Circular-leave application, updating of 7th pay scale and salary details through EEDS software

Circular-leave application, updating of 7th pay scale and salary details through EEDS software

Circular-

ವಿಷಯದನ್ವಯ ಇ.ಇ.ಡಿ.ಎಸ್ ತಂತ್ರಾಂಶದಲ್ಲಿ ಇದುವರೆಗೆ ಒಟ್ಟು 18 ಸೇವೆಗಳನ್ನು ನೌಕರರಿಗೆ ಕಡ್ಡಾಯಗೊಳಿಸಿದ್ದರೂ ಸಹ ಶಾಲಾ ಶಿಕ್ಷಣ ಇಲಾಖೆಯ ಎಲ್ಲಾ ಶಾಲೆ /ಕಛೇರಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ/ಸಿಬ್ಬಂದಿಗಳು ಇ.ಇ.ಡಿ.ಎಸ್ ತಂತ್ರಾಂಶದ ಮೂಲಕ ರಜೆ ಅನುಮತಿ ಸಲ್ಲಿಸದೆ ಇರುವುದು ಇ.ಇ.ಡಿ.ಎಸ್ ವರದಿಗಳಲ್ಲಿ ಕಂಡುಬಂದಿರುತ್ತದೆ. ಆದ ಕಾರಣ ಇನ್ನು ಮುಂದೆ ಶಾಲಾ/ಕಛೇರಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ವರ್ಗದ ಅಧಿಕಾರಿ/ಸಿಬ್ಬಂದಿಗಳು (ಬೋದಕ/ಬೋದಕತರ) ರಜೆಗೆ ತೆರಳುವ ಮುಂಚಿತವಾಗಿ ಇ.ಇ.ಡಿ.ಎಸ್ ತಂತ್ರಾಂಶದ ಮೂಲಕವೇ ಎಲ್ಲಾ ರೀತಿಯ ರಜಾ ಸೌಲಭ್ಯಗಳಾದ [C.L/R.H/E.L/H.P.L /ಇತರೆ] ರಜಾ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ. ಅದರಂತೆ ಇ.ಇ.ಡಿ.ಎಸ್ ತಂತ್ರಾಂಶದ ಮೂಲಕವೇ ರಜೆ ಅರ್ಜಿಗಳನ್ನು ಸಲ್ಲಿಸಲು ಅಗತ್ಯ ಕ್ರಮವಹಿಸಲು ಎಲ್ಲಾ ಡಿಡಿಒ ಗಳಿಗೆ ಸೂಚಿಸಿದೆ.

ಇ.ಇ.ಡಿ.ಎಸ್ ತಂತ್ರಾಂಶದ ಡಿಡಿಒ ಲಾಗಿನ್ ನಲ್ಲಿ 7ನೇ ವೇತನ ಶ್ರೇಣಿ ಹಾಗೂ ಮೂಲವೇತನವನ್ನು ಇಂದೀಕರಿಸಲು ಅವಕಾಶ ಕಲ್ಪಿಸಲಾಗಿದ್ದು ಸಂಬಂಧಿಸಿದ ಅಧಿಕಾರಿ/ಸಿಬ್ಬಂದಿಗಳ ವೇತನದ ವಿವರಗಳನ್ನು ಪರಿಶೀಲಿಸಿ ಇಂದೀಕರಿಸಲು ಅಗತ್ಯ ಕ್ರಮವಹಿಸಲು ಎಲ್ಲಾ ಡಿಡಿಒ ಗಳಿಗೆ ಸೂಚಿಸಿದೆ ಹಾಗೂ ಇ.ಇ.ಡಿ.ಎಸ್ ನಲ್ಲಿ ಎಲ್ಲಾ ನೌಕರರ ಮಾಹಿತಿ ಇಂದೀಕರಣ ಮಾಡಲು ದಿನಾಂಕ:28.03.2025 ಕೊನೆಯ ದಿನಾಂಕವಾಗಿರುತ್ತದೆ. ಇ.ಇ.ಡಿ.ಎಸ್ ನಲ್ಲಿ ನೌಕರರ ಮಾಹಿತಿಯನ್ನು ತಪ್ಪಿಲ್ಲದೆ ಇಂದೀಕರಿಸುವ ಬಗ್ಗೆ ವಿಡಿಯೋ ಕಾನ್ಸರೆನ್ಸ್ ಗಳಲ್ಲಿ ಮತ್ತು ಸುತ್ತೋಲೆಗಳಲ್ಲಿ ತಿಳಿಸುತ್ತಿದ್ದರೂ ಸಹ ಈ ಕಛೇರಿಗೆ ನೌಕರರ ಹೆಸರು.ಕೆ.ಜಿ.ಐ.ಡಿ ಸಂಖ್ಯೆ ಇತ್ಯಾದಿ ಮಾಹಿತಿ ತಿದ್ದುಪಡಿಗೆ ಅರ್ಜಿ ಸಲ್ಲಿಕೆಯಾಗುತ್ತಿವೆ, ಇನ್ನು ಮುಂದೆ ಈ ರೀತಿ ತಪ್ಪು ಮಾಹಿತಿ ಇಂದೀಕರಿಸಿ ತಿದ್ದುಪಡಿಗೆ ಅರ್ಜಿ ಸಲ್ಲಿಸಿದರೆ ಗಂಭೀರವಾಗಿ ಪರಿಗಣಿಸಲಾಗವುದು ಹಾಗೂ ನೌಕರರ ಜನ್ಮ ದಿನಾಂಕ ತಿದ್ದುಪಡಿಗೆ ಅವಕಾಶವಿರುವುದಿಲ್ಲ. ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

 

CLICK HERE TO DOWNLOAD CIRCULAR 

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

1 thought on “Circular-leave application, updating of 7th pay scale and salary details through EEDS software”

Leave a Comment

error: Content is protected !!