Karnataka 6–8 Primary Teacher Recruitment 2022:GPSTR-2022 ಅಭ್ಯರ್ಥಿಗಳಿಗೆ ಬಿಗ್ ಅಪ್ಡೇಟ್| ಹೈಕೋರ್ಟ್ ಆದೇಶದಂತೆ ಮುಂದಿನ ಕ್ರಮ
Karnataka 6–8 Primary Teacher Recruitment 2022: 2022ನೇ ಸಾಲಿನ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (6 ರಿಂದ 8ನೇ ತರಗತಿ) ನೇಮಕಾತಿಗೆ ಸಂಬಂಧಿಸಿದಂತೆ ರಾಜ್ಯ ಉಚ್ಚ ನ್ಯಾಯಾಲಯದ ಆದೇಶದಂತೆ ಸರ್ಕಾರ ಕೈಗೊಂಡಿರುವ ಕ್ರಮ, ಇತ್ತೀಚಿನ ಅಧಿಕೃತ ಮಾಹಿತಿ, ಅಭ್ಯರ್ಥಿಗಳ ಮೇಲೆ ಆಗುವ ಪರಿಣಾಮ ಹಾಗೂ ಮುಂದಿನ ಪ್ರಕ್ರಿಯೆಯ ಸಂಪೂರ್ಣ ವಿವರವನ್ನು ಇಲ್ಲಿ ತಿಳಿಯಿರಿ.
2022ನೇ ಸಾಲಿನ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (6 ರಿಂದ 8ನೇ ತರಗತಿ) ನೇಮಕಾತಿಗೆ ಸಂಬಂಧಿಸಿದಂತೆ ಮಾನ್ಯ ಉಚ್ಚನ್ಯಾಯಾಲಯ, ಬೆಂಗಳೂರು, ವಿಭಾಗೀಯ ಪೀಠದ ರಿಟ್ ಅಪೀಲು ಸಂಖ್ಯೆ WA No.305/2023 ರ ತೀರ್ಪಿನಂತೆ ದಿ: 08/03/2023 ರ 1:1 ಮುಖ್ಯ ಆಯ್ಕೆ ಪಟ್ಟಿಗೆ ಸೀಮಿತಗೊಳಿಸಿ, ಕೌನ್ಸಿಲಿಂಗ್ಗೆ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ದಿನಾಂಕ:19/10/2023 ರಂದು https://schooleducation.karnataka.gov.in ನಲ್ಲಿ ಪ್ರಕಟಿಸಿ ಈ ಕಛೇರಿಯ ಉಲ್ಲೇಖ-11 ರಂತೆ ಸ್ಥಳ ನಿಯುಕ್ತಿ ಕೌನ್ಸಿಲಿಂಗ್ ಮೂಲಕ ನೇಮಕಾತಿ ಆದೇಶಗಳನ್ನು ವಿತರಿಸಲಾಗಿತ್ತು.
ಉಲ್ಲೇಖ -9 ರ WA.No.305/2023 ದಿನಾಂಕ:12/10/2023 ಮತ್ತು ದಿನಾಂಕ:08/03/2023 ಪ್ರಕಟಿಸಿದ ಪಟ್ಟಿಯಲ್ಲಿ ಮುಖ ಆಯ್ಕೆಪಟ್ಟಿಯಲ್ಲಿದ್ದು ತಂದೆಯ ವರಮಾನದೊಂದಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸಲ್ಲಿಸಿ, ಇತರ ಹಿಂದುಳಿದ ವರ್ಗಗಳಿಗೆ ಸೇರಿದ ವಿವಾಹಿತ ಮಹಿಳಾ ಅಭ್ಯರ್ಥಿಗಳನ್ನು ಒಳಗೊಂಡಂತೆ ಒಟ್ಟು 481 ಅಭ್ಯರ್ಥಿಗಳ ಕೌನ್ಸಿಲಿಂಗ್ ಅನ್ನು ತಡೆಹಿಡಿಯಲಾಗಿತ್ತು.
SLP. No.27984-988/2023 2 ಪ್ರಕರಣಗಳಲ್ಲಿ ದಾವೆ ಹೂಡಿದ್ದು ಮಾನ್ಯ ನ್ಯಾಯಾಲಯವು ದಿನಾಂಕ:16/10/2025 ರಂದು ತೀರ್ಪು ನೀಡಿ ಪ್ರಕರಣವನ್ನು 06 ತಿಂಗಳ ಒಳಗಾಗಿ ಇತ್ಯರ್ಥಗೊಳಿಸುವಂತೆ ಮಾನ್ಯ ಕೆ.ಎ.ಟಿ. ಗೆ ನಿರ್ದೇಶನ ನೀಡಿರುತ್ತದೆ.
ಅದರಂತೆ, ಮಾನ್ಯ ಕೆ.ಎ.ಟಿ. ಬೆಂಗಳೂರು ಇಲ್ಲಿ ದಾಖಲಾಗಿದ್ದ OA.No.4605-4626/2023 ಮತ್ತು ಸಂಬಂಧಿತ ಪ್ರಕರಣಗಳಲ್ಲಿ ದಿನಾಂಕ:30/4/2026 ರ ತೀರ್ಪು, ಮಾನ್ಯ ಕೆ.ಎ.ಟಿ ಕಲ್ಬುರ್ಗಿ ಪೀಠವು ΟΑ.Νο.20807-208366/2025 ಮತ್ತು ಇತರೆ ಸಂಬಂಧಿತ ಪ್ರಕರಣಗಳಲ್ಲಿ ದಿನಾಂಕ:27/2/2026 ರ ತೀರ್ಪು ಮತ್ತು ಮಾನ್ಯ ಕೆ.ಎ.ಟಿ OA.No.10104/2025 ದಿನಾಂಕ:13/04/2026 ತೀರ್ಪುಗಳನ್ನು ಅನುಷ್ಠಾನಗೊಳಿಸುವ ಸಂಬಂಧ ಒಬಿಸಿ ಪ್ರವರ್ಗಗಳಿಗೆ ಸೇರಿದ ವಿವಾಹಿತ ಮಹಿಳಾ ಅಭ್ಯರ್ಥಿಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಾಂಕ:08/03/2023 ರ ಮುಖ್ಯ ಆಯ್ಕೆ ಪಟ್ಟಿಗೆ ಸೀಮಿತಗೊಳಿಸಿ, ಕೌನ್ಸಿಲಿಂಗ್ ಪಟ್ಟಿಯನ್ನು ಉಲ್ಲೇಖ-15 ರ ಸರ್ಕಾರದ ಪತ್ರದಲ್ಲಿ ತಿಳಿಸಿರುವಂತೆ ಕ್ರಮ ಕೈಗೊಳ್ಳಲು ಉಲ್ಲೇಖ-16 ರಲ್ಲಿನ ಕೇಂದ್ರೀಕೃತ ದಾಖಲಾತಿ ಘಟಕದ ದಿನಾಂಕ:16/5/2026ರ ಪ್ರಕಟಣೆಯನ್ನು ಮತ್ತು 480 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗಿತ್ತು.
ಉಲ್ಲೇಖ-17ರಂತೆ ಸದರಿ ಪಟ್ಟಿಯಲ್ಲಿನ ಅಭ್ಯರ್ಥಿಗಳಿಗೆ ಆಯಾ ಜಿಲ್ಲಾ ನೇಮಕಾತಿ ಪ್ರಾಧಿಕಾರಿಗಳಾದ ಉಪನಿರ್ದೇಶಕರು (ಆಡಳಿತ) ರವರ ಕಛೇರಿಯಲ್ಲಿ ನಿಯಮಾನುಸಾರ ಎಲ್ಲಾ ಅರ್ಹತೆ ಮತ್ತು ಷರತ್ತುಗಳನ್ನು ಪೂರೈಸಿರುವ (ಮೂಲ ದಾಖಲೆಗಳ ನೈಜತೆಯ ವರದಿ ಬಾಕಿ ಇರುವ ಹಾಗೂ ವೈಯಕ್ತಿಕ ನ್ಯಾಯಾಲಯ ಪ್ರಕರಣಗಳಿರುವ ಅಭರ್ಥಿಗಳನ್ನು ಹೊರತುಪಡಿಸಿ) ಅಭ್ಯರ್ಥಿಗಳಿಗೆ ಕೌನ್ಸಿಲಿಂಗ್ ನಡೆಸಿ ನೇಮಕಾತಿ ಆದೇಶ ನೀಡಲು ತಿಳಿಸಲಾಗಿತ್ತು.
ಉಲ್ಲೇಖ-18ರ ಮಾನ್ಯ ರಾಜ್ಯ ಉಚ್ಚ ನ್ಯಾಯಾಲಯದ ದಿನಾಂಕ:21.05.2026ರ ಮಧ್ಯಂತರತೀರ್ಪಿನಂತೆ ದಿನಾಂಕ:30.05.2026 ರಂದು ಉಪನಿರ್ದೇಶಕರು (ಆಡಳಿತ) ರವರಿಗೆ ಕ್ರಮವಹಿಸಲು ತಿಳಿಸಲಾಗಿತ್ತು.
ಉಲ್ಲೇಖ-19ರ ಮಾನ್ಯ ರಾಜ್ಯ ಉಚ್ಚ ನ್ಯಾಯಾಲಯದ ಮಧ್ಯಂತರ ತೀರ್ಪು ದಿನಾಂಕ:24.06.2026 ರಂತೆ, ನೇಮಕಾತಿ ಆದೇಶ ಪಡೆದಿರುವ 341 ಮಂದಿ ಅಭ್ಯರ್ಥಿಗಳಿಗೆ ಷರತ್ತುಬದ್ಧವಾಗಿ ಕರ್ತವ್ಯಕ್ಕೆ ಹಾಜರಾಗಲು ಅನುಮತಿ ನೀಡಲು ಸರಕಾರಕ್ಕೆ ಸೂಚನೆ ನೀಡಿದ್ದು ಅದರಂತೆ ಸದರಿ ರಿಟ್ ಪಿಟಿಶನ್ ಅಂತಿಮ ತೀರ್ಪಿಗೆ ಒಳಪಟ್ಟು ಅನುಮತಿ ನೀಡಲು ಸೂಚಿಸಲಾಗಿದೆ. ಅದರಂತೆ 481 ಅಭ್ಯರ್ಥಿಗಳಲ್ಲಿ ಈ ಪತ್ರದೊಂದಿಗೆ ಅನುಬಂಧಿಸಿರುವ 341 ಅಭ್ಯರ್ಥಿಗಳನ್ನು ಹೊರತುಪಡಿಸಿ ಬಾಕಿ ಉಳಿದ ಅಭ್ಯರ್ಥಿಗಳಿಗೆ/ನೇಮಕಾತಿ ಆದೇಶವನ್ನು ಸೃಜಿಸುವುದಾಗಲಿ, ನೀಡುವುದಾಗಲಿ ಮಾಡತಕ್ಕದ್ದಲ್ಲ.
