SIR INSTRUCTIONS: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ-2026

SIR INSTRUCTIONS: ಮತದಾರರ ಪಟ್ಟಿಯ
ವಿಶೇಷ ಸಮಗ್ರ ಪರಿಷ್ಕರಣೆ

SIR INSTRUCTIONS:2026ರ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಮುಖ್ಯ ಸೂಚನೆಗಳು ಪ್ರಕಟವಾಗಿವೆ. ಹೊಸ ಮತದಾರರ ನೋಂದಣಿ, ಹೆಸರು ತಿದ್ದುಪಡಿ, ವಿಳಾಸ ಬದಲಾವಣೆ ಹಾಗೂ ಅಗತ್ಯ ದಾಖಲೆಗಳ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಿ.

ಮತಗಟ್ಟೆ ಮಟ್ಟದ ಅಧಿಕಾರಿಗಳ ಕರ್ತವ್ಯಗಳು

1) ಮತದಾರರ ನೋಂದಣಾಧಿಕಾರಿಗಳು, ಮನೆ ಮನೆ ಸಮಿಕ್ಷೆ ಕಾರ್ಯ ಪ್ರಾರಂಭವಾಗುವ ಮುನ್ನ ಈ ಕೆಳಕಂಡ ಸೌಲಭ್ಯಗಳನ್ನು ಒದಗಿಸಿರುವದನ್ನು ಮನೆ ಮನೆ ಭೇಟಿ ವೇಳೆ ಉಪಯೋಗಿಸಿಕೊಳ್ಳತಕ್ಕದ್ದು.

ಅ) ಗುರುತಿನ ಚೀಟಿ

ಆ) ವಿಶೇಷ ಸಮಗ್ರ ಪರಿಷ್ಕರಣೆ ಲೇಬಲ್‌ವುಳ್ಳ ಕಿಟ್ ಬ್ಯಾಗ

ಇ) ರಜಿಸ್ಟರ

ಈ) ಕ್ಯಾಪ/ಟಿ-ಶರ್ಟ

ಉ) ಇತರೆ ಅವಶ್ಯಕ ಸಲಕರಣೆಗಳು

ಊ) ಪೂರ್ವ ಮುದ್ರಿತ Enumeration Form (ದ್ವಿ-ಪ್ರತಿ)

ಋ) ಖಾಲಿರುವ 30 Enumeration Form ಗಳು

2) ಮತದಾರರ ನೋಂದಣಾಧಿಕಾರಿಗಳು ದ್ವಿ-ಪ್ರತಿಯಲ್ಲಿ ಪೂರೈಸುವ Enumeration Form ಗಳಲ್ಲಿ ಮನೆ ಮನೆಗೆ ತೆರಳಿ ಪೂರ್ವ ಮುದ್ರಿತ ಒಂದು Enumeration Form ನ್ನು ಮತದಾರರಿಗೆ ಜಾರಿ ಮಾಡಿ, ಇನ್ನೊಂದು Enumeration Form ಮೇಲೆ ಮತದಾರರ ರುಜುವನ್ನು ಪಡೆಯುವದು.

3) ಒಂದು ವೇಳೆ ಮತದಾರರು ಇಲ್ಲದೇ ಇದ್ದಲ್ಲಿ ಸದರಿ ಮತದಾರರ ಮನೆಯಲ್ಲಿರುವ ಹಿರಿಯ ವ್ಯಕ್ತಿಯ ರುಜುವನ್ನು ಪಡೆದು, Enumeration Form ತೆಗೆದುಕೊಂಡು ಹಿರಿಯ ವ್ಯಕ್ತಿಯ ಹೆಸರು, ಮೊಬೈಲ್ ಸಂಖ್ಯೆ ಹಾಗೂ ಜ್ಯಾರಿ ಮಾಡಿದ ದಿನಾಂಕವನ್ನು ನಮೂದಿಸಿಕೊಳ್ಳುತಕ್ಕದ್ದು.

4) ಒಂದು ವೇಳೆ ಮತದಾರರ ಮನೆಯು ಕೀಲಿ ಹಾಕಿದ್ದಲ್ಲಿ ಅಥವಾ ಮತದಾರರ ಮನೆಯಲ್ಲಿ ಯಾರೂ ಇಲ್ಲದೇ ಇದ್ದಲ್ಲಿ ಅಂಥಹ ಮತದಾರರ ಮನೆಗೆ ಮತಗಟ್ಟೆ ಮಟ್ಟದ ಅಧಿಕಾರಿಗಳು Enumeration Form ಜಾರಿ ಮಾಡಲು ಕನಿಷ್ಟ ಮೂರು ಬಾರಿ ಮನೆಗೆ ಭೇಟಿ ನೀಡುವದು.

5) ಮತದಾರರು ಪೂರ್ವ ಮುದ್ರಿತ Enumeration Form ಗಳನ್ನು ಡೌನಲೋಡ ಮಾಡಿಕೊಳ್ಳಲು ಹಾಗೂ Enumeration Formಗಳನ್ನು ತುಂಬಿದ ನಂತರ ಅಪಲೋಡ ಮಾಡಲು ಆನಲೈನ್ ಮುಖಾಂತರ ಅವಕಾಶವನ್ನು ಕಲ್ಪಿಸಿರುವ ಬಗ್ಗೆ ಮತದಾರರಿಗೆ ತಿಳುವಳಿಕೆ ನೀಡುವದು.

6) ಮತಗಟ್ಟೆ ಮಟ್ಟದ ಅಧಿಕಾರಿಗಳು, ಮತದಾರರಿಂದ ಭರ್ತಿ ಮಾಡಿರುವ Enumeration Form ಗಳನ್ನು ಸಂಗ್ರಹಿಸಲು ಕಡ್ಡಾಯವಾಗಿ ಪುನ: ಎಲ್ಲಾ ಮತದಾರರ ಮನೆಗೆ ಭೇಟಿ ನೀಡುವದು.

7) ಮತದಾರರಿಂದ ಸಂಗ್ರಹಿಸಲಾದ Enumeration Form ಹಾಗೂ ದಾಖಲಾತಿಗಳನ್ನು BLO APP ನಲ್ಲಿ ಅಪಲೋಡ ಮಾಡುವದು ಹಾಗೂ ಅಪಲೋಡ ಮಾಡಿದ ನಂತರ ಸದರಿ ದಾಖಲಾತಿಗಳನ್ನು ಮತದಾರರ ನೋಂದಣಾಧಿಕಾರಿಗಳ ಕಾರ್ಯಾಲಯಕ್ಕೆ ಸಲ್ಲಿಸುವದು.

ಮತಗಟ್ಟೆಯಲ್ಲಿನ ಮತದಾರರನ್ನು ಇನ್ನೊಂದು ಮತಗಟ್ಟೆಗೆ ಸ್ಥಳಾಂತರಿಸಲು ಕ್ರಮ ವಹಿಸುವದು.

C) ಒಂದೇ ಗ್ರಾಮದಲ್ಲಿ ಅಥವಾ ಒಂದೇ ಮತಗಟ್ಟೆ ಪ್ರದೇಶದಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚಿಗೆ ಇರುವ ಮತಗಟ್ಟೆಗಳ ಮತದಾರರ ಸಂಖ್ಯೆ 120003 ಕಡಿಮೆ ಆಗುತ್ತಿದ್ದಲ್ಲಿ ಅಂಥಹ ಮತಗಟ್ಟೆಗಳನ್ನು ಒಟ್ಟುಗೂಡಿಸುವ ಕುರಿತು ಕ್ರಮ ವಹಿಸುವದು.

3) ಯಾವುದೇ ಮತಗಟ್ಟೆಗಳನ್ನು ಒಟ್ಟುಗೂಡಿಸುವ ಸಮಯದಲ್ಲಿ, ವಿಂಗಡನೆ ಸಮಯದಲ್ಲಿ ಅಥವಾ ಮತದಾರರನ್ನು ಬೇರೆ ಮತಗಟ್ಟೆಗೆ ಸ್ಥಳಾಂತರಿಸುವ ಸಮಯದಲ್ಲಿ ಒಂದು ಕುಟುಂಬದ ಮತದಾರರನ್ನು ಅದೇ ಮತಗಟ್ಟೆಯಲ್ಲಿ ಇರುವ ಹಾಗೇ ಎಚ್ಚರಿಕೆಯನ್ನು ವಹಿಸುವದು.

4) ಮತದಾರರ ನೊಂದಣಾಧಿಕಾರಿಗಳು ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿಗಳು ಖುದ್ದಾಗಿ ಮತಗಟ್ಟೆಗಳನ್ನು ಸ್ಥಳ ತನಿಖೆ ಮಾಡಿ, ಕಟ್ಟಡದ ವಸ್ತುಸ್ಥಿತಿ ಬಗ್ಗೆ ಪರಿಶೀಲಿಸಿ Rationalisation of Polling Stations ಪ್ರಸ್ತಾವನೆಯನ್ನು ಸಲ್ಲಿಸತಕ್ಕದ್ದು.

ಮಾನ್ಯ ಭಾರತ ಚುನಾವಣಾ ಆಯೋಗದ ನಿರ್ದೇಶನದ ಪ್ರಕಾರ Rationalisation of Polling Stations ಪ್ರಸ್ತಾವನೆಯನ್ನು ದಿನಾಂಕ:-29/07/2026ಕ್ಕೆ ಸಲ್ಲಿಸಬೇಕಾಗಿದ್ದು ಆದರೆ ಮತದಾರರ ನೊಂದಣಾಧಿಕಾರಿಗಳು ಪ್ರಾಥಮಿಕವಾಗಿ ಸದರಿ ಪ್ರಕ್ರಿಯೆಯನ್ನು ದಿನಾಂಕ:-01/06/2026ರೊಳಗಾಗಿ ಪೂರ್ಣಗೊಳಿಸಿ ಮಾಹಿತಿಯನ್ನು ಪೂರ್ವಸಿದ್ದತೆಯಲ್ಲಿ ಇಟ್ಟುಕೊಳ್ಳುವಂತೆ ಸೂಚಿಸಿದೆ.

ಈ) ಮನೆ ಮನೆ ಸಮಿಕ್ಷೆ ಪ್ರಕ್ರಿಯೇ:-

1) ಮತದಾರರ ನೋಂದಣಾಧಿಕಾರಿಗಳು, ಮನೆ ಮನೆ ಸಮಿಕ್ಷೆ ಕಾರ್ಯ ಪ್ರಾರಂಭವಾಗುವ ಮುನ್ನ ಈ ಕೆಳಕಂಡ ಸೌಲಭ್ಯಗಳನ್ನು ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ಒದಗಿಸುವದು.

ಅ) ಗುರುತಿನ ಚೀಟಿ

ಆ) ವಿಶೇಷ ಸಮಗ್ರ ಪರಿಷ್ಕರಣೆ ಲೇಬಲ್‌ವುಳ್ಳ ಕಿಟ್ ಬ್ಯಾಗ

ಇ) ರಜಿಸ್ಟರ

ಈ) ಕ್ಯಾಪ/ಟಿ-ಶರ್ಟ

ಉ) ಇತರೆ ಅವಶ್ಯಕ ಸಲಕರಣೆಗಳು

ಊ) ಪೂರ್ವ ಮುದ್ರಿತ Enumeration Form (ದ್ವಿ-ಪ್ರತಿ)

ಋ) ಖಾಲಿರುವ 30 Enumeration Form ಗಳು

2) ಮತದಾರರ ನೋಂದಣಾಧಿಕಾರಿಗಳು, ಮನೆ ಮನೆಗೆ ತೆರಳಿ ಪೂರ್ವ ಮುದ್ರಿತ ಒಂದು Enumeration Form ನ್ನು ಮತದಾರರಿಗೆ ಜಾರಿ ಮಾಡಿ, ಇನ್ನೊಂದು Enumeration Form ಮೇಲೆ ಮತದಾರರ ರುಜುವನ್ನು ಪಡೆದದ್ದನ್ನು ಖಾತ್ರಿ ಪಡಿಸಿಕೊಳ್ಳುವದು.

3) ಒಂದು ವೇಳೆ ಮತದಾರರು ಇಲ್ಲದೇ ಇದ್ದಲ್ಲಿ, ಸದರಿ ಮತದಾರರ ಮನೆಯಲ್ಲಿರುವ ಹಿರಿಯ ವ್ಯಕ್ತಿಯ ರುಜುವನ್ನು ಪಡೆದು, Enumeration Form ತೆಗೆದುಕೊಂಡು ಹಿರಿಯ ವ್ಯಕ್ತಿಯ ಹೆಸರು, ಮೊಬೈಲ್ ಸಂಖ್ಯೆ ಹಾಗೂ ಜ್ಯಾರಿ ಮಾಡಿದ ದಿನಾಂಕವನ್ನು ನಮೂದಿಸಿಕೊಳ್ಳುವಂತೆ ಮತಗಟ್ಟೆ ಮಟ್ಟದ ಅಧಿಕಾರಿಗೆ ವಿಶೇಷ ಸೂಚನೆಯನ್ನು ನೀಡುವದು.

4) ಒಂದು ವೇಳೆ ಮತದಾರರ ಮನೆಯು ಕೀಲಿ ಹಾಕಿದ್ದಲ್ಲಿ ಅಥವಾ ಮತದಾರರ ಮನೆಗೆ ಮತಗಳು ಮನೆಯಲ್ಲಿ ಯಾರೂ ಇಲ್ಲದೇ ಇದ್ದಲ್ಲಿ ಅಂಥಹ ಮತದಾರರ ಮನೆಗೆ ಮತಗಟ್ಟೆ ಮಟ್ಟದ ಅಧಿಕಾರಿಗಳು Enumeration Form ಜಾರಿ ಮಾಡಲು ಕನಿಷ್ಟ ಮೂರು ಬಾರಿ ಮನೆಗೆ ಭೇಟಿ ನೀಡುವದು.

5) ಮತದಾರರು ಪೂರ್ವ ಮುದ್ರಿತ Enumeration Form ಗಳನ್ನು ಡೌನಲೋಡ್ ಮಾಡಿಕೊಳ್ಳಲು ಹಾಗೂ Enumeration Formಗಳನ್ನು ತುಂಬಿದ ನಂತರ ಅಪಲೋಡ ಮಾಡಲು ಆನಲೈನ್ ಮುಖಾಂತರ ಅವಕಾಶವನ್ನು ಕಲ್ಪಿಸಲಾಗುವದರಿಂದ ಸಾಕಷ್ಟು ಪ್ರಚಾರವನ್ನು ಮಾಡುವ ಬಗ್ಗೆ ಕ್ರಮ ಕೈಗೊಳ್ಳುವದು.

6) ಮತಗಟ್ಟೆ ಮಟ್ಟದ ಅಧಿಕಾರಿಗಳು, ಮತದಾರರಿಂದ ಭರ್ತಿ ಮಾಡಿರುವ Enumeration Form ಗಳನ್ನು ಸಂಗ್ರಹಿಸಲು ಪುನ: ಎಲ್ಲಾ ಮತದಾರರ ಮನೆಗೆ ಭೇಟಿ ನೀಡುವ ಬಗ್ಗೆ ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ಸೂಚನೆಯನ್ನು ನೀಡುವದು.

7) ಮತದಾರರಿಂದ ಸಂಗ್ರಹಿಸಲಾದ Enumeration Form ಹಾಗೂ ದಾಖಲಾತಿಗಳನ್ನು BLO APP ನಲ್ಲಿ ಅಪಲೋಡ ಮಾಡುವ ಬಗ್ಗೆ ತರಬೇತಿಯಲ್ಲಿ ಸೂಚನೆಯನ್ನು ನೀಡುವದು ಹಾಗೂ ಅಪಲೋಡ ಮಾಡಿದ ನಂತರ ಸದರಿ ದಾಖಲಾತಿಗಳನ್ನು ಮತದಾರರ ನೋಂದಣಾಧಿಕಾರಿಗಳು ಮತಗಟ್ಟೆ ಮಟ್ಟದ ಅಧಿಕಾರಿಗಳಿಂದ ಸಂಗ್ರಹಿಸಿಟ್ಟುಕೊಳ್ಳುವದು.

ಉ) ಕರಡು ಮತದಾರರ ಪಟ್ಟಿ ಪ್ರಕಟಣೆ:-

ಮತದಾರರ ನೋಂದಣಾಧಿಕಾರಿಗಳು, ಕರಡು ಮತದಾರರ ಪಟ್ಟಿಗಳನ್ನು ಪ್ರಕಟಿಸುವ ಸಮಯದಲ್ಲಿ ಈ ಕೆಳಕಂಡ ಅಂಶಗಳನ್ನು ಗಮನದಲ್ಲಿಟ್ಟು ಕ್ರಮ ಜರುಗಿಸುವದು.

1) ಸ್ವೀಕೃತಗೊಂಡ Enumeration Form ಗಳ ಆಧಾರದ ಮೇಲೆ ಕರಡು ಮತದಾರರ ಪಟ್ಟಿಯನ್ನು ದಿನಾಂಕ:-05/08/2026ರಂದು ಪ್ರಕಟಿಸುವದು.

2) ದಿನಾಂಕ:-05/08/2026 ರಿಂದ 04/09/2026 ರ ವರೆಗೆ ಸ್ವೀಕೃತಗೊಂಡ Enumeration Form ಗಳನ್ನು ಪರಿಶೀಲನೆ ಮಾಡುವದು.

3) ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ ಮನೆ ಭೇಟಿ ಸಮಯದಲ್ಲಿ ಮತದಾರರಿಂದ ಸ್ವೀಕೃತಗೊಂಡ ಹಾಗೂ ಮತದಾರರು ಆನಲೈನ ಮುಖಾಂತರ ಅಪಲೋಡ ಮಾಡಲಾಗಿರುವ Enumeration Form ಆಧಾರದ ಮೇಲಿಂದ ಕರಡು ಮತದಾರರ ಪಟ್ಟಿಯನ್ನು ತಯಾರಿಸಲು ಕ್ರಮ ವಹಿಸುವದು.
4) Enumeration Form ನ್ನು ಸಲ್ಲಿಸದೇ ಇರುವ ಮತದಾರರ ಹೆಸರುಗಳನ್ನು ಕರಡು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಆಗದಂತೆ ಕ್ರಮ ವಹಿಸುವದು.

5) ಅರ್ಹ ಮತದಾರರು ನಿಗದಿತ ಸಮಯದಲ್ಲಿ Enumeration Form ಗಳನ್ನು ಸಲ್ಲಿಸಲು ವಿಫಲೌಾಗಿದ್ದಲ್ಲಿ ಅಂಥಹ ಮತದಾರರು ನಮೂನೆ ನಂ 6ರಲ್ಲಿ ಹೆಸರು ಸೇರ್ಪಡೆಗೆ Enumeration Form ನೊಂದಿಗೆ ಹಕ್ಕು ಮತ್ತು ಆಕ್ಷೇಪನೆಗೆ ನಿಗದಿಪಡಿಸಿದ ದಿನಾಂಕದೊಳಗೆ ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದೆ.

6) ಕರಡು ಮತದಾರರ ಪಟ್ಟಿಯಲ್ಲಿ ವಿಶೇಷ ವ್ಯಕ್ತಿಗಳ ಹೆಸರುಗಳು ಸೇರ್ಪಡೆಗೊಂಡಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳುವದು.

ಊ) ಹಕ್ಕು ಮತ್ತು ಆಕ್ಷೇಪಣೆ ಅವಧಿ :-

1) ಮತದಾರರ ನೋಂದಣಾಧಿಕಾರಿಗಳು, ಕರಡು ಮತದಾರರ ಪಟ್ಟಿ ಪ್ರಕಟವಾದ ತಕ್ಷಣ ಪ್ರಜಾ ಪ್ರಾತಿನಿಧ್ಯ ಕಾಯ್ದೆ 1950ರ ಕಲಂ 16 ಹಾಗೂ 19ರನ್ವಯ ಮತದಾರರು ಸಲ್ಲಿಸಿರುವ ದಾಖಲಾತಿಗಳನ್ನು ಪರಿಶೀಲಿಸಿ ಅರ್ಹತೆ ಬಗ್ಗೆ ಕ್ರಮ ವಹಿಸುವದು.

2) ಮತದಾರರ ನೊಂದಣಾಧಿಕಾರಿಗಳು, ಪ್ರಸ್ತಾವಿತ ಮತದಾರರು ಯಾವುದೇ ದಾಖಲಾತಿಗಳನ್ನು ಸಲ್ಲಿಸದೇ ಇದ್ದ ಪಕ್ಷದಲ್ಲಿ ಸ್ವಯಂ ಪ್ರೇರಿತ ಪರಿಶೀಲನೆ ಮಾಡುವ ಬಗ್ಗೆ ಕ್ರಮ ವಹಿಸುವದು ಹಾಗೂ ಅಂಥಹ ಮತದಾರರಿಗೆ ನೋಟಿಸ್ಸು ನೀಡಿ ಮತದಾರರ ಪಟ್ಟಿಯಿಂದ ಕೈಬಿಡುವ ಬಗ್ಗೆ ಕ್ರಮ ವಹಿಸುವದು ಅಥವಾ ಅಂಥಹ ಮತದಾರರನ್ನು ಅಂತೀಮ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡುವ ಬಗ್ಗೆ ಕ್ರಮ ಕೈಗೊಳ್ಳುವದು.

3) ವಿಶೇಷ ಸಮಗ್ರ ಪರಿಷ್ಕರಣೆ ಸಮಯದಲ್ಲಿ ಯಾವುದೇ ಅರ್ಹ ಮತದಾರರು ಮತದಾರ ಪಟ್ಟಿಯಿಂದ ಹೊರ ಉಳಿಯದಂತೆ ಹಾಗೂ ಅನರ್ಹ ಮತದಾರರು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಆಗದಂತೆ ಅಗತ್ಯ ಕ್ರಮ ವಹಿಸುವದು.

ಋ) ಹಕ್ಕು ಮತ್ತು ಆಕ್ಷೇಪಣೆಗಳ ಯಾದಿಯನ್ನು ಪ್ರಕಟಿಸುವದು:-

1) ಮತದಾರರ ನೋಂದಣಾಧಿಕಾರಿಗಳು, ಸ್ವೀಕೃತಗೊಂಡ ಹಕ್ಕು ಮತ್ತು ಆಕ್ಷೇಪಣೆಗಳ ಪಟ್ಟಿಯನ್ನು ನಮೂನೆ 9,10,11ರಲ್ಲಿ ಈ ಕೆಳಕಂಡ ಸ್ಥಳಗಲ್ಲಿ ಪ್ರಕಟಿಸಲು ಕ್ರಮ ವಹಿಸುವದು.

▪️ಮತದಾರರ ನೊಂದಣಾಧಿಕಾರಿಗಳ ಕಚೇರಿ

▪️ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಚೇರಿ

▪️ಗ್ರಾಮ ಚಾವಡಿ

▪️ಗ್ರಾಮ ಪಂಚಾಯತಿ

▪️ಸಂಬಂಧಪಟ್ಟ ಮತಗಟ್ಟೆಗಳಲ್ಲಿ

2) ಮತದಾರರ ನೋಂದಣಾಧಿಕಾರಿಗಳು, ಸ್ವೀಕೃತಗೊಂಡ ಹಕ್ಕು ಮತ್ತು ಆಕ್ಷೇಪಣೆಗಳ ಪಟ್ಟಿಯನ್ನು ನಮೂನೆ 9,10,11ರಲ್ಲಿ ಪ್ರಕಟಿಸಿರುವ ಬಗ್ಗೆ ಜಿಲ್ಲಾ ಚುನಾವಣಾಧಿಕಾರಿಗಳ ಕಾರ್ಯಾಲಯಕ್ಕೆ ಸಲ್ಲಿಸಿ ಜಿಲ್ಲಾ ಚುನಾವಣಾಧಿಕಾರಿಗಳ ವೆಬಸೈಟ್‌ನಲ್ಲಿ ಪ್ರಕಟಿಸುವ ಬಗ್ಗೆ ಕ್ರಮ ಕೈಗೊಳ್ಳುವದು.

3) ಮತದಾರರ ನೋಂದಣಾಧಿಕಾರಿಗಳು, ಸ್ವೀಕೃತಗೊಂಡ ಹಕ್ಕು ಮತ್ತು ಆಕ್ಷೇಪಣೆಗಳ ಪಟ್ಟಿಯನ್ನು ನಮೂನೆ 9,10,11ರಲ್ಲಿ ಪ್ರಕಟಿಸಿರುವ ಬಗ್ಗೆ ಹಾಗೂ ರಾಜಕೀಯ ಪಕ್ಷದವರ ಸಭೆಯನ್ನು ಪ್ರತಿ ವಾರಕ್ಕೊಮ್ಮೆ ಜರುಗಿಸಿ ಯಾದಿಯನ್ನು ಪೂರೈಸುವದು ಹಾಗೂ ಸ್ವೀಕೃತಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳುವದು.

SIR INSTRUCTIONS

SIR-2026 QUESTIONNAIRE & ANSWERS- CLICK HERE

 

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!