Karnataka SSLC RESULT-2025: ಮೇ ಮೊದಲ ವಾರ SSLC ಫಲಿತಾಂಶ!

Karnataka SSLC RESULT-2025: ಮೇ ಮೊದಲ ವಾರ SSLC ಫಲಿತಾಂಶ ಪ್ರಕಟವಾಗುವ ಸಾಧ್ಯತೆ.

Karnataka SSLC RESULT-2025: ರಾಜ್ಯದಲ್ಲಿ ಎಸ್‌ಎಸ್ಎಲ್ ಸಿ ಪರೀಕ್ಷೆಗಳು ಶುಕ್ರವಾರ ಮುಕ್ತಾಯಗೊಂಡಿದ್ದು, ಏಪ್ರಿಲ್ 15ರಿಂದ ರಾಜ್ಯಾದ್ಯಂತ ಸುಮಾರು 240ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಮೌಲ್ಯಮಾಪನ ನಡೆಯಲಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಮಾ.21ರಿಂದ ಆರಂಭಿಸಿದ ಎಸ್ಸೆಸ್ಸೆಲ್ಸಿ ಪರೀಕ್ಷೆ ಏ.4ಕ್ಕೆ ಮುಕ್ತಾಯಗೊಂಡಿವೆ. ಏ.11ರಿಂದ ಕೋಡಿಂಗ್ ಹಾಗೂ ಡಿಕೋಡಿಂಗ್ ಪ್ರಕ್ರಿಯೆ ನಡೆದ ನಂತರ ಏ.15ರಿಂದ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಆರಂಭವಾಗಲಿದೆ.

ಒಟ್ಟು 2818 ಕೇಂದ್ರಗಳಲ್ಲಿ 8.96 ಲಕ್ಷ ವಿದ್ಯಾರ್ಥಿಗಳು
ಈ ಬಾರಿ ಪರೀಕ್ಷೆ ಬರೆದಿದ್ದಾರೆ. 6 ವಿಷಯಗಳಿಂದ ವಿದ್ಯಾರ್ಥಿಗಳ 55 ಲಕ್ಷಕ್ಕೂ ಹೆಚ್ಚು ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ನಡೆಯಲಿದೆ. ಮೌಲ್ಯಮಾಪನ ಕಾರ್ಯಕ್ಕೆ ಈ ಬಾರಿ 75 ಸಾವಿರಕ್ಕೂ
ಹೆಚ್ಚು ಶಿಕ್ಷಕರನ್ನು ನಿಯೋಜಿಸಲಾಗಿದೆ. ಮೌಲ್ಯಮಾಪನ ಕಾರ್ಯಕ್ಕೆ ನಿಯೋಜಿಸಿರುವ ಎಲ್ಲ ಶಿಕ್ಷಕರೂ ಕಡ್ಡಾಯವಾಗಿ ಹಾಜರಾಗಬೇಕು ಎಂದು ಸೂಚಿಸಲಾಗಿದೆ.

ಇನ್ನೂ ಮೌಲ್ಯಮಾಪನ ಮುಕ್ತಾಯವಾದ ನಂತರ 10ನೇ ತರಗತಿ ಫಲಿತಾಂಶ ಮಂಡಳಿಯಿಂದ ಅಧಿಕೃತವಾಗಿ ಪ್ರಕಟಣೆ ಆಗಲಿದೆ ಇದಕ್ಕೆ ದಿನಾಂಕವನ್ನು ಕೂಡ ಮಂಡಳಿಯು ಅಧಿಕೃತವಾಗಿ ಪ್ರಕಟಿಸುತ್ತದೆ ಸಾಮಾನ್ಯವಾಗಿ ಮೌಲ್ಯಮಾಪನ ಪ್ರಕ್ರಿಯೆಯು ಸಂಪೂರ್ಣಗೊಂಡ ಬಳಿಕ ಎರಡು ವಾರದ ಒಳಗಾಗಿ ಫಲಿತಾಂಶ ಪ್ರಕಟಣೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಕಳೆದ ಬಾರಿ 10ನೇ ತರಗತಿ ಪರೀಕ್ಷಾ ಫಲಿತಾಂಶ ಮೇ ತಿಂಗಳಿನಲ್ಲಿ ಪ್ರಕಟಣೆಯಾಗಿತ್ತು. ಈ ವರ್ಷವೂ ಕೂಡ 2025 ನೇ ಮೇ ಮೊದಲ ವಾರದಲ್ಲಿ ಪ್ರಕಟಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಈ ರೀತಿ ರಿಸಲ್ಟ್ ಚೆಕ್ ಮಾಡಿಕೊಳ್ಳಿ:

 

ವಿದ್ಯಾರ್ಥಿಗಳು 10ನೇ ತರಗತಿ ಫಲಿತಾಂಶವನ್ನು ಪರಿಶೀಲಿಸಿಕೊಳ್ಳಬೇಕೆಂದರೆ ಕರ್ನಾಟಕ ಶಾಲಾ ಶಿಕ್ಷಣ ಹಾಗೂ ಮೌಲ್ಯಮಾಪನ ಮಂಡಳಿಯ ಅಧಿಕೃತ ಜಾಲತಾಣವಾಗಿರುವಂತಹ karresults.nic.in ಮತ್ತು kseab.karnataka.gov.in ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ  ನೀವು 10ನೇ ತರಗತಿ ಫಲಿತಾಂಶವನ್ನು ಪರೀಕ್ಷಿಸಿಕೊಳ್ಳಬಹುದಾಗಿದೆ.

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

2 thoughts on “Karnataka SSLC RESULT-2025: ಮೇ ಮೊದಲ ವಾರ SSLC ಫಲಿತಾಂಶ!”

Leave a Comment

error: Content is protected !!