BSNL SPECIAL PLAN-2025 ವಿದ್ಯಾರ್ಥಿಗಳಿಗೆ ವಿಶೇಷ ಯೋಜನೆ ಪರಿಚಯಿಸಿದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್

BSNL SPECIAL PLAN-2025 ವಿದ್ಯಾರ್ಥಿಗಳಿಗೆ ವಿಶೇಷ ಯೋಜನೆ ಪರಿಚಯಿಸಿದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್

BSNL SPECIAL PLAN-2025 ವಿದ್ಯಾರ್ಥಿಗಳಿಗೆ ವಿಶೇಷ ಯೋಜನೆ ಪರಿಚಯಿಸಿದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್: ಸರ್ಕಾರಿ ಒಡೆತನದ ಟೆಲಿಕಾಂ ಕಂಪನಿ ಬಿಎಸ್‌ಎನ್‌ಎಲ್‌ (BSNL) ಆಗಾಗ ವಿಶೇಷ ಆಫರ್‌ಗಳನ್ನ ಕೊಡುತ್ತಿರುತ್ತದೆ. ಇದೀಗ ವಿದ್ಯಾರ್ಥಿಗಳಿಗಾಗಿ ವಿಶೇಷ ಮೊಬೈಲ್‌ ಯೋಜನೆ ಪರಿಚಯ ಮಾಡಿದೆ.

ಮಕ್ಕಳ ದಿನಾಚರಣೆಯಂದು ಆರಂಭ:

ಈ ವಿಶೇಷ ಯೋಜನೆಯನ್ನ ಮಕ್ಕಳ ದಿನಾಚರಣೆಯಂದು ಪ್ರಾರಂಭ ಮಾಡಲಾಗಿದೆ. BSNL ಸಿಎಂಡಿ ಎ. ರಾಬರ್ಟ್ ಜೆ. ರವಿ ಈ ವಿಚಾರವಾಗಿ ಮಾಹಿತಿ ನೀಡಿದ್ದು, ಬಿಎಸ್‌ಎನ್‌ಎಲ್ ಕಂಪನಿ ವಿದ್ಯಾರ್ಥಿಗಳು ಮತ್ತು ಮಹಿಳೆಯರಿಗಾಗಿ ವಿಶೇಷ ಯೋಜನೆಗಳನ್ನು ಪರಿಚಯ ಮಾಡಲು ನಿರ್ಧಾರ ಮಾಡಿದೆ. ಹಾಗಾಗಿ ಆ ಪ್ಲಾನ್ ಬಗ್ಗೆ ಕೆಲಸ ಮಾಡುತ್ತಿದೆ. ಈ ವಿದ್ಯಾರ್ಥಿಗಳ ಯೋಜನೆಯು ಅದರ ಮೊದಲ ಭಾಗವಾಗಿದೆ ಎಂದು ಹೇಳಿದ್ದಾರೆ.

ಹೊಸ ಪ್ಲಾನ್ ವಿಶೇಷತೆ ಏನು?

ಇದೊಂದು ಸೀಮಿತ ಸಮಯದ ಆಫರ್ ಆಗಿದೆ. ಇದಕ್ಕೆ ದಿನಕ್ಕೆ ಸುಮಾರು 8.96 ರೂಪಾಯಿ ಬೇಕಾಗುತ್ತದೆ. ಹಾಗೆಯೇ ತಿಂಗಳಿಗೆ 251 ರೂಪಾಯಿ ಆಗುತ್ತದೆ. ಈ ಯೋಜನೆಯ ಪ್ರಕಾರ, ಬಿಎಸ್‌ಎನ್‌ ಎಲ್ ಬಳಕೆದಾರರು 251 ರೀಚಾರ್ಜ್ ಪ್ಲಾನ್ ಮಾಡಿಸಿಕೊಳ್ಳಬೇಕು. ಇದರಿಂದ ಕಾಲಿಂಗ್, ಡೇಟಾ ಮತ್ತು ಮೆಸೇಜ್‌ನಂತಹ ಎಲ್ಲಾ ಸೌಲಭ್ಯಗಳನ್ನ ಬಳಕೆದಾರರು ಪಡೆದುಕೊಳ್ಳುತ್ತಾರೆ.

ವ್ಯಾಲಿಡಿಟಿ:

ನವೆಂಬರ್ 14 ರಿಂದ ಡಿಸೆಂಬರ್ 13, 2025 ರವರೆಗೆ ಲಭ್ಯ ಇರಲಿದೆ. ಇದರಲ್ಲಿ ಬಳಕೆದಾರರಿಗೆ ಅನಿಯಮಿತ ಕರೆ, 100GB ಹೈ-ಸ್ಪೀಡ್ ಡೇಟಾ ಹಾಗೂ ಪ್ರತಿದಿನ 100 SMS ಸೌಲಭ್ಯ ಸಿಗಲಿದೆ.

ಎಲ್ಲರೂ ಈ ಆಫ‌ರ್ ಎಂಜಾಯ್ ಮಾಡಬಹುದು:

ಈ ಆಫ‌ರ್ ಹೊಸ ಬಳಕೆದಾರರಿಗೆ ಮಾತ್ರ ಸೀಮಿತವಾಗಿರುವುದಿಲ್ಲ, ಇದು ಎಲ್ಲಾ BSNL ಗ್ರಾಹಕರಿಗೆ ಸಿಗಲಿದೆ. ಈ ಪ್ಲಾನ್ ಪಡೆಯಲು, ಗ್ರಾಹಕರು ಹತ್ತಿರದ BSNL CSC ಕೇಂದ್ರಕ್ಕೆ ಹೋಗಬಹುದು. ಇಲ್ಲವೇ 1800-180-1503 ಗೆ ಕರೆ ಮಾಡಬಹುದು ಅಥವಾ bsnl.co.in ಗೆ ಭೇಟಿ ನೀಡಿ, ರಿಚಾರ್ಜ್ ಮಾಡಬಹುದು.

https://twitter.com/BSNLCorporate/status/1991044719632355343?t=AxfVLMfqW0yRXi7gJdUiWg&s=19
ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!