Admission to Kittur Sainik School: ಕಿತ್ತೂರು ರಾಣಿ ಚೆನ್ನಮ್ಮ ಬಾಲಕಿಯರ ಸೈನಿಕ ವಸತಿ ಶಾಲೆಯ 6ನೇ ತರಗತಿಯ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ-2026-27

Admission to Kittur Sainik School: ಕಿತ್ತೂರು ರಾಣಿ ಚೆನ್ನಮ್ಮ ಬಾಲಕಿಯರ ಸೈನಿಕ ವಸತಿ ಶಾಲೆಯ 6ನೇ ತರಗತಿಯ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ-2026-27

Admission to Kittur Sainik School: 6ನೆಯ ವರ್ಗಕ್ಕಾಗಿ ಅಖಿಲ ಭಾರತ ಪ್ರವೇಶ ಪರೀಕ್ಷೆ-2026-27

▪️ಪಠ್ಯಕ್ರಮ: 10+2 ಸಿ.ಬಿ.ಎಸ್.ಇ. ಪಠ್ಯಕ್ರಮ (ವಿಜ್ಞಾನ ವಿಭಾಗ).

ಧೈಯೋದ್ದೇಶ :

ಕಿತ್ತೂರ ರಾಣಿ ಚನ್ನಮ್ಮ ಬಾಲಕಿಯರ ಸೈನಿಕ ವಸತಿ ಶಾಲೆಯು ಬಾಲಕಿಯರಿಗಾಗಿಯೇ ಇರುವ ಭಾರತದ ಏಕಮೇವ ಪಬ್ಲಿಕ್ ಶಾಲೆಯಾಗಿದ್ದು ಸೈನಿಕ ತರಬೇತಿ ನೀಡಿ ಸಧೃಡ ಭಾರತದ ನಿರ್ಮಾಣ ಹಾಗೂ ರಾಷ್ಟ್ರಪ್ರೇಮದನ್ನು ಹುಟ್ಟು ಹಾಕುವಂತಹ ಗುರಿ ಹೊಂದಲಾಗಿದೆ. ಶೈಕ್ಷಣಿಕ ವರ್ಷ 2026-27 ನೆಯ ಸಾಲಿಗೆ 6ನೆಯ ವರ್ಗದ ಪ್ರವೇಶ ಪರೀಕ್ಷೆಗಾಗಿ ಅರ್ಜಿಗಳನ್ನು ಕರೆಯಲಾಗಿದ್ದು ಅಖಿಲ ಭಾರತ ಪ್ರದೇಶ ಪರೀಕ್ಷೆಯು ಲಿಖಿತ, ದೇಹದಾರ್ಥತೆ, ವೈದ್ಯಕೀಯ ಹಾಗೂ ಮೌಖಿಕ ಸಂದರ್ಶನ ಪರೀಕ್ಷೆಗಳನ್ನು ಒಳಗೊಂಡಿರುತ್ತದೆ.

ಪರೀಕ್ಷಾ ಕೇಂದ್ರಗಳು:

ಕಿತ್ತೂರ, ವಿಜಯಪುರ, ಬೆಂಗಳೂರು, ಕಲಬುರಗಿ ಕರ್ನಾಟಕದಲ್ಲಿ ಮಾತ್ರ.

ವಯೋಮಿತಿ:

ಜೂನ್ 1, 2014 ಮತ್ತು ಮೇ 31, 2016ರ ನಡುವೆ ಜನಿಸಿದ 5ನೆಯ ವರ್ಗದಲ್ಲಿ ವ್ಯಾಸಂಗ ಮಾಡುತ್ತಿರುವ ಬಾಲಕಿಯರು ಮಾತ್ರ ಪ್ರವೇಶ ಪರೀಕ್ಷೆಗೆ ಅರ್ಹರಾಗಿರುತ್ತಾರೆ.

ಪರೀಕ್ಷಾ ಶುಲ್ಕ:

ರೂ.2000/-, (ರೂ.1,600/-ಪಜಾ/ಪಪಂ ಅಭ್ಯರ್ಥಿಗಳು, ಕರ್ನಾಟಕದ ರಹವಾಸಿಗಳು ಮಾತ್ರ. ಇತ್ತೀಚಿನ ಅಧಿಕೃತ ಜಾತಿ ಪ್ರಮಾಣ ಪತ್ರದ ನಕಲು ಪ್ರತಿಯನ್ನು ಲಗತ್ತಿಸಬೇಕು)

ಶುಲ್ಕ ವಿವರ:

ರೂ. 2,36,900 /-(ಊಟ, ವಸತಿ, ಸಮವಸ್ತ್ರ, ಕಿಟ್ ಮತ್ತು ಬಟ್ಟೆ ವಸ್ತುಗಳನ್ನು ಒಳಗೊಂಡಂತೆ).

ಮೀಸಲಾತಿ ವಿವರ:

ಕರ್ನಾಟಕ ಸರ್ಕಾರದ ಆದೇಶದ ಪ್ರಕಾರ ತಲಾ ಎರಡು ಸ್ಥಾನಗಳನ್ನು ಕಿತ್ತೂರು ಹೋಬಳಿ ಮತ್ತು ರಕ್ಷಣಾ ಸಿಬ್ಬಂದಿ ವರ್ಗದ ಅಭ್ಯರ್ಥಿಗಳಿಗೆ ಕಾಯ್ದಿರಿಸಲಾಗಿದೆ. ರಾಷ್ಟ್ರೀಯ ಶೌರ್ಯ ಪ್ರಶಸ್ತಿ ವಿಜೇತ ಬಾಲಕಿಯರಿಗೆ ಗರಿಷ್ಠ ಮೂರು ಸ್ಥಾನಗಳವರೆಗೆ ಮೀಸಲಾತಿ ಲಭ್ಯವಿದೆ. (ಪ್ರಮಾಣ ಪತ್ರದ ದೃಢೀಕೃತ ನಕಲು ಪ್ರತಿಯನ್ನು ಲಗತ್ತಿಸಬೇಕು).

ವಿದ್ಯಾರ್ಥಿ ವೇತನ:

ಕರ್ನಾಟಕ ಸರ್ಕಾರದ ವಿದ್ಯಾರ್ಥಿವೇತನ ಯೋಜನೆಯು, ಕರ್ನಾಟಕ ರಾಜ್ಯದ ರಹವಾಸಿ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯವಾಗುತ್ತದೆ. ಈ ಯೋಜನೆಯ ಅಡಿಯಲ್ಲಿ ಪ್ರವೇಶ ಪಡೆದಂತ ಅಭ್ಯರ್ಥಿಗಳು ತಮ್ಮ ಶಿಕ್ಷಣವನ್ನು ಇದೇ ಸಂಸ್ಥೆಯಲ್ಲಿ 12ನೆಯ ತರಗತಿಯವರೆಗೆ ವಿಜ್ಞಾನ ವಿಭಾಗದಲ್ಲಿ ಮುಂದುವರೆಸಬೇಕಾಗುತ್ತದೆ. ವಿಫಲರಾದಲ್ಲಿ ಕರ್ನಾಟಕ ಸರ್ಕಾರದಿಂದ ಪಡೆದಂಥ ವಿದ್ಯಾರ್ಥಿವೇತನವನ್ನು ಸಂಪೂರ್ಣವಾಗಿ ಭರಿಸಬೇಕಾಗುತ್ತದೆ.

ವಿವರಣಾ ಪುಸ್ತಕದ ಹಾಗೂ ಅರ್ಜಿಫಾರ್ಮಗಳ ಮಾರಾಟ (ಆನ್ಲೈನ್ ಹಣ ಪಾವತಿಯಿಂದ)

ದಂಡ ರಹಿತ:

▪️5ನೇ ನವೆಂಬರ ರಿಂದ 10ನೇ ಡಿಸೆಂಬರ 2025

▪️ರೂ. 2000/- (1600/- ಪ.ಜಾ/ಪ.ಪಂ. ದವರಿಗೆ ಅವರು ಕರ್ನಾಟಕ ನಿವಾಸಿಯಾಗಿರಬೇಕು)

▪️ಭರ್ತಿಮಾಡಿದ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ: 15ನೇ ಡಿಸೆಂಬರ 2025

▪️ದಂಡ ಸಹಿತ:

▪️11ನೇ ಡಿಸೆಂಬರ್ ರಿಂದ 25ನೇ ಡಿಸೆಂಬರ್ 2025

▪️ರೂ. 2,500/- (2,100/- ಪ.ಜಾ/ಪ.ಪಂ. ದವರಿಗೆ ಅವರು ಕರ್ನಾಟಕ ನಿವಾಸಿಯಾಗಿರಬೇಕು)

▪️ಭರ್ತಿಮಾಡಿದ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ: 5ನೇ ಜನವರಿ 2026

ಸೂಚನೆ :

ಆನ್‌ಲೈನ್ ಹಣ ಪಾವತಿಯನ್ನು ಚಾಲತಾಣ: www.kittursainikschool.org ಮುಖಾಂತರ ಮಾಡಬೇಕು. ಇದೇ ಜಾಲತಾಣದಿಂದಲೂ ವಿವರಣಾ ಪುಸ್ತಕ ಹಾಗೂ ಅರ್ಜಿ ಪಾರ್ಮಗಳನ್ನು ಪಡೆಯಬಹುದು.(Ph: 08288-234607)

▪️ಹಳೆಯ ಅರ್ಜಿ ನಮೂನೆಗಳನ್ನು ತಿರಸ್ಕರಿಸಲಾಗುವುದು.

ಪೂರ್ಣ ಪ್ರಮಾಣ ಶುಲ್ಕ ಪಾವತಿ ಪ್ರವೇಶ ಯೋಜನೆ :

ಅಭ್ಯರ್ಥಿಗಳ ಅರ್ಹತೆ (ಲಿಖಿತ ಪರೀಕ್ಷೆ+ಸಂದರ್ಶನ)ಯು ಸಾಧಾರಣ ಪ್ರತಿಭಾ ಮಟ್ಟದ್ದಾಗಿದ್ದಲ್ಲಿ ಸೀಟುಗಳು ಲಭ್ಯವಿದ್ದ ಸಂದರ್ಭದಲ್ಲಿ ಪೂರ್ಣ ಪ್ರಮಾಣದ ಶುಲ್ಕ ಭರಿಸಿ ಪ್ರವೇಶ ಪಡೆಯಬಹುದು. ಇಂಥ ಸ್ಥಳ ಕಾಯ್ದಿಡುವಿಕೆಗೆ ಪಾಲಕರು ತಮ್ಮ ಇಚ್ಛೆಯನ್ನು ಅರ್ಜಿಫಾರ್ಮಗಳಲ್ಲಿ ನಮೂದಿಸುವುದು.

ಪ್ರಮುಖ ಅಂಶಗಳು:

ಧಾರವಾಡದ ಹಂಚಿನಮನಿ ಸಂಸ್ಥೆಯೊಂದಿಗೆ ಶೈಕ್ಷಣಿಕ ಪಾಲುದಾರಿಕೆಯ ಅಡಿಯಲ್ಲಿ ಜೆ.ಇ.ಇ.(ಪ್ರಧಾನ)/ಎ.ಐ.ಪಿ.ಎಮ್.ಟಿ./ಸಿ.ಇ.ಟಿ/ಎನ್.ಇ.ಇ.ಟಿ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ತಜ್ಞರಿಂದ ವಿಶೇಷ ತರಬೇತಿ ತರಗತಿಗಳನ್ನು ನಡೆಸಲಾಗುವುದು, ಎನ್.ಸಿ.ಸಿ. ತರಬೇತಿ, ಎನ್.ಡಿ.ಎ. ತರಬೇತಿ ಹಾಗೂ ಕುದುರೆ ಸವಾರಿ, ಈಜು, ಸಂಗೀತ, ಯೋಗ ಮತ್ತು ಕರಾಟೆ ಕ್ರೀಡೆಗಳಿಗೆ ತರಬೇತಿಗಳು ಲಭ್ಯವಿರುತ್ತವೆ.

▪️ಸೂಚನೆಗಳು:

▪️ಪರೀಕ್ಷಾ ಮಾದರಿ, ಪ್ರದೇಶ ಮಾನದಂಡ ಮತ್ತು ಪ್ರಶ್ನೆ ಪತ್ರಿಕೆಗಳ ವಸ್ತುತಾತ್ಪರ್ಯವನ್ನು ಬದಲಿಸುವ ಹಕ್ಕನ್ನು ಶಾಲಾ ಆಡಳಿತ ಮಂಡಳಿಯು ಹೊಂದಿದೆ.

▪️ಪ್ರದೇಶ ಪತ್ರಗಳನ್ನು ಸಾಮಾನ್ಯ ಅಂಚೆ ಮುಖಾಂತರ ಕಳುಹಿಸಲಾಗುವದು.

▪️ವಿವರಣ ಪುಸ್ತಕ, ಪ್ರವೇಶಪತ್ರ ಹಾಗೂ ಫಲಿತಾಂಶ ಅಂಚೆಮೂಲಕ ತಲುಪದೇ ಇದ್ದಲ್ಲಿ ಅಥವಾ ವಿಳಂಬವಾದಲ್ಲಿ ಶಾಲೆ ಜವಾಬ್ದಾರಿಯಾಗಿರುವುದಿಲ್ಲ.

▪️ಈ ಭರ್ತಿಮಾಡಿದ ಅರ್ಜಿಫಾರ್ಮಗಳ ಜೊತೆ ಸ್ವ-ವಿಳಾಸ ಹೊಂದಿದ ರೂ. 5/- ಸ್ಟಾಂಪ್ ಲಗತ್ತಿಸಿದ ಲಕೋಟೆಯನ್ನು ಕಳುಹಿಸತಕ್ಕದ್ದು,

▪️ಕಿತ್ತೂರ ಹೋಬಳಿ ಹಾಗೂ ರಕ್ಷಣಾ ಸೇವಾ ಸಿಬ್ಬಂದಿ ಮೀಸಲಾತಿ ಬಯಸುವವರು ಸಂಬಂಧಪಟ್ಟ ದಾಖಲಾತಿಗಳನ್ನು ಸಲ್ಲಿಸತಕ್ಕದ್ದು.

▪️ಒಮ್ಮೆ ಸಂದಾಯಿಸಿದ ಶುಲ್ಕವನ್ನು ಯಾವುದೇ ಸಂದರ್ಭದಲ್ಲಿ ಮರು ಪಾವತಿಸುವುದಿಲ್ಲ.

▪️ಇತ್ತೀಚಿನ ಜಾತಿ ಪ್ರಮಾಣ ಪತ್ರಗಳನ್ನು ಸಲ್ಲಿಸಬೇಕು ಸುಳ್ಳು ವರಮಾನ ಮತ್ತು ಜಾತಿ ಪ್ರಮಾಣಪತ್ರಗಳನ್ನು ಸಲ್ಲಿಸಕೂಡದು.

▪️ಪರೀಕ್ಷಾ ದಿನಾಂಕ: 1 ನೆಯ ಫೆಬ್ರುವರಿ 2026
▪️ಪರೀಕ್ಷಾ ವಿಧಾನ: ಓ.ಎಮ್.ಆರ್.ಮಾದರಿ
▪️ಮಾಧ್ಯಮ: ಇಂಗ್ಲಿಷ್ ಅಥವಾ ಕನ್ನಡ

▪️ಕಛೇರಿಯ ಸಮಯ:

ಬೆ.9.00 ರಿಂದ ಮ.1.30 ಮತ್ತು ಮ.3.00 ರಿಂದ ಸಂ.5.30ರ ವರೆಗೆ. ಭಾನುವಾರ / ರಜಾದಿನಗಳಂದು ತೆರೆದಿರುವುದಿಲ್ಲ.


ಹೆಚ್ಚಿನ ಮಾಹಿತಿಗಾಗಿ -CLICK INFORMATION

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!