Ai lesson: ರಾಜ್ಯದ ಶಾಲೆಗಳಲ್ಲಿ ಇನ್ಮುಂದೆ Ai ಪಾಠ-2025

Ai lesson: ರಾಜ್ಯದ ಶಾಲೆಗಳಲ್ಲಿ ಇನ್ಮುಂದೆ Ai ಪಾಠ-2025

Ai lesson: ಕೊಪ್ಪಳ, ತುಮಕೂರಲ್ಲಿ ಪ್ರಾಯೋಗಿಕ ಎಐ ಪಾಠ “ಕಲಿಕಾ ದೀಪ’ ಯಶಸ್ವಿ । ಸಿಬಿಎಸ್‌ಇಗೆ ಸೆಡ್ಡು ಈಗ ರಾಜ್ಯದ 1145 ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ವಿಸ್ತರಣೆ 1.44 ಲಕ್ಷ ವಿದ್ಯಾರ್ಥಿಗಳಿಗೆ ಲಾಭ.

ಕೇಂದ್ರೀಯ ಪಠ್ಯಕ್ರಮದಲ್ಲಿ ಕೃತಕ ಬುದ್ಧಿಮತ್ತೆಯನ್ನು ಮುಂದಿನ ವರ್ಷದಿಂದ ಪರಿಚಯಿಸಲು ಸಿದ್ಧತೆ ನಡೆಯುತ್ತಿದ್ದರೆ, ಶೈಕ್ಷಣಿಕ ಕ್ಷೇತ್ರದಲ್ಲಿ ಹಲವು ಮೊದಲುಗಳ ಖ್ಯಾತಿ ಹೊಂದಿರುವ ರಾಜ್ಯದಲ್ಲಿ ಈ ವರ್ಷದಿಂದಲೇ ಆಯ್ದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಕಲಿಕೆಗೆ ಕೃತಕ ಬುದ್ದಿಮತ್ತೆಯ (ಎಐ) ಬಳಕೆ ಆರಂಭವಾಗಿದೆ.

ಕೊಪ್ಪಳ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದ್ದ ಯೋಜನೆ ಯನ್ನು ಅದರ ಯಶಸ್ಸು ಮತ್ತು ಅಗತ್ಯವನ್ನು ಆಧರಿಸಿ ಇದೀಗ ರಾಜ್ಯ ಪಿ ವಿಸ್ತರಿಸಲಾಗಿದೆ.

ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಈ ಶೈಕ್ಷಣಿಕ ವರ್ಷದಿಂದಲೇ (2025-26) 4ರಿಂದ 6ನೇ ತರಗತಿಯ ಮಕ್ಕಳಿಗೆ ಕೃತಕ ಬುದ್ಧಿಮತ್ತೆ ಆಧಾರಿತ ಪಠ್ಯ ಚಟುವಟಿಕೆ ಯನ್ನು ಆರಂಭಿಸಿದೆ.

ಏನಿದು Ai ಪಾಠ [Ai lesson]

▪️ಎಐ ಪಾಠ ಅಳವಡಿಕೆಯ ಕಲಿಕಾ ದೀಪ ಬಗ್ಗೆ ಬಜೆಟ್‌ನಲ್ಲಿ ಘೋಷಣೆ

▪️ಪ್ರಸ್ತುತ 4ರಿಂದ 6ನೇ ತರಗತಿ ವಿದ್ಯಾರ್ಥಿಗಳಿಗೆ ಎಐ ಆಧಾರಿತ ಕಲಿಕೆ

▪️ಕೊಪ್ಪಳ, ತುಮಕೂರು ಜಿಲ್ಲೆಯ ಶಾಲೆಗಳಲ್ಲಿ ಪ್ರಾಯೋಗಿಕ ಅಳವಡಿಕೆ

▪️ಎಐ ಬಳಸಿಕೊಂಡು ಭಾಷಾ ವಿಷಯಗಳು ಮತ್ತು ಗಣಿತ ಕಲಿಕೆಗೆ ನೆರವು

▪️ಎಐ ಮೂಲಕ ಸಂವಾದ, ಆಲಿಸುವುದು, ಓದುವುದು, ಬರೆಯುವ ಚಟುವಟಿಕೆ

▪️ಮಕ್ಕಳ ಉಚ್ಚಾರಣೆ, ಪದ ಬಳಕೆ, ವ್ಯಾಕರಣ ಸುಧಾರಣೆಗೆ ಗಮನ ಹರಿಸಲಾಗುತ್ತದೆ

▪️ಇದಕ್ಕಾಗಿ ಡಿಜಿಟಲ್ ಪರಿಕರಗಳ ಬಳಕೆ, ತಂತ್ರಜ್ಞಾನದ ನೆರವು ಪಡೆಯಲಾಗುತ್ತದೆ

Ai lession ಯಾವ ಜಿಲ್ಲೆ? ಎಷ್ಟು ಕಡೆ ಜಾರಿ?

ಸದ್ಯ ಶೈಕ್ಷಣಿಕ ಜಿಲ್ಲೆಗಳಾದ ಬೆಂಗಳೂರು ನಗರ 127, ದಾವಣಗೆರೆ 57, ರಾಯಚೂರು 56, ಬೆಳಗಾವಿ, ಚಿತ್ರದುರ್ಗ ತಲಾ 54, ಹಾಸನ 53, ಕೊಪ್ಪಳ 49, ವಿಜಯಪುರ 48ದಲ್ಲಿ ಹೆಚ್ಚು ಶಾಲೆಗಳಲ್ಲಿ ಯೋಜನೆ ಜಾರಿಗೆ ಬರಲಿದೆ.

ಕ್ರಿಯಾಶೀಲತೆ ಹೆಚ್ಚಳ:

“ಎಐ ಆಧಾರಿತ ತಂತ್ರಜ್ಞಾನ ಮೂಲಕ ಭಾಷೆ ಮತ್ತು ಗಣಿತ ವಿಷಯಗಳಲ್ಲಿ ವಿದ್ಯಾ ರ್ಥಿಗಳ ಕ್ರಿಯಾಶೀಲತೆ ಹೆಚ್ಚಿಸುವುದಾಗಿದೆ. ಪೈಲಟ್ ಯೋಜನೆ ಯಶಸ್ವಿ ಆಗಿರುವುದರಿಂದ ರಾಜ್ಯಾದ್ಯಂತ ಯೋಜನೆ ವಿಸ್ತರಿಸುತ್ತಿದ್ದೇವೆ.”

🌸 ಶುಭಮಂಗಳ ಆರ್.ವಿ., ಅಧೀನ ಕಾರ್ಯದರ್ಶಿ.

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!