥಿರತೆ ಮತ್ತು ಗುಣಮಟ್ಟದ ಶಿಕ್ಷಣ ಮತ್ತು ಸಾರ್ವಜನಿಕ ವಿಶ್ವಾಸ ಹೆಚ್ಚಿಸುವುದು ಅತ್ಯಂತ ಅಗತ್ಯವಾಗಿದೆ. ಈ ಸಂಬಂಧ ಕೆಲವು ಕ್ರಮಗಳನ್ನು ಈ ತಕ್ಷಣ ಜಾರಿಗೊಳಿಸಿ 2026-27ನೇ ಶೈಕ್ಷಣಿಕ ಸಾಲಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿಯ ಹೆಚ್ಚಳಕ್ಕೆ ಕ್ರಮವಹಿಸುವುದು.
1. ಶಾಲೆಗಳ ಗುರುತು ಮತ್ತು ಡೇಟಾ ವಿಶ್ಲೇಷಣೆ:
▪️UDISE+ ಆಧಾರದಲ್ಲಿ ಕಡಿಮೆ ದಾಖಲಾತಿಯ ಶಾಲೆಗಳ ಪಟ್ಟಿ ಅಂತಿಮಗೊಳಿಸುವುದು.
▪️ಶಾಲೆಯಿಂದ ಹೊರಗುಳಿದ ಮಕ್ಕಳ ಗುರುತು ಮತ್ತು ಟ್ಯಾಕಿಂಗ್ ವ್ಯವಸ್ಥೆ.
2. ಸಮುದಾಯ ಅಧಾರಿತ ಪ್ರವೇಶ ಅಭಿಯಾನ:
▪️School Chalo / Praveshotsav ಅಭಿಯಾನವನ್ನು ಆಯೋಜಿಸುವುದು.
▪️SDMC, ಪಂಚಾಯತ, ಅಂಗನವಾಡಿ ಸಿಬ್ಬಂದಿಗಳ ಸಕ್ರಿಯ ಭಾಗವಹಿಸುವಿಕೆ.
3. ಗುಣಮಟ್ಟದ ಶಿಕ್ಷಣ ಸುಧಾರಣೆ:
▪️ಎಫ್ಎಲ್ಎನ್ ಕಾರ್ಯಕ್ರಮದ ಪರಿಣಾಮಕಾರಿ ಅನುಷ್ಠಾನ.
▪️ಶಿಕ್ಷಕರ ಸಾಮರ್ಥ್ಯ ವೃದ್ಧಿ ಮತ್ತು ಹೊಣೆಗಾರಿಕೆ ವ್ಯವಸ್ಥೆ.
4. ಮೂಲಸೌಕರ್ಯ ಸುಧಾರಣೆ:
▪️ಎಲ್ಲ ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳ ಖಚಿತತೆ
▪️ಮಕ್ಕಳ ಸ್ನೇಹಿ ವಾತಾವರಣದ ನಿರ್ಮಾಣ.
5. ವಿದ್ಯಾರ್ಥಿಗಳಲ್ಲಿ ಆಕರ್ಷಕ ಕಾರ್ಯಕ್ರಮಗಳು:
6. ಮೇಲ್ವಿಚಾರಣೆ ಮತ್ತು ವಿಮರ್ಶೆ:
▪️ಜಿಲ್ಲಾ ಮಟ್ಟದಲ್ಲಿ ಮಾಸಿಕ ಪ್ರಗತಿ ಪರಿಶೀಲನೆ.
▪️ವಿಭಾಗ ಮಟ್ಟದಲ್ಲಿ ನಿಯಮಿತ ವಿಮರ್ಶಾ ಸಭೆಗಳು.
7. ಜವಾಬ್ದಾರಿ ಹಂಚಿಕೆ:
▪️ಜಿಲ್ಲಾ ಹಂತದಲ್ಲಿ ಉಪನಿರ್ದೇಶಕರು (ಆಡಳಿತ) ಹಾಗೂ ಉಪನಿರ್ದೇಶಕರು (ಅಭಿವೃದ್ಧಿ), ಎಲ್ಲ ಶಿಕ್ಷಣಾಧಿಕಾರಿಗಳು, ಉಪನ್ಯಾಸಕರು ಕ್ರಮವಹಿಸುವುದು.
▪️ಬ್ಲಾಕ್ ಹಂತದಲ್ಲಿ ಬಿಆರ್ಸಿ/ಶಿಕ್ಷಣಾಧಿಕಾರಿಗಳು (ಪಿಎಂ ಪೋಷಣ್), ಬಿಆರ್ಪಿಗಳು ಮತ್ತು ಇಸಿಓಗಳು ಕ್ರಮವಹಿಸುವುದು.
▪️ಕ್ಲಸ್ಟರ್ ಹಂತದಲ್ಲಿ ಸಿಆರ್ಪಿ / ಐಇಆರ್ಟಿ ಕ್ರಮವಹಿಸುವುದು.
▪️ಶಾಲಾ ಮಟ್ಟದಲ್ಲಿ ಮುಖ್ಯ ಶಿಕ್ಷಕರು ಕ್ರಮವಹಿಸುವುದು.
▪️ಕ್ರೀಡೆ, ಸಾಂಸ್ಕೃತಿಕ ಮತ್ತು ವಿಜ್ಞಾನ ಚಟುವಟಿಕೆಗಳ ವಿಸ್ತರಣೆ.
▪️ಶಾಲೆಗಳನ್ನು ಚಟುವಟಿಕೆ ಆಧಾರಿತ ಕಲಿಕಾ ಕೆಂದ್ರಗಳನ್ನಾಗಿ ಅಭಿವೃದ್ಧಿಪಡಿಸುವುದು.
ದಾಖಲಾತಿ ಅಂದೋಲನದಲ್ಲಿ ಗುಡ್-ಪ್ರಾಕ್ಟಿಸ್ ಗಳ ಪಾತ್ರ ಅತ್ಯಂತ ಮಹತ್ವದ್ದು. ಸರಿಯಾದ ವಿಧಾನವನ್ನು ಅನುಸರಿಸಿದರೆ ಕಡಿಮೆ ದಾಖಲಾತಿಯ ಶಾಲೆಗಳಲ್ಲಿ ಉತ್ತಮ ಫಲಿತಾಂಶಗಳನ್ನು ಸಾಧಿಸಬಹುದು.
ಅ) “ಗುಡ್-ಪ್ರಾಕ್ಟಿಸ್ ಗಳೆಂದರೇನು?
ಶಾಲಾದಾಖಲಾತಿ ಹೆಚ್ಚಿಸಲು ಈಗಾಗಲೇ ಯಶಸ್ವಿಯಾಗಿ ಕೆಲಸ ಮಾಡಿದ ಪರಿಣಾಮಕಾರಿ ಕ್ರಮಗಳು (Prove Strategies).
▪️ವಿಶ್ವಾಸ ನಿರ್ಮಾಣ (Building Public Trust)
▪️ಪೋಷಕರು ಸರ್ಕಾರಿ ಶಾಲೆಗಳ ಮೇಲೆ ವಿಶ್ವಾಸ ಕಳೆದುಕೊಳ್ಳುವುದು ಪ್ರಮುಖ ಸಮಸ್ಯೆಯಾಗಿದ್ದು,
▪️ಡೆಮೋ ಕ್ಲಾಸ್ಗಳ ಮೂಲಕ, ತೆರೆದ ಮನೆ ದಿನ, ಕಲಿಕಾ ಫಲಿತಾಂಶದ ಪ್ರದರ್ಶಗಳ ಮೂಲಕ ಗುಣಮಟ್ಟದ ಶಿಕ್ಷಣ ಪ್ರದರ್ಶನ ಮಾಡುವುದು.
▪️Good Practices ಗಳ ಮೂಲಕ ಶಾಲೆಗಳ ಸಾಧನೆಗಳನ್ನು ತೋರಿಸಬಹುದು.
ಉದಾ: Result Display Board ಮತ್ತು ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳ ಪ್ರಚಾರ.
▪️ಸ್ಥಳಿಯ ಅಗತ್ಯತೆಗಳ ಮೂಲಕ ವ್ಯಾಟ್ಸ್-ಅಫ್ ಗುಂಪುಗಳನ್ನು ಸಾಮಾಜಿಕ ಜಾಲತಾಣಗಳನ್ನು ಸಮಯಕ್ಕನುಗುಣವಾಗಿ ನಿರ್ವಹಣೆ ಮಾಡುವುದು. ಆಂಗ್ಲ ಮಾಧ್ಯಮ, ಕೌಶಲ್ಯ ಆಧಾರಿತ ಕಲಿಕೆ.
▪️ಶಾಲಾ ಗೋಡೆಗಳ ಮಾಹಿತಿ.
ಆ) ಸಮುದಾಯದ ಪಾಲ್ಗೊಳ್ಳುವಿಕೆ ಹೆಚ್ಚಿಸುವುದು. ಎಸ್.ಡಿ.ಎಂ.ಸಿ, ಗ್ರಾಮಪಂಚಾಯತಿ ಮತ್ತು ಹಳೆಯ ವಿದ್ಯಾರ್ಥಿಗಳ ಭಾಗವಹಿಸುವಿಕೆ. ಗ್ರಾಮೀಣ ಶಿಕ್ಷಣ ವಹಿಯನ್ನು ಇಂದಿನವರೆಗೆ ನಿರ್ವಹಿಸುವುದು.
ಇ) ಮಕ್ಕಳ ಆಕರ್ಷಣೆ (Student Attraction):
▪️ಮಕ್ಕಳಿಗೆ ಆಕರ್ಷಕ ಚಟುವಟಿಕೆಗಳು,
▪️ಹುಟ್ಟು ಹಬ್ಬದ ಆಚರಣೆ,
▪️ಶಾಲಾ ಸಮವಸ್ತ್ರ, ದಿನ/ ಚಟುವಟಿಕೆ ದಿನ.
▪️ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘಗಳ ನಿರ್ವಹಣೆ.
ಈ) Drop-Out ಮಕ್ಕಳ ಪುನಃ ಸೇರ್ವಡೆ:
▪️ಮನೆಮನೆಗೆ ಭೇಟಿ ಮಾಡಿ ಮಕ್ಕಳನ್ನು ಶಾಲೆಗೆ ಮರಳಿ ತರುವುದು (Bridge Course).
ಉ) ಶಾಲೆಯ ಬ್ಯಾಡಿಂಗ್ (School Branding): ಖಾಸಗಿ ಶಾಲೆಗಳ ಸಮಾನವಾಗಿ ಪ್ರಚಾರ ಮಾಡುವುದು.
ಊ) ಶಿಕ್ಷಕರ ಸಕ್ರೀಯ ಪಾತ್ರ: ಶಿಕ್ಷಕರು ದಾಖಲಾತಿ ರಾಯಭಾರಿಗಳಾಗಿ, ದಾಖಲಾತಿ ಗುರಿ ಜವಾಬ್ದಾರಿಗಳ ಕಾರ್ಯನಿರ್ವಹಿಸುವುದು.
2026-27ನೇ ಸಾಲಿನ ದಾಖಲಾತಿ ಅಂದೋಲನವನ್ನು ನವೀನ ತಂತ್ರಜ್ಞಾನದ ಹಾಗೂ ಸಮುದಾಯದ ಸಹಭಾಗಿತ್ವದೊಂದಿಗೆ ಹಮ್ಮಿಕೊಳ್ಳುವ ಕುರಿತು.
2026-27ನೇ ಶೈಕ್ಷಣಿಕ ಸಾಲಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿಯನ್ನು ಹೆಚ್ಚಿಸುವ ಕಾರ್ಯಕ್ರಮವು ಕೇವಲ ಮನೆಮನೆ ಬೇಟಿಗೆ ಸಿಮೀತವಾಗದೇ, ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆಗಳಾದ ಪಿಎಂಶ್ರೀ, ದ್ವಿಭಾಷಾ ಬೋಧನೆ ಹಾಗೂ ಐಐಟಿ ಧಾರವಾಡ ಸಹಯೋಗದ ಡಿಜಿಟಲ್ ಟ್ಯೂಟರ್ ಸೌಲಭ್ಯಗಳನ್ನು ಸಾರ್ವಜನಿಕರಿಗೆ ಪರಿಣಾಮಕಾರಿಯಾಗಿ ತಲುಪಿಸುವುದು ಅತ್ಯಗತ್ಯವಾಗಿದೆ. ಈ ದಿಸೆಯಲ್ಲಿ ಬೆಳಗಾವಿ ವಿಭಾಗದ ವ್ಯಾಪ್ತಿಯಲ್ಲಿ ನವೀನ ಉಪಕ್ರಮಗಳನ್ನು ಆಯೋಜಿಸಲು ತಿಳಿಸಲಾಗಿದೆ.
1. ಡಿಜಿಟಲ್ ತಂತ್ರಜ್ಞಾನದ ಬಳಕೆ:
ಡಿಜಿಟಲ್ ಓಪನ್ಹೌಸ್:
▪️ಪ್ರತಿಯೊಂದು ಶಾಲೆಯ ಸ್ಮಾರ್ಟ ಕ್ಲಾಸ್ ರೂಂ ಹಾಗೂ ಹಸಿರು ಪರಿಸರದ ಸಂಕ್ಷಿಪ್ತ ವಿಡೀಯೊವನ್ನು ಸ್ಥಳೀಯ ವ್ಯಾಟ್ಸ್ ಅಫ್ ಗುಂಪುಗಳಲ್ಲಿ ಪ್ರಸಾರ ಮಾಡುವುದು.
▪️ಕ್ಯೂ-ಆರ್ ಕೋಡ್ ಆಧಾರಿತ ನೊಂದಣಿ: ಬಸ್ ನಿಲ್ದಾಣ ಮತ್ತು ಗ್ರಾಮ ಪಂಚಾಯತಿಗಳಲಿ ಕೂ-ಆರ್ ಕೋಡ್ ಹೊಂದಿರುವ ಬ್ಯಾನರ್ಗಳನ್ನು ಅಳವಡಿಸಿ ಅಸಕ್ತ ಪೋಷಕರು ಸುಲಭವಾಗಿ ವಿವರ ಸಲ್ಲಿಸಲು ವ್ಯವಸ್ಥೆ ಮಾಡುವುದು.
2. ಸಮುದಾಯ ಮತ್ತು ಹಳೆಯ ವಿದ್ಯಾರ್ಥಿಗಳ ಸಹಭಾಗಿತ್ವ:
▪️ಗೌರವ ಅಭಿಯಾನ ಶಾಲೆಯ ಯಶಸ್ವಿ ಹಳೆಯ ವಿದ್ಯಾರ್ಥಿಗಳನ್ನು ಒಳಗೊಂಡ ‘ಪ್ರೇರಣಾ ನಡಿಗೆ’ ಆಯೋಜಿಸಿ ಪೋಷಕರಲ್ಲಿ ವಿಶ್ವಾಸ ಮೂಡಿಸುವುದು.
▪️ ಅಂಗನವಾಡಿ ಕೇಂದ್ರಗಳಲ್ಲಿ ವಿಶೇಷ ಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ ಆಟೋಟ ಮತ್ತು ಕಲಿಕಾ ಹಬ್ಬಗಳನ್ನು ಆಯೋಜಿಸುವುದು.
3. ವಿಶೇಷ ಕಲಿಕಾ ಸೌಲಭ್ಯಗಳ ಪ್ರದರ್ಶನ:
▪️ಡಿಜಿಟಲ್ ಟ್ಯೂಟರ್ ಪ್ರಾತ್ಯಕ್ಷಿಕೆ:
▪️8 ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಲಭ್ಯವಿರುವ ಐಐಟಿ ಧಾರವಾಡ ಸಹಯೋಗದ ಡಿಜಿಟಲ್ ಕಲಿಕಾ ವ್ಯವಸ್ಥೆಯನ್ನು ಪೋಷಕರಿಗೆ ಪ್ರದರ್ಶಿಸುವುದು.
▪️ಪೂರ್ತಿ ಸಿಂಚನ ಪ್ರಭಾವ: ಎಸ್ಎಸ್ಎಲ್ಸಿ ಪರೀಕ್ಷಾ ಸಿದ್ಧತಾ ಕಾರ್ಯಕ್ರಮದ ಯಶಸ್ಸನ್ನು ಬಿಂಬಿಸುವ ಪೋಷ್ಟ್ಯರ್ಗಳನ್ನು ಪ್ರದರ್ಶಿಸುವುದು.
4. ಪರಿಸರ ಸ್ನೇಹಿ ದಾಖಲಾತಿ/ಹಸಿರು ದಾಖಲಾತಿ:
▪️ಪ್ರತಿ ಹೊಸ ದಾಖಲಾತಿಗೆ ಶಾಲೆಯ ಬಯೋ-ಗಾರ್ಡನ್ನಲ್ಲಿ ಒಂದು ಸಸಿ ನೆಟ್ಟು ಮಗುವನ್ನು ಸರ ಪೋಷಕನನ್ನಾಗಿ ಮಾಡುವ ಮೂಲಕ ಭಾವನಾತ್ಮಕ ಸಂಬಂಧ ಬೆಳೆಸುವುದು.
▪️ಈ ಕುರಿತು ಉಪನಿರ್ದೇಶಕರು (ಆಡಳಿತ) ಅವರು ಜಿಲ್ಲಾ ಮಟ್ಟದಲ್ಲಿ ಈ ಕಾರ್ಯಕ್ರಮಗಳ ಮೇಲ್ವಿಚಾರಣೆ ನಡೆಸಿ ಕ್ರಮವಹಿಸುವುದು.
▪️ಪ್ರತಿ ಬ್ಲಾಕ್ಗಳ ನೋಡಲ್ ಅಧಿಕಾರಿಗಳು ಪ್ರತಿ ಶಾಲೆಯಲ್ಲಿ ಈ ನವೀನ ಉಪಕ್ರಮಗಳು ಜಾರಿಯಾಗುತ್ತಿರುವುದನ್ನು ಖಚಿತಪಡಿಸಿಕೊಳ್ಳುವುದು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಸಹಕಾರ ಪಡೆದುಕೊಳ್ಳುವ ನಿಟ್ಟಿನಲ್ಲಿ ಈ ಮೇಲಿನ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಮುಂಬರುವ ಶೈಕ್ಷಣಿಕ ಸಾಲಿನಲ್ಲಿ ದಾಖಲಾತಿಯ ಗುರಿಯನ್ನು ಯಶಸ್ವಿಯಾಗಿ ತಲುಪಲು ಕ್ರಮ ಕೈಗೊಳ್ಳತಕ್ಕದ್ದು. ಎಂದು ಆದೇಶದಲ್ಲಿ ತಿಳಿಸಲಾಗಿದೆ.
