Bank Salary Package scheme-2025: ವೇತನ ಖಾತೆಗಳನ್ನು HRMS ನಲ್ಲಿ ನಮೂದಿಸುವುದು ಕಡ್ಡಾಯ, ನಮೂದಿಸುವ ವಿಧಾನ ಇಲ್ಲಿದೆ.

Bank Salary Package scheme: ವೇತನ ಖಾತೆಗಳನ್ನು HRMS ನಲ್ಲಿ ನಮೂದಿಸುವುದು ಕಡ್ಡಾಯ, ನಮೂದಿಸುವ ವಿಧಾನ ಇಲ್ಲಿದೆ.

 Bank Salary Package scheme: ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖಿತ ಪತ್ರದನ್ವಯ, ದಿನಾಂಕ:30.01.2025ರಂದು ನಡೆದ ಸಚಿವ ಸಂಪುಟ ಸಭೆಯ ಪ್ರಕರಣ ಸಂಖ್ಯೆ: ಸಿ.80/2025ರಲ್ಲಿ ತಿರ್ಮಾನಿಸಿದಂತೆ, ನೌಕರರ ಮತ್ತು ಅವಲಂಬಿತ ಕುಟುಂಬ ಸದಸ್ಯರ ಹಿತಾಸಕ್ತಿಗಳನ್ನು ರಕ್ಷಿಸುವ ಸಲುವಾಗಿ ವಿವಿಧ ಬ್ಯಾಂಕುಗಳು ಒದಗಿಸುವ “ಸಂಬಳ ಪ್ಯಾಕೇಜ್‌ಗಳ’ ಅಡಿಯಲ್ಲಿ ಖಾತೆಗಳನ್ನು ತೆರೆಯುವುದು/ಆಯ್ಕೆ ಮಾಡಿಕೊಳ್ಳುವುದನ್ನು ಎಲ್ಲಾ ಅಧಿಕಾರಿ/ನೌಕರರಿಗೆ (ಸರ್ಕಾರಿ / ಸರ್ಕಾರಿ ಸಂಸ್ಥೆಗಳು, ಇತ್ಯಾದಿ) ಕಡ್ಡಾಯಗೊಳಿಸುವ ಬಗ್ಗೆ ಆದೇಶಿಸಲಾಗಿದೆ.

ಉಲ್ಲೇಖಿತ ಪತ್ರದಲ್ಲಿನ ಅಂಶಗಳ ಹಿನ್ನೆಲೆ ಹಾಗೂ ಸಚಿವ ಸಂಪುಟದ ಸಭೆಯಲ್ಲಿ ತಿರ್ಮಾನಿಸಿದಂತೆ, ನೌಕರರ ಮತ್ತು ಅವಲಂಬಿತ ಕುಟುಂಬ ಸದಸ್ಯರ ಹಿತಾಸಕ್ತಿಗಳನ್ನು ರಕ್ಷಿಸುವ ಸಲುವಾಗಿ ಈ ಕೆಳಗಿನಂತೆ ಆದೇಶಿಸಲಾಗಿದೆ:-

a) ವಿವಿಧ ಬ್ಯಾಂಕುಗಳು ಒದಗಿಸುವ ‘ಸಂಬಳ ಪ್ಯಾಕೇಜ್‌ಗಳ’ ಅಡಿಯಲ್ಲಿ ಖಾತೆಗಳನ್ನು ತೆರೆಯುವುದು/ಆಯ್ಕೆ ಮಾಡಿಕೊಳ್ಳುವುದನ್ನು ಎಲ್ಲಾ ಅಧಿಕಾರಿ/ನೌಕರರಿಗೆ (ಸರ್ಕಾರಿ / ಸರ್ಕಾರಿ ಸಂಸ್ಥೆಗಳು, ಇತ್ಯಾದಿ) ಕಡ್ಡಾಯಗೊಳಿಸಿದೆ.

b) ಬ್ಯಾಂಕ್‌ಗಳು/ಅಂಚೆ ಕಚೇರಿಗಳು ನೀಡುವ PMJJBY ಮತ್ತು PMSBY ಯೋಜನೆಗಳ ಅಡಿಯಲ್ಲಿ ಸ್ವಯಂಪ್ರೇರಿತ ಆಧಾರದ ಮೇಲೆ ವಿಮಾ ರಕ್ಷಣೆಯನ್ನು ಪಡೆಯಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿ/ನೌಕರರಿಗೆ ಆದೇಶಿಸುವುದು.

c) ಬ್ಯಾಂಕ್‌ಗಳು ನೀಡುವ ವಿವಿಧ ಯೋಜನೆಗಳ ಅಡಿಯಲ್ಲಿ ಸ್ವಯಂಪ್ರೇರಿತ ಆಧಾರದ ಮೇಲೆ ವೈಯಕ್ತಿಕ ಅಪಘಾತ ವಿಮಾ ರಕ್ಷಣೆಯನ್ನು ಪಡೆಯಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿ/ನೌಕರರಿಗೆ ತಿಳಿಸುವುದು.

ಸರ್ಕಾರದ ಅಧಿಕಾರಿ/ನೌಕರರ PMJJBY ಮತ್ತು PMSBY ಯೋಜನೆಗಳ ವಿವರಗಳನ್ನು HRMSನಲ್ಲಿ ನಮೂದಿಸಲು ಈ ಕೆಳಗಿನ ಕ್ರಮವನ್ನು ಅನುಸರಿಸುವುದು.

Step-01 Login by using your DDO user Id and Password

Step-02 Select PMJJBY and PMSBY

Step-03 Select PMJJBY or PMSBY plan

Step-04 In Action Colum Select Yes or No

Step-05 Submit the Data of Employee

ಎಲ್ಲಾ ಅಧಿಕಾರಿ/ನೌಕರರ PMJJBY ಮತ್ತು PMSBY ಯೋಜನೆಗಳ ವಿವರಗಳನ್ನು ಎಲ್ಲಾ ಇಲಾಖೆಯ ಡಿ.ಡಿ.ಒ.ಗಳು ಈ ಮಾಹಿತಿಯನ್ನು ಹೆಚ್.ಆ‌ರ್.ಎಂ.ಎಸ್-1 ರಲ್ಲಿ ನಮೂದಿಸಲು ತಿಳಿಸಿದೆ ಒಂದು ವೇಳೆ ಒಬ್ಬ ನೌಕರನ ವಿವರವನ್ನು ನಮೂದಿಸದಿದಲ್ಲಿ ತಮ್ಮ ಡಿ.ಡಿ.ಒ. ಹಂತದಲ್ಲಿನ ಯಾವ ನೌಕರರಿಗೂ ವೇತನವನ್ನು ಸೆಳೆಯಲು ಸಾಧ್ಯವಾಗುವುದಿಲ್ಲಾ.

ಎಲ್ಲಾ ಅಧಿಕಾರಿ/ನೌಕರರು ತಮ್ಮ ಬ್ಯಾಂಕ್ ಖಾತೆಗಳನ್ನು “ಸಂಬಳ ಪ್ಯಾಕೇಜ್ ಆಗಿ ಪರಿವರ್ತಿಸಿಕೊಳಲು ಹಾಗೂ ಎಲ್ಲಾ ಇಲಾಖೆಯ ಡಿ.ಡಿ.ಒ.ಗಳು ಈ ಮಾಹಿತಿಯನ್ನು ಹೆಚ್.ಆರ್.ಎಂ.ಎಸ್-1 ರಲ್ಲಿ ನಮೂದಿಸಲು ತಿಳಿಸಿದೆ. ಆದ್ದರಿಂದ ಎಲ್ಲಾ ಇಲಾಖೆಗಳು ತಮ್ಮ ಅಧೀನದಲ್ಲಿರುವ ಸಿಬ್ಬಂದಿಯವರಿಗೆ ಈ ಕೂಡಲೇ ಕಡ್ಡಾಯವಾಗಿ ತಮ್ಮ ಚಾಲ್ತಿ ಬ್ಯಾಂಕ್ ಖಾತೆಗಳನ್ನು “ಸಂಬಳ ಪ್ಯಾಕೇಜ್ ಖಾತೆಯಾಗಿ ಮಾಡಿಕೊಳಲು / ಮಾರ್ಪಡಿಸಿಕೊಳಲು ಸೂಚಿಸಿದೆ.

ಸಂಬಳ ಪ್ಯಾಕೇಜ್ ಪ್ರಕ್ರಿಯೆಯನ್ನು ಮಾಡಲು ಈ ಮುಂದಿನ ರೀತಿಯನ್ನು ಈ ಕೆಳಕಂಡಂತೆ ಅನುಸರಿಸುವುದು ಡಿಡಿಓ ಲಾಗಿನ್ ಆದ ತಕ್ಷಣ, ಡಿಡಿಓ ಅಡಿಯಲ್ಲಿ ಬರುವ ಪ್ರತಿಯೊಬ್ಬ ಉದ್ಯೋಗಿ ಬ್ಯಾಂಕ್ ಸಂಬಳ ಪ್ಯಾಕೇಜ್‌ಗಳನ್ನು ಅಳವಡಿಸಿಕೊಂಡಿದ್ದಾರೆಯೇ ಎಂದು ದೃಢೀಕರಿಸುವುದು (ಹೌದು/ಇಲ್ಲಾ) ಆಯ್ಕೆಯನ್ನು ಮಾಡುವುದು.

ಎಲ್ಲಾ ಉದ್ಯೋಗಿಗಳಿಂದ ದೃಢೀಕರಣಗಳನ್ನು ಸ್ವೀಕರಿಸುವವರೆಗೆ, ಸಿಸ್ಟಮ್ ಡಿಡಿಓ ಬಳಕೆದಾರರಿಗೆ ಲಾಗಿನ್ ಆಗಲು ಅನುಮತಿಸುವುದಿಲ್ಲ. ಇದು ಒಂದು ಬಾರಿಯ ಚಟುವಟಿಕೆಯಾಗಿದೆ.

ಆದಾಗ್ಯೂ, ಪ್ರಸ್ತುತ ಸರ್ಕಾರದ ಅಧಿಕಾರಿ/ನೌಕರರ ಬ್ಯಾಂಕಿನಲ್ಲಿ ಈ ಯೋಜನೆಯನ್ನು ಅಳವಡಿಸಿಕೊಂಡಿಲ್ಲದಿದ್ದರೆ, ಉಲ್ಲೇಖಿತ ಆದೇಶದ ಪ್ರಕಾರ, ಮುಂದಿನ ಮೂರು ತಿಂಗಳ ವೇಳೆಗೆ ಇದನ್ನು ಹೌದು ಎಂದು ನವೀಕರಿಸದಿದ್ದರೆ, ಅವರ ವೇತನವನ್ನು ನಿಲ್ಲಿಸಲಾಗುತ್ತದೆ.

ಹೆಚ್.ಆರ್.ಎಂ.ಎಸ್-1ರ ತಂತ್ರಾಂಶಕ್ಕೆ ಸಂಬಂಧಿತ ಸ್ಕ್ರೀನ್ ಶಾಟ್‌ಗಳನ್ನು ಕೆಳಗೆ ಲಿಂಕ್ ದಲ್ಲಿ ನೀಡಲಾಗಿದೆ.

ವಿವಿಧ ಹಂತಗಳಲ್ಲಿರುವ ವೇತನ ಸೆಳೆಯುವ ಅಧಿಕಾರಿ / ಹಣ ಸೆಳೆಯುವ ಮತ್ತು ಬಟವಾಡೆ ಮಾಡುವ (ಡಿಡಿಒ) ಅಧಿಕಾರಿಗಳು ಈ ಸುತ್ತೋಲೆಯನ್ನು ಜಾರಿಗೊಳಿಸುವಲ್ಲಿ ಕಚೇರಿ ಮಟ್ಟದಲ್ಲಿ ಜವಾಬ್ದಾರರಾಗಿರುತ್ತಾರೆ. ತಮ್ಮ ಇಲಾಖೆಗಳಲ್ಲಿ ಹಾಗೂ ಅಧೀನದಲ್ಲಿ ಬರುವ ಕ್ಷೇತ್ರ ಇಲಾಖೆ / ಅಂಗ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರದ ಎಲ್ಲಾ ಅಧಿಕಾರಿ / ನೌಕರರು ಸಚಿವ ಸಂಪುಟದ ಆದೇಶದಂತೆ ಮೇಲೆ ವಿವರಿಸಿರುವಹಾಗೆ ನೋಂದಾಯಿಸಿಕೊಳ್ಳುವಂತೆ ಇಲಾಖಾ ಮುಖ್ಯಸ್ಥರು ಸೂಕ್ತ ಕ್ರಮವಹಿಸುವುದು. ಈ ಕುರಿತು HRMS ಬಿಡುಗಡೆ ಮಾಡಿದ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

 

CLICK HERE TO DOWNLOAD CIRCULAR

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

1 thought on “Bank Salary Package scheme-2025: ವೇತನ ಖಾತೆಗಳನ್ನು HRMS ನಲ್ಲಿ ನಮೂದಿಸುವುದು ಕಡ್ಡಾಯ, ನಮೂದಿಸುವ ವಿಧಾನ ಇಲ್ಲಿದೆ.”

Leave a Comment

error: Content is protected !!